ಅಲ್ ಹಜ್ಜ್ | ترجمة سورة الحج‎

    تـرجمـة سورة الحج من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಲ್ ಹಜ್ಜ್ | ಪವಿತ್ರ ಕುರ್‌ಆನ್ ನ 22 ನೆಯ ಸೂರಃ | ಇದರಲ್ಲಿ ಒಟ್ಟು 78 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

يَا أَيُّهَا النَّاسُ اتَّقُوا رَبَّكُمْ ۚ إِنَّ زَلْزَلَةَ السَّاعَةِ شَيْءٌ عَظِيمٌ

ಓ ಮನುಷ್ಯರೇ! ನಿಮ್ಮ ಕರ್ತಾನಾದ (ಅಲ್ಲಾಹ್ ನ) ಭಯವಿರಿಸಿಕೊಳ್ಳಿ; ನಿಜವಾಗಿಯೂ ಅಂತ್ಯ ಘಳಿಗೆಯ ಆ ಭೂಕಂಪವು ಅತಿ ಭೀಕರವಾದುದು! {1}

يَوْمَ تَرَوْنَهَا تَذْهَلُ كُلُّ مُرْضِعَةٍ عَمَّا أَرْضَعَتْ وَتَضَعُ كُلُّ ذَاتِ حَمْلٍ حَمْلَهَا وَتَرَى النَّاسَ سُكَارَىٰ وَمَا هُمْ بِسُكَارَىٰ وَلَٰكِنَّ عَذَابَ اللَّهِ شَدِيدٌ

ಹಾಲುಣಿಸುವ ಪ್ರತಿಯೊಬ್ಬಳೂ ತಾನು ಹಾಲುಣಿಸಿದ ಮಗುವನ್ನೇ ಮರೆತು ಬಿಡುವುದನ್ನೂ; ಗರ್ಭಿಣಿಯರು ತಾವು ಧರಿಸಿದ ಗರ್ಭವನ್ನೇ ಚೆಲ್ಲಿಬಿಡುವುದನ್ನೂ ಅಂದು ನೀವು ಕಾಣಲಿರುವಿರಿ! ಮಾತ್ರವಲ್ಲ, ಮನುಷ್ಯರಿಗೆಲ್ಲಾ ಅಮಲು ಕವಿದಂತೆಯೂ ನೀವು ಕಾಣುವಿರಿ. ಆದರೆ ಯಥಾರ್ಥದಲ್ಲಿ ಅವರಿಗೆ ಕವಿದಿರುವುದು ಅಮಲಲ್ಲ! ಬದಲಾಗಿ (ಅಂದು) ಅಲ್ಲಾಹ್ ನ ಶಿಕ್ಷೆಯೇ ಅಷ್ಟೊಂದು ಕಠಿಣವಾಗಿರುವುದು! {2}

وَمِنَ النَّاسِ مَنْ يُجَادِلُ فِي اللَّهِ بِغَيْرِ عِلْمٍ وَيَتَّبِعُ كُلَّ شَيْطَانٍ مَرِيدٍ

ಇನ್ನು ಜನರಲ್ಲಿ ಕೆಲವರು ಯಾವ ಜ್ಞಾನವೂ ಇಲ್ಲದೆ ಅಲ್ಲಾಹ್ ನ ವಿಷಯದಲ್ಲಿ ಅನಗತ್ಯ ತರ್ಕಗಳಲ್ಲಿ ತೊಡಗಿರುವುದನ್ನೂ (ನೀವು ಕಾಣುವಿರಿ). ಉದ್ಧಟತದಿಂದ ವರ್ತಿಸುವ ಎಲ್ಲಾ ಸೈತಾನರುಗಳನ್ನು ಅಂತಹವರು ಹಿಂಬಾಲಿಸುತ್ತಾರೆ. {3}

كُتِبَ عَلَيْهِ أَنَّهُ مَنْ تَوَلَّاهُ فَأَنَّهُ يُضِلُّهُ وَيَهْدِيهِ إِلَىٰ عَذَابِ السَّعِيرِ

(ಇನ್ನು ಸೈತಾನನ ಬಗ್ಗೆ ಹೇಳುವುದಾರೆ) ಆವನು ತನ್ನ ಸ್ನೇಹ ಬೆಳೆಸುವವರನ್ನು ದಾರಿಗೆಡಿಸಿಯೇ ತೀರುವನು ಹಾಗೂ ಧಗಧಗಿಸುವ ನರಕದ ಶಿಕ್ಷೆಯೆಡೆಗೆ ಖಂಡಿತವಾಗಿ ಕೊಂಡೊಯ್ಯುವನು ಎಂದು ವಿಧಿ ಬರೆಯಲಾಗಿದೆ. {4}

يَا أَيُّهَا النَّاسُ إِنْ كُنْتُمْ فِي رَيْبٍ مِنَ الْبَعْثِ فَإِنَّا خَلَقْنَاكُمْ مِنْ تُرَابٍ ثُمَّ مِنْ نُطْفَةٍ ثُمَّ مِنْ عَلَقَةٍ ثُمَّ مِنْ مُضْغَةٍ مُخَلَّقَةٍ وَغَيْرِ مُخَلَّقَةٍ لِنُبَيِّنَ لَكُمْ ۚ وَنُقِرُّ فِي الْأَرْحَامِ مَا نَشَاءُ إِلَىٰ أَجَلٍ مُسَمًّى ثُمَّ نُخْرِجُكُمْ طِفْلًا ثُمَّ لِتَبْلُغُوا أَشُدَّكُمْ ۖ وَمِنْكُمْ مَنْ يُتَوَفَّىٰ وَمِنْكُمْ مَنْ يُرَدُّ إِلَىٰ أَرْذَلِ الْعُمُرِ لِكَيْلَا يَعْلَمَ مِنْ بَعْدِ عِلْمٍ شَيْئًا ۚ وَتَرَى الْأَرْضَ هَامِدَةً فَإِذَا أَنْزَلْنَا عَلَيْهَا الْمَاءَ اهْتَزَّتْ وَرَبَتْ وَأَنْبَتَتْ مِنْ كُلِّ زَوْجٍ بَهِيجٍ

ಓ ಮನುಷ್ಯರೇ! ಸಾವಿನ ನಂತರ ನಿಮ್ಮನ್ನು ಪುನಃ ಜೀವಂತಗೊಳಿಸುವ ವಿಷಯದಲ್ಲಿ ನಿಮಗೆ ಸಂಶಯವೇನಾದರೂ ಇದ್ದರೆ ನಿಮಗೆ ತಿಳಿದಿರಲಿ, ಮೊದಲಿಗೆ ನಾವು ನಿಮ್ಮನ್ನು (ನೇರವಾಗಿ) ಮಣ್ಣಿನಿಂದಲೇ ಸೃಷ್ಟಿ ಮಾಡುತ್ತಿದ್ದೆವು. ನಂತರದ ಹಂತದಲ್ಲಿ ಹನಿ ವೀರ್ಯದಿಂದ, ನಂತರ ಹೆಪ್ಪುಗಟ್ಟಿ ಅಂಟಿಕೊಳ್ಳುವ ಪದಾರ್ಥದಿಂದ, ನಂತರ ರೂಪಪಡೆದ ಹಾಗೂ ಇನ್ನೂ ರೂಪಪಡೆಯದ (ಅಂಗಾಗಗಳನ್ನು ಹೊಂದಿದ) ಮಾಂಸಪಿಂಡದಿಂದ ನಾವು ನಿಮ್ಮನ್ನು ಸೃಷ್ಟಿ ಮಾಡಿರುತ್ತೇವೆ. ನಿಮಗೆ ಸ್ಪಷ್ಟವಾಗಲೆಂದು (ನಮ್ಮ ಸೃಷ್ಟಿವೈಖರಿಯನ್ನು ನಾವು ಹೀಗೆ ವಿವರಿಸುತ್ತಿದ್ದೇವೆ). ನಾವು ಉಳಿಸಲಿಚ್ಛಿಸುವ (ಭ್ರೂಣವನ್ನು) ಒಂದು ನಿರ್ಧಿಷ್ಟ ಕಾಲಾವಧಿಯ ವರೆಗೆ ಗರ್ಭಗಳಲ್ಲಿ ಉಳಿಸುತ್ತೇವೆ; ಅದಾದ ನಂತರ ಒಂದು ಮಗುವಿನ ರೂಪದಲ್ಲಿ ನಿಮ್ಮನ್ನು ಹೊರತರುತ್ತೇವೆ. ತದನಂತರ ನೀವು ಪೂರ್ಣ ಯೌವನವನ್ನು ತಲಪುವಂತಾಗಲು (ನಿಮ್ಮ ಪರಿಪಾಲನೆಯ ಎಲ್ಲ ವ್ಯವಸ್ಥೆಯನ್ನು ಮಾಡುತ್ತೇವೆ). ತರುವಾಯ ನಿಮ್ಮಲ್ಲಿಯ ಕೆಲವರು (ಸರಿಯಾದ ಸಮಯಕ್ಕೆ) ಮರಣ ಹೊಂದುವರು; ಇನ್ನು ಕೆಲವರು, ಎಲ್ಲವನ್ನೂ ಅರಿತು ಕೊನೆಗೆ ಏನನನ್ನೂ ಅರಿಯಲಾಗದಂತಹ ನಿರುಪಯುಕ್ತ ವೃದ್ಧಾಪ್ಯವನ್ನು ತಲಪುತ್ತಾರೆ. ಮಾತ್ರವಲ್ಲ, ಜೀವಕಳೆ ಇಲ್ಲದೆ ಒಣಗಿ ಬಿದ್ದಿರುವ ನೆಲವನ್ನು ನೀವು ನೋಡುತ್ತೀರಿ; ಅದರ ಮೇಲೆ ನಾವು ಮಳೆ ಸುರಿಸಿದಾಗ ಅದು ತೇವಗೊಂಡು, ಸ್ಪಂದಿಸಿ, ಸರಿಯಾಗಿ ಅರಳಿ ಸಕಲ ಪ್ರಜಾತಿಯ ಸೊಗಸಾದ ಬೆಳೆಗಳನ್ನು ಉತ್ಪಾದಿಸುತ್ತದೆ. {5}

ذَٰلِكَ بِأَنَّ اللَّهَ هُوَ الْحَقُّ وَأَنَّهُ يُحْيِي الْمَوْتَىٰ وَأَنَّهُ عَلَىٰ كُلِّ شَيْءٍ قَدِيرٌ

ಹಾಗೆಲ್ಲ ಸಂಭವಿಸಲು ಕಾರಣವೆಂದರೆ ವಾಸ್ತವದಲ್ಲಿ ಅಲ್ಲಾಹ್ ನು ಮಾತ್ರವೇ ಸತ್ಯವಾಗಿರುವುದರಿಂದ! ಹೌದು, ಅವನು ಮಾತ್ರವೇ ಮೃತರಿಗೆ ಜೀವ ನೀಡಬಲ್ಲವನು; ಅವನು ಮಾತ್ರವೇ ಸಕಲ ವಿಷಯಗಳ ಮೇಲೆ ಸಂಪೂರ್ಣವಾದ ಅಧಿಕಾರ ಹೊಂದಿದವನು. {6}

وَأَنَّ السَّاعَةَ آتِيَةٌ لَا رَيْبَ فِيهَا وَأَنَّ اللَّهَ يَبْعَثُ مَنْ فِي الْقُبُورِ

ಹೌದು, ಪುನರುತ್ಥಾನದ ಆ ಸಮಯವು ಬಂದೇ ತೀರುವುದೆಂಬ ವಿಷಯದಲ್ಲಿ ಯಾವ ಸಂಶಯವೂ ಇಲ್ಲ! ಹಾಗೆಯೇ ಗೋರಿಗಳಲ್ಲಿರುವವರನ್ನು ಅಲ್ಲಾಹ್ ನು ಪುನಃ ಜೀವಂತಗೊಳಿಸಿಯೇ ತೀರುವನು. {7}

وَمِنَ النَّاسِ مَنْ يُجَادِلُ فِي اللَّهِ بِغَيْرِ عِلْمٍ وَلَا هُدًى وَلَا كِتَابٍ مُنِيرٍ

(ವಾಸ್ತವ ಅದಾಗಿದ್ದರೂ) ಜನರಲ್ಲಿ ಕೆಲವರು ಯಾವುದೇ ಜ್ಞಾನವಾಗಲಿ, ಮಾರ್ಗದರ್ಶನವಾಗಲಿ, ಬೆಳಕು ಚೆಲ್ಲುವ ಒಂದು ಗ್ರಂಥವಾಗಲಿ ಇಲ್ಲದೆಯೇ ಅಲ್ಲಾಹ್ ನ ವಿಷಯದಲ್ಲಿ (ತಾನೆಲ್ಲ ತಿಳಿದಿದ್ದೇನೆ ಎಂಬಂತೆ) ತರ್ಕಿಸುತ್ತಿರುತ್ತಾರೆ. {8}

ثَانِيَ عِطْفِهِ لِيُضِلَّ عَنْ سَبِيلِ اللَّهِ ۖ لَهُ فِي الدُّنْيَا خِزْيٌ ۖ وَنُذِيقُهُ يَوْمَ الْقِيَامَةِ عَذَابَ الْحَرِيقِ

ತಿರಸ್ಕಾರದೊಂದಿಗೆ ಕತ್ತು ತಿರುಗಿಸಿ ಜನಸಾಮಾನ್ಯಸನ್ನು ಅಲ್ಲಾಹ್ ನ ಮಾರ್ಗದಿಂದ ದೂರಗೊಳಿಸುವವನೂ ಅವರೊಳಗೆ ಇದ್ದಾನೆ! ಅಂತಹವನಿಗೆ ಈ ಲೋಕದಲ್ಲೂ ಅಪಮಾನವಿದೆ; ಮಾತ್ರವಲ್ಲ, ಪುನರುತ್ಥಾನದ ದಿನ ನಾವು ಆತನಿಗೆ ಉರಿಯುವ ನರಕದ ಶಿಕ್ಷೆಯ ರುಚಿ ತೋರಿಸಲಿರುವೆವು. {9}

ذَٰلِكَ بِمَا قَدَّمَتْ يَدَاكَ وَأَنَّ اللَّهَ لَيْسَ بِظَلَّامٍ لِلْعَبِيدِ

ಅದೇಕೆಂದರೆ ನಿಮ್ಮ ಕೈಗಳು ಕರ್ಮಗೈದು ಕೂಡಿಟ್ಟ (ಪಾಪಗಳಿಗಾಗಿ)! ಅನ್ಯಥಾ ಅಲ್ಲಾಹ್ ನು ತನ್ನ ದಾಸರಿಗೆ ಸ್ವಲ್ಪವಾದರೂ ಅನ್ಯಾಯ ಮಾಡುವವನಲ್ಲ! {10}

وَمِنَ النَّاسِ مَنْ يَعْبُدُ اللَّهَ عَلَىٰ حَرْفٍ ۖ فَإِنْ أَصَابَهُ خَيْرٌ اطْمَأَنَّ بِهِ ۖ وَإِنْ أَصَابَتْهُ فِتْنَةٌ انْقَلَبَ عَلَىٰ وَجْهِهِ خَسِرَ الدُّنْيَا وَالْآخِرَةَ ۚ ذَٰلِكَ هُوَ الْخُسْرَانُ الْمُبِينُ

ಸ್ವಲ್ಪ ಹಿಂಜರಿಯುತ್ತಲೇ ಅಲ್ಲಾಹ್ ನ ಆರಾಧನೆ ಮಾಡುವ ಮತ್ತೆ ಕೆಲವರೂ ಜನರೊಳಗೆ ಇರುವರು. ಅಂತಹವರಲ್ಲಿ ಯಾರಿಗಾದರೂ ಸ್ವಲ್ಪ ಒಳಿತಾದರೆ ಅದರಿಂದ ಆತನು ಸಂತೋಷ ಪಡುತ್ತಾನೆ; ಇನ್ನು ಪರೀಕ್ಷಾರ್ಥ ಕಷ್ಟಕಾಲವೇನಾದರೂ ಬಂದರೆ ಆತ ಮುಖ ತಿರುಗಿಸಿಕೊಂಡು (ಧರ್ಮದಿಂದಲೇ) ಪಲಾಯನ ಮಾಡುತ್ತಾನೆ. ಆತನ ಇಹಲೋಕವೂ ನಷ್ಟವಾಗುತ್ತದೆ; ಪರಲೋಕವೂ ನಷ್ಟವಾಗುತ್ತದೆ. ಅದೊಂದು ಅತ್ಯಂತ ಸ್ಪಷ್ಟವಾದ ನಷ್ಟವೇ ಸರಿ. {11}

يَدْعُو مِنْ دُونِ اللَّهِ مَا لَا يَضُرُّهُ وَمَا لَا يَنْفَعُهُ ۚ ذَٰلِكَ هُوَ الضَّلَالُ الْبَعِيدُ

ಆತನು, ಅಲ್ಲಾಹ್ ನನ್ನು ಕರೆಯುವ ಬದಲು ತನಗೆ ಯಾವುದೇ ರೀತಿಯ ನಷ್ಟವನ್ನಾಗಲಿ ಲಾಭವನ್ನಾಗಲಿ ಮಾಡಲು ಸಾಧ್ಯವಿಲ್ಲದವರನ್ನು ಕರೆದು ಪ್ರಾರ್ಥಿಸುತ್ತಾನೆ. ಅದು ಬಹು ದೂರ ಸಾಗಿದ ಭ್ರಷ್ಟ ದಾರಿಯೇ ಸರಿ. {12}

يَدْعُو لَمَنْ ضَرُّهُ أَقْرَبُ مِنْ نَفْعِهِ ۚ لَبِئْسَ الْمَوْلَىٰ وَلَبِئْسَ الْعَشِيرُ

[ಆಶ್ಚರ್ಯವೆಂದರೆ] ಯಾರಿಂದ ಸಂಭವಿಸುವ ಹಾನಿಯು, ಸಿಗಬಹುದಾದ ಲಾಭಕ್ಕಿಂತ ಹೆಚ್ಚು ಹತ್ತಿರದಲ್ಲಿದೆಯೋ ಅಂತಹವರಿಗೆ ಆತನು ಮೊರೆಯಿಡುತ್ತಾನೆ! ಎಂತಹ ನಿಕೃಷ್ಟ ಸಹಾಯಕರವರು! ಎಷ್ಟೊಂದು ಕೆಟ್ಟ ಸಂಗಾತಿಗಳು! {13}

إِنَّ اللَّهَ يُدْخِلُ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِنْ تَحْتِهَا الْأَنْهَارُ ۚ إِنَّ اللَّهَ يَفْعَلُ مَا يُرِيدُ

ಬಲು ನಿಶ್ಚಿತವಾಗಿಯೂ, (ಅಲ್ಲಾಹ್ ನ ಏಕತೆಯನ್ನು ಮನಸ್ಸಾರೆ) ಒಪ್ಪಿಕೊಂಡು ಜೊತೆಗೆ ಒಳ್ಳೆಯ ಕೆಲಸಗಳನ್ನೂ ಕೈಗೊಳ್ಳುವರಿಗೆ, ಕೆಳಗಡೆ ಕಾಲುವೆಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅಲ್ಲಾಹ್ ನು ಪ್ರವೇಶ ನೀಡುತ್ತಾನೆ. ಹೌದು, ಅಲ್ಲಾಹ್ ನು ತಾನು ಬಯಸಿದ್ದನ್ನು ಮಾಡುತ್ತಾನೆ. {14}

مَنْ كَانَ يَظُنُّ أَنْ لَنْ يَنْصُرَهُ اللَّهُ فِي الدُّنْيَا وَالْآخِرَةِ فَلْيَمْدُدْ بِسَبَبٍ إِلَى السَّمَاءِ ثُمَّ لْيَقْطَعْ فَلْيَنْظُرْ هَلْ يُذْهِبَنَّ كَيْدُهُ مَا يَغِيظُ

[ಸ್ವಲ್ಪ ಹಿಂಜರಿಯುತ್ತಲೇ ಅಲ್ಲಾಹ್ ನ ಆರಾಧನೆ ಮಾಡಿದವನು, ಅಂದರೆ] ತನಗೆ ಇಹಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಯಾವುದೇ ಸಹಾಯವನ್ನು ಅಲ್ಲಾಹ್ ನು ಮಾಡಲಾರನು ಎಂದು ಗುಮಾನಿಸುತ್ತಿದ್ದವನು (ಸಾಧ್ಯವಿದ್ದರೆ) ಒಂದು ಹಗ್ಗವನ್ನು ಆಕಾಶಕ್ಕೆ ಬಿಗಿಯಲಿ; ನಂತರ (ಹತಾಶನಾಗಿ) ಅದನ್ನು ತುಂಡರಿಸಲಿ. ಈ ತಂತ್ರಗಾರಿಕೆಯು ಆತನನ್ನು ಕುಪಿತಗೊಳಿಸಿದ್ದ ಅಂಶವನ್ನು ನಿವಾರಿಸುತ್ತದೆಯೇ ಎಂದು ನೋಡಲಿ! {15}

وَكَذَٰلِكَ أَنْزَلْنَاهُ آيَاتٍ بَيِّنَاتٍ وَأَنَّ اللَّهَ يَهْدِي مَنْ يُرِيدُ

ಹಾಗೆ ನಾವು ಅತ್ಯಂತ ಸ್ಪಷ್ಟವಾದ ನಿದರ್ಶನಗಳೊಂದಿಗೆ ಈ ಗ್ರಂಥವನ್ನು ಇಳಿಸಿರುತ್ತೇವೆ; ವಾಸ್ತವದಲ್ಲಿ ಅಲ್ಲಾಹ್ ನು ತಾನು ಬಯಸುವವನಿಗೆ (ತನ್ನ ಕಾಯಿದೆಯ ಪ್ರಕಾರ) ಸರಿದಾರಿ ತೋರುತ್ತಾನೆ. {16}

إِنَّ الَّذِينَ آمَنُوا وَالَّذِينَ هَادُوا وَالصَّابِئِينَ وَالنَّصَارَىٰ وَالْمَجُوسَ وَالَّذِينَ أَشْرَكُوا إِنَّ اللَّهَ يَفْصِلُ بَيْنَهُمْ يَوْمَ الْقِيَامَةِ ۚ إِنَّ اللَّهَ عَلَىٰ كُلِّ شَيْءٍ شَهِيدٌ

ನಿಜವೇನೆಂದರೆ ವಿಶ್ವಾಸಿಗಳಾದವರು, ಯಹೂದಿಗಳಾದವರು, ಸಾಬಿಯನ್ನರು, ನಸಾರಾಗಳು, ಮಜೂಸಿಗಳು ಮತ್ತು ಬಹುದೇವತ್ವ ಸ್ವೀಕರಿಸಿದ (ಮುಷ್ರಿಕ್) ಜನರು - ಇವರೆಲ್ಲರೂ [ತರ್ಕಿಸುತ್ತಿದ್ದ ವಿಷಯಗಳಲ್ಲಿ] ಪುನರುತ್ಥಾನದ ದಿನ ಅಲ್ಲಾಹ್ ನೇ ತೀರ್ಪು ನೀಡಲಿರುವನು. ವಾಸ್ತವದಲ್ಲಿ ಎಲ್ಲಾ ವಿಷಯಗಳನ್ನು ಅಲ್ಲಾಹ್ ನು ನೇರವಾಗಿ ವೀಕ್ಷಿಸುತ್ತಿರುವನು. {17}

أَلَمْ تَرَ أَنَّ اللَّهَ يَسْجُدُ لَهُ مَنْ فِي السَّمَاوَاتِ وَمَنْ فِي الْأَرْضِ وَالشَّمْسُ وَالْقَمَرُ وَالنُّجُومُ وَالْجِبَالُ وَالشَّجَرُ وَالدَّوَابُّ وَكَثِيرٌ مِنَ النَّاسِ ۖ وَكَثِيرٌ حَقَّ عَلَيْهِ الْعَذَابُ ۗ وَمَنْ يُهِنِ اللَّهُ فَمَا لَهُ مِنْ مُكْرِمٍ ۚ إِنَّ اللَّهَ يَفْعَلُ مَا يَشَاءُ

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ (ಸಕಲ ಸೃಷ್ಟಿಜಾಲ); ಸೂರ್ಯ, ಚಂದ್ರ, ನಕ್ಷತ್ರಗಳು, ಪರ್ವತಗಳು, ವೃಕ್ಷವರ್ಗ, ಪ್ರಾಣಿಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಮನುಷ್ಯರು - ಎಲ್ಲರೂ ಅಲ್ಲಾಹ್ ನಿಗೆ ಶಿರಬಾಗುವುದನ್ನು ನೀವು ಗಮನಿಸುತ್ತಿಲ್ಲವೇ!? ಮನುಷ್ಯರ ಇನ್ನೊಂದು ದೊಡ್ಡ ಸಂಖ್ಯೆಯ ಮೇಲೆ (ಅಲ್ಲಾಹ್ ನಿಗೆ ಶಿರಬಾಗದೆ, ಬೇರೆಯವರ ಮುಂದೆ ಶಿರಬಾಗಿದ್ದಕ್ಕಾಗಿ) ಅದಾಗಲೇ ಶಿಕ್ಷೆಯು ಖಡ್ಡಾಯವಾಗಿ ಬಿಟ್ಟಿದೆ! ಯಾರನ್ನು ಅಲ್ಲಾಹ್ ನು ಹೀನಾಯಗೊಳಿಸುತ್ತಾನೋ ಅವನನ್ನು ಮರ್ಯಾದಸ್ಥನನ್ನಾಗಿ ಮಾಡುವವರು ಯಾರೂ ಇಲ್ಲ. ಹೌದು, ಅಲ್ಲಾಹ್ ನು ತಾನು ಬಯಸುವುದನ್ನು ಕಾರ್ಯಗತ ಗೊಳಿಸುತ್ತಾನೆ. {18} ۩

هَٰذَانِ خَصْمَانِ اخْتَصَمُوا فِي رَبِّهِمْ ۖ فَالَّذِينَ كَفَرُوا قُطِّعَتْ لَهُمْ ثِيَابٌ مِنْ نَارٍ يُصَبُّ مِنْ فَوْقِ رُءُوسِهِمُ الْحَمِيمُ

ಅವರದ್ದು, ತಮ್ಮ ಕರ್ತಾರನ ವಿಷಯದಲ್ಲಿ ತರ್ಕದಲ್ಲಿ ತೊಡಗಿದ್ದ ಎರಡು ವಿರೋಧೀ ಗುಂಪುಗಳು. ಅವರ ಪೈಕಿ (ಅಲ್ಲಾಹ್ ನ ಏಕತ್ವವನ್ನು) ನಿರಾಕರಿಸಿದ ಗುಂಪಿನವರಿಗಾಗಿ ಬೆಂಕಿಯನ್ನು ಕತ್ತರಿಸಿ ತಯಾರಿಸಲಾದ ಉಡುಪುಗಳು ಸಿದ್ಧವಿದೆ; ಕುದಿಯುವ ನೀರನ್ನು ಅವರ ತಲೆಯ ಮೇಲೆ ಸುರಿಸಲಾಗುವುದು. {19}

يُصْهَرُ بِهِ مَا فِي بُطُونِهِمْ وَالْجُلُودُ

ಅದರಿಂದಾಗಿ ಅವರ ಹೊಟ್ಟೆಗಳಲ್ಲಿರುವುದೆಲ್ಲ ಕರಗಿ ಹೋಗಲಿದೆ; (ಹೊರಗಿನ) ಚರ್ಮಗಳೂ ಸಹ! {20}

وَلَهُمْ مَقَامِعُ مِنْ حَدِيدٍ

ಕಬ್ಬಿಣದ ಸುತ್ತಿಗೆಗಳೂ ಅವರ (ತಲೆಗಳನ್ನು ಜಜ್ಜಲು) ತಯಾರಿಡಲಾಗಿದೆ. {21}

كُلَّمَا أَرَادُوا أَنْ يَخْرُجُوا مِنْهَا مِنْ غَمٍّ أُعِيدُوا فِيهَا وَذُوقُوا عَذَابَ الْحَرِيقِ

ಆ ನರಕ ಯಾತನೆಯ ಕಾರಣ ಅಲ್ಲಿಂದ ಹೊರಬರಲು ಅವರು ಬಯಸಿದಾಗಲೆಲ್ಲ, ಸವಿಯಿರಿ ಸುಡುವ ಬೆಂಕಿಯ ಶಿಕ್ಷೆಯನ್ನು, ಎನ್ನುತಾ ಪುನಃ ಅವರನ್ನು ಅದರೊಳಗೆ ಮರಳಿಸಲಾಗುವುದು. {22}

إِنَّ اللَّهَ يُدْخِلُ الَّذِينَ آمَنُوا وَعَمِلُوا الصَّالِحَاتِ جَنَّاتٍ تَجْرِي مِنْ تَحْتِهَا الْأَنْهَارُ يُحَلَّوْنَ فِيهَا مِنْ أَسَاوِرَ مِنْ ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ

ಆದರೆ (ಅಲ್ಲಾಹ್ ನ ಧರ್ಮದಲ್ಲಿ ಸಂಪೂರ್ಣವಾದ) ವಿಶ್ವಾಸ ಹೊಂದಿ ಜೊತೆಗೆ ಸತ್ಕರ್ಮಗಳನ್ನೂ ಕೈಗೊಂಡವರಿಗೆ ಅಲ್ಲಾಹ್ ನು ಖಂಡಿತವಾಗಿ ತಳಭಾಗದಲ್ಲಿ ನದಿಗಳು ಹರಿಯುತ್ತಿರುವಂತಹ ಉದ್ಯಾನವನಗಳಿಗೆ ಪ್ರವೇಶ ನೀಡುತ್ತಾನೆ. ಅಲ್ಲಿ ಅವರನ್ನು ಚಿನ್ನದ ಕಡಗಗಳು ಹಾಗೂ ಮುತ್ತಿನ (ಸರಗಳಿಂದ) ಸಿಂಗರಿಸಲಾಗುತ್ತದೆ; ಅಲ್ಲಿ ಅವರಿಗಿರುವ ಉಡುಗೆತೊಡುಗೆಗಳು ರೇಷ್ಮೆಯದ್ದಾಗಿರುತ್ತದೆ. {23}

وَهُدُوا إِلَى الطَّيِّبِ مِنَ الْقَوْلِ وَهُدُوا إِلَىٰ صِرَاطِ الْحَمِيدِ

ಮಾತುಗಳಲ್ಲಿ ಅತ್ಯುತ್ತಮವಾದ ಮಾತು [ಅಂದರೆ ಕಲಿಮಃ ತಯ್ಯಿಬಃ ಉಚ್ಚರಿಸುವಂತೆ] ಅವರಿಗೆ ಮಾರ್ಗದರ್ಶನ ನೀಡಿ, ಸ್ತುತ್ಯರ್ಹನಾದ ಅಲ್ಲಾಹ್ ನ ಮಾರ್ಗದತ್ತ ಅವರಿಗೆ [ಭೂಲೋಕ ಜೀವನದಲ್ಲೂ] ದಾರಿ ತೋರಲಾಗಿತ್ತು. {24}

إِنَّ الَّذِينَ كَفَرُوا وَيَصُدُّونَ عَنْ سَبِيلِ اللَّهِ وَالْمَسْجِدِ الْحَرَامِ الَّذِي جَعَلْنَاهُ لِلنَّاسِ سَوَاءً الْعَاكِفُ فِيهِ وَالْبَادِ ۚ وَمَنْ يُرِدْ فِيهِ بِإِلْحَادٍ بِظُلْمٍ نُذِقْهُ مِنْ عَذَابٍ أَلِيمٍ

[ಪೈಗಂಬರರು ಬೋಧಿಸುತ್ತಿರುವ ಅಲ್ಲಾಹ್ ನ ಧರ್ಮಕ್ಕೆ] ಧಿಕ್ಕಾರ ತೋರುವ, ಅಲ್ಲಾಹ್ ನ ಮಾರ್ಗದತ್ತ ಬಾರದಂತೆ ಜನರನ್ನು ತಡೆಯುವ, ನಾಡಿನವರಿಗೂ ಹೊರನಾಡಿನವರಿಗೂ ಸಮಾನ ಪ್ರವೇಶ ಹಕ್ಕು ನೀಡಿ ನಾವು ಜನರಿಗಾಗಿ ನಿರ್ಮಿಸಿದ (ಮಕ್ಕಾ ಪಟ್ಟಣದಲ್ಲಿರುವ) ಆ ಮಸ್ಜಿದ್ ಅಲ್-ಹರಾಮ್ ಗೆ [ನಮಾಝ್ ಮತ್ತು ಇ'ತಿಕಾಫ್ ನಡೆಸಲು] ಪ್ರವೇಶಿಸದಂತೆ ಜನರನ್ನು ತಡೆಯುವ, ಮತ್ತು ಅಕ್ರಮವಾಗಿ ಅಲ್ಲಿ ಅಧಾರ್ಮಿಕತೆ ಹೇರಲು ಇಚ್ಛಿಸುವ [ಕುರೈಷರ ಪುರೋಹಿತ ವರ್ಗಕ್ಕೆ ಸೇರಿದ] ಜನರಿಗೆ ನಾವು ಯಾತನಾಮಯ ಶಿಕ್ಷೆಯ ರುಚಿಯುಣ್ಣಿಸಲಿರುವೆವು. {25}

وَإِذْ بَوَّأْنَا لِإِبْرَاهِيمَ مَكَانَ الْبَيْتِ أَنْ لَا تُشْرِكْ بِي شَيْئًا وَطَهِّرْ بَيْتِيَ لِلطَّائِفِينَ وَالْقَائِمِينَ وَالرُّكَّعِ السُّجُودِ

ಪೈಗಂಬರರೇ, ನಾವು ಪ್ರವಾದಿ ಇಬ್ರಾಹೀಮ್ ರಿಗೆ ನಮ್ಮ ಭವನದ (ಅಂದರೆ ಮಸ್ಜಿದ್ ಅಲ್-ಹರಾಮ್ ನ ನಿರ್ಮಾಣಕ್ಕಾಗಿ) ಸ್ಥಳವನ್ನು ಗೊತ್ತುಪಡಿಸಿದ ಸಂದರ್ಭದಲ್ಲಿ (ಅವರಿಗೆ ನೀಡಿದ ಆದೇಶವನ್ನು ಈಗ ಜನರಿಗೆ ನೆನಪಿಸಿರಿ): ನೀವು ನನ್ನ ದೇವತ್ವದಲ್ಲಿ ಏನನ್ನೂ ನನಗೆ ಜೊತೆಗೂಡಿಸಬಾರದು; ಪ್ರದಕ್ಷಿಣೆ ಮಾಡುವವರಿಗಾಗಿಯೂ, ಹಾಗೂ ನಿಂತುಕೊಂಡು, ತಲೆಬಾಗಿ, ಸಾಷ್ಟಾಂಗವೆರಗುತ್ತಾ ಇಲ್ಲಿ ನಮಾಝ್ ಮಾಡುವವರಿಗಾಗಿಯೂ ನನ್ನ ಈ ಭವನವನ್ನು (ಶಿರ್ಕ್ ಎಂಬ ಕಲ್ಮಶದಿಂದ) ನಿರ್ಮಲವಾಗಿರಿಸಬೇಕು; {26}

وَأَذِّنْ فِي النَّاسِ بِالْحَجِّ يَأْتُوكَ رِجَالًا وَعَلَىٰ كُلِّ ضَامِرٍ يَأْتِينَ مِنْ كُلِّ فَجٍّ عَمِيقٍ

ಮತ್ತು, ಹಜ್ಜ್ ನಿರ್ವಹಿಸಲು ಬರುವಂತೆ ಜನರಿಗೆ ಕರೆ ನೀಡಬೇಕು; ಆಗ ಕಾಲ್ನಡಿಗೆಯಲ್ಲೂ (ಯಾತ್ರೆಯ ನಿಮಿತ್ತ ಬಳಲಿದ) ಎಲ್ಲ ಬಡಕಲು ಒಂಟೆಗಳನ್ನೇರಿಯೂ, ಎಲ್ಲಾ (ಕಡೆಗಳಿಂದ) ದೂರಾತಿದೂರದ ಹಾದಿಗಳನ್ನು ಕ್ರಮಿಸಿ ಜನರು ನಿಮ್ಮಲ್ಲಿಗೆ (ಅರ್ಥಾತ್ ಮಕ್ಕಾ ಪಟ್ಟಣಕ್ಕೆ) ಬರಲಿರುವರು. {27}

لِيَشْهَدُوا مَنَافِعَ لَهُمْ وَيَذْكُرُوا اسْمَ اللَّهِ فِي أَيَّامٍ مَعْلُومَاتٍ عَلَىٰ مَا رَزَقَهُمْ مِنْ بَهِيمَةِ الْأَنْعَامِ ۖ فَكُلُوا مِنْهَا وَأَطْعِمُوا الْبَائِسَ الْفَقِيرَ

ತಮಗೆ ಪ್ರಯೋಜನಕಾರಿಯಾದ ಕೆಲವು ಸ್ಥಳಗಳಿಗೆ ಖುದ್ದು ಹಾಜರಾಗಲು, ಮತ್ತು ಅಲ್ಲಾಹ್ ನು ತಮಗೆ ದಯಪಾಲಿಸಿದ ಜಾನುವಾರುಗಳನ್ನು ಆ ಗೊತ್ತುಪಡಿಸಿದ ದಿನಗಳಲ್ಲಿ ಅವನ ಹೆಸರುಚ್ಛರಿಸಿ (ಬಲಿ) ನೀಡಲು ಜನರು ಬರಲಿದ್ದಾರೆ. [ಹಾಗೆ ಜಾನುವಾರುಗಳು ಕೊಯ್ಯಲ್ಪಟ್ಟಾಗ] ಅದರ ಮಾಂಸವನ್ನು ನೀವೂ ತಿನ್ನಿರಿ ಮತ್ತು ಸಂಕಟ ಅನುಭವಿಸುತ್ತಿರುವ ಬಡಬಗ್ಗರಿಗೂ ತಿನ್ನಿಸಿರಿ. {28}

ثُمَّ لْيَقْضُوا تَفَثَهُمْ وَلْيُوفُوا نُذُورَهُمْ وَلْيَطَّوَّفُوا بِالْبَيْتِ الْعَتِيقِ

ತರುವಾಯ (ಅಂದರೆ ಇಹ್ರಾಮ್ ನ ಸ್ಥಿತಿಯಿಂದ ಹೊರಬಂದಾಕ್ಷಣ) ಜನರು ತಮ್ಮ ದೇಹದ ಮಾಲಿನ್ಯವನ್ನು ನೀಗಿಸಿ ಶುದ್ಧಿಗೊಳಿಸಲಿ; ಮಾಡಿದ್ದ ಹರಕೆಯ ಸಂಕಲ್ಪಗಳನ್ನು ಪೂರ್ತಿಗೊಳಿಸಲಿ, ಮತ್ತು ಅತಿಪುರಾತನ ಭವನವಾದ (ಕಅಬಾ ಕಟ್ಟಡದ) ಸುತ್ತ ಪದಕ್ಷಿಣೆ ಮಾಡಲಿ. {29}

ذَٰلِكَ وَمَنْ يُعَظِّمْ حُرُمَاتِ اللَّهِ فَهُوَ خَيْرٌ لَهُ عِنْدَ رَبِّهِ ۗ وَأُحِلَّتْ لَكُمُ الْأَنْعَامُ إِلَّا مَا يُتْلَىٰ عَلَيْكُمْ ۖ فَاجْتَنِبُوا الرِّجْسَ مِنَ الْأَوْثَانِ وَاجْتَنِبُوا قَوْلَ الزُّورِ

[ನಿಮ್ಮ ಪಿತಾಮಹ ಪ್ರವಾದಿ ಇಬ್ರಾಹೀಮ್ ರಿಗೆ ನೀಡಿದ ಆದೇಶಗಳು] ಇದೇ ಆಗಿತ್ತು! ಅಲ್ಲಾಹ್ ನು ಯಾವುದಕ್ಕೆಲ್ಲ ವಿಶೇಷ ಮನ್ನಣೆ ನೀಡಿ [ನಿಮ್ಮ ಪಾಲಿಗೆ ಅವು ಅಲ್ಲಾಹ್ ನ ಲಾಂಛನಗಳೆಂದು ಪರಿಗಣಿಸಿರುತ್ತಾನೋ] ಅವುಗಳನ್ನು ಗೌರವಭಾವದಿಂದ ಕಾಣುವವನಿಗೆ, ಅವನ ಪ್ರಭುವಿನ ಬಳಿ ಅದುವೇ ಉತ್ತಮ! [ಇನ್ನು ಜಾನುವಾರುಗಳ ವಿಷಯಯದಲ್ಲಿ ವಿಗ್ರಹಾರಾಧಕರ ಸಂಪ್ರದಾಯವನ್ನು ನೀವು ಅನುಸರಿಸದಿರಿ; ಏಕೆಂದರೆ ತಿನ್ನಲು ನಿಷಿದ್ಧವೆಂದು ಕುರ್‌ಆನ್ ನಲ್ಲಿ ಪ್ರತ್ಯೇಕವಾಗಿ] ನಿಮಗೆ ಓದಿ ತಿಳಿಸಿಕೊಡಲಾದ ಜಾನುವಾರುಗಳ ಹೊರತು ಉಳಿದ ಜಾನುವಾರುಗಳನ್ನು ನಿಮಗೆ 'ಹಲಾಲ್' (ಅರ್ಥಾತ್ ತಿನ್ನಲು) ಅನುಮತಿಸಲಾಗಿದೆ. ಆದ್ದರಿಂದ ನೀವು ವಿಗ್ರಹಾರಾಧರ ಕೊಳಕು (ಸಂಪ್ರದಾಯಗಳಿಂದ) ದೂರವಿರಿ; ಹಾಗೆಯೇ (ಅವರ) ಸತ್ಯವಲ್ಲದ ವಾದಗಳನ್ನೂ ವರ್ಜಿಸಿರಿ. {30}

حُنَفَاءَ لِلَّهِ غَيْرَ مُشْرِكِينَ بِهِ ۚ وَمَنْ يُشْرِكْ بِاللَّهِ فَكَأَنَّمَا خَرَّ مِنَ السَّمَاءِ فَتَخْطَفُهُ الطَّيْرُ أَوْ تَهْوِي بِهِ الرِّيحُ فِي مَكَانٍ سَحِيقٍ

ಅಲ್ಲಾಹ್ ನ ಭಕ್ತಿಯಲ್ಲಿ ಸಂಪೂರ್ಣವಾದ ಏಕಾಗ್ರತೆ ಪಾಲಿಸಿರಿ; ಮತ್ತು ಅವನೊಂದಿಗೆ ಯಾವುದನ್ನೂ ಸಹಭಾಗಿಯನ್ನಾಗಿ ಮಾಡದಿರಿ. ಒಬ್ಬಾತನು ಅಲ್ಲಾಹ್ ನ ಏಕತೆಯಲ್ಲಿ ಯಾರನ್ನಾದರೂ ಸೇರಿಸಿಕೊಂಡರೆ, ಅವನ ಉದಾಹರಣೆಯು ಆಕಾಶದಿಂದ ಥಟ್ಟನೆ ಕೆಳಗೆ ಬಿದ್ದವನಂತೆ! ಪಕ್ಷಿಗಳು ಅವನನ್ನು ಎಗರಿಸಿಕೊಂಡು ಹೋದಾವು ಅಥವಾ ಗಾಳಿಯು ಅವನನ್ನು ವಿದೂರದ ಸ್ಥಳವೊಂದಕ್ಕೆ ಕೊಂಡೊಯ್ದು ಅಪ್ಪಳಿಸೀತು. {31}

ذَٰلِكَ وَمَنْ يُعَظِّمْ شَعَائِرَ اللَّهِ فَإِنَّهَا مِنْ تَقْوَى الْقُلُوبِ

ಇವೆಲ್ಲ [ಕುರೈಷರೇ, ಹಜ್ಜ್ ಸಂಬಂಧಿತವಾಗಿ ನೀವು ಸರಿಪಡಿಸಿ ಕೊಳ್ಳಬೇಕಾದ] ವಿಷಯಗಳು! ಇನ್ನು, ಯಾರಾದರೂ ಅಲ್ಲಾಹ್ ನು ನಿಶ್ಚಯಿಸಿದ ಲಾಂಛನಗಳನ್ನು ಗೌರವಭಾವದಿಂದ ಕಂಡರೆ ಅದು ಅವರ ಹೃದಯಗಳಲ್ಲಿರುವ ಭಯಭಕ್ತಿಯ ಪ್ರತೀಕವಾಗಿದೆ. {32}

لَكُمْ فِيهَا مَنَافِعُ إِلَىٰ أَجَلٍ مُسَمًّى ثُمَّ مَحِلُّهَا إِلَى الْبَيْتِ الْعَتِيقِ

[ಬಲಿಯ ಮೃಗಗಳು ಸಹ ಅಂತಹ ಲಾಂಛನಗಳಲ್ಲೊಂದು! ಹಾಗಿದ್ದರೂ] ಒಂದು ನಿರ್ಧಿಷ್ಟ ಸಮಯದ ವರೆಗೆ ಅವುಗಳಿಂದ ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ. ಅನಂತರ ಅದೇ ಪುರಾತನ ಭವನ (ಅಂದರೆ ಮಕ್ಕಾ ಪಟ್ಟಣದಲ್ಲಿರುವ ಕಾಬಾ ಭವನದ) ಹತ್ತಿರ ಬಲಿ ಅರ್ಪಿಸಲು ಅದನ್ನು ತಲಪಿಸಬೇಕಾಗಿದೆ. {33}

وَلِكُلِّ أُمَّةٍ جَعَلْنَا مَنْسَكًا لِيَذْكُرُوا اسْمَ اللَّهِ عَلَىٰ مَا رَزَقَهُمْ مِنْ بَهِيمَةِ الْأَنْعَامِ ۗ فَإِلَٰهُكُمْ إِلَٰهٌ وَاحِدٌ فَلَهُ أَسْلِمُوا ۗ وَبَشِّرِ الْمُخْبِتِينَ

ನಾವು ಒದಗಿಸಿದ ಜಾನುವಾರುಗಳನ್ನು ಬಲಿ ಅರ್ಪಿಸುವ ಸಂದರ್ಭದಲ್ಲಿ, ಜನರು ಅಲ್ಲಾಹ್ ನ ಹೆಸರು ಉಚ್ಛರಿಸುವ ಸಲುವಾಗಿ (ಪ್ರಾಚೀನ ಕಾಲದಿಂದಲೇ) ಪ್ರತಿಯೊಂದು ಸಮುದಾಯಕ್ಕೂ ಬಲಿಯನುಷ್ಠಾನದ ವಿಧಿ-ವಿಧಾನಗಳನ್ನು ನಾವು ನಿಶ್ಚಯಿಸಿದ್ದೆವು. [ಸಮುದಾಯಗಳು ಅದೆಷ್ಟು ವೈವಿಧ್ಯಮಯವಾಗಿದ್ದರೂ] ಆ ನಿಮ್ಮ ದೇವನು ಏಕಮಾತ್ರ ದೇವನಾಗಿರುತ್ತಾನೆ. ನೀವೆಲ್ಲರೂ ಅವನಿಗೆ ಮಾತ್ರ ತಲೆಬಾಗಿ ಬದುಕಬೇಕಾಗಿದೆ! ಪೈಗಂಬರರೇ, ವಿನಮ್ರತೆಯ ಬದುಕು ಸಾಗಿಸುವವರಿಗೆ ನೀವು (ಪರಲೋಕದ ಕುರಿತು) ಶುಭಸುದ್ದಿ ನೀಡಿರಿ. {34}

الَّذِينَ إِذَا ذُكِرَ اللَّهُ وَجِلَتْ قُلُوبُهُمْ وَالصَّابِرِينَ عَلَىٰ مَا أَصَابَهُمْ وَالْمُقِيمِي الصَّلَاةِ وَمِمَّا رَزَقْنَاهُمْ يُنْفِقُونَ

ಅಲ್ಲಾಹ್ ನ ವಿಷಯ ಅವರ ಮುಂದೆ ಪ್ರಸ್ತಾಪಿಸಿದಾಗಲೆಲ್ಲ ಅವರ ಹೃದಯಗಳು ಭಯಭಕ್ತಿಯಿಂದ ಕಂಪಿಸುತ್ತವೆ; ಸಹನೆ ತೋರುತ್ತಲೂ ನಮಾಝ್ ಗಳನ್ನು ಶ್ರದ್ಧಾಪೂರ್ವಕವಾಗಿ ಅನುಷ್ಠಾನಿಸುತ್ತಲೂ ಅವರು (ಜೀವನದಲ್ಲಿ) ಸಂಭವಿಸುವ ಸಂಕಷ್ಟಗಳನ್ನು ಎದುರಿಸುತ್ತಾರೆ; ಹಾಗೂ ಜೀವನೋಪಾಯಕ್ಕಾಗಿ ನಾವು ಏನನ್ನು ಅವರಿಗೆ ದಯಪಾಲಿಸಿರುವೋ ಅದರಿಂದ (ನಮ್ಮ ಮಾರ್ಗದಲ್ಲಿ) ದಾನ ಮಾಡುತ್ತಿರುತ್ತಾರೆ. {35}

وَالْبُدْنَ جَعَلْنَاهَا لَكُمْ مِنْ شَعَائِرِ اللَّهِ لَكُمْ فِيهَا خَيْرٌ ۖ فَاذْكُرُوا اسْمَ اللَّهِ عَلَيْهَا صَوَافَّ ۖ فَإِذَا وَجَبَتْ جُنُوبُهَا فَكُلُوا مِنْهَا وَأَطْعِمُوا الْقَانِعَ وَالْمُعْتَرَّ ۚ كَذَٰلِكَ سَخَّرْنَاهَا لَكُمْ لَعَلَّكُمْ تَشْكُرُونَ

[ಇನ್ನು ದಷ್ಟಪುಪುಷ್ಟವಾಗಿ ಬೆಳೆದ ಒಂಟೆಗಳನ್ನು ಬಲಿ ಅರ್ಪಿಸುವ ವಿಷಯದಲ್ಲಿ ಯಹೂದ್ಯರಂತೆ ನೀವು ಹಿಂಜರಿಯದಿರಿ. ಏಕೆಂದರೆ ಬಲಿಯ] ಎಲ್ಲಾ ಒಂಟೆಗಳನ್ನು ನಿಮಗಾಗಿ ಅಲ್ಲಾಹ್ ನು ತನ್ನ ಲಾಂಛನಗಳಾಗಿ ಪರಿಗಣಿಸಿರುವನು! ಅವಗಳಲ್ಲಿ ನಿಮಗೆ ಬಹಳಷ್ಟು ಒಳಿತುಗಳಿವೆ. ಬಲಿಯನುಷ್ಠಾನಕ್ಕಾಗಿ ಅವುಗಳನ್ನು ಸಾಲಾಗಿ ನಿಲ್ಲಿಸಿ, ಅಲ್ಲಾಹ್ ನ ಹೆಸರನ್ನು ಉಚ್ಛರಿಸಿ ಅವುಗಳನ್ನು ಬಲಿ ನೀಡಿರಿ. ನಂತರ ಅವು (ಜೀವರಹಿತವಾಗಿ) ಒಂದು ಪಾರ್ಶ್ವಕ್ಕೆ ಒರಗಿದಾಗ ಅದರ ಮಾಂಸವನ್ನು ನೀವೂ ತಿನ್ನಿರಿ, ಬೇಡದೆ ಇದ್ದುದರಲ್ಲಿಯೇ ತೃಪ್ತರಾಗುವವರಿಗೂ ತಿನ್ನಿಸಿರಿ ಹಾಗೂ ಯಾಚಕರಿಗೂ ಉಣ್ಣಿಸಿರಿ. ಹಾಗೆ ನೀವು ನಮಗೆ ಕೃತಜ್ಞರಾಗಿ ಜೀವಿಸಲು ಅವಗಳನ್ನು ನಾವು ನಿಮ್ಮ ನಿರ್ವಹಣೆಗೆ ಅಧೀನಪಡಿಸಿರುವೆವು. {36}

لَنْ يَنَالَ اللَّهَ لُحُومُهَا وَلَا دِمَاؤُهَا وَلَٰكِنْ يَنَالُهُ التَّقْوَىٰ مِنْكُمْ ۚ كَذَٰلِكَ سَخَّرَهَا لَكُمْ لِتُكَبِّرُوا اللَّهَ عَلَىٰ مَا هَدَاكُمْ ۗ وَبَشِّرِ الْمُحْسِنِينَ

ನೀವು ಬಲಿಯರ್ಪಿಸಿದ ಮೃಗಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹ್ ನಿಗೆ ತಲುಪುವಿದಿಲ್ಲ. ಆದರೆ (ಅಲ್ಲಾಹ್ ನು ನಿಶ್ಚಯಿಸಿದ ವಿಧಿ-ವಿಧಾನಗಳಲ್ಲಿ) ನೀವು ತೋರುವ ಶ್ರದ್ಧೆಯು ಅಗತ್ಯವಾಗಿ ಅವನಿಗೆ ತಲುಪುತ್ತದೆ. ಅಲ್ಲಾಹ್ ನು ನಿಮಗೆ ನಿರ್ದೇಶಿಸಿದ ಪ್ರಕಾರ (ಬಲಿ ಅರ್ಪಿಸುವಾಗ) ನೀವು ಅವನ ದೊಡ್ಡಸ್ತಿಕೆಯ ಗುಣಗಾನ ಮಾಡಲಿಕ್ಕಾಗಿ, ಈ ರೀತಿಯಲ್ಲಿ ಬಲಿಮೃಗಗಳ ನಿಭಾವಣೆಯನ್ನು ಅವನು ನಿಮ್ಮ ಅಧೀನಕ್ಕೆ ನೀಡಿರುತ್ತಾನೆ. (ಸದಾಚಾರಿ ಜನರು ಹಾಗೆಯೇ ಅಲ್ಲಾಹ್ ನ ಗುಣಗಾನ ಮಾಡುತ್ತಾರೆ! ಆದ್ದರಿಂದ ಓ ಪೈಗಂಬರರೇ, ನೀವು) ಈ ಸದಾಚಾರಿ ಜನರಿಗೆ ಶುಭವಾರ್ತೆ ನೀಡಿರಿ. {37}

إِنَّ اللَّهَ يُدَافِعُ عَنِ الَّذِينَ آمَنُوا ۗ إِنَّ اللَّهَ لَا يُحِبُّ كُلَّ خَوَّانٍ كَفُورٍ

[ಅಲ್ಲಾಹ್ ನ ಮಾರ್ಗದತ್ತ ಬಾರದಂತೆ ಇನ್ನು ಮುಂದೆ ಈ ಕುರೈಷರು ಜನರನ್ನು ತಡೆದರೆ] ನಿಶ್ಚಿತವಾಗಿಯೂ ಅಲ್ಲಾಹ್ ನು [ಬಹುದೇವತ್ವದ ಪ್ರತಿಪಾದಕರ ವಿರುದ್ಧ, ಏಕದೇವನಲ್ಲಿ] ವಿಶ್ವಾಸ ಹೊಂದಿರುವ (ಮುಸ್ಲಿಮರ) ಪರವಾಗಿ, ಪ್ರತಿರೋಧ ಹೂಡುವ ವ್ಯವಸ್ಥೆ ಮಾಡಲಿರುವನು! ಹೌದು, ವಿಶ್ವಾಸ ಘಾತುಕತನ ಹಾಗೂ ಕೃತಘ್ನತೆ ತೋರುವ ಯಾವೊಬ್ಬನನ್ನೂ ಅಲ್ಲಾಹ್ ನು ಇಷ್ಟಪಡುವುದಿಲ್ಲ. {38}

أُذِنَ لِلَّذِينَ يُقَاتَلُونَ بِأَنَّهُمْ ظُلِمُوا ۚ وَإِنَّ اللَّهَ عَلَىٰ نَصْرِهِمْ لَقَدِيرٌ

(ಇದುವರೆಗೂ) ಯಾರ ವಿರುದ್ಧ ಯುದ್ಧ ಮಾಡಲಾಗಿತ್ತಿತ್ತೋ ಅವರಿಗೆ ಯುದ್ದಕ್ಕಿಳಿಯಲು ಈಗ ಅನುಮತಿ ನೀಡಲಾಗುತ್ತಿದೆ! ಏಕೆಂದರೆ ಅವರ ಮೇಲೆ ಅನ್ಯಾಯವಾಗಿರುತ್ತದೆ. ನಿಶ್ಚಿತವಾಗಿಯೂ ಅಲ್ಲಾಹ್ ನು ಅವರಿಗೆ ಯುದ್ಧಗಳಲ್ಲಿ ಸಹಾಯ ಮಾಡಲು ಸಮರ್ಥನಾಗಿರುವನು! {39}

الَّذِينَ أُخْرِجُوا مِنْ دِيَارِهِمْ بِغَيْرِ حَقٍّ إِلَّا أَنْ يَقُولُوا رَبُّنَا اللَّهُ ۗ وَلَوْلَا دَفْعُ اللَّهِ النَّاسَ بَعْضَهُمْ بِبَعْضٍ لَهُدِّمَتْ صَوَامِعُ وَبِيَعٌ وَصَلَوَاتٌ وَمَسَاجِدُ يُذْكَرُ فِيهَا اسْمُ اللَّهِ كَثِيرًا ۗ وَلَيَنْصُرَنَّ اللَّهُ مَنْ يَنْصُرُهُ ۗ إِنَّ اللَّهَ لَقَوِيٌّ عَزِيزٌ

(ಅನ್ಯಾಯಕ್ಕೊಳಗಾದವರು) ಯಾರೆಂದರೆ, ನಮ್ಮ ಪರಿಪಾಲಕನಾದ ದೇವನು ಆ ಅಲ್ಲಾಹ್ ನು ಮಾತ್ರ ಎಂದು ಘೋಷಿಸಿದ ಏಕೈಕ ಕಾರಣಕ್ಕಾಗಿ ಯಾರನ್ನು ಅಕ್ರಮವಾಗಿ ಮನೆಮಠಗಳಿಂದ ಹೊರದಬ್ಬಲಾಗಿತ್ತೋ ಅವರು! ಒಂದು ವೇಳೆ ಜನರ ಒಂದು ಗುಂಪಿನ ಮೂಲಕ ಮತ್ತೊಂದು ಗುಂಪನ್ನು ಅಲ್ಲಾಹ್ ನು ತೊಡೆದು ಹಾಕುವ ವ್ಯವಸ್ಥೆ ಮಾಡದೆ ಇರುತ್ತಿದ್ದರೆ, ಇಲ್ಲಿ ಬಹಳಷ್ಟು ಆಶ್ರಮಗಳು, ಇಗರ್ಜಿಗಳು, ಯೆಹೂದ್ಯರ ಪ್ರಾರ್ಥನಾಲಯಗಳು ಹಾಗೂ ಅಲ್ಲಾಹ್ ನ ನಾಮ ಯಥೇಚ್ಛವಾಗಿ ಸ್ಮರಿಸಲ್ಪಡುವ ಮಸೀದಿಗಳು ಖಂಡಿತವಾಗಿ ಕೆಡವಲ್ಪಡುತ್ತಿದ್ದವು! ಯಾರು ಅಲ್ಲಾಹ್ ನ (ಧರ್ಮಕ್ಕೆ) ಸಹಾಯ ಮಾಡುತ್ತಾನೋ ಅಲ್ಲಾಹ್ ನು ಖಂಡಿತವಾಗಿಯೂ ಅವನಿಗೆ ಸಹಾಯ ಮಾಡುವನು. ಸಂಶಯಾತೀತವಾಗಿ ಅಲ್ಲಾಹ್ ನು ಬಹಳ ಶಕ್ತಿಶಾಲಿಯೂ ಅತ್ಯಂತ ಬಲಾಢ್ಯನೂ ಆಗಿರುವನು. {40}

الَّذِينَ إِنْ مَكَّنَّاهُمْ فِي الْأَرْضِ أَقَامُوا الصَّلَاةَ وَآتَوُا الزَّكَاةَ وَأَمَرُوا بِالْمَعْرُوفِ وَنَهَوْا عَنِ الْمُنْكَرِ ۗ وَلِلَّهِ عَاقِبَةُ الْأُمُورِ

ಒಂದು ವೇಳೆ ನಾವು ಅವರಿಗೆ ನಾಡಿನಲ್ಲಿ ಅಧಿಕಾರ ನೀಡಿದರೆ ಅವರು ಅಲ್ಲಿ ನಮಾಝ್ ನ ವ್ಯವಸ್ಥೆ ಮಾಡುತ್ತಾರೆ, ಝಕಾತ್ ಅನ್ನು ಪಾವತಿಸುತ್ತಾರೆ, ಜನರಿಗೆ ಒಳಿತುಗಳನ್ನು ಬೋಧಿಸುವ ಕರ್ತವ್ಯ ನಿರ್ವಹಿಸುತ್ತಾರೆ ಹಾಗೂ ಕೆಡುಕಿನಿಂದ ಅವರನ್ನು ತಡೆಯುತ್ತಿರುತ್ತಾರೆ. [ಹೌದು, ಇಂದು ಅನ್ಯಾಯಕ್ಕೊಳಗಾಗಿರುವ ಅವರಿಗೆ ಅಲ್ಲಾಹ್ ನು ಭೂಮಿಯಲ್ಲಿ ಅಧಿಕಾರ ನೀಡಲಿರುವನು! ಏಕೆಂದರೆ] ಎಲ್ಲಾ ವಿಷಯಗಳ ಅಂತಿಮ ತೀರ್ಮಾನವು ಅಲ್ಲಾಹ್ ನಿಗೆ ಸೇರಿದ್ದಾಗಿದೆ. {41}

وَإِنْ يُكَذِّبُوكَ فَقَدْ كَذَّبَتْ قَبْلَهُمْ قَوْمُ نُوحٍ وَعَادٌ وَثَمُودُ

ಪೈಗಂಬರರೇ, (ಈಗ ನಿಮ್ಮ ಸಮುದಾಯವು) ನಿಮ್ಮನ್ನು ಧಿಕ್ಕರಿಸುತ್ತಿದೆ ಎಂದಾದರೆ (ಅದರಲ್ಲಿ ಆಶ್ಚರ್ಯವಿಲ್ಲ; ಏಕೆಂದರೆ) ಇವರಿಗಿಂತ ಮುಂಚೆ ನೂಹ್ ರ ಸಮುದಾಯ, ಹಾಗೂ ಆದ್ ಮತ್ತು ತಮೂದ್ ಸಮುದಾಯಗಳು (ತಂತಮ್ಮ ಪ್ರವಾದಿಗಳನ್ನು) ಧಿಕ್ಕರಿಸಿತ್ತು! {42}

وَقَوْمُ إِبْرَاهِيمَ وَقَوْمُ لُوطٍ

ಹಾಗೆಯೇ ಇಬ್ರಾಹೀಮ್ ಮತ್ತು ಲೂತ್ ರ ಸಮುದಾಯಗಳೂ ಪ್ರವಾದಿಗಳನ್ನು ಧಿಕ್ಕರಿಸಿದ್ದರು. {43}

وَأَصْحَابُ مَدْيَنَ ۖ وَكُذِّبَ مُوسَىٰ فَأَمْلَيْتُ لِلْكَافِرِينَ ثُمَّ أَخَذْتُهُمْ ۖ فَكَيْفَ كَانَ نَكِيرِ

ಮದ್‌ಯನ್ ನ ಜನರೂ ಪ್ರವಾದಿಯನ್ನು ಧಿಕ್ಕರಿಸಿದವರೇ ಆಗಿದ್ದರು. ಪ್ರವಾದಿ ಮೂಸಾ ರು ಸಹ ಧಿಕ್ಕರಿಸಲ್ಪಟ್ಟಿದ್ದರು. ನಾನು ಧಿಕ್ಕರಿಸಿದವರಿಗೆ ಸಾಕಷ್ಟು ಕಾಲಾವಕಾಶ ನೀಡಿದ್ದೆನು; ನಂತರ (ಅವರು ಸುಧಾರಿಸಿಕೊಳ್ಳದ್ದಕ್ಕಾಗಿ) ಅವರನ್ನು ಹಿಡಿದು ಶಿಕ್ಷಿಸಿದೆನು. ನೋಡಿದಿರಾ ಹೇಗಿತ್ತು ನನ್ನ ಹೊಡೆತ! {44}

فَكَأَيِّنْ مِنْ قَرْيَةٍ أَهْلَكْنَاهَا وَهِيَ ظَالِمَةٌ فَهِيَ خَاوِيَةٌ عَلَىٰ عُرُوشِهَا وَبِئْرٍ مُعَطَّلَةٍ وَقَصْرٍ مَشِيدٍ

ಹಾಗೆ, ಅದೆಷ್ಟು ನಾಡುಗಳನ್ನು, (ಪ್ರವಾದಿಗಳ ಮುನ್ನೆಚ್ಚರಿಕೆಯ ಹೊರತಾಗಿಯೂ, ಅಲ್ಲಿಯ ಜನರು) ಇನ್ನೂ ದೌರ್ಜನ್ಯವೆಸಗುವುದರಲ್ಲಿ ತೊಡಗಿದ್ದಾಗಲೇ ನಾವು ನಾಶಪಡಿಸಿ ಬಿಟ್ಟಿದ್ದೇವೆ! ಇಂದು ಅವು ತಮ್ಮ ಛಾವಣಿಗಳ ಸಮೇತ ಮಗುಚಿ ಬೋರಲಾಗಿ ಬಿದ್ದು ನಾಶವಾದ ಸ್ಥಿತಿಯಲ್ಲಿವೆ. ಅಲ್ಲಿನ ಅದೆಷ್ಟು ಬಾವಿಗಳು ಹಾಳಾಗಿ ಹೋದವು; ಅದೆಷ್ಟು ಭವ್ಯ ಅರಮನೆಗಳು ನಾಮಾವಶೇಷವಾದವು! {45}

أَفَلَمْ يَسِيرُوا فِي الْأَرْضِ فَتَكُونَ لَهُمْ قُلُوبٌ يَعْقِلُونَ بِهَا أَوْ آذَانٌ يَسْمَعُونَ بِهَا ۖ فَإِنَّهَا لَا تَعْمَى الْأَبْصَارُ وَلَٰكِنْ تَعْمَى الْقُلُوبُ الَّتِي فِي الصُّدُورِ

ಈ ಜನರು (ನಾವು ನಾಶಪಡಿಸಿದ) ಆ ನಾಡುಗಳಲ್ಲಿ ಅತ್ತಿತ್ತ ಸಂಚರಿಸುತ್ತಿಲ್ಲವೇ! ಹಾಗಿದ್ದರೆ ಚಿಂತಿಸಿ ಅರ್ಥಮಾಡಿಕೊಳ್ಳುವ ಹೃದಯಗಳು ಮತ್ತು ಆಲಿಸಿ ತಿಳಿದುಕೊಳ್ಳುವ ಕಿವಿಗಳೇಕೆ ಅವರು ಪಡೆದಿಲ್ಲ! ಅಲ್ಲ, ವಾಸ್ತವದಲ್ಲಿ ಕಣ್ಣುಗಳು ಕುರುಡಾಗಿಲ್ಲ; ಬದಲಾಗಿ, ಎದೆಗಳಲ್ಲಿರುವ ಹೃದಯಗಳು ಕುರುಡಾಗಿ ಬಿಟ್ಟಿವೆಯಷ್ಟೆ! {46}

وَيَسْتَعْجِلُونَكَ بِالْعَذَابِ وَلَنْ يُخْلِفَ اللَّهُ وَعْدَهُ ۚ وَإِنَّ يَوْمًا عِنْدَ رَبِّكَ كَأَلْفِ سَنَةٍ مِمَّا تَعُدُّونَ

ಪೈಗಂಬರರೇ, ಅಂತಹ ಶಿಕ್ಷೆಯು ನಮಗೆ ಬೇಗನೆ ಬರಲಿ ಎಂದು ಇವರು ನಿಮ್ಮನ್ನು (ಅಣಕಿಸಲು) ಆತುರಪಡಿಸುತ್ತಿದ್ದಾರೆ. ಅಲ್ಲಾಹ್ ನು ತನ್ನ ಮಾತಿಗೆ ಎಂದಿಗೂ ತಪ್ಪುವುದಿಲ್ಲ. (ಆದರೆ ಅವರಿಗೆ ತಿಳಿಯದ ವಿಷಯವೆಂದರೆ) ವಾಸ್ತವದಲ್ಲಿ ಅವರ ಎಣಿಕೆಯ ಸಾವಿರ ವರ್ಷಗಳು ನಿಮ್ಮ ಪ್ರಭುವಿನ ಬಳಿ ಕೇವಲ ಒಂದು ದಿನದಷ್ಟು ಮಾತ್ರವಾಗಿದೆ! {47}

وَكَأَيِّنْ مِنْ قَرْيَةٍ أَمْلَيْتُ لَهَا وَهِيَ ظَالِمَةٌ ثُمَّ أَخَذْتُهَا وَإِلَيَّ الْمَصِيرُ

(ಇವರು ನಿಮ್ಮನ್ನು ಅಣಕಿಸುವುದೇಕೆ? ಇವರಂತೆಯೇ) ಅನ್ಯಾಯನಿರತವಾದ ಅದೆಷ್ಟು ನಾಡುಗಳಿಗೆ ನಾನು ದೀರ್ಘವಾದ ಕಾಲಾವಕಾಶ ನೀಡಿದ್ದೆನು! (ತಮ್ಮನ್ನು ಸರಿಪಡಿಸಿಕೊಳ್ಳದಿದ್ದಾಗ) ಕೊನೆಗೆ ನಾನು ಅವರನ್ನು ಹಿಡಿದು ಶಿಕ್ಷಿಸಿದೆನು! ಪ್ರತಿಯೊಬ್ಬನ ಅಂತಿಮ ಮರಳುವಿಕೆಯು ನನ್ನಲ್ಲಿಗೇ ಆಗಿರುತ್ತದೆ! {48}

قُلْ يَا أَيُّهَا النَّاسُ إِنَّمَا أَنَا لَكُمْ نَذِيرٌ مُبِينٌ

ಪೈಗಂಬರರೇ, (ಈ ನಿಮ್ಮ ನಾಡಿನವರಿಗೆ) ತಿಳಿ ಹೇಳಿರಿ: ಓ ಜನರೇ, ನಾನು ಸ್ಪಷ್ಟವಾದ ರೀತಿಯಲ್ಲಿ ನಿಮಗೆಲ್ಲ (ಆ ಶಿಕ್ಷೆಯ ಕುರಿತು) ಮುಚ್ಚರಿಕೆ ನೀಡವವನು ಮಾತ್ರ! {49}

فَالَّذِينَ آمَنُوا وَعَمِلُوا الصَّالِحَاتِ لَهُمْ مَغْفِرَةٌ وَرِزْقٌ كَرِيمٌ

ಆದ್ದರಿಂದ, (ನಿಮ್ಮಲ್ಲಿ) ಯಾರು ವಿಶ್ವಾಸಿಗಳಾಗಿದ್ದುಕೊಂಡು ಸತ್ಕರ್ಮಗಳಲ್ಲಿ ನಿರತರಾಗುತ್ತಾರೋ ಅಂತಹವರಿಗೆ ಪಾಪವಿಮೋಚನೆ ಇದೆ. ಮತ್ತು ಘನವೆತ್ತ (ಸ್ವರ್ಗೀಯ) ಸಾಧನಾನುಕೂಲತೆಗಳಿವೆ. {50}

وَالَّذِينَ سَعَوْا فِي آيَاتِنَا مُعَاجِزِينَ أُولَٰئِكَ أَصْحَابُ الْجَحِيمِ

ಇನ್ನು, ಯಾರಾದರೂ ನಮ್ಮ ವಚನಗಳನ್ನು (ತಮ್ಮ ಇಚ್ಛೆಯಂತೆ) ಮಣಿಸಲು ಹೆಣಗಾಡಿದರೆ ಅಂತಹವರು ನರಕಕ್ಕೆ ಸಂಗಾತಿಗಳಾಗಲಿರುವರು! {51}

وَمَا أَرْسَلْنَا مِنْ قَبْلِكَ مِنْ رَسُولٍ وَلَا نَبِيٍّ إِلَّا إِذَا تَمَنَّىٰ أَلْقَى الشَّيْطَانُ فِي أُمْنِيَّتِهِ فَيَنْسَخُ اللَّهُ مَا يُلْقِي الشَّيْطَانُ ثُمَّ يُحْكِمُ اللَّهُ آيَاتِهِ ۗ وَاللَّهُ عَلِيمٌ حَكِيمٌ

ಓ ಪೈಗಂಬರರೇ! ನಿಮಗಿಂತ ಮುಂಚೆ ಸಹ ನಾವು (ಜನರ ಮಾರ್ಗದರ್ಶನಕ್ಕಾಗಿ) ನಿಯೋಗಿಸಿದ ಪ್ರತಿಯೊಬ್ಬ ದೂತ ಮತ್ತು ಪ್ರತಿಯೊಬ್ಬ ಪ್ರಾವಾದಿಯು (ಜನರ ಮುಂದೆ ನಮ್ಮ ವಚನಗಳನ್ನು ಓದಿ ಕೇಳಿಸಲು) ಬಯಸಿದಾಗ ಸೈತಾನನು ಅದರಲ್ಲಿ ಹಸ್ತಕ್ಷೇಪ ನಡೆಸಿ ತನ್ನ ಕೆಟ್ಟ ಅಭಿಲಾಷೆಗಳನ್ನು ಸೇರಿಸಲು ಪ್ರಯತ್ನಿಸದೆ ಇರುತ್ತಿರಲಿಲ್ಲ. ಆದರೆ ಅಲ್ಲಾಹ್ ನು ಆ ಸೈತಾನರುಗಳು ಸೇರಿಸಲಿಚ್ಚಿಸಿದ್ದನ್ನು ತೊಡೆದು ಹಾಕುತ್ತಿದ್ದನು ಹಾಗೂ ತನ್ನ ವಚನಗಳನ್ನು (ವಿಶ್ವಾಸಿ ಜನರ) ಹೃದಯಗಳಲ್ಲಿ ಭದ್ರಗೊಳಿಸುತ್ತಿದ್ದನು. ಅಲ್ಲಾಹ್ ನು ಎಲ್ಲವನ್ನೂ ಸೂಕ್ಷ್ಮವಾಗಿ ತಿಳಿದವನೂ, ಬಹಳ ಪ್ರಾಜ್ಞನೂ ಆಗಿರುವನು. {52}

لِيَجْعَلَ مَا يُلْقِي الشَّيْطَانُ فِتْنَةً لِلَّذِينَ فِي قُلُوبِهِمْ مَرَضٌ وَالْقَاسِيَةِ قُلُوبُهُمْ ۗ وَإِنَّ الظَّالِمِينَ لَفِي شِقَاقٍ بَعِيدٍ

ಯಾರ ಹೃದಯಗಳಲ್ಲಿ (ಕಾಪಟ್ಯದ) ರೋಗವಿದೆಯೋ ಮತ್ತು ಯಾರ ಹೃದಯಗಳು (ನಿರಂತರ ಧಿಕ್ಕಾರದ ಕಾರಣ) ಕಠೋರವಾಗಿ ಬಿಟ್ಟಿದೆಯೋ ಅಂತಹವರ ಪಾಲಿಗೆ ಸೈತಾನರುಗಳ ಹಸ್ತಕ್ಷೇಪವನ್ನು (ನಿಮ್ಮ ಒಡೆಯನು) ಒಂದು ಪರೀಕ್ಷೆಯನ್ನಾಗಿ ಮಾಡುವ ಸಲುವಾಗಿ (ಹಾಗಾಗುತ್ತದೆ). ನಿಜವಾಗಿ ಅಂತಹ ದುಷ್ಟ ಜನರು ಸತ್ಯವನ್ನು ಅತ್ಯಂತ ತೀವ್ರವಾಗಿ ವಿರೋಧಿಸುತ್ತಾರೆ. {53}

وَلِيَعْلَمَ الَّذِينَ أُوتُوا الْعِلْمَ أَنَّهُ الْحَقُّ مِنْ رَبِّكَ فَيُؤْمِنُوا بِهِ فَتُخْبِتَ لَهُ قُلُوبُهُمْ ۗ وَإِنَّ اللَّهَ لَهَادِ الَّذِينَ آمَنُوا إِلَىٰ صِرَاطٍ مُسْتَقِيمٍ

ಮಾತ್ರವಲ್ಲ, (ಅದಾಗಲೇ ದೇವ ಗ್ರಂಥಗಳಾದ ತೋರಾ ಮತ್ತು ಇಂಜೀಲ್ ನ) ಜ್ಞಾನ ಪಡಕೊಂಡ ಜನರು, ಓ ಪೈಗಂಬರರೇ, ನಿಮ್ಮ ಒಡೆಯನಾದ ಅಲ್ಲಾಹ್ ನ ವತಿಯಿಂದ ಬಂದ (ಕುರ್‌ಆನ್ ವಚನಗಳನ್ನು) ಸಾಕ್ಷಾತ್ ಸತ್ಯವೆಂದು ತಿಳಿಯಲು, ಅವುಗಳನ್ನು ದೃಢವಾಗಿ ನಂಬುವಂತಾಗಲು ಹಾಗೂ [ಸೈತಾನರು ಗಳು ಅವರ ಹೃದಯಗಳಲ್ಲಿ ಬಿತ್ತಿದ್ದನ್ನು ಧಿಕ್ಕರಿಸಿ] ತಮ್ಮ ಹೃದಯಗಳನ್ನು ಅಲ್ಲಾಹ್ ನ ಮುಂದೆ ಮಾತ್ರ ವಿನಮ್ರಗೊಳಿಸುವಂತಾಗಲು ಹಾಗೆ ಮಾಡಲಾಗುತ್ತದೆ. ಹೌದು, (ಅಲ್ಲಾಹ್ ನ ವಚಗಳಲ್ಲಿ) ನಂಬಿಕೆ ಇರಿಸಿದ ಜನರನ್ನು ಅಲ್ಲಾಹ್ ನು ನೇರವಾದ ಮಾರ್ಗದೆಡೆಗೆ ಖಂಡಿತವಾಗಿ ಮುನ್ನಡೆಸುತ್ತಾನೆ. {54}

وَلَا يَزَالُ الَّذِينَ كَفَرُوا فِي مِرْيَةٍ مِنْهُ حَتَّىٰ تَأْتِيَهُمُ السَّاعَةُ بَغْتَةً أَوْ يَأْتِيَهُمْ عَذَابُ يَوْمٍ عَقِيمٍ

ಅಷ್ಟಾಗಿಯೂ, ಒಮ್ಮಿಂದೊಮ್ಮೆಲೇ ಆ (ಕಿಯಾಮತ್ ನ) ಘಳಿಗೆ ಬಂದೆರಗುವ ತನಕ ಅಥವಾ ಅವರು ಶಿಕ್ಷೆಗೆ ಗುರಿಯಾಗಲಿರುವ ಆ ನಿಷ್ಪ್ರಯೋಕ ದಿನ ಎದುರಾಗುವ ತನಕ ಧಿಕ್ಕಾರದ ನಿಲುವು ಹೊಂದಿದ ಜನರು (ಈ ಕುರ್‌ಆನ್ ನ) ಕುರಿತು ಸಂಶಯಗ್ರಸ್ತ ಸ್ಥಿತಿಯಲ್ಲೇ ಮುಂದುವರಿಯಲಿರುವರು. {55}

الْمُلْكُ يَوْمَئِذٍ لِلَّهِ يَحْكُمُ بَيْنَهُمْ ۚ فَالَّذِينَ آمَنُوا وَعَمِلُوا الصَّالِحَاتِ فِي جَنَّاتِ النَّعِيمِ

ಪರಮಾಧಿಕಾರವು ಅಂದು ಅಲ್ಲಾಹ್ ನಿಗೆ ಮಾತ್ರ ಸೀಮಿತವಾಗಿರುವುದು; ಮತ್ತು ಅವನೇ ಅವರ ನಡುವೆ ತೀರ್ಪು ನೀಡಲಿರುವನು. ಇನ್ನು ಯಾರು ವಿಶ್ವಾಸಿಗಳಾಗಿರುತ್ತಾ ಸತ್ಕರ್ಮಗಳನ್ನೂ ಮಾಡಿರುತ್ತಾರೋ ಅವರು ಅಂದು ಬಹಳ ಸಮೃದ್ಧವಾದ ಸ್ವರ್ಗೀಯ ಉದ್ಯಾನಗಳಲ್ಲಿರುವರು. {56}

وَالَّذِينَ كَفَرُوا وَكَذَّبُوا بِآيَاتِنَا فَأُولَٰئِكَ لَهُمْ عَذَابٌ مُهِينٌ

ಹಾಗೆಯೇ, ಯಾರು ನಮಗೆ ತಿರಸ್ಕಾರ ತೋರಿ ನಮ್ಮ ದೃಷ್ಟಾಂತಗಳನ್ನು ಧಿಕ್ಕರಿಸಿದರೋ ಅಂತಹವರು ಅಪಮಾನಕರವಾದ ಶಿಕ್ಷೆ ಪಡೆಯಲಿರುವರು. {57}

وَالَّذِينَ هَاجَرُوا فِي سَبِيلِ اللَّهِ ثُمَّ قُتِلُوا أَوْ مَاتُوا لَيَرْزُقَنَّهُمُ اللَّهُ رِزْقًا حَسَنًا ۚ وَإِنَّ اللَّهَ لَهُوَ خَيْرُ الرَّازِقِينَ

ಇನ್ನು [ದುಷ್ಟರ ಹಿಂಸೆ ಸಹಿಸಲಸಾಧ್ಯವಾದ ಪರಿಸ್ಥಿತಿ ಬಂದಾಗ, ಪೈಗಂಬರರ ಆದೇಶದಂತೆ] ಯಾರಾದರೂ ತಮ್ಮ ಮನೆಮಠ ತೊರೆದು ಅಲ್ಲಾಹ್ ನ ಮಾರ್ದಲ್ಲಿ ವಲಸೆ ಹೋದರೆ, ಅನಂತರ (ದುಷ್ಟರಿಂದ) ವಧಿಸಲ್ಪಟ್ಟರೆ ಅಥವಾ ಸ್ವಾಭಾವಿಕವಾಗಿಯೇ ಮರಣಹೊಂದಿದರೆ ಅಂತಹವರಿಗೆ ಅಲ್ಲಾಹ್ ನು ಅತಿಶ್ರೇಷ್ಠವಾದ ಕೊಡುಗೆ (ಅಂದರೆ ಸ್ವರ್ಗೋದ್ಯಾನಗಳಲ್ಲಿನ ಬದುಕನ್ನು) ದಯಪಾಲಿಸುವನು. ನಿಸ್ಸಂಶಯವಾಗಿ, ಕೊಡುಗೆಗಳನ್ನು ದಯಪಾಲಿಸುವುದರಲ್ಲಿ ಅಲ್ಲಾಹ್ ನು ಮಾತ್ರವೇ ಸರ್ವಶ್ರೇಷ್ಠನು. {58}

لَيُدْخِلَنَّهُمْ مُدْخَلًا يَرْضَوْنَهُ ۗ وَإِنَّ اللَّهَ لَعَلِيمٌ حَلِيمٌ

ತಾವು ಮೆಚ್ಚಿಕೊಂಡು ಸಂತೃಪ್ತರಾಗುವ ನೆಲೆಯೊಂದಕ್ಕೆ (ಅರ್ಥಾತ್ ಸ್ವರ್ಗೀಯ ಉದ್ಯಾನಗಳಿಗೆ) ಅಲ್ಲಾಹ್ ನು ಅವರನ್ನು ಅಗತ್ಯವಾಗಿ ಸೇರಿಸಿಕೊಳ್ಳುವನು. ನಿಜವಾಗಿಯೂ ಅಲ್ಲಾಹ್ ನು ಎಲ್ಲವನ್ನು ಬಲ್ಲವನೂ ಬಹಳ ಸಂಯಮಶೀಲನೂ ಆಗಿರುವನು. {59}

ذَٰلِكَ وَمَنْ عَاقَبَ بِمِثْلِ مَا عُوقِبَ بِهِ ثُمَّ بُغِيَ عَلَيْهِ لَيَنْصُرَنَّهُ اللَّهُ ۗ إِنَّ اللَّهَ لَعَفُوٌّ غَفُورٌ

ಹಾಗೆಯೇ ಆಗುವುದು; [ಅರ್ಥಾತ್, ಅಲ್ಲಾಹ್ ನ ಮಾರ್ಗದಲ್ಲಿ ವಲಸೆ ಹೋಗಿ ನಂತರ ಸ್ವಾಭಾವಿಕವಾಗಿ ಮರಣವಪ್ಪಿದವರಿಗೂ ಅಂತಹ ಕೊಡುಗೆಗಳು ಖಂಡಿತ ಸಿಗುವುದು]. ಇನ್ನು ಯಾರಾದರೂ ತನಗಾದ ಅನ್ಯಾಯಕ್ಕೆ ಅಷ್ಟೇ ಪ್ರಮಾಣದಲ್ಲಿ ಸೇಡು ತೀರಿಸಿದ ನಂತರ, ಪುನಃ ದಬ್ಬಾಳಿಕೆಗೆ ಒಳಗಾದರೆ [ಅವನು ಕ್ಷಮಿಸಲಿ, ಏಕೆಂದರೆ] ಅಲ್ಲಾಹ್ ನು ಅವನಿಗೆ ಸಹಾಯ ಮಾಡುವನು. ಅಲ್ಲಾಹ್ ನು ನಿಜವಾಗಿಯೂ ಪಾಪಗಳನ್ನು ಮನ್ನಿಸುವವನೂ ಕ್ಷಮಾಶೀಲನೂ ಆಗಿರುವನು. {60}

ذَٰلِكَ بِأَنَّ اللَّهَ يُولِجُ اللَّيْلَ فِي النَّهَارِ وَيُولِجُ النَّهَارَ فِي اللَّيْلِ وَأَنَّ اللَّهَ سَمِيعٌ بَصِيرٌ

(ಅಲ್ಲಾಹ್ ನು ಖಂಡಿತವಾಗಿಯೂ ಕ್ಷಮಿಸಲು ಶಕ್ತನು)! ಅದೇಕೆಂದರೆ, ಆ ಅಲ್ಲಾಹ್ ನೇ ರಾತ್ರಿಯನ್ನು ಹಗಲಿನೊಳಗೆ ಪೋಣಿಸಲು ಮತ್ತು ಹಗಲನ್ನು ರಾತ್ರಿಯೊಳಗೆ ಪೋಣಿಸಲು ಶಕ್ತನಾದವನು! ಅದೇಕೆಂದರೆ, (ಎಲ್ಲರ ಪ್ರಾರ್ಥನೆಗಳನ್ನು) ಕೇಳಿಸಿಕೊಳ್ಳುವವನೂ (ಎಲ್ಲರ ಸ್ಥಿತಗತಿಗಳನ್ನು) ಸರಿಯಾಗಿ ನೋಡುವವನೂ ಆ ಅಲ್ಲಾಹ್ ನು ಮಾತ್ರ. {61}

ذَٰلِكَ بِأَنَّ اللَّهَ هُوَ الْحَقُّ وَأَنَّ مَا يَدْعُونَ مِنْ دُونِهِ هُوَ الْبَاطِلُ وَأَنَّ اللَّهَ هُوَ الْعَلِيُّ الْكَبِيرُ

ಅದೇಕೆಂದರೆ, ಆ ಅಲ್ಲಾಹ್ ನು ಮಾತ್ರವೇ ಅಪ್ರತಿಮ ಯಥಾರ್ಥ! ಅದೇಕೆಂದರೆ, ಆ ಅಲ್ಲಾಹ್ ನನ್ನು ಬಿಟ್ಟು ಆ (ದುಷ್ಟ) ಜನರು ಯಾವುದಕ್ಕೆಲ್ಲ ಮೊರೆಯಿಡುತ್ತಾರೋ ಅವೆಲ್ಲವೂ ಅಸಂಗತ! ಅದೇಕೆಂದರೆ, ಆ ಅಲ್ಲಾಹ್ ನು ಮಾತ್ರವೇ ಮಹೋನ್ನತನು; ಎಲ್ಲರಿಗಿಂತ ದೊಡ್ಡವನು! {62}

أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَتُصْبِحُ الْأَرْضُ مُخْضَرَّةً ۗ إِنَّ اللَّهَ لَطِيفٌ خَبِيرٌ

[ಅಲ್ಲಾಹ್ ನು ದೊಡ್ಡವನು ಎಂಬುದಕ್ಕೆ ಅಷ್ಟು ಪ್ರಮಾಣಗಳು ಅವರಿಗೆ ಸಾಲದೇ? ಇನ್ನೊ ಕೇಳಿ]: ಅಲ್ಲಾಹ್ ನು ಆಕಾಶದಿಂದ ಮಳೆನೀರು ಇಳಿಸಿದಾಗ ಭೂಮಿಯು ಹಚ್ಚ ಹಸಿರಾಗಿ ಮಾರ್ಪಡುವುದನ್ನು ನೀವೇ ಕಾಣುತ್ತಿಲ್ಲವೇ? ಹೌದು, ಅಲ್ಲಾಹ್ ನು (ಎಲ್ಲಾ ವಿಷಯಗಳಲ್ಲಿ) ಸೂಕ್ಷ್ಮತೆಯುಳ್ಳವನೂ ಅತಿ ಸೂಕ್ಷ್ಮಜ್ಞನೂ ಆಗಿರುವನು. {63}

لَهُ مَا فِي السَّمَاوَاتِ وَمَا فِي الْأَرْضِ ۗ وَإِنَّ اللَّهَ لَهُوَ الْغَنِيُّ الْحَمِيدُ

ಆಕಾಶಗಳು ಮತ್ತು ಭೂಮಿಯ (ಸಮೇತ) ಅವುಗಳಲ್ಲಿರುವ ಸಕಲವೂ ಅಲ್ಲಾಹ್ ನ ಒಡೆತನಕ್ಕೆ ಸೇರಿದ್ದಾಗಿವೆ. (ಯಥಾರ್ಥ ಹಾಗಿದ್ದರೂ) ಅಲ್ಲಾಹ್ ನು ಮಾತ್ರ ಸ್ವಯಂಪೂರ್ಣನು; ತನ್ನೊಳಗೆ ತಾನೇ ಸ್ತುತ್ಯನು! {64}

أَلَمْ تَرَ أَنَّ اللَّهَ سَخَّرَ لَكُمْ مَا فِي الْأَرْضِ وَالْفُلْكَ تَجْرِي فِي الْبَحْرِ بِأَمْرِهِ وَيُمْسِكُ السَّمَاءَ أَنْ تَقَعَ عَلَى الْأَرْضِ إِلَّا بِإِذْنِهِ ۗ إِنَّ اللَّهَ بِالنَّاسِ لَرَءُوفٌ رَحِيمٌ

ಭೂಮಿಯ ಮೇಲಿರುವ ಸಕಲ ವಸ್ತುಗಳ ಉಪಯುಕ್ತತೆಯನ್ನು ಅಲ್ಲಾಹ್ ನು ನಿಮ್ಮ ಅಧೀನಕ್ಕೆ ನೀಡಿರುವುದನ್ನು ನೀವೇ ನೋಡುತ್ತಿಲ್ಲವೇ? ಅವನ ವಿಧಿಸಿದ ಪ್ರಕಾರವೇ ಹಡಗುಗಳು ಸಮುದ್ರದಲ್ಲಿ ಚಲಿಸುತ್ತವೆ. ಅವನ ಅನುಮತಿಯ ಹೊರತು ಆಕಾಶವು ಭೂಮಿಯ ಮೇಲೆ ಉರುಳಿ ಬೀಳದಂತೆ ಅವನೇ ಅದನ್ನು ಹಿಡಿತದಲ್ಲಿರಿಸಿರುವನು. ವಾಸ್ತವದಲ್ಲಿ ಅಲ್ಲಾಹ್ ನು ಮಾನವತೆಯ ಮೇಲೆ ಅತ್ಯಂತ ವಾತ್ಸಲ್ಯದೊಂದಿಗೆ ವರ್ತಿಸುವವನೂ ಅನಂತವಾದ ಕರುಣೆಯುಳ್ಳವನೂ ಆಗಿರುವನು. {65}

وَهُوَ الَّذِي أَحْيَاكُمْ ثُمَّ يُمِيتُكُمْ ثُمَّ يُحْيِيكُمْ ۗ إِنَّ الْإِنْسَانَ لَكَفُورٌ

ಅವನೇ ನಿಮ್ಮನ್ನು ಜೀವಂತಗೊಳಿಸಿದವನು; ನಂತರ ನಿಮಗೆ ಮರಣ ನೀಡುವವನೂ ಅವನೇ; ತದನಂತರ ಅವನೇ ನಿಮ್ಮನ್ನು ಪುನಃ ಜೀವಂತಗೊಳಿಸಲಿರುವನು! ಆದರೆ ಹೌದು, ಮನುಷ್ಯನು ಕೃತಘ್ನತೆಯನ್ನೇ ತೋರುತ್ತಿದ್ದಾನೆ! {66}

لِكُلِّ أُمَّةٍ جَعَلْنَا مَنْسَكًا هُمْ نَاسِكُوهُ ۖ فَلَا يُنَازِعُنَّكَ فِي الْأَمْرِ ۚ وَادْعُ إِلَىٰ رَبِّكَ ۖ إِنَّكَ لَعَلَىٰ هُدًى مُسْتَقِيمٍ

ಪೈಗಂಬರರೇ, (ಹಿಂದಿನ ಪ್ರವಾದಿಗಳ ಸಮುದಾಯಗಳಲ್ಲಿ ಸಹ) ನಾವು ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಆರಾಧನಾ ಕ್ರಮವನ್ನು ನಿಶ್ಚಯಿಸಿದ್ದೆವು; ಅವರು ಅದನ್ನೇ ಅನುಸರಿಸುತ್ತಿದ್ದರು. [ಈಗ ನಿಮ್ಮ ಸಮುದಾಯಕ್ಕೂ ಒಂದು ಕ್ರಮವನ್ನು ನಿಶ್ಚಯಿಸಲಾಗಿದೆ. ಆದ್ದರಿಂದ] ಆ ವಿಷಯದಲ್ಲಿ ಜನರು ನಿಮ್ಮೊಂದಿಗೆ ವಿವಾದ ಮಾಡದಿರಲಿ. ಪೈಗಂಬರರೇ, ನೀವು ಅವರನ್ನು ನಿಮ್ಮ ಪರಿಪಾಲಕನಾದ (ಅಲ್ಲಾಹ್ ನ ಮಾರ್ಗದೆಡೆಗೆ) ಕರೆಯುತ್ತಲಿರಿ. ಖಂಡಿತವಾಗಿಯೂ ನೀವು ನೇರವಾದ ದಾರಿಯಲ್ಲೇ ಇರುವಿರಿ. {67}

وَإِنْ جَادَلُوكَ فَقُلِ اللَّهُ أَعْلَمُ بِمَا تَعْمَلُونَ

ಅದಾಗಿಯೂ ನಿಮ್ಮೊಂದಿಗೆ ಅವರು ಜಗಳವಾಡ ತೊಡಗಿದರೆ, ನೀವು ಏನು ಮಾಡುತ್ತಿರುವಿರಿ ಎಂಬುದನ್ನು ಅಲ್ಲಾಹ್ ನು ಚೆನ್ನಾಗಿ ತಿಳಿದಿರುವನು ಎಂದು ಅವರೊಂದಿಗೆ ಹೇಳಿರಿ. {68}

اللَّهُ يَحْكُمُ بَيْنَكُمْ يَوْمَ الْقِيَامَةِ فِيمَا كُنْتُمْ فِيهِ تَخْتَلِفُونَ

ಹೌದು, ನೀವು ಪರಸ್ಪರ ಭಿನ್ನಾಭಿಪ್ರಾಯಗಳಲ್ಲಿ ತೊಡಗಿರುವ ಎಲ್ಲಾ ವಿಷಯಗಳಲ್ಲಿ ಅಲ್ಲಾಹ್ ನೇ ಪುನರುತ್ಥಾನದ ದಿನ ನಿಮ್ಮ ಮಧ್ಯೆ ತೀರ್ಪು ನೀಡಲಿರುವನು. {69}

أَلَمْ تَعْلَمْ أَنَّ اللَّهَ يَعْلَمُ مَا فِي السَّمَاءِ وَالْأَرْضِ ۗ إِنَّ ذَٰلِكَ فِي كِتَابٍ ۚ إِنَّ ذَٰلِكَ عَلَى اللَّهِ يَسِيرٌ

ಆಕಾಶ ಮಾತು ಭೂಮಿಯಲ್ಲಿಯ ಸಕಲವೂ ಅಲ್ಲಾಹ್ ನ ಅರಿವಿನಲ್ಲಿದೆ ಎಂಬುದು (ಜನರೇ) ನಿಮಗೆ ತಿಳಿದಿಲ್ಲವೇ? ನಿಜವಾಗಿ ಅವುಗಳ ದಾಖಲೆಯನ್ನು ಒಂದು ಗ್ರಂಥದಲ್ಲಿ ನಮೂದಿಸಲಾಗಿದೆ. ಹೌದು, ಅವೆಲ್ಲ ಅಲ್ಲಾಹ್ ನ ಮಟ್ಟಿಗೆ ಅತ್ಯಂತ ಸುಲಭವಾದ ವಿಷಯವೇ ಆಗಿದೆ. {70}

وَيَعْبُدُونَ مِنْ دُونِ اللَّهِ مَا لَمْ يُنَزِّلْ بِهِ سُلْطَانًا وَمَا لَيْسَ لَهُمْ بِهِ عِلْمٌ ۗ وَمَا لِلظَّالِمِينَ مِنْ نَصِيرٍ

ಅಲ್ಲಾಹ್ ನನ್ನು ಬಿಟ್ಟು ಅವರು ಏನನ್ನು ಆರಾಧಿಸುತ್ತಿರುವರೋ ಅವುಗಳ ಆರಾಧನೆಗೆ ಯಾವ ಪುರಾವೆಯನ್ನೂ ಅಲ್ಲಾಹ್ ನು ಇಳಿಸಿಕೊಟ್ಟಿಲ್ಲ! ಮಾತ್ರವಲ್ಲ, ಅವುಗಳ ಕುರಿತಾಗಿ ಅವರಿಗೆ ಏನೂ ಅರಿಯದು. (ಅವುಗಳನ್ನು ಆರಾಧಿಸಿದ) ದುಷ್ಟರಿಗೆ ಸಹಾಯಕರಾಗಿ (ಪುನುರುತ್ಥಾನದ ದಿನ) ಯಾರೂ ಇರಲಾರರು. {71}

وَإِذَا تُتْلَىٰ عَلَيْهِمْ آيَاتُنَا بَيِّنَاتٍ تَعْرِفُ فِي وُجُوهِ الَّذِينَ كَفَرُوا الْمُنْكَرَ ۖ يَكَادُونَ يَسْطُونَ بِالَّذِينَ يَتْلُونَ عَلَيْهِمْ آيَاتِنَا ۗ قُلْ أَفَأُنَبِّئُكُمْ بِشَرٍّ مِنْ ذَٰلِكُمُ ۗ النَّارُ وَعَدَهَا اللَّهُ الَّذِينَ كَفَرُوا ۖ وَبِئْسَ الْمَصِيرُ

ooooooooooooo {72}

يَا أَيُّهَا النَّاسُ ضُرِبَ مَثَلٌ فَاسْتَمِعُوا لَهُ ۚ إِنَّ الَّذِينَ تَدْعُونَ مِنْ دُونِ اللَّهِ لَنْ يَخْلُقُوا ذُبَابًا وَلَوِ اجْتَمَعُوا لَهُ ۖ وَإِنْ يَسْلُبْهُمُ الذُّبَابُ شَيْئًا لَا يَسْتَنْقِذُوهُ مِنْهُ ۚ ضَعُفَ الطَّالِبُ وَالْمَطْلُوبُ

ooooooooooooo {73}

مَا قَدَرُوا اللَّهَ حَقَّ قَدْرِهِ ۗ إِنَّ اللَّهَ لَقَوِيٌّ عَزِيزٌ

ooooooooooooo {74}

اللَّهُ يَصْطَفِي مِنَ الْمَلَائِكَةِ رُسُلًا وَمِنَ النَّاسِ ۚ إِنَّ اللَّهَ سَمِيعٌ بَصِيرٌ

ooooooooooooo {75}

يَعْلَمُ مَا بَيْنَ أَيْدِيهِمْ وَمَا خَلْفَهُمْ ۗ وَإِلَى اللَّهِ تُرْجَعُ الْأُمُورُ

ooooooooooooo {76}

يَا أَيُّهَا الَّذِينَ آمَنُوا ارْكَعُوا وَاسْجُدُوا وَاعْبُدُوا رَبَّكُمْ وَافْعَلُوا الْخَيْرَ لَعَلَّكُمْ تُفْلِحُونَ

ooooooooooooo {77} ۩

وَجَاهِدُوا فِي اللَّهِ حَقَّ جِهَادِهِ ۚ هُوَ اجْتَبَاكُمْ وَمَا جَعَلَ عَلَيْكُمْ فِي الدِّينِ مِنْ حَرَجٍ ۚ مِلَّةَ أَبِيكُمْ إِبْرَاهِيمَ ۚ هُوَ سَمَّاكُمُ الْمُسْلِمِينَ مِنْ قَبْلُ وَفِي هَٰذَا لِيَكُونَ الرَّسُولُ شَهِيدًا عَلَيْكُمْ وَتَكُونُوا شُهَدَاءَ عَلَى النَّاسِ ۚ فَأَقِيمُوا الصَّلَاةَ وَآتُوا الزَّكَاةَ وَاعْتَصِمُوا بِاللَّهِ هُوَ مَوْلَاكُمْ ۖ فَنِعْمَ الْمَوْلَىٰ وَنِعْمَ النَّصِيرُ

ooooooooooooo {78}

ಅನುವಾದಿತ ಸೂರಃ ಗಳು


    Featured post

    ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...