ಅಲ್ ಇಸ್‌ರಾ' | تـرجمـة سورة الإسراء

    تـرجمـة سورة الإسراء من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಇಸ್‌ರಾ | ಪವಿತ್ರ್ ಕುರ್‌ಆನ್ ನ 17 ನೆಯ ಸೂರಃ | ಇದರಲ್ಲಿ ಒಟ್ಟು 111 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)! 

سُبْحَانَ الَّذِي أَسْرَىٰ بِعَبْدِهِ لَيْلًا مِنَ الْمَسْجِدِ الْحَرَامِ إِلَى الْمَسْجِدِ الْأَقْصَى الَّذِي بَارَكْنَا حَوْلَهُ لِنُرِيَهُ مِنْ آيَاتِنَا ۚ إِنَّهُ هُوَ السَّمِيعُ الْبَصِيرُ

ತನ್ನ ಉಪಾಸಕನಾದ (ಪೈಗಂಬರ್ ಮುಹಮ್ಮದ್ ರನ್ನು) ರಾತೋರಾತ್ರಿ [ಮಕ್ಕಾ ದ] ಅಲ್ ಹರಾಮ್ ಮಸೀದಿಯಿಂದ ದೂರದ [ಜೆರುಸಲೇಮ್ ನ] ಅಲ್ ಅಕ್‌ಸಾ ಮಸೀದಿಯ ವರೆಗೆ - ಅಂದರೆ ನಾವು ಯಾವ ಮಸೀದಿಯ ಸುತ್ತಮುತ್ತಲಿನ ಪ್ರದೇಶವನ್ನು ಅನುಗ್ರಹೀತ ಗೊಳಿಸಿದ್ದೆವೋ ಆ ಮಸೀದಿಯ ವರೆಗೆ - ತನ್ನ ಕೆಲವು ಸಂಕೇತಗಳನ್ನು ತೋರಿಸಲಿಕ್ಕಾಗಿ ಕರೆದೊಯ್ದ (ಆ ಅಲ್ಲಾಹ್ ನೇ) ಪರಮ ಪಾವನನು! ನಿಜವಾಗಿ ಅವನೇ ಎಲ್ಲವನ್ನೂ ಕೇಳಿಸಿ ಕೊಳ್ಳುತ್ತಿರುವವನು; ಸಕಲವನ್ನೂ ವೀಕ್ಷಿಸುತ್ತಿರುವವನು! {1}

وَآتَيْنَا مُوسَى الْكِتَابَ وَجَعَلْنَاهُ هُدًى لِبَنِي إِسْرَائِيلَ أَلَّا تَتَّخِذُوا مِنْ دُونِي وَكِيلًا

(ಈ ಹಿಂದೆ) ನಾವು ಪ್ರವಾದಿ ಮೂಸಾ ರಿಗೆ (ತೋರಾ ಎಂಬ) ಒಂದು ಕಾನೂನು ಸಂಹಿತೆಯನ್ನು ನೀಡಿದ್ದೆವು; ಮತ್ತದನ್ನು ಇಸ್ರಾಈಲ್ ಜನಾಂಗದವರಿಗೆ ಒಂದು ದಾರಿಸೂಚಿಯನ್ನಾಗಿ ನಾವು ನೇಮಿಸಿದ್ದೆವು. ನನ್ನ ಹೊರತು ಇನ್ನಾರನ್ನೂ ಒಬ್ಬ ಕಾರ್ಯಸಾಧಕನನ್ನಾಗಿ ನೀವು ಮಾಡಿಕೊಳ್ಳಬಾರದು (ಎಂಬ ತಾಕೀತಿನೊಂದಿಗೆ ತೋರಾ ಗ್ರಂಥವು ಅವರಿಗೆ ನೀಡಲಾಗಿತ್ತು). {2}

ذُرِّيَّةَ مَنْ حَمَلْنَا مَعَ نُوحٍ ۚ إِنَّهُ كَانَ عَبْدًا شَكُورًا

ಯಾರನ್ನು ನಾವು ಪ್ರವಾದಿ ನೂಹ್ ರ ಜೊತೆ (ಅವರ ನೌಕೆಯಲ್ಲಿ) ಹತ್ತಿಸಿಕೊಂಡಿದ್ದೆವೋ ಅವರಲ್ಲೊಬ್ಬನ ಸಂತತಿಯೇ (ಈ ಇಸ್ರಾಈಲ್ ಜನಾಂಗ)! ನೂಹ್ ರು ಮಾತ್ರ ಬಹಳ ಕೃತಜ್ಞರಾದ ಒಬ್ಬ ಉಪಾಸಕರಾಗಿದ್ದರು! {3}

وَقَضَيْنَا إِلَىٰ بَنِي إِسْرَائِيلَ فِي الْكِتَابِ لَتُفْسِدُنَّ فِي الْأَرْضِ مَرَّتَيْنِ وَلَتَعْلُنَّ عُلُوًّا كَبِيرًا

ನೀವು ನಿಮ್ಮ ನಾಡಿನಲ್ಲಿ ಎರಡೆರಡು ಬಾರಿ ಗೊಂದಲವೆಬ್ಬಿಸಿ ಅತಿಯಾದ ದುರಹಂಕಾರದಿಂದ ಮೆರೆಯಲಿರುವಿರಿ, [ಹಾಗೆ ಮಾಡಿದರೆ ಎರಡೂ ಬಾರಿ ನಿಮ್ಮನ್ನು ಕಠಿಣವಾಗಿ ಶಿಕ್ಷಿಲಾಗುವುದು] ಎಂದು ಇಸ್ರಾಈಲ್ ಸಂತತಿಯವರಿಗೆ ನಾವು (ಅವರ ತೋರಾ) ಗ್ರಂಥದಲ್ಲೇ ನಿಖರವಾಗಿ ತಿಳಿಸುವ ಮೂಲಕ (ಮುನ್ನೆಚ್ಚರಿಕೆ ನೀಡಿದ್ದೆವು)! {4}

فَإِذَا جَاءَ وَعْدُ أُولَاهُمَا بَعَثْنَا عَلَيْكُمْ عِبَادًا لَنَا أُولِي بَأْسٍ شَدِيدٍ فَجَاسُوا خِلَالَ الدِّيَارِ ۚ وَكَانَ وَعْدًا مَفْعُولًا

ಅವೆರಡು ಮುನ್ನೆಚ್ಚರಿಕೆಗಳ ಪೈಕಿ ಮೊದಲನೆಯದರ ಸಮಯ ಬಂದಾಗ, ಹೊಡೆದಾಟ ಬಲ್ಲವರಾದ ಬಹಳ ಗಟ್ಟಿಗರಾದ ನಮ್ಮ ಕೆಲವು ದಾಸರನ್ನು (ಇಸ್ರಾಈಲ್ ರ ಸಂತತಿಯವರೇ), ನಾವು ನಿಮ್ಮ ಮೇಲೆ ಎರಗಿಸಿದ್ದೆವು! ಅವರು ನಿಮ್ಮ ಮನೆಮಠಗಳ ಒಳಗಿನವರೆಗೂ ನುಗ್ಗುತ್ತಾ ಸಾಗಿದ್ದರು! ಹೌದು, (ಅಲ್ಲಾಹ್ ನ) ಆ ಎಚ್ಚರಿಕೆ ಕಾರ್ಯಗತವಾಗಲೇ ಬೇಕಿತ್ತು! {5}

ثُمَّ رَدَدْنَا لَكُمُ الْكَرَّةَ عَلَيْهِمْ وَأَمْدَدْنَاكُمْ بِأَمْوَالٍ وَبَنِينَ وَجَعَلْنَاكُمْ أَكْثَرَ نَفِيرًا

ತರುವಾಯ, ಅವರ ಮೇಲಿನ ಪ್ರಾಬಲ್ಯವನ್ನು ನಾವು ನಿಮಗೆ ಮರಳಿ ನೀಡಿದೆವು; ಸಂಪತ್ತು ಮತ್ತು ಗಂಡು ಸಂತಾನವನ್ನು ನೀಡಿ ನಿಮಗೆ ಸಹಾಯ ಒದಗಿಸಿದೆವು. ನಿಮ್ಮನ್ನು ಹಿಂದಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದ ಜನಾಂಗವಾಗಿ ಮಾಡಿದೆವು. {6}

إِنْ أَحْسَنْتُمْ أَحْسَنْتُمْ لِأَنْفُسِكُمْ ۖ وَإِنْ أَسَأْتُمْ فَلَهَا ۚ فَإِذَا جَاءَ وَعْدُ الْآخِرَةِ لِيَسُوءُوا وُجُوهَكُمْ وَلِيَدْخُلُوا الْمَسْجِدَ كَمَا دَخَلُوهُ أَوَّلَ مَرَّةٍ وَلِيُتَبِّرُوا مَا عَلَوْا تَتْبِيرًا

ಇಸ್ರಾಈಲ್ ಸಂತತಿಯವರೇ, ನೀವು ಒಳಿತನ್ನು ಮಾಡಿದ್ದರೆ ಅದು ನಿಮಗಾಗಿಯೇ ಮಾಡಿರುವಿರಿ; ಇನ್ನು ಮಾಡಿದ್ದು ಕೆಡುಕಾದರೆ ಅದರ ಫಲಾನುಭವಿಗಳೂ ನೀವೇ (ಎಂಬುದನ್ನು ನೀವೇ ನೋಡಿರುವಿರಿ). ಹೌದು, ಆ ಮುನ್ನೆಚ್ಚರಿಕೆಗಳ ಪೈಕಿ ಎರಡನೆಯದರ ಸಮಯ ಬಂದಾಗ ನಿಮ್ಮನ್ನು ಮುಖಭಂಗ ಗೊಳಿಸಿ, ನಿಮ್ಮ ಆರಾಧನಾಲಯವಾದ (ಅಲ್ ಅಕ್ಸಾ ಮಸೀದಿಯೊಳಕ್ಕೆ) ಹಿಂದಿನ ಸೇನೆ ನುಗ್ಗಿದಂತೆ ಈ ಬಾರಿಯೂ ನುಗ್ಗಿ ನಾಶಪಡಿಸಲು ಹಾಗೂ ತಾವು ಜಯಿಸಿದ್ದೆನ್ನೆಲ್ಲಾ ಧ್ವಂಸಗೊಳಿಸುತ್ತಾ ಸಾಗಲು ಬೇರೆ ಕೆಲವು ಗಟ್ಟಿಗರನ್ನು ನಾವು ನಿಮ್ಮ ಮೇಲೆ ಎರಗಿಸಿದ್ದನ್ನೂ (ನೀವು ನೋಡಿರುವಿರಿ)! {7}

عَسَىٰ رَبُّكُمْ أَنْ يَرْحَمَكُمْ ۚ وَإِنْ عُدْتُمْ عُدْنَا ۘ وَجَعَلْنَا جَهَنَّمَ لِلْكَافِرِينَ حَصِيرًا

(ಇಸ್ರಾಈಲ್ ಸಂತತಿಯ ಓ ಜನರೇ), ಪ್ರಾಯಶಃ ನಿಮ್ಮ ಒಡೆಯನು (ಮತ್ತೊಮ್ಮೆ) ನಿಮ್ಮ ಮೇಲೆ ಕರುಣೆ ತೋರಿ (ನಿಮ್ಮನ್ನು ಪರಿಗಣಿಸಲೂ ಬಹುದು). ಆದರೆ ನೆನಪಿಡಿ, ನೀವು (ನಿಮ್ಮ ಪಾಪಕೃತ್ಯಗಳನ್ನು) ಪುನರಾವರ್ತಿಸಿದರೆ ನಾವೂ ಸಹ (ನಮ್ಮ ಶಿಕ್ಷೆಯನ್ನು) ಪುನರಾವರ್ತಿಸುತ್ತೇವೆ. ಹೌದು, ಉಲ್ಲಂಘನೆ ಮಾಡುವವರಿಗೆ ನರಕವನ್ನು ನಾವು ಸೆರೆಮನೆಯನ್ನಾಗಿ ಮಾಡಿರುವೆವು. {8}

إِنَّ هَٰذَا الْقُرْآنَ يَهْدِي لِلَّتِي هِيَ أَقْوَمُ وَيُبَشِّرُ الْمُؤْمِنِينَ الَّذِينَ يَعْمَلُونَ الصَّالِحَاتِ أَنَّ لَهُمْ أَجْرًا كَبِيرًا

ವಾಸ್ತವದಲ್ಲಿ (ಓ ಜನರೇ), ಈ ಕುರ್‌ಆನ್ ಅತ್ಯಂತ ನೇರವಾದ ಮಾರ್ಗದತ್ತ (ನಿಮ್ಮನ್ನು) ನಡೆಸಿಕೊಂಡು ಹೋಗುತ್ತದೆ; ಮತ್ತು ಸತ್ಕರ್ಮಗಳನ್ನು ಮಾಡುವ ವಿಶ್ವಾಸಿಗಳಿಗೆ ಮಹತ್ತರವಾದ ಪ್ರತಿಫಲವಿರುವ ಕುರಿತು ಅದು ಶುಭವಾರ್ತೆಯನ್ನೂ ನೀಡುತ್ತದೆ. {9}

وَأَنَّ الَّذِينَ لَا يُؤْمِنُونَ بِالْآخِرَةِ أَعْتَدْنَا لَهُمْ عَذَابًا أَلِيمًا

ಮಾತ್ರವಲ್ಲ, ಪರಲೋಕದ ವಿಷಯದಲ್ಲಿ ನಂಬಿಕೆ ಇಲ್ಲದ ಜನರಿಗೆ ನೋವುಂಟು ಮಾಡುವ ಶಿಕ್ಷೆಯನ್ನು ನಾವು ಸಿದ್ಧಗೊಳಿಸಿ ಇಟ್ಟಿದ್ದೇವೆ ಎಂದೂ ಅದು ಸಾರುತ್ತದೆ. {10}

وَيَدْعُ الْإِنْسَانُ بِالشَّرِّ دُعَاءَهُ بِالْخَيْرِ ۖ وَكَانَ الْإِنْسَانُ عَجُولًا

ಹೇಗೆ ಒಳಿತನ್ನು ಪಡೆಯಲು ಬೇಡಬೇಕೋ ಹಾಗೆ ಮನುಷ್ಯನು ಕೇಡಿಗಾಗಿ ಬೇಡುತ್ತಿದ್ದಾನೆ! ಹೌದು, ಮನುಷ್ಯನು (ವಿವೇಚನೆ ಮಾಡದೆ) ದುಡುಕುತ್ತಿದ್ದಾನೆ. {11}

وَجَعَلْنَا اللَّيْلَ وَالنَّهَارَ آيَتَيْنِ ۖ فَمَحَوْنَا آيَةَ اللَّيْلِ وَجَعَلْنَا آيَةَ النَّهَارِ مُبْصِرَةً لِتَبْتَغُوا فَضْلًا مِنْ رَبِّكُمْ وَلِتَعْلَمُوا عَدَدَ السِّنِينَ وَالْحِسَابَ ۚ وَكُلَّ شَيْءٍ فَصَّلْنَاهُ تَفْصِيلًا

ನಾವು ರಾತ್ರಿ ಮತ್ತು ಹಗಲುಗಳನ್ನು ಎರಡು ದೃಷ್ಟಾಂತಗಳನ್ನಾಗಿ ಮಾಡಿರುವೆವು ಮತ್ತು ರಾತ್ರಿ ಎಂಬ ದೃಷ್ಟಾಂತವನ್ನು ಮಬ್ಬುಗೊಳಿಸಿ ಹಗಲನ್ನು ಚೆನ್ನಾಗಿ ಬೆಳಗಿಸಿರುವೆವು. ಏಕೆಂದರೆ ನಿಮ್ಮ ಒಡೆಯನ ಕೃಪೆಯನ್ನು ನೀವು ಅರಸಲಿಕ್ಕಾಗಿ ಮತ್ತು ವರ್ಷಗಳ ಸಂಖ್ಯೆಯನ್ನು ಅರಿತು ಅದರ ಲೆಕ್ಕವಿಡಲಿಕ್ಕಾಗಿ! ಹೌದು, ನಾವು (ಈ ಗ್ರಂಥದಲ್ಲಿ) ಎಲ್ಲವನ್ನೂ ಚೆನ್ನಾಗಿ ವಿವರಿಸಿದ್ದೇವೆ. {12}

وَكُلَّ إِنْسَانٍ أَلْزَمْنَاهُ طَائِرَهُ فِي عُنُقِهِ ۖ وَنُخْرِجُ لَهُ يَوْمَ الْقِيَامَةِ كِتَابًا يَلْقَاهُ مَنْشُورًا

ಪ್ರತಿಯೊಬ್ಬ ಮನುಷ್ಯನ ಕೊರಳಿಗೆ ನಾವು ಆವನ ವಿಧಿಯನ್ನು ಕಟ್ಟಿ ಬಿಡುತ್ತೇವೆ. ಪುನರುತ್ಥಾನ ದಿನದಂದು (ಅವನ ಕರ್ಮಗಳ) ದಾಖಲೆಯನ್ನು ನಾವು ಹೊರತೆಗೆದಾಗ ಅದನ್ನು ಅವನು ತೆರೆದಿಟ್ಟ ಸ್ಥಿತಿಯಲ್ಲಿ ಪಡೆಯುವನು. {13}

اقْرَأْ كِتَابَكَ كَفَىٰ بِنَفْسِكَ الْيَوْمَ عَلَيْكَ حَسِيبًا

ನಿನ್ನ (ಪಾಪಕರ್ಮಗಳ) ದಾಖಲೆಯನ್ನು ನೀನೇ ಓದು; ನಿನ್ನ (ಕರ್ಮಗಳ) ವಿಚಾರಣೆಗೆ ಇಂದು ನೀನಷ್ಟೇ ಸಾಕು (ಎಂದು ಹೇಳಲಾಗುವ ದಿನವದು). {14}

مَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا

ವಾಸ್ತವದಲ್ಲಿ, ಒಬ್ಬಾತನು ಸರಿದಾರಿಯಲ್ಲಿ ನಡೆದರೆ ಆತನು ತನ್ನದೇ ಒಳಿತಿಗಾಗಿ ಸರಿದಾರಿಯಲ್ಲಿ ನಡೆಯುತ್ತಾನೆ. ಅಂತೆಯೇ, ಒಬ್ಬಾತನು ತಪ್ಪುದಾರಿ ಸ್ವೀಕರಿಸಿದರೆ ಆತನು ತನ್ನದೇ ವಿನಾಶಕ್ಕಾಗಿ ತಪ್ಪುದಾರಿ ಸ್ವೀಕರಿಸುತ್ತಾನೆ. ಭಾರವನ್ನು ಹೊರುತ್ತಿವ ಯಾವೊಬ್ಬನೂ ಮತ್ತೊಬ್ಬನ ಭಾರವನ್ನು ಹೊರಲಾರನು! ಹೌದು, ಒಬ್ಬ ದೂತನನ್ನು ಕಳುಹಿಸಿ [ಸತ್ಯ ಮತ್ತು ಅಸತ್ಯಗಳ ವ್ಯತ್ಯಾಸವನ್ನು ಜನರಿಗೆ ಚೆನ್ನಾಗಿ ಮನದಟ್ಟು ಮಾಡಿಸುವುದಕ್ಕಿಂತ] ಮುಂಚಿತವಾಗಿ ಜನರನ್ನು ಶಿಕ್ಷಿಸುವವರು ನಾವಲ್ಲ! {15}

وَإِذَا أَرَدْنَا أَنْ نُهْلِكَ قَرْيَةً أَمَرْنَا مُتْرَفِيهَا فَفَسَقُوا فِيهَا فَحَقَّ عَلَيْهَا الْقَوْلُ فَدَمَّرْنَاهَا تَدْمِيرًا

ಹಾಗೆ [ನಮ್ಮ ದೂತರನ್ನು ಸಂಪೂರ್ಣವಾಗಿ ಧಿಕ್ಕರಿಸಿದ] ಒಂದು ನಾಡನ್ನು ನಾವು ನಾಶಪಡಿಸಲು ಉದ್ದೇಶಿಸಿದರೆ ಆ ನಾಡಿನ ಸಿರಿವಂತರಿಗೆ (ದೂತರುಗಳ ಮೂಲಕ) ನಾವು ಎಚ್ಚರಿಕೆ ನೀಡುತ್ತೇವೆ. ಅದಾಗಿಯೂ ಅವರು ಅಲ್ಲಿ ಉಲ್ಲಂಘನೆಯಲ್ಲೇ ತೊಡಗಿದಾಗ ಆ ನಾಡಿನ ವಿಷಯದಲ್ಲಿ ನಮ್ಮ ಫರಮಾನು ದೃಢವಾಗುತ್ತದೆ; ಮತ್ತು ನಾವು ಆ ನಾಡನ್ನು ಸರ್ವ ಸಂಪೂರ್ಣವಾಗಿ ಧ್ವಂಸಮಾಡಿ ಬಿಡುತ್ತೇವೆ! {16}

وَكَمْ أَهْلَكْنَا مِنَ الْقُرُونِ مِنْ بَعْدِ نُوحٍ ۗ وَكَفَىٰ بِرَبِّكَ بِذُنُوبِ عِبَادِهِ خَبِيرًا بَصِيرًا

ಪ್ರವಾದಿ ನೂಹ್ ರ ಕಾಲದ ನಂತರ ಅದೆಷ್ಟು ಪೀಳಿಗೆಗಳನ್ನು ನಾವು ನಾಶ ಮಾಡಿ ಬಿಟ್ಟೆವು! ಪೈಗಂಬರರೇ, [ಇವರ ಬಗ್ಗೆ ನೀವು ಚಿಂತಿಸದಿರಿ, ಏಕೆಂದರೆ] ತನ್ನ ದಾಸರು ಮಾಡುವ ಪಾಪಕಾರ್ಯಗಳನ್ನು ಸಂಭಾಳಿಸಲು, ಅದನ್ನು ಚೆನ್ನಾಗಿ ಅರಿತಿರುವ ಮತ್ತು ಸಕಲವನ್ನೂ ನೋಡುತ್ತಿರುವ ನಿಮ್ಮ ಒಡೆಯನು ಮಾತ್ರವೇ ಸಾಕು. {17}

مَنْ كَانَ يُرِيدُ الْعَاجِلَةَ عَجَّلْنَا لَهُ فِيهَا مَا نَشَاءُ لِمَنْ نُرِيدُ ثُمَّ جَعَلْنَا لَهُ جَهَنَّمَ يَصْلَاهَا مَذْمُومًا مَدْحُورًا

[ಪರಲೋಕದ ಶಾಶ್ವತ ಐಷಾರಾಮದ ಜೀವನವನ್ನು ಕಡೆಗಣಿಸಿ], ಯಾರಾದರೂ ಬಹು ಬೇಗನೇ ಸಿಗುವಂತಹ ಇಹಲೋಕವನ್ನು ಮಾತ್ರ ಬಯಸಿದರೆ ನಾವು ಅದನ್ನು ನಮಗಿಷ್ಟ ಬಂದಷ್ಟು, ಯಾರಿಗೆ ಕೊಡಬಯಸುವೆವೋ ಅವನಿಗೆ, ಬಹು ಬೇಗನೇ ಇಹಲೋಕದಲ್ಲೇ ಕೊಟ್ಟು ಬಿಡುವೆವು! ಆದರೆ ಮುಂದೆ ನಾವು ಆತನಿಗಾಗಿ ಮಾಡಿಟ್ಟಿರುವುದೇ ನರಕ. ಅಪಮಾನಿತನಾದ ಮತ್ತು ತಿರಸ್ಕೃತನಾದ ಸ್ಥಿತಿಯಲ್ಲಿ ಆತನನ್ನು ಅದರೊಳಗೆ ಸೇರಿಸಲಾಗುವುದು. {18}

وَمَنْ أَرَادَ الْآخِرَةَ وَسَعَىٰ لَهَا سَعْيَهَا وَهُوَ مُؤْمِنٌ فَأُولَٰئِكَ كَانَ سَعْيُهُمْ مَشْكُورًا

ಇನ್ನು, ಯಾರಾದರೂ ಪರಲೋಕದ ವಿಜಯವನ್ನು ಬಯಸಿ ಅದನ್ನು ಪಡೆಯಲು ಹೇಗೆ ಪ್ರಯತ್ನಿಸಬೇಕೋ ಹಾಗೆ ಪ್ರಯತ್ನಿಸಿದರೆ, ಮತ್ತು ಆತನು ವಿಶ್ವಾಸಿಯೂ ಆಗಿದ್ದರೆ, ಅಂತಹವರ ಪ್ರಯತ್ನವನ್ನು ಮೆಚ್ಚಲಾಗುವುದು. {19}

كُلًّا نُمِدُّ هَٰؤُلَاءِ وَهَٰؤُلَاءِ مِنْ عَطَاءِ رَبِّكَ ۚ وَمَا كَانَ عَطَاءُ رَبِّكَ مَحْظُورًا

ನಾವು ಅವರಿಗೂ ಇವರಿಗೂ, (ಇಹಲೋಕದಲ್ಲಿ) ಪ್ರತಿಯೊಬ್ಬರಿಗೂ ನೀಡುತ್ತೇವೆ. ಅದು ನಿಮ್ಮ ಒಡೆಯನ ವತಿಯಿಂದ ಇರುವ ಕೊಡುಗೆ! ನಿಮ್ಮ ಒಡೆಯನ ಕೊಡುಗೆಗಳಿಗೆ ಇತಿಮಿತಿ ಹೇರಲಾಗದು! {20}

انْظُرْ كَيْفَ فَضَّلْنَا بَعْضَهُمْ عَلَىٰ بَعْضٍ ۚ وَلَلْآخِرَةُ أَكْبَرُ دَرَجَاتٍ وَأَكْبَرُ تَفْضِيلًا

ನಾವು ಹೇಗೆ ಇವರ ಪೈಕಿಯ ಕೆಲವರಿಗೆ ಉಳಿದವರಿಗಿಂತ ಹೆಚ್ಚಿನ ಶ್ರೇಷ್ಠತೆಯನ್ನು (ಇಹಲೋಕದಲ್ಲೇ) ನೀಡೀರುತ್ತೇವೆಂದು ನೀವೇ ನೋಡಿರಿ. ಇನ್ನು ಪರಲೋಕದಲ್ಲಂತು, ಸ್ಥಾನಮಾನ ಮತ್ತು ಶ್ರೇಷ್ಠತೆಗಳು ಖಂಡಿತವಾಗಿಯೂ (ಇಹಲೋಕಕ್ಕಿಂತ) ಅದೆಷ್ಟೋ ದೊಡ್ಡ ಪ್ರಾಮಾಣದ್ದಾಗಿರುತ್ತದೆ! {21}

لَا تَجْعَلْ مَعَ اللَّهِ إِلَٰهًا آخَرَ فَتَقْعُدَ مَذْمُومًا مَخْذُولًا

ಅಲ್ಲಾಹ್ ನ ಜೊತೆ ಇನ್ನಾರನ್ನೂ ದೇವನನ್ನಾಗಿ ಮಾಡಿಕೊಳ್ಳ ಬೇಡಿ. ಹಾಗೇನಾದರೂ ಮಾಡಿದರೆ ನಿಂದನೆಗೊಳಗಾಗಿ ದಿಕ್ಕೆಟ್ಟು (ನರಕದಲ್ಲಿ) ಬಿದ್ದಿರುವಿರಿ. {22}

وَقَضَىٰ رَبُّكَ أَلَّا تَعْبُدُوا إِلَّا إِيَّاهُ وَبِالْوَالِدَيْنِ إِحْسَانًا ۚ إِمَّا يَبْلُغَنَّ عِنْدَكَ الْكِبَرَ أَحَدُهُمَا أَوْ كِلَاهُمَا فَلَا تَقُلْ لَهُمَا أُفٍّ وَلَا تَنْهَرْهُمَا وَقُلْ لَهُمَا قَوْلًا كَرِيمًا

ಅವನೊಬ್ಬನ ಹೊರತು ಬೇರೆ ಯಾರನ್ನೂ ನೀವು ಆರಾಧಿಸಬಾರದು, ಮಾತಾಪಿತರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸಬೇಕು, ಒಂದು ವೇಳೆ ಅವಲ್ಲೊಬ್ಬರು ಅಥವಾ ಅವರಿಬ್ಬರೂ ವಯಸ್ಸಾದ ಸ್ಥಿತಿಯಲ್ಲಿದ್ದರೆ ನಿಮ್ಮ ಬಳಿ ಇದ್ದರೆ ಅವರೊಂದಿಗೆ ವರ್ತಿಸುವಾಗ ನೀವು ಅವರ ವಿರುದ್ಧ ಚಕಾರವನ್ನೂ ಎತ್ತಬಾರದು, ಅವರೊಂದಿಗೆ ಸಿಡಿದು ಮಾತನಾಡಬಾರದು, ಬದಲಾಗಿ ಅವರೊಂದಿಗೆ ಮಾತನಾಡುವಾಗ ಗೌರವಾದರದಿಂದ ಕೂಡಿದ ಬಹಳ ಸೌಮ್ಯವಾದ ಮಾತನ್ನೇ ನೀವು ಆಡಬೇಕೆಂಬುದು ನಿಮ್ಮ ಒಡೆಯನ ವಿಧಿಯಾಗಿದೆ! {23}

وَاخْفِضْ لَهُمَا جَنَاحَ الذُّلِّ مِنَ الرَّحْمَةِ وَقُلْ رَبِّ ارْحَمْهُمَا كَمَا رَبَّيَانِي صَغِيرًا

[ದೌರ್ಬಲ್ಯ ಮತ್ತು ವೃದ್ಧಾಪ್ಯದಿಂದ ಬಳಲುವ] ಅವರನ್ನು ವಿನಮ್ರತೆಯಿಂದ ಕೂಡಿದ ಕಾರುಣ್ಯದ ರೆಕ್ಕೆಗಳಡಿಯಲ್ಲಿ [ಅರ್ಥಾತ್ ನಿಮ್ಮ ಕಾವಲಿನಲ್ಲಿ] ಇರಿಸಿಕೊಳ್ಳಿ. ನನ್ನ ಚಿಕ್ಕಂದಿನಲ್ಲಿ ಅವರು ಕರುಣೆ ತೋರಿ ನನ್ನ ಪರಿಪಾಲನೆ ಮಾಡಿದಂತೆ, ಓ ನಮ್ಮ ಒಡೆಯಾ, (ಈಗ ಅವರ ವೇದ್ಧಾಪ್ಯದಲ್ಲಿ) ನೀನು ಅವರಿಬ್ಬರನ್ನೂ ಕರುಣೆಯಿಂದ ಸಲಹು ಎಂದು (ಅವರಿಗಾಗಿ ನಿಮ್ಮ ಒಡೆಯನಲ್ಲಿ) ಪ್ರಾರ್ಥಿಸುತ್ತಲಿರಿ. {24}

رَبُّكُمْ أَعْلَمُ بِمَا فِي نُفُوسِكُمْ ۚ إِنْ تَكُونُوا صَالِحِينَ فَإِنَّهُ كَانَ لِلْأَوَّابِينَ غَفُورًا

ಜನರೇ, ನಿಮ್ಮ ಅಂತರಾತ್ಮಗಳಲ್ಲಿ ಅಡಗಿರುವ ಅನಿಸಿಕೆಗಳನ್ನು ನಿಮ್ಮ ಒಡೆಯನು ಚೆನ್ನಾಗಿ ಬಲ್ಲನು. ಇನ್ನು ನೀವು ಒಳ್ಳೆಯವರಾಗಿದ್ದರೆ, ಮತ್ತೆಮತ್ತೆ (ಸನ್ನಡತೆಯತ್ತ) ಮರಳುವವರಿಗೆ ಅಲ್ಲಾಹ್ ನು ಖಂಡಿತವಾಗಿ ಬಹಳ ಕ್ಷಮಾಶೀಲನಾಗಿರುವನು. {25}

وَآتِ ذَا الْقُرْبَىٰ حَقَّهُ وَالْمِسْكِينَ وَابْنَ السَّبِيلِ وَلَا تُبَذِّرْ تَبْذِيرًا

ನೀವು (ನಿಮ್ಮ ದುಡಿಮೆಯಿಂದ) ನೆಂಟರಿಷ್ಟರಿಗೆ ಸಂದಾಯವಾಗಬೇಕಾದ (ದಾನಧರ್ಮವನ್ನು) ತಪ್ಪದೆ ನೀಡಿರಿ. ಹಾಗೆಯೇ ಬಡವರಿಗೂ ದಾರಿಹೋಕರಿಗೂ ಸಂದಾಯವಾಗಬೇಕಾದುದನ್ನು ಅವರಿಗೆ ಸಲ್ಲಿಸಿರಿ. ಆದರೆ ನೀವು ದುಂದುವೆಚ್ಛ ಮಾಡದಿರಿ. {26}

إِنَّ الْمُبَذِّرِينَ كَانُوا إِخْوَانَ الشَّيَاطِينِ ۖ وَكَانَ الشَّيْطَانُ لِرَبِّهِ كَفُورًا

ನಿಜವಾಗಿಯೂ ದುಂದುವೆಚ್ಛ ಮಾಡುವ ಜನರು ಸೈತಾನನ ಸೋದರರೇ ಸರಿ! ಹೌದು, ಸೈತಾನನು ತನ್ನ ಒಡೆಯನ (ಆಜ್ಞಾನುವರ್ತಿಯಾಗುವ ಬದಲು) ತಿರಸ್ಕರಿಸಿ ಕೃತಘ್ನನಾಗಿ ಬಿಟ್ಟವನು! {27}

وَإِمَّا تُعْرِضَنَّ عَنْهُمُ ابْتِغَاءَ رَحْمَةٍ مِنْ رَبِّكَ تَرْجُوهَا فَقُلْ لَهُمْ قَوْلًا مَيْسُورًا

ಒಂದು ವೇಳೆ ನಿಮ್ಮ ಒಡೆಯನಿಂದ ನೀವು ನಿರೀಕ್ಷಿಸುತ್ತಿದ್ದ ಅನುಗ್ರಹವನ್ನು ಎದುರು ನೋಡಿತ್ತಿದ್ದಾಗಲೇ, ಅವರಿಂದ (ಅಂದರೆ ನೆಂಟರಿಷ್ಟರು, ಬಡವರು, ದಾರಿಹೋಕರು ಮುಂತಾದವರಿಂದ) ಮುಖ ತಿರುಗಿಸಿಕೊಳ್ಳುವುದು ಅನಿವಾರ್ಯವಾದ ಪಕ್ಷದಲ್ಲಿ [ನಿಮಗೇನೂ ಕೊಡಲು ಸಾಧ್ಯವಾಗದಿದ್ದರೂ ಸಹ] ಅವರೊಂದಿಗೆ ಬಹಳ ಮೃದುವಾದ ಮಾತನ್ನೇ ಆಡಿರಿ. {28}

وَلَا تَجْعَلْ يَدَكَ مَغْلُولَةً إِلَىٰ عُنُقِكَ وَلَا تَبْسُطْهَا كُلَّ الْبَسْطِ فَتَقْعُدَ مَلُومًا مَحْسُورًا

ಜನರೇ, ನೀವು ತೀರಾ ಜಿಪುಣತನದಿಂದ ನಿಮ್ಮ ಕೈಗಳನ್ನು ಕೊರಳಿಗೆ ಬಿಗಿದಿಡಬೇಡಿರಿ; ಹಾಗೆಯೇ ಕೈಗಳನ್ನು ಸಂಪೂರ್ಣವಾಗಿ ತೆರೆದಿಡಲೂ ಬಾರದು; ಅನ್ಯಥಾ ನೀವು ನಿಂದ್ಯರಾಗಿ ಅಸಹಾಯಕರಾದ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕಾದೀತು! {29}

إِنَّ رَبَّكَ يَبْسُطُ الرِّزْقَ لِمَنْ يَشَاءُ وَيَقْدِرُ ۚ إِنَّهُ كَانَ بِعِبَادِهِ خَبِيرًا بَصِيرًا

ನಿಸ್ಸಂಶಯವಾಗಿಯೂ, ನಿಮ್ಮ ಒಡೆಯನು ತನ್ನಿಚ್ಛೆಯಂತೆ ಯಾರಿಗೆ ಬೇಕೋ ಸಂಪತ್ತನ್ನು ಹೆಚ್ಚಿಸಿಯೂ ಕುಂಠಿತಗೊಳಿಸಿಯೂ ಕೊಡುತ್ತಾನೆ. ಹೌದು, ಅವನಿಗೆ ತನ್ನ ದಾಸರ ಬಗ್ಗೆ ಚೆನ್ನಾಗಿ ಅರಿವಿದೆ ಮತ್ತು ಅವನು ಅವರನ್ನು ಚೆನ್ನಾಗಿ ವೀಕ್ಷಿಸುತ್ತಿದ್ದಾನೆ. {30}

وَلَا تَقْتُلُوا أَوْلَادَكُمْ خَشْيَةَ إِمْلَاقٍ ۖ نَحْنُ نَرْزُقُهُمْ وَإِيَّاكُمْ ۚ إِنَّ قَتْلَهُمْ كَانَ خِطْئًا كَبِيرًا

ಬಡತನದ ಭೀತಿಯಿಂದ ನೀವು ನಿಮ್ಮ ಮಕ್ಕಳನ್ನು ಕೊಲ್ಲ ಬೇಡಿ. ಅವರಿಗೂ ನಿಮಗೂ ಅನ್ನಾಹಾರ ಒದಗಿಸುವವರು ನಾವಾಗಿದ್ದೇವೆ. ಹೌದು, ಅವರನ್ನು ಕೊಲ್ಲುವುದು ಒಂದು ಘನಘೋರವಾದ ಅಪರಾಧವಾಗಿದೆ. {31}

وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا

ವ್ಯಭಿಚಾರದ ಹತ್ತಿರವೂ ನೀವು ಸುಳಿಯಬಾರದು. ನಿಜವಾಗಿಯೂ ಅದೊಂದು ಅಶ್ಲೀಲ ಕೃತ್ಯವಾಗಿದೆ; ಅದು ಅತ್ಯಂತ ಕೆಟ್ಟ ಮಾರ್ಗವಾಗಿದೆ. {32}

وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۗ وَمَنْ قُتِلَ مَظْلُومًا فَقَدْ جَعَلْنَا لِوَلِيِّهِ سُلْطَانًا فَلَا يُسْرِفْ فِي الْقَتْلِ ۖ إِنَّهُ كَانَ مَنْصُورًا

ಮನುಷ್ಯನ ಪ್ರಾಣವು ಆದರಣೀಯವೆಂದು ಅಲ್ಲಾಹ್ ನು ಪರಿಗಣಿಸಿದ ಕಾರಣ, ನೀವು ಒಬ್ಬ ಜೀವಿಯನ್ನು ಅನ್ಯಾಯವಾಗಿ ಹತ್ಯೆ ಮಾಡಬಾರದು. ಇನ್ನು ಒಬ್ಬಾತನು ಅನ್ಯಾಯವಾಗಿ ವಧಿಸಲ್ಪಟ್ಟರೆ ಆತನ ವಾರೀಸುದಾರನಿಗೆ ನಾವು (ಕಾನೂನು ಪ್ರಕಾರ ಪ್ರತೀಕಾರದ) ಅಧಿಕಾರ ನೀಡಿರುತ್ತೇವೆ. ಆದರೆ ಆ ಕೊಲೆಯ (ಪ್ರತೀಕಾರದ) ವಿಷಯದಲ್ಲಿ ವಾರೀಸುದಾರನು ಮಿತಿಮೀರಬಾರದು! ಏಕೆಂದರೆ, ಅದಾಗಲೇ (ಕಾನೂನು ರೀತ್ಯ) ಸಹಾಯ ಆತನಿಗೆ ಲಭ್ಯವಿದೆ. {33}

وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۚ وَأَوْفُوا بِالْعَهْدِ ۖ إِنَّ الْعَهْدَ كَانَ مَسْئُولًا

ಅನಾಥ ಮಕ್ಕಳು ಪ್ರಬುದ್ಧಾವಸ್ಥೆಗೆ ತಲಪುವ ತನಕ, ಉತ್ತಮವಾದ ಉದ್ದೇಶದಿಂದ ಮಾತ್ರ ಹೊರತು (ಕಬಳಿಸುವ ಉದ್ದೇಶದಿಂದ) ನೀವು ಅವರ ಸ್ವತ್ತಿನ ಸಮೀಪವೂ ಹೋಗದಿರಿ. ಮತ್ತು ನೀವು ಕರಾರುಗಳನ್ನು ಸಂಪೂರ್ಣವಾಗಿ ಪಾಲಿಸುವವರಾಗಿರಿ. ಹೌದು, ಕರಾರುಗಳ ವಿಷಯದಲ್ಲಿ ನೀವು ವಿಚಾರಣೆಗೆ ಒಳಗಾಗಲಿರುವಿರಿ. {34}

وَأَوْفُوا الْكَيْلَ إِذَا كِلْتُمْ وَزِنُوا بِالْقِسْطَاسِ الْمُسْتَقِيمِ ۚ ذَٰلِكَ خَيْرٌ وَأَحْسَنُ تَأْوِيلًا

ನೀವು (ಗ್ರಾಹಕರಿಗೆ) ಅಳೆದು ಕೊಡುವಾಗ ಪೂರ್ಣವಾಗಿ ಅಳೆದು ಕೊಡಿರಿ. ಇನ್ನು ತೂಕ ಮಾಡುವುದಾದರೆ ಅತ್ಯಂತ ನೇರವಾದ ತಕ್ಕಡಿಯಲ್ಲಿ ತೂಕ ಮಾಡಿರಿ. ಅದೇ ಸರಿಯಾದ ಕ್ರಮ; ಅದರ ಪರಿಣಾಮವೂ ಉತ್ತಮವಾಗಿರುವುದು. {35}

وَلَا تَقْفُ مَا لَيْسَ لَكَ بِهِ عِلْمٌ ۚ إِنَّ السَّمْعَ وَالْبَصَرَ وَالْفُؤَادَ كُلُّ أُولَٰئِكَ كَانَ عَنْهُ مَسْئُولًا

ನಿಮಗೆ ಸರಿಯಾದ ಜ್ಞಾನವಿಲ್ಲದ ವಿಷಯಗಳಲ್ಲಿ ನೀವು (ಕೇವಲ ವದಂತಿ, ಗುಮಾನಿಗಳನ್ನು ಆಧರಿಸಿ) ಅದರ ಬೆನ್ನು ಹತ್ತಿ ಹೋಗದಿರಿ. ಏಕೆಂದರೆ ಶ್ರವಣ, ದೃಷ್ಟಿ ಮತ್ತು ಹೃದಯ - ಇವೆಲ್ಲವನ್ನೂ ಖಂಡಿತವಾಗಿ ವಿಚಾರಣೆಗೆ ಒಳಪಡಿಸಲಾಗುವುದು! {36}

وَلَا تَمْشِ فِي الْأَرْضِ مَرَحًا ۖ إِنَّكَ لَنْ تَخْرِقَ الْأَرْضَ وَلَنْ تَبْلُغَ الْجِبَالَ طُولًا

ಭೂಮಿಯ ಮೇಲೆ ನಡೆಯುವಾಗ ನೀವು ದರ್ಪ ತೋರಿ ನಡೆಯದಿರಿ. ಖಂಡಿತವಾಗಿ (ಅಂತಹ ನಡಿಗೆಯಿಂದ) ಭೂಮಿಯನ್ನು ನೀವು ಸೀಳಲಾರಿರಿ; ಎಂದೂ ನಿಮ್ಮ ಎತ್ತರವು ಪರ್ವತಗಳ ಎತ್ತರವನ್ನು ತಲುಪಲಾರದು! {37}

كُلُّ ذَٰلِكَ كَانَ سَيِّئُهُ عِنْدَ رَبِّكَ مَكْرُوهًا

ಅಂತಹ ಎಲ್ಲಾ ಕೆಡುಕುಗಳು ನಿಮ್ಮ ಒಡೆಯನಿಗೆ ಬಹಳ ಅಪ್ರಿಯವಾದ ಕೆಡುಕುಗಳಾಗಿವೆ. {38}

ذَٰلِكَ مِمَّا أَوْحَىٰ إِلَيْكَ رَبُّكَ مِنَ الْحِكْمَةِ ۗ وَلَا تَجْعَلْ مَعَ اللَّهِ إِلَٰهًا آخَرَ فَتُلْقَىٰ فِي جَهَنَّمَ مَلُومًا مَدْحُورًا

ಪೈಗಂಬರರೇ, ಇವು ನಿಮ್ಮ ಒಡೆಯನು ನಿಮಗೆ ದಿವ್ಯ ಸೂಚನೆ ಮೂಲಕ ಕಲಿಸಿದ ವಿವೇಕಪೂರ್ಣ ಮಾತುಗಳಲ್ಲಿ ಕೆಲವು. ಹೌದು! ಅಲ್ಲಾಹ್ ನ ಜೊತೆ ಬೇರೆ ಯಾರನ್ನೂ (ಓ ಮಾನವಾ), ನೀನು ದೇವನನ್ನಾಗಿ ಸ್ವೀಕರಿಸಬೇಡ. ಅನ್ಯಥಾ ಬಹಳ ಅಪಮಾನಿತನೂ ಬಹಿಷ್ಕರಿಸಲ್ಪಟ್ಟವನೂ ಆಗಿ ನರಕಕ್ಕೆ ಎಸೆಯಲ್ಪಡುವೆ. {39}

أَفَأَصْفَاكُمْ رَبُّكُمْ بِالْبَنِينَ وَاتَّخَذَ مِنَ الْمَلَائِكَةِ إِنَاثًا ۚ إِنَّكُمْ لَتَقُولُونَ قَوْلًا عَظِيمًا

[ಕುರೈಷರೇ, ನಿಮ್ಮದು ಅದೆಂತಹ ಮೂರ್ಖತನದ ಮಾತು!] ಗಂಡು ಸಂತಾನ ನೀಡಲಿಕ್ಕ ನಿಮ್ಮೊಡೆಯನು ನಿಮ್ಮನ್ನು ಆರಿಸಿಕೊಂಡು, ಅವನು ತನಗಾಗಿ ಮಲಕ್ ಗಳನ್ನು ಹೆಣ್ಣು ಸಂತಾನವಾಗಿ ಸ್ವೀಕರಿಸಿ ಕೊಂಡಿರುವನೇ?! ಯಥಾರ್ಥದಲ್ಲಿ ನೀವು ಘನಘೋರವಾದ ಪಾಪದ ಮಾತನ್ನೇ ಆಡಿರುವಿರಿ! {40}

وَلَقَدْ صَرَّفْنَا فِي هَٰذَا الْقُرْآنِ لِيَذَّكَّرُوا وَمَا يَزِيدُهُمْ إِلَّا نُفُورًا

ಹೌದು, ಈ ಜನರು ಉಪದೇಶ ಸ್ವೀಕರಿಸಲಿ ಎಂಬ ಉದ್ದೇಶದಿಂದ ನಾವು ಈ ಕುರ್‌ಆನ್ ನಲ್ಲಿ ಅದನ್ನು ವಿವಿಧ ರೀತಿಯಲ್ಲಿ ವಿವರಿಸಿದ್ದೇವೆ. ಆದರೆ ವಿಪರ್ಯಾಸವೆಂದರೆ, ಅದು ಅವರ ದ್ವೇಷವನ್ನು ಮತ್ತಷ್ತು ಹೆಚ್ಚಿಸಿತಲ್ಲದೆ ಬೇರೇನೂ ಆಗಲಿಲ್ಲ! {41}

قُلْ لَوْ كَانَ مَعَهُ آلِهَةٌ كَمَا يَقُولُونَ إِذًا لَابْتَغَوْا إِلَىٰ ذِي الْعَرْشِ سَبِيلًا

ಪೈಗಂಬರರೇ, [ಈ ಮುಶ್ರಿಕ್ ಜನರನ್ನು ಮಗದೊಮ್ಮ ಉಪದೇಶಿಸುವ ಸಲುವಾಗಿ] ಅವರೊಂದಿಗೆ ಹೇಳಿರಿ: ಜನರೇ, ನೀವು ವಾದಿಸುತ್ತಿರುವಂತೆ ಒಂದು ವೇಳೆ ಅಲ್ಲಾಹ್ ನು ಮಾತ್ರವಲ್ಲದೆ ನಿಜಕ್ಕೂ ಇತರ ದೇವರುಗಳು ಇರುತ್ತಿದ್ದರೆ ಅವರು ವಿಶ್ವ ಗದ್ದುಗೆಯ ಒಡೆಯನಾದ (ಅಲ್ಲಾಹ್ ನ) ಬಳಿಗೆ ತಲುಪಲು ಒಂದು ದಾರಿಯನ್ನು ಖಂಡಿತವಾಗಿ ಹುಡುಕಿ ಕೊಳ್ಳುತ್ತಿದ್ದರು! {42}

سُبْحَانَهُ وَتَعَالَىٰ عَمَّا يَقُولُونَ عُلُوًّا كَبِيرًا

ಅವನು ಪರಮ ಪಾವನನು! ಪರಮೋನ್ನತನು! ಇವರು ಅವನ ಕುರಿತು ಏನೆಲ್ಲ ಹೇಳುತ್ತಿರುವರೋ ಅದಕ್ಕಿಂತ ಅವನು ಬಹಳಷ್ಟು ಉನ್ನತ ಸ್ಥಾನದಲ್ಲಿರುವವನು! {43}

تُسَبِّحُ لَهُ السَّمَاوَاتُ السَّبْعُ وَالْأَرْضُ وَمَنْ فِيهِنَّ ۚ وَإِنْ مِنْ شَيْءٍ إِلَّا يُسَبِّحُ بِحَمْدِهِ وَلَٰكِنْ لَا تَفْقَهُونَ تَسْبِيحَهُمْ ۗ إِنَّهُ كَانَ حَلِيمًا غَفُورًا

ಏಳಾಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವ ಸಕಲವೂ ಅಲ್ಲಾಹ್ ನನ್ನು ವೈಭವೀಕರಿಸುತ್ತಿರುತ್ತವೆ. ನಿಜವಾಗಿ ಪ್ರತಿಯೊಂದು ವಸ್ತುವೂ ಅವನನ್ನು ಸ್ತುತಿಸುವ ಜೊತೆಗೆ ಅವನ ಗುಣಗಾನ ಮಾಡುತ್ತಿರುತ್ತವೆ. ಅದನ್ನು ಮಾಡದ ಒಂದು ವಸ್ತುವೂ ಇಲ್ಲ! ಆದರೆ ಅವು ಮಾಡುತ್ತಿರುವ ಗುಣಗಾನವನ್ನು (ಜನರೇ) ನೀವು ಗ್ರಹಿಸಲಾರಿರಿ! [ಅವನ ಕುರಿತು ನೀವಾಡುತ್ತಿರುವುದು ಎಂತಹ ಕೆಟ್ಟ ಮಾತೆಂದು ಅವನಿಗೆ ತಿಳಿದಿದೆ. ಆದರೆ] ಅವನು ಹೆಚ್ಚು ಸಂಯಮಶೀಲನು; ಬಹಳವಾಗಿ ಕ್ಷಮಿಸುವವನು! {44}

وَإِذَا قَرَأْتَ الْقُرْآنَ جَعَلْنَا بَيْنَكَ وَبَيْنَ الَّذِينَ لَا يُؤْمِنُونَ بِالْآخِرَةِ حِجَابًا مَسْتُورًا

ಪೈಗಂಬರರೇ, ನೀವು ಕುರ್‌ಆನ್ ಓದುವಾಗ ನಿಮ್ಮ ಹಾಗೂ ಪರಲೋಕವನ್ನು ಒಪ್ಪದಿರುವ ಆ (ಮುಶ್ರಿಕ್) ಜನರ ನಡುವೆ ಒಂದು ಅಗೋಚರ ತೆರೆಯನ್ನು ನಾವು ಎಳೆದುಬಿಡುತ್ತೇವೆ. {45}

وَجَعَلْنَا عَلَىٰ قُلُوبِهِمْ أَكِنَّةً أَنْ يَفْقَهُوهُ وَفِي آذَانِهِمْ وَقْرًا ۚ وَإِذَا ذَكَرْتَ رَبَّكَ فِي الْقُرْآنِ وَحْدَهُ وَلَّوْا عَلَىٰ أَدْبَارِهِمْ نُفُورًا

ಮಾತ್ರವಲ್ಲ, ಅವರಿಗೆ ಏನೂ ಅರ್ಥವಾಗದಂತೆ ಅವರ ಹೃದಯಗಳನ್ನು ನಾವು ಮುಚ್ಚಿ ಬಿಡುತ್ತೇವೆ; ಅವರ ಕಿವಿಗಳಿಗೂ ಅದು ಭಾರವಾಗುವಂತೆ ಮಾಡುತ್ತೇವೆ. ಹೌದು, (ಅದೆಲ್ಲ ಏಕೆಂದರೆ, ಪೈಗಂಬರರೇ,) ಈ ಕುರ್‌ಆನ್ ನಲ್ಲಿ ನಿಮ್ಮ ಒಬ್ಬನೇ ಒಡೆಯನಾದ (ಅಲ್ಲಾಹ್ ನನ್ನು) ಮಾತ್ರವಾಗಿ ನೀವು ಪ್ರಸ್ತಾಪಿಸಿದಾಗ ಅವರು ಜಿಗುಪ್ಸೆಗೊಂಡು ಹಿಂದಿರುಗಿ ಓಡಿ ಹೋಗುತ್ತಾರೆ. {46}

نَحْنُ أَعْلَمُ بِمَا يَسْتَمِعُونَ بِهِ إِذْ يَسْتَمِعُونَ إِلَيْكَ وَإِذْ هُمْ نَجْوَىٰ إِذْ يَقُولُ الظَّالِمُونَ إِنْ تَتَّبِعُونَ إِلَّا رَجُلًا مَسْحُورًا

ಪೈಗಂಬರರೇ, ಅವರು ನಿಮ್ಮತ್ತ ಕಿವಿಗೊಟ್ಟು ಆಲಿಸುವಾಗ ಯಾವ ಉದ್ದೇಶದಿಂದ ಆಲಿಸುತ್ತಿದ್ದಾರೆ; ಗುಟ್ಟಾಗಿ ಏನನ್ನು ಅವರು ಪರಸ್ಪರ ಸಮಾಲೋಚಿಸುತ್ತಿದ್ದಾರೆ ಎಂಬುದು ನಮಗೆ ಬಹಳ ಚೆನ್ನಾಗಿ ತಿಳಿದಿದೆ. ಒಬ್ಬ ಮಾಟಕ್ಕೊಳಗಾದ ವ್ಯಕ್ತಿಯನ್ನು ನೀವೆಲ್ಲ ಅನುಸರಿಸುತ್ತಿರುವಿರಿ ಎಂದು ಆ ದುಷ್ಕರ್ಮಿಗಳು (ನಿಮ್ಮ ಅನುಯಾಯಿಗಳೊಂದಿಗೆ) ಹೇಳುತ್ತಿರುವುದೂ ನಮಗೆ ಚೆನ್ನಾಗಿ ತಿಳಿದಿದೆ. (47)

انْظُرْ كَيْفَ ضَرَبُوا لَكَ الْأَمْثَالَ فَضَلُّوا فَلَا يَسْتَطِيعُونَ سَبِيلًا

ನೀವೇ ನೋಡಿ! ಅದೆಂತಹ (ಕೆಟ್ಟ) ಹೋಲಿಕೆಯೊಂದಿಗೆ ನಿಮ್ಮನ್ನು ಅವರು ಉಪಮಿಸುತ್ತಿದ್ದಾರೆ! ಆದ್ದರಿಂದಲೇ ಅವರು ದಾರಿ ತಿಪ್ಪಿದರು. ಇನ್ನು ಸರಿದಾರಿಗೆ ಬರಲು ಎಂದೂ ಅವರಿಗೆ ಸಾಧ್ಯವಾಗದು! {48}

وَقَالُوا أَإِذَا كُنَّا عِظَامًا وَرُفَاتًا أَإِنَّا لَمَبْعُوثُونَ خَلْقًا جَدِيدًا

ನಾವು (ಸತ್ತು) ಎಲುಬುಗಳಾಗಿ, ಧೂಳ ಕಣಗಳಾಗಿ ಬಿಟ್ಟ ನಂತರ ನಮ್ಮನ್ನು ಹೊಸದಾಗಿ ಸೃಷ್ಟಿಸಿ ಎಬ್ಬಿಸಲಾಗುವುದೇ ಎಂದು ಅವರು ಕೆಣಕುತ್ತಿದ್ದಾರೆ. {49}

قُلْ كُونُوا حِجَارَةً أَوْ حَدِيدًا

ಪೈಗಂಬರರೇ, ಅವರೊಂದಿಗೆ ಹೇಳಿ: ನೀವು ಕಲ್ಲಾಗಿ ಹೋದರೂ, ಅಥವಾ ಉಕ್ಕಾಗಿ ಹೋದರೂ (ಪುನಃ ಎಬ್ಬಿಸಲಾಗುವುದು)! {50}

أَوْ خَلْقًا مِمَّا يَكْبُرُ فِي صُدُورِكُمْ ۚ فَسَيَقُولُونَ مَنْ يُعِيدُنَا ۖ قُلِ الَّذِي فَطَرَكُمْ أَوَّلَ مَرَّةٍ ۚ فَسَيُنْغِضُونَ إِلَيْكَ رُءُوسَهُمْ وَيَقُولُونَ مَتَىٰ هُوَ ۖ قُلْ عَسَىٰ أَنْ يَكُونَ قَرِيبًا

ಅಥವಾ ಅದಕ್ಕಿಂತ ಕಠಿಣವಾದ (ಅಂದರೆ ಜೀವಂತಗೊಳಿಸಲು ಸಾಧ್ಯವಾಗದು) ಎಂದು ನಿಮಗನಿಸುವ ಯಾವುದಾದರೂ ಒಂದು ಸೃಷ್ಟಿಯಾಗಿ ನೀವು ಮಾರ್ಪಟ್ಟರೂ (ನಿಮ್ಮನ್ನು ಖಂಡಿತ ಪುನಃ ಎಬ್ಬಿಸಲಾಗುವುದು ಎಂದು ಹೇಳಿ). ನಮ್ಮನ್ನು ಪುನಃ ಸೃಷ್ಟಿ ಮಾಡುವವರು ಯಾರು ಎಂದು ಅವರು ಕೇಳಲಿರುವರು. ಯಾರು ನಿಮ್ಮನ್ನು ಮೊದಲ ಬಾರಿ ಸೃಷ್ಟಿಸಿದನೋ ಅವನೇ ಎಂದು ಉತ್ತರಿಸಿರಿ. ಓಹೋ, ಹಾಗಾದರೆ ಅದು ಯಾವಾಗ ಎಂದು ನಿಮ್ಮತ್ತ ತಲೆಯಾಡಿಸುತ್ತಾ ಅವರು (ವ್ಯಂಗ್ಯವಾಗಿ) ಕೇಳುವರು. ಬಹು ಬೇಗನೇ ಅದು ಸಂಭವಿಸಿದರೂ ಆಶ್ಚರ್ಯವಿಲ್ಲ ಎಂದು ಪೈಗಂಬರರೇ, ನೀವು ಹೇಳಿರಿ. {51}

يَوْمَ يَدْعُوكُمْ فَتَسْتَجِيبُونَ بِحَمْدِهِ وَتَظُنُّونَ إِنْ لَبِثْتُمْ إِلَّا قَلِيلًا

ಆ ದಿನ (ವಿಚಾರಣೆಗಾಗಿ) ಅವನು ನಿಮ್ಮನ್ನು ಕರೆದಾಗ ನೀವು ಅವನನ್ನು ಸ್ತುತಿಸುತ್ತಾ ಓಗೊಡುವಿರಿ; ಒಂದಲ್ಪ ಸಮಯ ಮಾತ್ರ ನಾವು (ಭೂಲೋಕದಲ್ಲಿ) ಕಳೆದಿರಬಹುದಷ್ಟೆ ಎಂದೇ ನಿಮಗೆ ಆಗ ಭಾಸವಾಗುವುದು. {52}

وَقُلْ لِعِبَادِي يَقُولُوا الَّتِي هِيَ أَحْسَنُ ۚ إِنَّ الشَّيْطَانَ يَنْزَغُ بَيْنَهُمْ ۚ إِنَّ الشَّيْطَانَ كَانَ لِلْإِنْسَانِ عَدُوًّا مُبِينًا

ಪೈಗಂಬರರೇ, (ಆ ಜನರೊಂದಿಗೆ ಚರ್ಚಿಸುವಾಗ) ಉತ್ತಮವಾದ ಮಾತನ್ನು ಮಾತ್ರ ಅಡಬೇಕೆಂದು ನಮ್ಮ ಉಪಾಸಕರಿಗೆ ಸಾರಿರಿ. ನಿಜವಾಗಿ, ಅವರ ನಡುವೆ ವಿವಾದವುಂಟು ಮಾಡಲು ಸೈತಾನನು ಬಯಸುತ್ತಿದ್ದಾನೆ. ಯಥಾರ್ಥವೇನೆಂದರೆ ಸೈತಾನನು ಮನುಷ್ಯರ ಪಾಲಿಗೆ ಒಬ್ಬ ಬಹಿರಂಗ ಶತ್ರುವಾಗಿದ್ದಾನೆ. {53}

رَبُّكُمْ أَعْلَمُ بِكُمْ ۖ إِنْ يَشَأْ يَرْحَمْكُمْ أَوْ إِنْ يَشَأْ يُعَذِّبْكُمْ ۚ وَمَا أَرْسَلْنَاكَ عَلَيْهِمْ وَكِيلًا

[ನೀವು ವಿವಾದಗಳಲ್ಲಿ ತೊಡಗದಿರಿ, ಏಕೆಂದರೆ] ನಿಮ್ಮ ಒಡೆಯನಿಗೆ ನಿಮ್ಮೆಲ್ಲರ ಕುರಿತಂತೆ ಬಹಳ ಚೆನ್ನಾಗಿ ತಿಳಿದಿದೆ. ಒಂದು ವೇಳೆ ಅವನು ಬಯಸಿದರೆ ನಿಮ್ಮ ಮೇಲೆ ಕೃಪೆ ತೋರಬಹುದು; ಅಥವಾ ಶಿಕ್ಷಿಸಲು ಬಯಸಿದರೆ ಅವನು ನಿಮ್ಮನ್ನು ಶಿಕ್ಷೆಗೆ ಗುರಿಪಡಿಸಬಹುದು. ಪೈಗಂಬರರೇ, [ನೀವು ಬೋಧಿಸಿದರೆ ಸಾಕು; ಅದಲ್ಲದೆ] ನಾವು ನಿಮ್ಮನ್ನು ಕಳುಹಿಸಿರುವುದು ಆ ಜನರ ಜವಾಬ್ದಾರಿ ವಹಿಸುವ ಸಲುವಾಗಿ ಅಲ್ಲ! {54}

وَرَبُّكَ أَعْلَمُ بِمَنْ فِي السَّمَاوَاتِ وَالْأَرْضِ ۗ وَلَقَدْ فَضَّلْنَا بَعْضَ النَّبِيِّينَ عَلَىٰ بَعْضٍ ۖ وَآتَيْنَا دَاوُودَ زَبُورًا

ಆಕಾಶಗಳು ಹಾಗೂ ಭೂಮಿಯಲ್ಲಿರುವ ಎಲ್ಲರ ಕುರಿತಂತೆ, ಪೈಗಂಬರರೇ, ನಿಮ್ಮ ಪ್ರಭುವಿಗೆ ಚೆನ್ನಾಗಿಯೇ ತಿಳಿದಿದೆ. [ಪ್ರವಾದಿಗಳಲ್ಲಿ ಯಾರು ಶ್ರೇಷ್ಠರು ಎಂಬುದು ಜನರಿಗೆ ವಿವಾದದ ವಿಷಯವಾಗದಿರಲಿ, ಏಕೆಂದರೆ] ಕೆಲವು ಪ್ರವಾದಿಗಳಿಗೆ ಉಳಿದ ಕೆಲವು ಪ್ರವಾದಿಗಳಿಗಿಂತ ನಾವು ಹೆಚ್ಚಿನ ಮಹತ್ವವನ್ನು ನೀಡಿದ್ದೇವೆ. ಹಾಗೆಯೇ, [ನಿಮಗೀಗ ಈ ಕುರ್‌ಆನ್ ಗ್ರಂಥ ನೀಡಿದಂತೆ] ಪ್ರವಾದಿ ದಾವೂದ್ ರಿಗೆ ನಾವು ಝಬೂರ್ ಗ್ರಂಥವನ್ನೂ ನೀಡಿದ್ದೆವು. {55}

قُلِ ادْعُوا الَّذِينَ زَعَمْتُمْ مِنْ دُونِهِ فَلَا يَمْلِكُونَ كَشْفَ الضُّرِّ عَنْكُمْ وَلَا تَحْوِيلًا

ಪೈಗಂಬರರೇ, ನೀವು [ಆ ಮುಶ್ರಿಕ್ ಜನರೊಂದಿಗೆ] ಹೇಳಿರಿ: ಅಲ್ಲಾಹ್ ನ ಹೊರತು ನೀವು ದೇವರೆಂದು ಪ್ರತಿಪಾದಿಸುತ್ತಿರುವ ಎಲ್ಲರನ್ನೂ ಕರೆದು ಪ್ರಾರ್ಥಿಸಿ ನೋಡಿರಿ; ನಿಮ್ಮ ಸಂಕಷ್ಟವನ್ನು ನಿಮ್ಮಿಂದ ನೀಗಿಸಿ ಬಿಡಲು ಅಥವಾ ಅದನ್ನು ಬೇರೆಡೆಗೆ ತಿರುಗಿಸಿ ಬಿಡಲು ಅವರಾರಿಗೂ ಯಾವ ಸಾಮರ್ಥ್ಯವೂ ಇರುವುದಿಲ್ಲ. {56}

أُولَٰئِكَ الَّذِينَ يَدْعُونَ يَبْتَغُونَ إِلَىٰ رَبِّهِمُ الْوَسِيلَةَ أَيُّهُمْ أَقْرَبُ وَيَرْجُونَ رَحْمَتَهُ وَيَخَافُونَ عَذَابَهُ ۚ إِنَّ عَذَابَ رَبِّكَ كَانَ مَحْذُورًا

ನಿಜವೇನೆಂದರೆ ನೀವು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಸ್ವತಃ ಅವರೇ [ಅರ್ಥಾತ್ ಸ್ವತಃ ಆ ಮಲಕ್ ಗಳೇ] ತಮ್ಮ ಒಡೆಯನಿಗೆ ತಾವು ಇತರರಿಗಿಂತ ಹೆಚ್ಚು ನಿಕಟವಾಗಿರಲು ನಿಮಿತ್ತಗಳನ್ನು ಹುಡುಕುತ್ತಿರುತ್ತಾರೆ. ಮಾತ್ರವಲ್ಲ, ಅವನ ಕೃಪೆಯ ನಿರೀಕ್ಷೆಯಲ್ಲಿರುತ್ತಾರೆ ಮತ್ತು ಅವನ ಶಿಕ್ಷೆಗೆ ಭಯ ಪಡುತ್ತಿರುತ್ತಾರೆ. ಹೌದು! ನಿಮ್ಮ ಒಡೆಯನ ಶಿಕ್ಷೆಯು ಭಯ ಪಡಲೇ ಬೇಕಾದಂತಹ ಶಿಕ್ಷೆಯಾಗಿದೆ! {57}

وَإِنْ مِنْ قَرْيَةٍ إِلَّا نَحْنُ مُهْلِكُوهَا قَبْلَ يَوْمِ الْقِيَامَةِ أَوْ مُعَذِّبُوهَا عَذَابًا شَدِيدًا ۚ كَانَ ذَٰلِكَ فِي الْكِتَابِ مَسْطُورًا

ಹೌದು, ಪುನರುತ್ಥಾನ ದಿನ ಸಂಭವಿಸುವುದಕ್ಕಿಂತ ಮುಂಚಿತವಾಗಿ, [ನಮ್ಮ ಬಗ್ಗೆ ಪೈಗಂಬರ ಮುಖಾಂತರ ತಿಳಿದು ಅನಂತರ ನಮ್ಮನ್ನು ಕಡೆಗಣಿಸಿದ] ಒಂದೇ ಒಂದು ಪಟ್ಟಣವನ್ನೂ ನಾವು ಇರಗೊಡಲಾರೆವು. ಒಂದೋ ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುವೆವು ಅಥವಾ ಅದನ್ನು ಅತಿಭಯಂಕರವಾದ ಶಿಕ್ಷೆಗೆ ಗುರಿಪಡಿಸುವೆವು. ಹೌದು, ಈ ಕಾನೂನನ್ನು ಒಂದು ಪುಸ್ತಕದಲ್ಲಿ ನಮೂದಿಸಲಾಗಿದೆ. {58}

وَمَا مَنَعَنَا أَنْ نُرْسِلَ بِالْآيَاتِ إِلَّا أَنْ كَذَّبَ بِهَا الْأَوَّلُونَ ۚ وَآتَيْنَا ثَمُودَ النَّاقَةَ مُبْصِرَةً فَظَلَمُوا بِهَا ۚ وَمَا نُرْسِلُ بِالْآيَاتِ إِلَّا تَخْوِيفًا

ಅವರಿಗಿಂತ ಮುಂಚಿನವರು ನಮ್ಮ ದೃಷ್ಟಾಂತಗಳನ್ನು [ಅರ್ಥಾತ್ ಸಾಮೂಹಿಕ ಶಿಕ್ಷೆಗಿಂತ ಮುಂಚಿತವಾದ ಮುನ್ನೆಚ್ಚರಿಕೆಗಳನ್ನು] ಕಡೆಗಣಿಸಿದ್ದರು ಎಂಬ ಒಂದು ಕಾರಣದ ಹೊರತು ಬೇರಾವ ಕಾರಣವೂ ಈಗ ದೃಷ್ಟಾಂತಗಳನ್ನು ಕಳುಹಿಸದಂತೆ ನಮ್ಮನ್ನು ತಡೆದಿಲ್ಲ! ಹೌದು, ತಮೂದ್ ಜನಾಂಗದವರಿಗೆ ಒಂದು ಹೆಣ್ಣೊಂಟೆಯನ್ನು ಪ್ರತ್ಯಕ್ಷ ಪವಾಡವಾಗಿ [ಸಾಮೂಹಿಕ ಶಿಕ್ಷೆಗಿಂತ ಮುಂಚಿತವಾಗಿ] ನಾವು ಕಳುಹಿಸಿದ್ದೆವು. ಆದರೆ ಅವರು ಅದರೊಂದಿಗೆ ಅನ್ಯಾಯವಾಗಿ ವರ್ತಿಸಿ [ನಮ್ಮ ಶಿಕ್ಷೆಗೆ ಗುರಿಯಾದರು]! ನಾವು (ಪ್ರವಾದಿಗಳ ಮೂಲಕ) ದೃಷ್ಟಾಂತಗಳನ್ನು ಕಳುಹಿಸುವುದು (ಜನರಲ್ಲಿ ನಮ್ಮ ಶಿಕ್ಷೆಯ ಕುರಿತು) ಎಚ್ಚರಿಸುವ ಸಲುವಾಗಿ ಮಾತ್ರ! {59}

وَإِذْ قُلْنَا لَكَ إِنَّ رَبَّكَ أَحَاطَ بِالنَّاسِ ۚ وَمَا جَعَلْنَا الرُّؤْيَا الَّتِي أَرَيْنَاكَ إِلَّا فِتْنَةً لِلنَّاسِ وَالشَّجَرَةَ الْمَلْعُونَةَ فِي الْقُرْآنِ ۚ وَنُخَوِّفُهُمْ فَمَا يَزِيدُهُمْ إِلَّا طُغْيَانًا كَبِيرًا

ಪೈಗಂಬರರೇ, ನಿಮ್ಮ ಒಡೆಯನು ಆ ಜನರನ್ನು [ಅರ್ಥಾತ್ ಕುರೈಷರನ್ನು, ಶಿಕ್ಷಿಸುವ ಸಲುವಾಗಿ] ಸುತ್ತುವರಿದಿರುವನು ಎಂದು ನಿಮ್ಮೊಂದಿಗೆ ನಾವು ಹೇಳಿದಾಗ [ಅವರು ನಿಮ್ಮನ್ನು ನಗೆಪಾಟಲಿಗೆ ಗುರಿಯಾಗಿಸಿದ್ದನ್ನು] ಸ್ಮರಿಸಿರಿ. ಇದೀಗ ನಿಮಗೆ ಕನಸಿನಲ್ಲಿ ನಾವು ಕಾಣಿಸಿದ [ಇಸ್ರಾ ಪ್ರಯಾಣದಲ್ಲಿನ ನಿಜದೃಷ್ಯಗಳು] ಹಾಗೂ ಕುರ್‌ಆನ್ ನಲ್ಲಿ ಪ್ರಸ್ತಾಪಿಸಲಾದ ಆ ಶಾಪಗ್ರಸ್ತ (ಝಕ್ಕೂಮ್ ನ) ಮರ - [ಅವೆರಡನ್ನೂ ಸಹ ಲೇವಡಿ ಮಾಡಿದ್ದಕ್ಕಾಗಿ, ಕುರೈಷ್] ಜನರ ಪಾಲಿಗೆ ಅವು ಒಂದು ಪರೀಕ್ಷೆಯಾಗಿ ಮಾರ್ಪಟ್ಟಿತು! ನಾವು ಅವರನ್ನು (ಮುಂಬರುವ ಅಪಾಯದ ಕುರಿತು) ಎಚ್ಚರಿಸಿರುವೆವು; ಆದರೆ ಅದು ಅವರ ಅತಿಘೋರವಾದ ಉಲ್ಲಂಘನಾ ಪ್ರವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿ ಬಿಟ್ಟಿತು! {60}

وَإِذْ قُلْنَا لِلْمَلَائِكَةِ اسْجُدُوا لِآدَمَ فَسَجَدُوا إِلَّا إِبْلِيسَ قَالَ أَأَسْجُدُ لِمَنْ خَلَقْتَ طِينًا

[ಪೈಗಂಬರರೇ, ಇಬ್‌ಲೀಸ್ ನ ಧೋರಣೆಯನ್ನೇ ಅವರೂ ಅನುಸರಿಸುತ್ತಿದ್ದಾರೆ!] ನೀವೆಲ್ಲ ಆದಮ್ ರ ಮುಂದೆ ತಲೆಬಾಗಿರಿ ಎಂದು ಮಲಕ್ ಗಳ ಸಮೂಹಕ್ಕೆ ನಾವು ಆಜ್ಞಾಪಿಸಿದ ಆ ಸಂದರ್ಭವನ್ನು ನೆನಪಿಗೆ ತನ್ನಿ. ಆಗ ಒಬ್ಬ ಇಬ್‌ಲೀಸ್ ನ ಹೊರತು ಉಳಿದೆಲ್ಲರೂ ತಲೆಬಾಗಿದ್ದರು. ಏನು! ಮಣ್ಣಿನಿಂದ ನೀನು ಸೃಷ್ಟಿಸಿದ ಅವನಿಗೆ ನಾನು ತಲೆಬಾಗಬೇಕೇ - ಎಂದು ಇಬ್‌ಲೀಸ್ ಪ್ರಶ್ನಿಸಿದ್ದನು. {61}

قَالَ أَرَأَيْتَكَ هَٰذَا الَّذِي كَرَّمْتَ عَلَيَّ لَئِنْ أَخَّرْتَنِ إِلَىٰ يَوْمِ الْقِيَامَةِ لَأَحْتَنِكَنَّ ذُرِّيَّتَهُ إِلَّا قَلِيلًا

ಇಬ್‌ಲೀಸ್ ಪುನಃ ಹೇಳಿದನು: ನೀನೇ ನೋಡು; ನನಗಿಂತಲೂ ಹೆಚ್ಚಿನ ಶ್ರೇಷ್ಠತೆಯನ್ನು ನೀನು ನೀಡಿರುವುದು ಈತನಿಗೇನು? ಪುನರುತ್ಥಾನ ದಿನದ ವರೆಗೆ ನೀನು ನನಗೆ ಕಾಲಾವಕಾಶ ನೀಡಿದರೆ, ಈತನ ಸಂತತಿಯಲ್ಲಿ ಕೇವಲ ಸ್ವಲ್ಪ ಜನರನ್ನು ಹೊರತು ಪಡಿಸಿ ಉಳಿದವರನ್ನೆಲ್ಲ ಖಂಡಿತವಾಗಿಯೂ ನಾನು ನನ್ನ ಅಧೀನಕ್ಕೆ ತರುವೆನು! {62}

قَالَ اذْهَبْ فَمَنْ تَبِعَكَ مِنْهُمْ فَإِنَّ جَهَنَّمَ جَزَاؤُكُمْ جَزَاءً مَوْفُورًا

ಅಲ್ಲಾಹ್ ನು ಹೇಳಿದನು: ಹಾಗಾದರೆ ಹೋಗು (ನಿನಗೆ ಕಾಲಾವಕಾಶ ನೀಡಲಾಗಿದೆ); ಅವನ ಸಂತತಿಯಲ್ಲಿ ಯಾರು ನಿನ್ನನ್ನು ಅನುಸರಿಸುವರೋ ಅವರಿಗೂ ನಿನಗೂ ನರಕವೇ ಪ್ರತಿಫಲವಾಗಿದೆ; ಧಾರಾಳವಾದ ಪ್ರತಿಫಲ! {63}

وَاسْتَفْزِزْ مَنِ اسْتَطَعْتَ مِنْهُمْ بِصَوْتِكَ وَأَجْلِبْ عَلَيْهِمْ بِخَيْلِكَ وَرَجِلِكَ وَشَارِكْهُمْ فِي الْأَمْوَالِ وَالْأَوْلَادِ وَعِدْهُمْ ۚ وَمَا يَعِدُهُمُ الشَّيْطَانُ إِلَّا غُرُورًا

ಅವರ ಪೈಕಿ ನಿನಗೆ ಸಾಧ್ಯವಿರುವವರನ್ನೆಲ್ಲ ನೀನು ನಿನ್ನ ಮಾತಿನ ಮೂಲಕ ಪುಸಲಾಯಿಸಿ (ನಮ್ಮ ವಿರುದ್ಧ) ಪ್ರಚೋದಿಸು. ನಿನ್ನ ಸೈನ್ಯದ ಸವಾರರನ್ನೂ ಪದಾತಿಗಳನ್ನೂ ಉಪಯೋಗಿಸಿ (ನಿನ್ನನ್ನು ಅನುಸರಿಸುವಂತೆ) ಅವರ ಮೇಲೆ ಮುಗಿಬೀಳು. ಅವರ ಸಂಪತ್ತು ಮತ್ತು ಸಂತಾನಗಳಲ್ಲಿ ನೀನು ಅವರಿಗೆ ಜೊತೆಗಾರನಾಗು ಮತ್ತು ಅವರಿಗೆ ಭರವಸೆಗಳನ್ನು ನೀಡು. ಹೌದು, ಸೈತಾನನು ಅವರಿಗೆ ನೀಡುವ ಭರವಸೆಗಳು ಒಂದು ಮೋಸವೇ ಹೊರತು ಬೇರೇನೂ ಅಲ್ಲ! {64}

إِنَّ عِبَادِي لَيْسَ لَكَ عَلَيْهِمْ سُلْطَانٌ ۚ وَكَفَىٰ بِرَبِّكَ وَكِيلًا

ನಿಶ್ಚಿತವಾಗಿಯೂ ನನ್ನ ನೈಜ ಉಪಾಸಕರ ಮೇಲೆ ನಿನಗೆ ಯಾವುದೇ ಅಧಿಕಾರ ಇರುವುದಿಲ್ಲ. ಹೌದು, [ಪೈಗಂಬರರೇ, ಎಂತಹ ಪ್ರತಿಕೂಲ ಸ್ಥಿತಿಯಲ್ಲೂ] ಕಾರ್ಯಸಾಧನೆಗಾಗಿ ನಿಮ್ಮ ಒಡೆಯನು ಮಾತ್ರವೇ ಅವರಿಗೆ ಸಾಕು. {65}

رَبُّكُمُ الَّذِي يُزْجِي لَكُمُ الْفُلْكَ فِي الْبَحْرِ لِتَبْتَغُوا مِنْ فَضْلِهِ ۚ إِنَّهُ كَانَ بِكُمْ رَحِيمًا

ಜನರೇ, ನೀವು (ಜೀವನೋಪಾಯ ಮುಂತಾದ) ಅವನ ಔದಾರ್ಯಗಳನ್ನು ಅರಸುತ್ತಾ ಸಾಗಲು ಸಮುದ್ರಗಳಲ್ಲಿ ನಿಮಗಾಗಿ ಹಡಗುಗಳನ್ನು ನಡೆಸುವವನೇ ನಿಮ್ಮ ಯಥಾರ್ಥ ಒಡೆಯನು! ಹೌದು, ನಿಮ್ಮ ವಿಷಯದಲ್ಲಿ ಅವನು ತುಂಬಾ ಕನಿಕರವುಳ್ಳವನು. {66}

وَإِذَا مَسَّكُمُ الضُّرُّ فِي الْبَحْرِ ضَلَّ مَنْ تَدْعُونَ إِلَّا إِيَّاهُ ۖ فَلَمَّا نَجَّاكُمْ إِلَى الْبَرِّ أَعْرَضْتُمْ ۚ وَكَانَ الْإِنْسَانُ كَفُورًا

ಇನ್ನು ಸಮುದ್ರ ಸಂಚಾರದಲ್ಲಿ ನಿಮಗೇನಾದರೂ ಆಪತ್ತು ತಟ್ಟಿದರೆ ನೀವು ಹಿಂದೆ ಸಹಾಯಕ್ಕಾಗಿ ಯಾರನ್ನೆಲ್ಲಾ ಕರೆಯುತ್ತಿದ್ದಿರೋ ಅವರೆನ್ನೆಲ್ಲ ಸಂಪೂರ್ಣವಾಗಿ ಮರೆತು ಕೇವಲ ಅವನೊಬ್ಬನನ್ನು ಮಾತ್ರ ಸಹಾಯಕ್ಕಾಗಿ ಕರೆಯುವಿರಿ. ಹೌದು, ಅವನು ನಿಮ್ಮನ್ನು ಆ ಆಪತ್ತಿನಿಂದ ಪಾರು ಮಾಡಿ ದಡ ತಲುಪಿಸಿದ ಕೂಡಲೇ ನೀವು ಅವನನ್ನು (ಮರೆತು) ಬೇರೆಡೆಗೆ ತಿರುಗಿಕೊಳ್ಳುತ್ತೀರಿ. ಮಾನವನು ಎಷ್ಟು ಮಾತ್ರಕ್ಕೂ ಉಪಕಾರ ಸ್ಮರಣೆ ಇಲ್ಲದವನು! {67}

أَفَأَمِنْتُمْ أَنْ يَخْسِفَ بِكُمْ جَانِبَ الْبَرِّ أَوْ يُرْسِلَ عَلَيْكُمْ حَاصِبًا ثُمَّ لَا تَجِدُوا لَكُمْ وَكِيلًا

[ದಡ ಸೇರಿದ ನಂತರ] ನೆಲದ ಒಂದು ಭಾಗವು ನಿಮ್ಮ ಸಮೇತ ಕುಸಿದು ಬೀಳುವಂತೆ ಅವನು ಮಾಡಿಯಾನು, ಅಥವಾ ಕಲ್ಲು ತೂರುವ ಬಿರುಗಾಳಿಯನ್ನು ನಿಮ್ಮ ಮೇಲೆ ಕಳುಹಿಸಿಯಾನು, ಹಾಗೇನಾದರೂ ಆದರೆ ನಿಮ್ಮನ್ನು ಕಾಪಾಡಲು ಯಾರೂ ಸಿಗಲಾರದ ಸ್ಥಿತಿ ನಿಮಗೆ ಬಂದೀತು ಎಂಬ ಕುರಿತಾದ ಭಯದಿಂದ ನೀವು ಸಂಪೂರ್ಣವಾಗಿ ರಕ್ಷಿತರಾಗಿರುವಿರೇನು? {68}

أَمْ أَمِنْتُمْ أَنْ يُعِيدَكُمْ فِيهِ تَارَةً أُخْرَىٰ فَيُرْسِلَ عَلَيْكُمْ قَاصِفًا مِنَ الرِّيحِ فَيُغْرِقَكُمْ بِمَا كَفَرْتُمْ ۙ ثُمَّ لَا تَجِدُوا لَكُمْ عَلَيْنَا بِهِ تَبِيعًا

ಅಥವಾ, ನಿಮ್ಮನ್ನು ಅವನು ಅದೇ ಸಮದ್ರಕ್ಕೆ ಮತ್ತೊಮ್ಮೆ ಒಯ್ದು ಭಯಂಕರವಾದ ಚಂಡಮಾರುತ ಬೀಸುವಂತೆ ಮಾಡಿ, ಉಪಕಾರ ಸ್ಮರಣೆ ಇಲ್ಲದ ನಿಮ್ಮನ್ನು ಸಮುದ್ರದಲ್ಲಿ ಮುಳುಗಿಸಿ ಬಿಟ್ಟಾನು, ಹಾಗೇನಾದರೂ ಆದರೆ ನಮ್ಮನ್ನು ಹಿಂಬಾಲಿಸಿ ಸೇಡು ತೀರಿಸಲು ನಿಮಗೆ ಯಾರೂ ಸಿಗಲಾರರು ಎಂಬ ಕುರಿತಾದ ಭೀತಿಯಿಂದ ನಿಮಗೆ ಅಭಯ ಪ್ರಾಪ್ತವಾಗಿದೆಯೇ? {69}

وَلَقَدْ كَرَّمْنَا بَنِي آدَمَ وَحَمَلْنَاهُمْ فِي الْبَرِّ وَالْبَحْرِ وَرَزَقْنَاهُمْ مِنَ الطَّيِّبَاتِ وَفَضَّلْنَاهُمْ عَلَىٰ كَثِيرٍ مِمَّنْ خَلَقْنَا تَفْضِيلًا

[ಅಂದು ಇಬ್‌ಲೀಸ್ ನು ವಾದಿಸಿದಂತಲ್ಲ]. ವಾಸ್ತವದಲ್ಲಿ ಆದಮರ ಸಂತತಿಗೆ (ಅಂದರೆ ಮಾನವರಿಗೆ) ನಾವು ಗೌರವ-ಹಿರಿಮೆಗಳನ್ನು ದಯಪಾಲಿಸಿರುವೆವು. ನೆಲದಲ್ಲೂ ಜಲದಲ್ಲೂ ಅವರನ್ನು ಹೊತ್ತು ಸಾಗಿಸುವ [ಸಂಚಾರ ಸಾಧನಗಳ] ವ್ಯವಸ್ಥೆ ಮಾಡಿರುವೆವು. ಅವರಿಗೆ ಶುದ್ಧವಾದ ವಸ್ತುಗಳನ್ನು ಅನ್ನಾಹಾರವಾಗಿ ಒದಗಿಸಿರುವೆವು. ಮಾತ್ರವಲ್ಲ, ನಮ್ಮ ಬಹಳಷ್ಟು ಸೃಷ್ಟಿಗಳ ಪೈಕಿ ಮನುಷ್ಯರಿಗೆ ನಾವು ಸ್ಪಷ್ಟವಾದ ಶ್ರೇಷ್ಠತೆಯನ್ನೂ ದಯಪಾಲಿಸಿರುವೆವು. {70}

يَوْمَ نَدْعُو كُلَّ أُنَاسٍ بِإِمَامِهِمْ ۖ فَمَنْ أُوتِيَ كِتَابَهُ بِيَمِينِهِ فَأُولَٰئِكَ يَقْرَءُونَ كِتَابَهُمْ وَلَا يُظْلَمُونَ فَتِيلًا

ಮಾನವರ ಪ್ರತಿ ವರ್ಗವನ್ನೂ ಆಯಾ ವರ್ಗದ ನೇತಾರನ ಸಮೇತ ನಾವು ಕರೆಯಲಿರುವ ಆ ದಿನದ ಬಗ್ಗೆ ಸ್ವಲ್ಪ ಆಲೋಚಿಸಿರಿ. ಅಂದು ಮಾನವರ ಕರ್ಮಗಳ ದಾಖಲೆಯನ್ನು ಯಾರಿಗೆಲ್ಲ ಅವರವರ ಬಲಗೈಯಲ್ಲಿ ಕೊಡಲಾಗುವುದೋ ಅವರು ಅದನ್ನು (ಸಂತೋಷದಿಂದ) ಓದಲಿರುವರು ಮತ್ತು ಅವರಿಗೆ ಒಂದಿಷ್ಟೂ ಅನ್ಯಾಯವಾಗದು. {71}

وَمَنْ كَانَ فِي هَٰذِهِ أَعْمَىٰ فَهُوَ فِي الْآخِرَةِ أَعْمَىٰ وَأَضَلُّ سَبِيلًا

ಇನ್ನು ಈ ಲೋಕದಲ್ಲಿ ಯಾರು [ದೃಷ್ಟಾಂತಗಳನ್ನು ಕಣ್ಣಾರೆ ಕಂಡ ಬಳಿಕವೂ] ಕುರುಡರಂತೆ ವರ್ತಿಸಿದ್ದರೋ ಅವರು ಮಾತ್ರ ಪರಲೋಕದಲ್ಲೂ ಕುರುಡರೇ ಆಗಿರುವರು; ಸರಿಯಾದ ದಾರಿಯಿಂದ ಬಹಳ ದೂರದಲ್ಲಿ (ದಾರಿ ಕಾಣದೆ ಕುರುಡರಂತೆ) ಬಿದ್ದಿರುವರು. {72}

وَإِنْ كَادُوا لَيَفْتِنُونَكَ عَنِ الَّذِي أَوْحَيْنَا إِلَيْكَ لِتَفْتَرِيَ عَلَيْنَا غَيْرَهُ ۖ وَإِذًا لَاتَّخَذُوكَ خَلِيلًا

ಪೈಗಂಬರರೇ, ನಿಮ್ಮನ್ನು ಅವರು [ಅರ್ಥಾತ್ ಕುರೈಷರ ಮುಖಂಡರು] ಪ್ರಲೋಭನೆಗೊಳಪಡಿಸಿ, ನಾವು ನಿಮಗೆ 'ವಹೀ' ಮೂಲಕ ಕಳುಹಿಸಿದ (ಕುರ್‌ಆನ್ ವಚನಗಳಿಂದ) ನಿಮ್ಮನ್ನು ಸರಿಸಿ (ಅದಕ್ಕೆ ಬದಲು ಅವರಿಗೆ ಒಪ್ಪಿಗೆಯಾಗುವಂತಹ ಏನನ್ನಾದರೂ) ನೀವೇ ಸ್ವತಃ ರಚಿಸಿ ಅದನ್ನು ನಮ್ಮ ಹೆಸರಲ್ಲಿ ನೀವು ಉದ್ಧರಿಸುವಂತೆ ಅವರು ಕುಟಿಲ ಪ್ರಯತ್ನಗಳನ್ನು ನಡೆಸಿದ್ದರು. ಹಾಗೇನಾದರೂ ಆಗಿದ್ದಿದ್ದರೆ ಖಂಡಿತವಾಗಿ ಅವರು ನಿಮ್ಮನ್ನು ಒಬ್ಬ ಆಪ್ತ ಸ್ನೇಹಿತನನ್ನಾಗಿ ಸ್ವೀಕರಿಸುತ್ತಿದ್ದರು. {73}

وَلَوْلَا أَنْ ثَبَّتْنَاكَ لَقَدْ كِدْتَ تَرْكَنُ إِلَيْهِمْ شَيْئًا قَلِيلًا

(ನಿಮ್ಮ ನಿಷ್ಠೆ ಕದಲದಂತೆ) ನಾವು ನಿಮಗೆ ಸದೃಢತೆ ಒದಗಿಸದೇ ಇರುತ್ತಿದ್ದರೆ ನೀವು ಅವರತ್ತ ಸ್ವಲ್ಪವಾದರೂ ಒಲವು ತೋರುವುದು ದೂರದ ವಿಷಯವಾಗಿರಲಿಲ್ಲ. {74}

إِذًا لَأَذَقْنَاكَ ضِعْفَ الْحَيَاةِ وَضِعْفَ الْمَمَاتِ ثُمَّ لَا تَجِدُ لَكَ عَلَيْنَا نَصِيرًا

ಹಾಗೇನಾದರೂ ಆಗಿದ್ದಿದ್ದರೆ ನಾವು ನಿಮಗೆ ಜೀವಿತದಲ್ಲೂ ಇಮ್ಮಡಿ ಮತ್ತು ಮರಣದ ನಂತರವೂ ಇಮ್ಮಡಿ ಶಿಕ್ಷೆಯ ರುಚಿ ತೋರಿಸುತ್ತಿದ್ದೆವು! ಆಗ ನಮಗೆ ವಿರುದ್ಧವಾಗಿ ನಿಮ್ಮನ್ನು ಸಹಾಯಿಸಲು ಯಾರೂ ನಿಮಗೆ ಸಿಗುತ್ತಿರಲಿಲ್ಲ. {75}

وَإِن كادوا لَيَستَفِزّونَكَ مِنَ الأَرضِ لِيُخرِجوكَ مِنها ۖ وَإِذًا لا يَلبَثونَ خِلافَكَ إِلّا قَليلًا

ನೀವು ಈ ನಾಡಿನಲ್ಲಿ (ಇರದಂತೆ) ನಿಮ್ಮನ್ನು ಹೆದರಿಸಿ, ಅಸ್ಥಿರಗೊಳಿಸಿ, ಕೊನೆಗೆ ನಾಡಿನಿಂದಲೇ [ಅಂದರೆ ಮಕ್ಕಾ ದಿಂದಲೇ] ನಿಮ್ಮನ್ನು ಉಚ್ಛಾಟಿಸಿ ಬಿಡಲು ಅವರು ಎಲ್ಲ ಕುಟಿಲ ಪ್ರಯತ್ನಗಳನ್ನು ಮಾಡಿದ್ದರು. ಹಾಗೇನಾದರೂ ಆಗಿದ್ದಿದ್ದರೆ, ಪೈಗಂಬರರೇ, ನಿಮ್ಮ ನಂತರ ಅವರು ಈ ನಾಡಿನಲ್ಲಿ ಸ್ವಲ್ಪ ಸಮಯ ಮಾತ್ರವೇ ಬದುಕುಳಿಯುತ್ತಿದ್ದರು! {76}

سُنَّةَ مَن قَد أَرسَلنا قَبلَكَ مِن رُسُلِنا ۖ وَلا تَجِدُ لِسُنَّتِنا تَحويلًا

ನಿಮಗಿಂತ ಮುಂಚೆ ನಾವು ಕಳುಹಿಸಿದ ನಮ್ಮ ದೂತರುಗಳಿಗೆ [ನಿಮ್ಮಂತಹ ಪರಿಸ್ಥಿತಿ ಎದುರಾದಾಗ] ನಮ್ಮ ಕಾರ್ಯವಿಧಾನ ಹಾಗೆಯೇ ಇತ್ತು. ಹೌದು, ನಮ್ಮ ಕಾರ್ಯವಿಧಾನದಲ್ಲಿ ನೀವು ಯಾವುದೇ ಬದಲಾವಣೆ ಕಾಣಲಾರಿರಿ. {77}

أَقِمِ الصَّلاةَ لِدُلوكِ الشَّمسِ إِلىٰ غَسَقِ اللَّيلِ وَقُرآنَ الفَجرِ ۖ إِنَّ قُرآنَ الفَجرِ كانَ مَشهودًا

ಜನರೇ, ಸೂರ್ಯನು ಬಾನನೆತ್ತಿಯಿಂದ ಕೆಳಸರಿಯಲು ಆರಂಭಿಸಿದಾಗಿನಿಂದ ಇರುಳಿನ ಕತ್ತಲೆ ಆವರಿಸುವ ತನಕದ (ದಹ್‌ರ್, ಅಸ್‌ರ್, ಮಘ್‌ರಿಬ್ ಮತ್ತು ಇಶಾ) ನಮಾಝ್ ಗಳನ್ನು ನೀವು ನಿಷ್ಠೆಯಿಂದ ಪಾಲಿಸುತ್ತಲಿರಿ. ಅಂತೆಯೇ ಮುಂಜಾವಿನ ಕುರ್‌ಆನ್ ಪಾರಾಯಣದ (ಫಜ್‌ರ್) ನಮಾಝ್ ಅನ್ನು ಕೂಡ ನಿಷ್ಠೆಯಿಂದ ಪಾಲಿಸಿರಿ. ವಾಸ್ತವದಲ್ಲಿ, ಫಜ್‌ರ್ ನಮಾಝ್ ನಲ್ಲಿ ಓದಲಾಗುವ ಕುರ್‌ಆನ್ ಗೆ (ಮಲಕ್ ಗಳ) ಸಾಕ್ಷ್ಯವಿರುತ್ತದೆ. {78}

وَمِنَ اللَّيلِ فَتَهَجَّد بِهِ نافِلَةً لَكَ عَسىٰ أَن يَبعَثَكَ رَبُّكَ مَقامًا مَحمودًا

ಮತ್ತು ಪೈಗಂಬರರೇ, ನೀವು ರಾತ್ರಿಯ ಒಂದು ಭಾಗದಲ್ಲಿ ನಿದ್ರೆಯಿಂದ ಎದ್ದು (ತಹಜ್ಜುದ್ ನಮಾಝ್ ಅನ್ನು) ನಿಷ್ಠೆಯಿಂದ ಪಾಲಿಸಿರಿ. ಅದು ನಿಮ್ಮ ಪಾಲಿಗೆ ಒಂದು ಹೆಚ್ಚುವರಿ ಆರಾಧನೆಯಾಗಿದೆ. ನಿಮ್ಮ ಒಡೆಯನು ನಿಮ್ಮನ್ನು ಅತ್ಯಂತ ಪ್ರಶಂಸನೀಯ ಪದವಿಗೇರಿಸಲು ಅದು ಖಂಡಿತ ಸಹಾಯಕಾರಿಯಾಗುತ್ತದೆ! {79}

وَقُل رَبِّ أَدخِلني مُدخَلَ صِدقٍ وَأَخرِجني مُخرَجَ صِدقٍ وَاجعَل لي مِن لَدُنكَ سُلطانًا نَصيرًا

ಓ ನನ್ನ ಒಡೆಯಾ! [ಒಂದು ಹೊಸ ನಾಡಿಗೆ - ಅರ್ಥಾತ್ ಮದೀನಾ ಕ್ಕೆ] ನನಗೆ ಪ್ರವೇಶ ನೀಡುವಾಗ ಗೌರವಪೂರ್ಣವಾಗಿ ಪ್ರವೇಶಿಸುವಂತೆ ಮಾಡು; ಹಾಗೆಯೇ [ಒಂದು ನಾಡಿನಿಂದ - ಅರ್ಥಾತ್ ಮಕ್ಕಾ ದಿಂದ] ನನ್ನನ್ನು ನಿರ್ಗಮಿಸುವಾಗ ಗೌರವಪೂರ್ಣವಾಗಿಯೇ ನಿರ್ಗಮಿಸುವಂತೆ ಮಾಡು. ಹಾಗೂ [ಮುಂದೆ ಮದೀನಾ ದಲ್ಲಿ ದೌತ್ಯ ನಿರ್ವಹಿಸಲು] ನನ್ನ ನೆರವಿಗಾಗಿ ನಿನ್ನ ವತಿಯಿಂದ ವಿಶೇಷ ಅಧಿಕಾರಬಲ ನನಗೆ ಒದಗಿಸು ಎಂದು ಪೈಗಂಬರರೇ ನೀವು ಪ್ರಾರ್ಥಿಸುತ್ತಲಿರಿ! {80}

وَقُل جاءَ الحَقُّ وَزَهَقَ الباطِلُ ۚ إِنَّ الباطِلَ كانَ زَهوقًا

ಹಾಗೆಯೇ, ಸತ್ಯವು ಬಂದು ಬಿಟ್ಟಿತು ಹಾಗೂ ಮಿಥ್ಯವು ಅಳಿದು ಹೊಯಿತು; ವಾಸ್ತವದಲ್ಲಿ ವಿಥ್ಯವು ಅಳಿದು ಹೋಗುವುದಕ್ಕಾಗಿಯೇ ಇರುವಂತಹದ್ದು ಎಂದು ಪೈಗಂಬರರೇ ನೀವು ಘೋಷಿಸಿ ಬಿಡಿರಿ! {81}

وَنُنَزِّلُ مِنَ القُرآنِ ما هُوَ شِفاءٌ وَرَحمَةٌ لِلمُؤمِنينَ ۙ وَلا يَزيدُ الظّالِمينَ إِلّا خَسارًا

ನಾವು ಈ ಕುರ್‌ಆನ್ (ನ ಮೂಲಕ) ವಿಶ್ವಾಸಿಗಳ ಪಾಲಿಗೆ ಉಪಶಮನ ಮತ್ತು ಅನುಗ್ರಹಗಳನ್ನು ಇಳಿಸಿ ಕೊಡುತ್ತಿದ್ದೇವೆ. ಆದರೆ ದುಷ್ಕರ್ಮಿಗಳ ಪಾಲಿಗೆ ಅದು ನಷ್ಟವನ್ನಲ್ಲದೆ ಬೇರೇನನ್ನೂ ಹೆಚ್ಚಿಸಲಾರದು. {82}

وَإِذا أَنعَمنا عَلَى الإِنسانِ أَعرَضَ وَنَأىٰ بِجانِبِهِ ۖ وَإِذا مَسَّهُ الشَّرُّ كانَ يَئوسًا

ಮಾನವನನ್ನು ನಾವು ಅನುಗ್ರಹಿಸಿದಾಗ ಅವನು (ಕೃತಘ್ನನಾಗಿ) ಮುಖ ತಿರುಗಿಸಿಕೊಳ್ಳುತ್ತಾನೆ; ಮಗ್ಗಲು ಬದಲಾಯಿಸುತ್ತಾನೆ. ಇನ್ನು ಆಪತ್ತೇನಾದರೂ ಅವನಿಗೆ ತಗುಲಿದರೆ ಹತಾಶನಾಗಿ ಬಿಡುತ್ತಾನೆ. {83}

قُل كُلٌّ يَعمَلُ عَلىٰ شاكِلَتِهِ فَرَبُّكُم أَعلَمُ بِمَن هُوَ أَهدىٰ سَبيلًا

ಪೈಗಂಬರರೇ, ಎಲ್ಲರೂ ಅವರವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ; ಅತ್ಯಂತ ಸರಿಯಾದ ದಾರಿಯಲ್ಲಿರುವವರ ಬಗ್ಗೆ ನಿಮ್ಮ ಒಡೆಯನಿಗೆ ಚೆನ್ನಾಗಿ ತಿಳಿದಿರುತ್ತದೆ ಎಂದು ಜನರಿಗೆ ನೀವು ತಿಳಿಸಿ ಬಿಡಿ. {84}

وَيَسأَلونَكَ عَنِ الرّوحِ ۖ قُلِ الرّوحُ مِن أَمرِ رَبّي وَما أوتيتُم مِنَ العِلمِ إِلّا قَليلًا

oooooooooooo {85}

وَلَئِن شِئنا لَنَذهَبَنَّ بِالَّذي أَوحَينا إِلَيكَ ثُمَّ لا تَجِدُ لَكَ بِهِ عَلَينا وَكيلًا

oooooooooooo {86}

إِلّا رَحمَةً مِن رَبِّكَ ۚ إِنَّ فَضلَهُ كانَ عَلَيكَ كَبيرًا

oooooooooooo {87}

قُل لَئِنِ اجتَمَعَتِ الإِنسُ وَالجِنُّ عَلىٰ أَن يَأتوا بِمِثلِ هٰذَا القُرآنِ لا يَأتونَ بِمِثلِهِ وَلَو كانَ بَعضُهُم لِبَعضٍ ظَهيرًا

oooooooooooo {88}

وَلَقَد صَرَّفنا لِلنّاسِ في هٰذَا القُرآنِ مِن كُلِّ مَثَلٍ فَأَبىٰ أَكثَرُ النّاسِ إِلّا كُفورًا

oooooooooooo {89}

وَقالوا لَن نُؤمِنَ لَكَ حَتّىٰ تَفجُرَ لَنا مِنَ الأَرضِ يَنبوعًا

oooooooooooo {90}

أَو تَكونَ لَكَ جَنَّةٌ مِن نَخيلٍ وَعِنَبٍ فَتُفَجِّرَ الأَنهارَ خِلالَها تَفجيرًا

oooooooooooo {91}

أَو تُسقِطَ السَّماءَ كَما زَعَمتَ عَلَينا كِسَفًا أَو تَأتِيَ بِاللَّهِ وَالمَلائِكَةِ قَبيلًا

oooooooooooo {92}

أَو يَكونَ لَكَ بَيتٌ مِن زُخرُفٍ أَو تَرقىٰ فِي السَّماءِ وَلَن نُؤمِنَ لِرُقِيِّكَ حَتّىٰ تُنَزِّلَ عَلَينا كِتابًا نَقرَؤُهُ ۗ قُل سُبحانَ رَبّي هَل كُنتُ إِلّا بَشَرًا رَسولًا

oooooooooooo {93}

وَما مَنَعَ النّاسَ أَن يُؤمِنوا إِذ جاءَهُمُ الهُدىٰ إِلّا أَن قالوا أَبَعَثَ اللَّهُ بَشَرًا رَسولًا

oooooooooooo {94}

قُل لَو كانَ فِي الأَرضِ مَلائِكَةٌ يَمشونَ مُطمَئِنّينَ لَنَزَّلنا عَلَيهِم مِنَ السَّماءِ مَلَكًا رَسولًا

oooooooooooo {95}

قُل كَفىٰ بِاللَّهِ شَهيدًا بَيني وَبَينَكُم ۚ إِنَّهُ كانَ بِعِبادِهِ خَبيرًا بَصيرًا

oooooooooooo {96}

وَمَن يَهدِ اللَّهُ فَهُوَ المُهتَدِ ۖ وَمَن يُضلِل فَلَن تَجِدَ لَهُم أَولِياءَ مِن دونِهِ ۖ وَنَحشُرُهُم يَومَ القِيامَةِ عَلىٰ وُجوهِهِم عُميًا وَبُكمًا وَصُمًّا ۖ مَأواهُم جَهَنَّمُ ۖ كُلَّما خَبَت زِدناهُم سَعيرًا

oooooooooooo {97}

ذٰلِكَ جَزاؤُهُم بِأَنَّهُم كَفَروا بِآياتِنا وَقالوا أَإِذا كُنّا عِظامًا وَرُفاتًا أَإِنّا لَمَبعوثونَ خَلقًا جَديدًا

oooooooooooo {98}

أَوَلَم يَرَوا أَنَّ اللَّهَ الَّذي خَلَقَ السَّماواتِ وَالأَرضَ قادِرٌ عَلىٰ أَن يَخلُقَ مِثلَهُم وَجَعَلَ لَهُم أَجَلًا لا رَيبَ فيهِ فَأَبَى الظّالِمونَ إِلّا كُفورًا

oooooooooooo {99}

قُل لَو أَنتُم تَملِكونَ خَزائِنَ رَحمَةِ رَبّي إِذًا لَأَمسَكتُم خَشيَةَ الإِنفاقِ ۚ وَكانَ الإِنسانُ قَتورًا

oooooooooooo {100}

وَلَقَد آتَينا موسىٰ تِسعَ آياتٍ بَيِّناتٍ ۖ فَاسأَل بَني إِسرائيلَ إِذ جاءَهُم فَقالَ لَهُ فِرعَونُ إِنّي لَأَظُنُّكَ يا موسىٰ مَسحورًا

oooooooooooo {101}

قالَ لَقَد عَلِمتَ ما أَنزَلَ هٰؤُلاءِ إِلّا رَبُّ السَّماواتِ وَالأَرضِ بَصائِرَ وَإِنّي لَأَظُنُّكَ يا فِرعَونُ مَثبورًا

oooooooooooo {102}

فَأَرادَ أَن يَستَفِزَّهُم مِنَ الأَرضِ فَأَغرَقناهُ وَمَن مَعَهُ جَميعًا

oooooooooooo {103}

وَقُلنا مِن بَعدِهِ لِبَني إِسرائيلَ اسكُنُوا الأَرضَ فَإِذا جاءَ وَعدُ الآخِرَةِ جِئنا بِكُم لَفيفًا

oooooooooooo {104}

وَبِالحَقِّ أَنزَلناهُ وَبِالحَقِّ نَزَلَ ۗ وَما أَرسَلناكَ إِلّا مُبَشِّرًا وَنَذيرًا

oooooooooooo {105}

وَقُرآنًا فَرَقناهُ لِتَقرَأَهُ عَلَى النّاسِ عَلىٰ مُكثٍ وَنَزَّلناهُ تَنزيلًا

oooooooooooo {106}

قُل آمِنوا بِهِ أَو لا تُؤمِنوا ۚ إِنَّ الَّذينَ أوتُوا العِلمَ مِن قَبلِهِ إِذا يُتلىٰ عَلَيهِم يَخِرّونَ لِلأَذقانِ سُجَّدًا

oooooooooooo {107}

وَيَقولونَ سُبحانَ رَبِّنا إِن كانَ وَعدُ رَبِّنا لَمَفعولًا

oooooooooooo {108}

وَيَخِرّونَ لِلأَذقانِ يَبكونَ وَيَزيدُهُم خُشوعًا ۩

oooooooooooo {109}

قُلِ ادعُوا اللَّهَ أَوِ ادعُوا الرَّحمٰنَ ۖ أَيًّا ما تَدعوا فَلَهُ الأَسماءُ الحُسنىٰ ۚ وَلا تَجهَر بِصَلاتِكَ وَلا تُخافِت بِها وَابتَغِ بَينَ ذٰلِكَ سَبيلًا

oooooooooooo {110}

وَقُلِ الحَمدُ لِلَّهِ الَّذي لَم يَتَّخِذ وَلَدًا وَلَم يَكُن لَهُ شَريكٌ فِي المُلكِ وَلَم يَكُن لَهُ وَلِيٌّ مِنَ الذُّلِّ ۖ وَكَبِّرهُ تَكبيرًا

oooooooooooo {111}


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...