ಅರ್ ರಅದ್ | تـرجمـة سورة الرعد

تـرجمـة سورة الرعد من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅರ್ ರಅದ್ | ಪವಿತ್ರ್ ಕುರ್‌ಆನ್ ನ 13 ನೆಯ ಸೂರಃ | ಇದರಲ್ಲಿ ಒಟ್ಟು 43 ಆಯತ್ ಗಳು ಇವೆ |

ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!

١  المر ۚ تِلْكَ آيَاتُ الْكِتَابِ ۗ وَالَّذِي أُنْزِلَ إِلَيْكَ مِنْ رَبِّكَ الْحَقُّ وَلَٰكِنَّ أَكْثَرَ النَّاسِ لَا يُؤْمِنُونَ

ಅಲಿಫ್ - ಲಾಮ್ - ಮೀಮ್ - ರಾ! ಇವು ದಿವ್ಯಗ್ರಂಥದ ವಚನಗಳು! ಹೌದು, ನಿಮ್ಮ ಪ್ರಭುವಿನ ವತಿಯಿಂದ ನಿಮ್ಮತ್ತ ಏನನ್ನು ಇಳಿಸಲಾಗಿದೆಯೋ ಅದು ಸಾಕ್ಷಾತ್ ಸತ್ಯವೇ ಆಗಿದೆ. ಆದರೆ (ನಿಮ್ಮ) ಜನರಲ್ಲಿ ಹೆಚ್ಚಿನವರು ಅದನ್ನು ಒಪ್ಪುವುದಿಲ್ಲ! {1}

٢  اللَّهُ الَّذِي رَفَعَ السَّمَاوَاتِ بِغَيْرِ عَمَدٍ تَرَوْنَهَا ۖ ثُمَّ اسْتَوَىٰ عَلَى الْعَرْشِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُسَمًّى ۚ يُدَبِّرُ الْأَمْرَ يُفَصِّلُ الْآيَاتِ لَعَلَّكُمْ بِلِقَاءِ رَبِّكُمْ تُوقِنُونَ

ನಿಮಗೆ ಗೋಚರಿಸುವಂತಹ ಸ್ತಂಭಗಳನ್ನು ಬಳಸದೆಯೇ ಆಕಾಶಗಳನ್ನು ಎತ್ತರಕ್ಕೇರಿಸಿ ನಿಲ್ಲಿಸಿರುವವನು ಆ ಅಲ್ಲಾಹ್ ನೇ! ನಂತರ ಅವನು ವಿಶ್ವದ ಅಧಿಕಾರಗದ್ದುಗೆಯಲ್ಲಿ [ಅರಬಿ: ಅರ್ಶ್] ನೆಲೆಗೊಂಡನು. ಸೂರ್ಯನನ್ನೂ ಚಂದ್ರನನ್ನೂ ಒಂದು ನಿರ್ಧಿಷ್ಟ ನಿಯಮಕ್ಕೆ ಅಧೀನ ಪಡಿಸಿದನು. ಗೊತ್ತುಪಡಿಸಿದ ಒಂದು ಸಮಯದವರೆಗೆ ಅವೆಲ್ಲವೂ ಚಲಿಸುತ್ತಿರುತ್ತವೆ. ಅವನೇ [ಎಲ್ಲವೂ ವ್ಯವಸ್ಥಿತವಾಗಿ ಹೇಗೆ ನಡೆಯಬೇಕೆಂದು] ಯೋಜನೆಗಳನ್ನು ರೂಪಿಸಿವವನು. ನಿಮ್ಮ ಕರ್ತಾರನನ್ನು (ಒಂದು ದಿನ) ಭೇಟಿಯಾಗಲಿಕ್ಕಿರುವ ವಾಸ್ತವಿಕತೆಯ ಬಗ್ಗೆ ನಿಮಗೆ ದೃಢ ನಂಬಿಕೆಯುಂಟಾಗಲು ತನ್ನ ದೃಷ್ಟಾಂತಗಳನ್ನು ಅವನು ವಿವರಿಸುತ್ತಾನೆ. {2}

٣  وَهُوَ الَّذِي مَدَّ الْأَرْضَ وَجَعَلَ فِيهَا رَوَاسِيَ وَأَنْهَارًا ۖ وَمِنْ كُلِّ الثَّمَرَاتِ جَعَلَ فِيهَا زَوْجَيْنِ اثْنَيْنِ ۖ يُغْشِي اللَّيْلَ النَّهَارَ ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ

ಅವನೇ [ನಿಮ್ಮ ಉಪಯೋಗಕ್ಕಾಗಿ] ಭೂಮಿಯನ್ನು ವಿಶಾಲವಾಗಿ ಹರಡಿದವನು; ಹುಗಿದ ಬೆಟ್ಟಗಳನ್ನೂ ಹರಿಯುವ ನದಿಗಳನ್ನೂ ಅದರಲ್ಲಿ ಉಂಟು ಮಾಡಿದವನು. ಸಕಲ ವಿಧ ಫಲಗಳನ್ನು ಅದರಲ್ಲಿ ಜೋಡಿಜೋಡಿಯಾಗಿ ಸೃಷ್ಟಿ ಮಾಡಿದವನು. ರಾತ್ರಿಯನ್ನು ಹಗಲ ಮೇಲೆ ಹೊದಿಸಿ ಬಿಟ್ಟವನು. ಹೌದು, ವಿಚಾರ ಮಾಡುವ ಜನರಿಗೆ ಖಂಡಿತವಾಗಿ ಇದರಲ್ಲಿ ಬಹಳಷ್ಟು ದೃಷ್ಟಾಂತಗಳಿವೆ! {3}

٤  وَفِي الْأَرْضِ قِطَعٌ مُتَجَاوِرَاتٌ وَجَنَّاتٌ مِنْ أَعْنَابٍ وَزَرْعٌ وَنَخِيلٌ صِنْوَانٌ وَغَيْرُ صِنْوَانٍ يُسْقَىٰ بِمَاءٍ وَاحِدٍ وَنُفَضِّلُ بَعْضَهَا عَلَىٰ بَعْضٍ فِي الْأُكُلِ ۚ إِنَّ فِي ذَٰلِكَ لَآيَاتٍ لِقَوْمٍ يَعْقِلُونَ

ಭೂಮಿಯಲ್ಲಿ, ಪರಸ್ಪರ ಹೊಂದಿಕೊಂಡ (ವಿಭಿನ್ನ ರೀತಿಯ, ವಿಭಿನ್ನ ಸ್ವರೂಪದ) ಭೂಭಾಗಗಳಿವೆ. ದ್ರಾಕ್ಷಿಯ ತೋಟಗಳೂ ಹೊಲಗಳೂ ಇವೆ. ಒಂದೇ ಬುಡದಿಂದ ಒಂಟಿಯಾಗಿಯೂ ಜೋಡಿಯಾಗಿಯೂ ಬೆಳೆದು ನಿಂತ ಖರ್ಜೂರದ ಮರಗಳಿವೆ. ಎಲ್ಲವೂ ಒಂದೇ ನೀರನ್ನು ಹೀರಿ ಬೆಳದರೂ ರುಚಿಯಲ್ಲಿ ನಾವು ಕೆಲವನ್ನು ಉಳಿದವುಗಳಿಗಿಂತ ಉತ್ತಮಗೊಳಿಸಿರುತ್ತೇವೆ. ಹೌದು, ಬುದ್ಧಿ ಉಪಯೋಗಿಸುವ ಜನರಿಗೆ ಖಂಡಿತವಾಗಿ ಈ ವಿಷಯಗಳಲ್ಲಿ ಬಹಳಷ್ಟು ದೃಷ್ಟಾಂತಗಳಿವೆ! {4}

٥  وَإِنْ تَعْجَبْ فَعَجَبٌ قَوْلُهُمْ أَإِذَا كُنَّا تُرَابًا أَإِنَّا لَفِي خَلْقٍ جَدِيدٍ ۗ أُولَٰئِكَ الَّذِينَ كَفَرُوا بِرَبِّهِمْ ۖ وَأُولَٰئِكَ الْأَغْلَالُ فِي أَعْنَاقِهِمْ ۖ وَأُولَٰئِكَ أَصْحَابُ النَّارِ ۖ هُمْ فِيهَا خَالِدُونَ

ಇನ್ನು ಆಶ್ಚರ್ಯ ಪಡುವುದಾದರೆ, ಒಮ್ಮೆ ಮಣ್ಣಾಗಿ ಹೋದ ನಂತರ ಹೊಸದಾಗಿ ನಮ್ಮನ್ನು ಪುನಃ ಸೃಷ್ಟಿ ಮಾಡಲಾಗುವುದೇ ಎಂಬ ಅವರ (ತಿರಸ್ಕಾರ ತುಂಬಿದ) ಮಾತಿಗಾಗಿ ಆಶ್ಚರ್ಯ ಪಡಬೇಕು! ಅವರೇ ತಮ್ಮ ಸೃಷ್ಟಿಕರ್ತನ (ಆದೇಶಗಳಿಗೆ) ಧಿಕ್ಕಾರ ತೋರಿದವರು. ಹೌದು, ಅವರ ಕತ್ತುಗಳಲ್ಲಿ [ಅಂದು ಕಬ್ಬಿಣದ] ಸಂಕೋಲೆಯಿರುವುದು. ಹೌದು, ಅವರೇ ನರಕಕ್ಕೆ ಸಂಗಾತಿಗಳಾಗಲಿರುವ ಜನರು; ಸದಾಕಾಲ ನರಕದಲ್ಲೇ ಇರುವವರು. {5}

٦  وَيَسْتَعْجِلُونَكَ بِالسَّيِّئَةِ قَبْلَ الْحَسَنَةِ وَقَدْ خَلَتْ مِنْ قَبْلِهِمُ الْمَثُلَاتُ ۗ وَإِنَّ رَبَّكَ لَذُو مَغْفِرَةٍ لِلنَّاسِ عَلَىٰ ظُلْمِهِمْ ۖ وَإِنَّ رَبَّكَ لَشَدِيدُ الْعِقَابِ

[ಪೈಗಂಬರರೇ, ನೀವು ಅವರ ಪಾಲಿಗೆ ಒಳ್ಳೆಯದನ್ನೇ ಬಯಸುತ್ತಿರುವಿರಿ. ಆದರೆ] ಅವರು ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಆಧ್ಯತೆ ನೀಡುತ್ತಾ [ದೈವಿಕ ಶಿಕ್ಷೆಗಾಗಿ] ನಿಮ್ಮನ್ನು ಆತುರಪಡಿಸುತ್ತಿದ್ದಾರೆ! ವಾಸ್ತವದಲ್ಲಿ, ಅವರಿಗಿಂತ ಮುಂಚೆ ಗತಿಸಿದ (ಜನಾಂಗಗಳು) ಘೋರವಾದ ಶಿಕ್ಷೆಗೆ ಒಳಗಾದ ಹಲವು ಉದಾಹರಣೆಳಿವೆ. ನಿಜವೇನೆಂದರೆ, ಜನರು ಮಾಡುವ ಅಕ್ರಮಗಳ ಹೊರತಾಗಿಯೂ ಅವರನ್ನು ಕ್ಷಮಿಸಿ ಬಿಡುವ ಗುಣವನ್ನು ನಿಮ್ಮ ಪ್ರಭು ಹೊಂದಿರುವನು! ಆದರೆ ಕಠಿಣವಾಗಿ ಶಿಕ್ಷಿಸುವುದರಲ್ಲೂ ನಿಮ್ಮ ಪ್ರಭು ಬಹಳ ಗಟ್ಟಿಗನು! {6}

٧  وَيَقُولُ الَّذِينَ كَفَرُوا لَوْلَا أُنْزِلَ عَلَيْهِ آيَةٌ مِنْ رَبِّهِ ۗ إِنَّمَا أَنْتَ مُنْذِرٌ ۖ وَلِكُلِّ قَوْمٍ هَادٍ

ಈತನ ಬಳಿಗೆ [ನಾವು ಬಯಸಿದಂತಹ] ಪ್ರಮಾಣವೊಂದು ಈತನ ಪ್ರಭುವಿನ ವತಿಯಿಂದ ಇನ್ನೂ ಬರಲಿಲ್ಲವೇಕೆ - ಎಂದು [ಪೈಗಂಬರರೇ, ನಿಮ್ಮ ಪ್ರವಾದಿತ್ವವನ್ನು] ನಿರಾಕರಿಸುತ್ತಿರುವ ಜನರು ಪ್ರಶ್ನಿಸುತ್ತಿದ್ದಾರೆ. ಪೈಗಂಬರರೇ, ನೀವು ಕೇವಲ ಜನರಿಗೆ ಎಚ್ಚರಿಕೆ ನೀಡುವವರು ಮಾತ್ರ! [ಇದು ಮೊದಲ ಬಾರಿಯೇನೂ ಅಲ್ಲ; ಹಿಂದೆಯೂ ಸಹ] ಪ್ರತಿಯೊಂದು ಜನಾಂಗಕ್ಕೂ ಒಬ್ಬಾತನನ್ನು ಮಾರ್ಗದರ್ಶಕನಾಗಿ ನೇಮಿಸಲಾಗಿತ್ತು! {7}

٨  اللَّهُ يَعْلَمُ مَا تَحْمِلُ كُلُّ أُنْثَىٰ وَمَا تَغِيضُ الْأَرْحَامُ وَمَا تَزْدَادُ ۖ وَكُلُّ شَيْءٍ عِنْدَهُ بِمِقْدَارٍ

[ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಜ್ಞಾನವೂ ಅವನಿದೆ. ಎಲ್ಲಿಯವರೆಗೆಂದರೆ] ಪ್ರತಿ ಗರ್ಭಿಣಿಯ ಗರ್ಭದಲ್ಲಿ ಏನಿದೆಯೆಂದೂ ಅಲ್ಲಾಹ್ ನು ಬಲ್ಲನು! ಗರ್ಭಾಶಯದಲ್ಲಿ ನಡೆಯುವ ಕ್ಷಯ ವೃದ್ಧಿಗಳ ಬಗ್ಗೆಯೂ ಅವನಿಗೆ ತಿಳಿದಿದೆ. ಮಾತ್ರವಲ್ಲ, ಪ್ರತಿಯೊಂದು ವಿಷಯಕ್ಕೂ ಅವನ ಬಳಿ ಒಂದು ನಿಶ್ಚಿತ ಲೆಕ್ಕಾಚಾರವಿದೆ. {8}

٩  عَالِمُ الْغَيْبِ وَالشَّهَادَةِ الْكَبِيرُ الْمُتَعَالِ

ಎಲ್ಲಾ ವಿಧ ಗೋಚರಾಗೋಚರಗಳನ್ನು ಬಲ್ಲವನು ಅವನು; ಅತ್ಯಂತ ಮಹಾನನು, ಅವನ ಸ್ಥಾನ ಪರಮೋನ್ನತ! {9}

١٠  سَوَاءٌ مِنْكُمْ مَنْ أَسَرَّ الْقَوْلَ وَمَنْ جَهَرَ بِهِ وَمَنْ هُوَ مُسْتَخْفٍ بِاللَّيْلِ وَسَارِبٌ بِالنَّهَارِ

ನಿಮ್ಮ ಪೈಕಿ ತನ್ನ ಮಾತನ್ನು ರಹಸ್ಯವಾಗಿಡುವವನಾಗಲಿ ಬಹಿರಂಗವಾಗಿ ಆಡುವವನಾಗಲಿ; ಅಥವಾ ರಾತ್ರಿಯ ಅಂಧಕಾರದಲ್ಲಿ ಅವಿತುಕೊಂಡು ಚಟುವಟಿಕೆ ನಡೆಸುವವನಾಗಲಿ ಹಗಲುಬೆಳಕಿನಲ್ಲಿ ಕಾರ್ಯವೆಸಗಲು ಸಂಚರಿಸುವವನಾಗಲಿ - ಅಲ್ಲಾಹ್ ನ ಮಟ್ಟಿಗೆ ಎಲ್ಲವೂ ಒಂದೇ! [ಅರ್ಥಾತ್ ಅವನಿಗೆ ಎಲ್ಲವೂ ತಿಳಿದಿರುತ್ತದೆ]. {10}

١١  لَهُ مُعَقِّبَاتٌ مِنْ بَيْنِ يَدَيْهِ وَمِنْ خَلْفِهِ يَحْفَظُونَهُ مِنْ أَمْرِ اللَّهِ ۗ إِنَّ اللَّهَ لَا يُغَيِّرُ مَا بِقَوْمٍ حَتَّىٰ يُغَيِّرُوا مَا بِأَنْفُسِهِمْ ۗ وَإِذَا أَرَادَ اللَّهُ بِقَوْمٍ سُوءًا فَلَا مَرَدَّ لَهُ ۚ وَمَا لَهُمْ مِنْ دُونِهِ مِنْ وَالٍ

(ವಾಸ್ತವವೇನೆಂದರೆ) ಮನುಷ್ಯನ ಹಿಂದೆ ಮುಂದೆ (ಮಲಕ್ ಗಳ) ಪಹರೆಯಿದೆ. ಅಲ್ಲಾಹ್ ನ ಆದೇಶದಂತೆ ಅವು [ಹಗಲಲ್ಲೂ ಇರುಳಲ್ಲೂ, ಸರದಿ ಪ್ರಕಾರ] ಅವನನ್ನು ಕಾಯುತ್ತವೆ. ಯಥಾರ್ಥದಲ್ಲಿ ಒಂದು ಸಮುದಾಯವು ಎಲ್ಲಿಯ ವರೆಗೆ ತನ್ನನ್ನು ತಾನೇ ತಿದ್ದಿಕೊಳ್ಳುವುದಿಲ್ಲವೋ, ಅಲ್ಲಾಹ್ ನೂ ಆ ಸಮುದಾಯದ ಸ್ಥಿತಿಗತಿಯನ್ನು ಬದಲಾಯಿಸುವುದಿಲ್ಲ. ಇನ್ನು, (ಶಿಕ್ಷೆಗೆ ಅರ್ಹವಾದ) ಒಂದು ಸಮುದಾಯವನ್ನು ಶಿಕ್ಷೆಗೆ ಗುರಿಪಡಿಸಲು ಅಲ್ಲಾಹ್ ನು ತೀರ್ಮಾನಿಸಿದರೆ ಅದನ್ನು ನೀಗಿಸಲು ಸಾಧ್ಯವಿಲ್ಲ. ಅವನ ಹೊರತು ಅವರಿಗೆ ಬೇರೆ ಯಾವ ಸಹಾಯಕರೂ ಸಿಗಲಾರರು. {11}

١٢  هُوَ الَّذِي يُرِيكُمُ الْبَرْقَ خَوْفًا وَطَمَعًا وَيُنْشِئُ السَّحَابَ الثِّقَالَ

ಭಯ ಹುಟ್ಟಿಸುವ ಮತ್ತು ಭರವಸೆ ಮೂಡಿಸುವ ಮಿಂಚುಗಳನ್ನು ನಿಮಗೆ ಕಾಣಿಸುವವನೂ ಅವನೇ! ಹಾಗೆಯೇ ಭಾರವಾದ ಮೋಡಗಳನ್ನು ತರುವವನೂ ಅವನೇ! {12}

١٣  وَيُسَبِّحُ الرَّعْدُ بِحَمْدِهِ وَالْمَلَائِكَةُ مِنْ خِيفَتِهِ وَيُرْسِلُ الصَّوَاعِقَ فَيُصِيبُ بِهَا مَنْ يَشَاءُ وَهُمْ يُجَادِلُونَ فِي اللَّهِ وَهُوَ شَدِيدُ الْمِحَالِ

ಹೌದು, ಗುಡುಗುಗಳು ಗುಡುಗುವಾಗ ಅವನ ಕೀರ್ತನೆ ಮಾಡುವುದರೊಂದಿಗೆ ಅವನ ಪಾವನತೆಯ ಗುಣಗಾನ ಮಾಡುತ್ತವೆ. ಹಾಗೆಯೇ [ಗುಡುಗು ಸಿಡಿಲು ಮುಂತಾದ ಕಾರ್ಯಗಳಿಗೆ ನಿಯುಕ್ತಗೊಂಡ] ಮಲಕ್ ಗಳು ಸಹ ಭಯಭಕ್ತಿಯೊಂದಿಗೆ ಅವನ ಗುಣಗಾನ ಮಾಡುತ್ತಿರುತ್ತವೆ. ಅವನೇ ಆರ್ಭಟಿಸುವ ಸಿಡಿಲುಗಳನ್ನು ಕಳುಹಿಸುವವನು, ಯಾರ ಮೇಲೆ ಅದನ್ನು ಬೀಳಿಸ ಬಯಸುವನೋ ಅವರ ಮೇಲೆ ಬೀಳಿಸುವವನು! [ಯಥಾರ್ಥ ಹಾಗಿದ್ದರೂ ಸಹ] ಜನರು ಮಾತ್ರ ಅಲ್ಲಾಹ್ ನ ವಿಷಯದಲ್ಲಿ ವಾದ-ವಿವಾದಗಳಲ್ಲಿ ತೊಡಗಿದ್ದಾರೆ! ಅವನ ಹಿಡಿತವಾದರೋ ಬಹಳ ಬಲಿಷ್ಟವಾದುದು, (ಜನರೇ ನಿಮಗೆ ತಿಳಿದಿರಲಿ)! {13}

١٤  لَهُ دَعْوَةُ الْحَقِّ ۖ وَالَّذِينَ يَدْعُونَ مِنْ دُونِهِ لَا يَسْتَجِيبُونَ لَهُمْ بِشَيْءٍ إِلَّا كَبَاسِطِ كَفَّيْهِ إِلَى الْمَاءِ لِيَبْلُغَ فَاهُ وَمَا هُوَ بِبَالِغِهِ ۚ وَمَا دُعَاءُ الْكَافِرِينَ إِلَّا فِي ضَلَالٍ

ನಿಜವಾದ ಪ್ರಾರ್ಥನೆ ಅವನೊಂದಿಗೆ ಮಾತ್ರವಾಗಿರಬೇಕು. ಅವನನ್ನು ಬಿಟ್ಟು ಇತರರೊಂದಿಗೆ ಯಾರಾದರೂ ಪ್ರಾರ್ಥಿಸಿದರೆ ಅದಕ್ಕೆ ಅವರು ಎಷ್ಟುಮಾತ್ರಕ್ಕೂ ಸ್ಪಂದಿಸಲಾರರು. (ಹಾಗೆ ಮಾಡುವುದು) ತನ್ನೆರಡೂ ಕೈಗಳನ್ನು ನೀರಿನತ್ತ ಚಾಚಿ ನೀರು ಸ್ವತಃ ಬಂದು ಬಾಯಿಗೆ ಬಿದ್ದೀತು ಎಂದು ತಿಳಿದಂತೆ. ನೀರು ಬಾಯಿಗೆ ಬರಲಾರದು! ಅಂತೆಯೇ, (ಅಲ್ಲಾಹ್ ನನ್ನೂ ಪೈಗಂಬರರನ್ನೂ) ಅಲ್ಲಗಳೆದವರ ಪ್ರಾರ್ಥನೆಯು ಕೇವಲ ಒಂದು ವ್ಯರ್ಥ ಕಾರ್ಯವಲ್ಲದೆ ಬೇರೇನೂ ಅಲ್ಲ! {14}

١٥  وَلِلَّهِ يَسْجُدُ مَنْ فِي السَّمَاوَاتِ وَالْأَرْضِ طَوْعًا وَكَرْهًا وَظِلَالُهُمْ بِالْغُدُوِّ وَالْآصَالِ ۩

ಭೂಮಿ ಆಕಾಶಗಳಲ್ಲಿ ಇರುವ ಎಲ್ಲವೂ, ಮಾತ್ರವಲ್ಲ ಅವುಗಳ ನೆರಳುಗಳೂ ಸ್ವಇಚ್ಚೆಯಿಂದ ಅಥವಾ ನಿರ್ಬಂಧಿತರಾಗಿ ಸಂಜೆ ಮತ್ತು ಮುಂಜಾನೆಗಳಲ್ಲಿ ಅಲ್ಲಾಹ್ ನಿಗೆ ಶಿರಬಾಗುತ್ತಿರುತ್ತವೆ! {15} ۩

١٦  قُلْ مَنْ رَبُّ السَّمَاوَاتِ وَالْأَرْضِ قُلِ اللَّهُ ۚ قُلْ أَفَاتَّخَذْتُمْ مِنْ دُونِهِ أَوْلِيَاءَ لَا يَمْلِكُونَ لِأَنْفُسِهِمْ نَفْعًا وَلَا ضَرًّا ۚ قُلْ هَلْ يَسْتَوِي الْأَعْمَىٰ وَالْبَصِيرُ أَمْ هَلْ تَسْتَوِي الظُّلُمَاتُ وَالنُّورُ ۗ أَمْ جَعَلُوا لِلَّهِ شُرَكَاءَ خَلَقُوا كَخَلْقِهِ فَتَشَابَهَ الْخَلْقُ عَلَيْهِمْ ۚ قُلِ اللَّهُ خَالِقُ كُلِّ شَيْءٍ وَهُوَ الْوَاحِدُ الْقَهَّارُ

(ಪೈಗಂಬರರೇ), ಭೂಮಿ ಮತ್ತು ಆಕಾಶಗಳನ್ನು (ಸೃಷ್ಟಿಸಿದ) ಪ್ರಭು ಯಾರೆಂದು ಅವರೊಡನೆ ವಿಚಾರಿಸಿರಿ. ಅಲ್ಲಾಹ್ ನೇ ಆಗಿರುವನು ಎಂದು ಹೇಳಿಕೊಡಿರಿ. (ವಾಸ್ತವ ಹಾಗಿರುವಾಗ, ಸೃಷ್ಟಿಕರ್ತನಾದ) ಆ ಅಲ್ಲಾಹ್ ನನ್ನು ಕಡೆಗಣಿಸಿ, ಕನಿಷ್ಟಪಕ್ಷ ತಮ್ಮ ಮಟ್ಟಿಗಾದರೂ ಯವುದೇ ತರದ ಗುಣವಾಗಲಿ ದೋಷವಾಗಲಿ ಮಾಡಿಕೊಳ್ಳಲು ಶಕ್ತರಲ್ಲದವರನ್ನು ಸಂರಕ್ಷಕರನ್ನಾಗಿ ನೀವು ಸ್ವೀಕರಿಸಿರುವಿರಾ - ಎಂದು ಅವರೊಂದಿಗೆ ಕೇಳಿರಿ! ದೃಷ್ಟಿಹೀನರೂ ದೃಷ್ಟಿಯುಳ್ಳವರೂ ಸರಿಸಮಾನರಾಗುವರೇ? ಅಥವಾ ಪ್ರಕಾಶಕ್ಕೆ ಅಂಧಕಾರವು ಸಾಟಿಯಾಗುವುದೇ? ಅಥವಾ ನೀವು ಯಾರನ್ನು ಅಲ್ಲಾಹ್ ನಿಗೆ ಜೊತೆಗಾರರನ್ನಾಗಿ ಮಾಡಿಕೊಂಡೀರುವಿರೋ ಅವರೂ ಸಹ ಅಲ್ಲಾಹ್ ನಂತೆಯೇ ಸೃಷ್ಟಿಕಾರ್ಯದಲ್ಲಿ ನಿರತರಾಗಿರುವರೇನು? ಇನ್ನು ಆ ಕಾರಣದಿಂದಾಗ ಸೃಷ್ಟಿಗಳ ಬಗ್ಗೆ (ಅರ್ಥಾತ್ ನಿಜವಾಗಿಯೂ ಇವೆಲ್ಲ ಯಾರ ಸೃಷ್ಟಿ ಎಂಬುದರ ಬಗ್ಗೆ) ಇವರು ಸಂಶಯಗ್ರಸ್ತರಾಗಿರುವರೇನು? (ಪೈಗಂಬರರೇ), ಅವರೊಂದಿಗೆ ವಿಚಾರಿಸಿರಿ. ಸಕಲವನ್ನೂ ಸೃಷ್ಟಿ ಮಾಡಿದವನು ಆ ಅಲ್ಲಾಹ್ ನೇ ಆಗಿರುತ್ತಾನೆ. ಅವನಾದರೋ ಏಕೈಕನು; ಮಿಗಿಲಾದ ಶಕ್ತಿಯುಳ್ಳವನು ಎಂದೂ ಅವರಿಗೆ ತಿಳಿಸಿರಿ. {16}

١٧  أَنْزَلَ مِنَ السَّمَاءِ مَاءً فَسَالَتْ أَوْدِيَةٌ بِقَدَرِهَا فَاحْتَمَلَ السَّيْلُ زَبَدًا رَابِيًا ۚ وَمِمَّا يُوقِدُونَ عَلَيْهِ فِي النَّارِ ابْتِغَاءَ حِلْيَةٍ أَوْ مَتَاعٍ زَبَدٌ مِثْلُهُ ۚ كَذَٰلِكَ يَضْرِبُ اللَّهُ الْحَقَّ وَالْبَاطِلَ ۚ فَأَمَّا الزَّبَدُ فَيَذْهَبُ جُفَاءً ۖ وَأَمَّا مَا يَنْفَعُ النَّاسَ فَيَمْكُثُ فِي الْأَرْضِ ۚ كَذَٰلِكَ يَضْرِبُ اللَّهُ الْأَمْثَالَ

ಅವನು ಆಕಾಶದಿಂದ ಮಳೆನೀರು ಸುರಿಸುತ್ತಾನೆ; ಆಗ ಕಣಿವೆಗಳು ತಮ್ಮ ಸಾಮರ್ಥ್ಯಕ್ಕನುಸಾರ ನೆರೆನೀರನ್ನು ತಮ್ಮ ಮೂಲಕ ಹರಿಸಿ ಬಿಡುತ್ತವೆ; ಹಾಗೆ ಪ್ರವಾಹವು (ಕಶ್ಮಲದಿಂದ ಕೂಡಿದ) ದಟ್ಟವಾದ ನೊರೆಯನ್ನು ಹೊತ್ತು ಹರಿಯುತ್ತದೆ. ಆಭರಣ, ಪಾತ್ರೆಗಳು ಮುಂತಾದ (ಉಪಯುಕ್ತ ವಸ್ತುಗಳನ್ನು) ತಯಾರಿಸಲು ಜನರು (ಲೋಹದ ಅದಿರನ್ನು) ಕಾಯಿಸುವಾಗಲೂ ಹಾಗೆಯೇ ಅದರ ಮೇಲ್ಮೈಯಲ್ಲಿ (ಕಶ್ಮಲ) ನೊರೆಗಟ್ಟುತ್ತದೆ. ಇಂತಹ ಉಪಮೆಗಳ ಮೂಲಕ ಅಲ್ಲಾಹ್ ನು ಸತ್ಯ ಮತ್ತು ಮಿಥ್ಯಗಳ [ಅರ್ಥಾತ್ ಉಪಯುಕ್ತ ಹಾಗೂ ತ್ಯಾಜ್ಯ ವಸ್ತುಗಳ ವ್ಯತ್ಯಾಸವನ್ನು] ವಿವರಿಸುತ್ತಾನೆ. ನೊರೆಗಟ್ಟಿದ ಕೊಳಕು [ಅದು ಅದಿರಿನದ್ದಾಗಿರಲಿ ನೀರಿನದ್ದಾಗಿರಲಿ] ತೊಲಗಿ ಹೋಗುತ್ತದೆ ಹಾಗೂ ಮನುಷ್ಯರಿಗೆ ಉಪಯುಕ್ತವಾದುದು ಮಾತ್ರ ಭೂಮಿಯಲ್ಲಿ ಬಾಕಿಯಾಗುತ್ತದೆ. (ನಿಮಗೆ ಅರ್ಥವಾಗಲೆಂದು) ಅಲ್ಲಾಹ್ ನು ಇಂತಹ ಉಪಮೆಗಳನ್ನು ನೀಡುತ್ತಾನೆ. {17}

١٨   لِلَّذِينَ اسْتَجَابُوا لِرَبِّهِمُ الْحُسْنَىٰ ۚ وَالَّذِينَ لَمْ يَسْتَجِيبُوا لَهُ لَوْ أَنَّ لَهُمْ مَا فِي الْأَرْضِ جَمِيعًا وَمِثْلَهُ مَعَهُ لَافْتَدَوْا بِهِ ۚ أُولَٰئِكَ لَهُمْ سُوءُ الْحِسَابِ وَمَأْوَاهُمْ جَهَنَّمُ ۖ وَبِئْسَ الْمِهَادُ

ತಮ್ಮ ಒಡೆಯನ ಕರೆಗೆ ಓಗೊಟ್ಟವರಿಗೆ ಬಹಳ ಸುಂದರವಾದ ಪ್ರತಿಫಲಗಳಿವೆ. ಇನ್ನು ಅವನ ಕರೆಯನ್ನು ಕಡೆಗಣಿಸಿದವರ ಬಳಿ ಒಂದು ವೇಳೆ ಭೂಮಿಯಲ್ಲಿರುವ ಸಕಲ ಸಂಪತ್ತೂ ಇದ್ದು ಹೆಚ್ಚುವರಿಯಾಗಿ ಮತ್ತೆ ಅಷ್ಟೇ ಇದ್ದಿದ್ದರೂ ಅವೆಲ್ಲವನ್ನೂ ಪ್ರಾಯಶ್ಚಿತ್ತವಾಗಿ ಕೊಟ್ಟು (ಅಲ್ಲಾಹ್ ನ ಹಿಡಿತದಿಂದ) ತಮ್ಮನ್ನು ಬಿಡಿಸಿಕೊಳ್ಳಲು ತಯಾರಾಗುತ್ತಿದ್ದರು! [ಆದರೆ ಅದು ಅವರ ಯಾವ ಪ್ರಯೋಜನಕ್ಕೂ ಬಾರದು. ಬದಲಾಗಿ] ಅವರ ವಿಚಾರಣೆ ಬಹಳ ಕೆಟ್ಟದಾಗಿ ನಡೆಯುವುದು ಮತ್ತು ಅವರ ಅಂತಿಮ ತಾಣ ನರಕವಾಗುವುದು! ಎಷ್ಟೊಂದು ಕೆಟ್ಟ ಸ್ಥಳವಾಗಿದೆ ಅದು! {18}

١٩  أَفَمَنْ يَعْلَمُ أَنَّمَا أُنْزِلَ إِلَيْكَ مِنْ رَبِّكَ الْحَقُّ كَمَنْ هُوَ أَعْمَىٰ ۚ إِنَّمَا يَتَذَكَّرُ أُولُو الْأَلْبَابِ

ಪೈಗಂಬರರೇ, ನಿಮ್ಮ ಒಡೆಯನ ವತಿಯಿಂದ ನಿಮಗೆ ಇಳಿಸಿ ಕೊಡಲಾದ (ಸಂದೇಶವು) ಪರಮ ಸತ್ಯವಾದುದು ಎಂದು ಖಚಿತವಾಗಿ ಮನಗಂಡವನು (ಅದನ್ನು ಅರಿಯದ) ಒಬ್ಬ ಕುರುಡನಂತೆ ಆಗುವನೇ? ನಿಜವೇನೆಂದರೆ ತಿಳುವಳಿಕೆಯುಳ್ಳ ಜನರು ಮಾತ್ರ ಉಪದೇಶ ಸ್ವೀಕರಿಸುತ್ತಾರೆ. {19}

٢٠  الَّذِينَ يُوفُونَ بِعَهْدِ اللَّهِ وَلَا يَنْقُضُونَ الْمِيثَاقَ

ಅಲ್ಲಾಹ್ ನೊಂದಿಗೆ ಮಾಡಿದ ಕರಾರನ್ನು ಅಂತಹವರು ಪೂರ್ತಿಗೊಳಿಸುತ್ತಾರೆ; ಹೌದು, ಅಂತಹ ಗಂಭೀರ ಪ್ರತಿಜ್ಞೆಗಳನ್ನು ಅವರು ಮುರಿಯುವುದಿಲ್ಲ. {20}

  ٢١  وَالَّذِينَ يَصِلُونَ مَا أَمَرَ اللَّهُ بِهِ أَنْ يُوصَلَ وَيَخْشَوْنَ رَبَّهُمْ وَيَخَافُونَ سُوءَ الْحِسَابِ

ಹಾಗೆಯೇ, ಅಲ್ಲಾಹ್ ನು ಯಾವೆಲ್ಲ ಸಂಬಂಧಗಳನ್ನು ಕಾಪಾಡಬೇಕೆಂದು ಆದೇಶಿರುವನೋ ಅಂತಹ ಸಂಬಂಧಗಳು ಮುರಿಯದಂತೆ ಅವರು ನೋಡಿಕೊಳ್ಳುತ್ತಾರೆ. ತಮ್ಮ ಒಡೆಯನ ಭಯಭಕ್ತಿ ಇರಿಸಿ ಕೊಳ್ಳುತ್ತಾರೆ ಹಾಗೂ ತಮ್ಮ ಜೊತೆ ಕೆಟ್ಟ ಸ್ವರೂಪದ ವಿಚಾರಣೆ ನಡೆದೀತೇ ಎಂದು ಭಯ ಪಡುತ್ತಾರೆ. {21}

٢٢  وَالَّذِينَ صَبَرُوا ابْتِغَاءَ وَجْهِ رَبِّهِمْ وَأَقَامُوا الصَّلَاةَ وَأَنْفَقُوا مِمَّا رَزَقْنَاهُمْ سِرًّا وَعَلَانِيَةً وَيَدْرَءُونَ بِالْحَسَنَةِ السَّيِّئَةَ أُولَٰئِكَ لَهُمْ عُقْبَى الدَّارِ

ತಮ್ಮ ಪ್ರಭುವಿನ ಸಂಪ್ರೀತಿ ಬಯಸುವ ವಿಷಯದಲ್ಲಿ ಅವರು ದೃಢಚಿತ್ತತೆಯೊಂದಿಗೆ ವರ್ತಿಸುತ್ತಾರೆ. ನಮಾಝ್ ಅನ್ನು ನಿಷ್ಠೆಯಿಂದ ಪಾಲಿಸುತ್ತಾರೆ; ನಾವು ಒದಗಿಸಿದ ಸಂಪತ್ಸಾಧನಗಳಿಂದ ಅವರು ಬಹಿರಂಗವಾಗಿಯೂ ಗೌಪ್ಯವಾಗಿಯೂ ದಾನ ಮಾಡುತ್ತಿರುತ್ತಾರೆ. ಕೆಡುಕುಗಳನ್ನು ಒಳಿತುಗಳ ಮೂಲಕ ನಿವಾರಿಸುತ್ತಾರೆ. ಹೌದು, ಪರಲೋಕದ (ಸುಂದರ) ನೆಲೆವೀಡು ಇರುವುದು ಅಂತಹ ಜನರಿಗಾಗಿಯೇ! {22}

٢٣  جَنَّاتُ عَدْنٍ يَدْخُلُونَهَا وَمَنْ صَلَحَ مِنْ آبَائِهِمْ وَأَزْوَاجِهِمْ وَذُرِّيَّاتِهِمْ ۖ وَالْمَلَائِكَةُ يَدْخُلُونَ عَلَيْهِمْ مِنْ كُلِّ بَابٍ

(ಅದ್‍ನ್ ಎಂಬ) ಶಾಶ್ವತವಾದ ಸ್ವರ್ಗೋದ್ಯಾನಗಳನ್ನು ಅವರು ಪ್ರವೇಶಿಸಲಿರುವರು. ಮಾತ್ರವಲ್ಲ, ಅವರ ತಂದೆ ತಾತಂದಿರ, ಬಾಳಸಂಗಾತಿಗಳ ಮತ್ತು ಸಂತತಿಗಳ ಪೈಕಿ ಯಾರಾದರೂ (ಜೀವನದಲ್ಲಿ) ಒಳ್ಳೆಯ ನಡತೆ ಸ್ವೀಕರಿಸಿದವರಾಗಿದ್ದರೆ ಅವರೂ ಸಹ ಅದರೊಳಗೆ ಪ್ರವೇಶಿಸಲಿರುವರು. ಮತ್ತು ವಿಶೇಷ ಮಲಕ್ ಗಳು ಪ್ರತಿಯೊಂದು ಪ್ರವೇಶದ್ವಾರದ ಮೂಲಕವೂ (ಸ್ವಾಗತ ಕೋರಲು) ಅವರ ಮುಂದೆ ಹಾಜರಾಗುವರು. {23}

٢٤  سَلَامٌ عَلَيْكُمْ بِمَا صَبَرْتُمْ ۚ فَنِعْمَ عُقْبَى الدَّارِ

ಯಾವ ವಿಷಯದಲ್ಲಿ ನೀವು ದೃಢಚಿತ್ತರಾಗಿದ್ದಿರೋ ಅದಕ್ಕಾಗಿ ನಿಮಗೆ ಸಮಾಧಾನವಾಗಲಿ (ಎಂದು ಮಲಕ್ ಗಳು ಅವರೊಂದಿಗೆ ಹೇಳಲಿರುವರು). ಪರಲೋಕದ ಆ ನೆಲೆವೀಡು ಅದೆಷ್ಟು ಶ್ರೇಷ್ಠವಾದುದು! {24}

٢٥  وَالَّذِينَ يَنْقُضُونَ عَهْدَ اللَّهِ مِنْ بَعْدِ مِيثَاقِهِ وَيَقْطَعُونَ مَا أَمَرَ اللَّهُ بِهِ أَنْ يُوصَلَ وَيُفْسِدُونَ فِي الْأَرْضِ ۙ أُولَٰئِكَ لَهُمُ اللَّعْنَةُ وَلَهُمْ سُوءُ الدَّارِ

ಇನ್ನು, ಅಲ್ಲಾಹ್ ನ ಜೊತೆಗೆ ಪಕ್ವವಾದ ಒಡಂಬಡಿಕೆಯೊಂದರಲ್ಲಿ ಏರ್ಪಟ್ಟು, ಅನಂತರ ಅದನ್ನು ಮುರಿದವರು; ನಿಭಾಯಿಸಬೇಕೆಂದು ಅಲ್ಲಾಹ್ ನು ಆದೇಶಿಸಿದ ಸಂಬಂಧಗಳನ್ನು ಮುರಿದವರು; ಹಾಗೂ ನಾಡಿನಲ್ಲಿ ಅಶಾಂತಿ, ಭ್ರಷ್ಟಾಚಾರಗಳನ್ನು ಹಬ್ಬಿದವರು ಯಾರೋ ಅಂತಹವರಿಗೆ ಅಲ್ಲಾಹ್ ನ ಶಾಪವಿದೆ. ಬಹಳ ಕೆಟ್ಟದಾದ ನೆಲೆಯು ಅವರದ್ದಾಗಿದೆ. {25}

٢٦  اللَّهُ يَبْسُطُ الرِّزْقَ لِمَنْ يَشَاءُ وَيَقْدِرُ ۚ وَفَرِحُوا بِالْحَيَاةِ الدُّنْيَا وَمَا الْحَيَاةُ الدُّنْيَا فِي الْآخِرَةِ إِلَّا مَتَاعٌ

[ಐಹಿಕವಾದ ಬದುಕಿನಲ್ಲಿ] ಯಾರಿಗಾದರೂ ಜೀವನ-ಸೌಲಭ್ಯಗಳನ್ನು (ಪರೀಕ್ಷಾರ್ಥ) ವೃದ್ಧಿಸಬೇಕೆಂದು ಅಲ್ಲಾಹ್ ನು ಬಯಸಿದರೆ ಅವನು ಅದನ್ನು ವೃದ್ಧಿಸುವನು; ಅಂತೆಯೇ ಕಡಿತಗೊಳಿಸಲು ಬಯಸಿದರೆ ಕಡಿತಗೊಳಿಸುವನು. ಹೌದು, ಅವರೆಲ್ಲ ಐಹಿಕ ಬದುಕಿನಲ್ಲೇ ಮಗ್ನರಾಗಿ ಬಿಡುತ್ತಾರೆ! ಆದರೆ ಪರಲೋಕದ (ಆ ಶಾಶ್ವತ ಬದುಕಿಗೆ ಹೋಲಿಸಿದರೆ) ಈ ಐಹಿಕ ಬದುಕು ಕೇವಲ ಕ್ಷುಲ್ಲಕ ಸ್ವರೂಪದ ಒಂದು ಸುಖಾನುಭವ ಮಾತ್ರ! {26}

٢٧  وَيَقُولُ الَّذِينَ كَفَرُوا لَوْلَا أُنْزِلَ عَلَيْهِ آيَةٌ مِنْ رَبِّهِ ۗ قُلْ إِنَّ اللَّهَ يُضِلُّ مَنْ يَشَاءُ وَيَهْدِي إِلَيْهِ مَنْ أَنَابَ

[ಮುಹಮ್ಮದ್ ಪೈಗಂಬರರ ಪ್ರವಾದಿತ್ವವನ್ನು] ಒಪ್ಪಿಕೊಳ್ಳಲು ನಿರಾಕರಿಸಿದ ಜನರು [ಅಂದರೆ ಮುಖ್ಯವಾಗಿ ಕುರೈಷರು], ಈತನ ಒಡೆಯನ ಕಡೆಯಿಂದ (ನಾವು ಬಯಸುತ್ತಿರುವಂತಹ ಒಂದು) ನಿದರ್ಶನವಾದರೂ ಈತನೆಡೆಗೆ ಏಕೆ ಕಳುಹಿಸಲ್ಪಟಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಪೈಗಂಬರರೇ, ಅವರೊಂದಿಗೆ ಹೇಳಿರಿ: [ತಮ್ಮನ್ನು ತಿದ್ದಿಕೊಳ್ಳಲು ತಯಾರಾಗದವರನ್ನು] ಅಲ್ಲಾಹ್ ನೂ ತನ್ನಿಚ್ಛೆಯಂತೆ ತಪ್ಪುದಾರಿಯಲ್ಲೇ ಬಿಟ್ಟುಬಿಡುವನು; ಇನ್ನು ಯಾರು (ಸರಿದಾರಿಯತ್ತ) ಒಲವು ತೋರುವರೋ ಅಂತಹವರನ್ನು ಅಲ್ಲಾಹ್ ನೂ ಸರಿದಾರಿಯತ್ತ ಸಾಗಿಸುವನು. {27}

٢٨  الَّذِينَ آمَنُوا وَتَطْمَئِنُّ قُلُوبُهُمْ بِذِكْرِ اللَّهِ ۗ أَلَا بِذِكْرِ اللَّهِ تَطْمَئِنُّ الْقُلُوبُ

ಅವರೇ [ಪೈಗಂಬರ ಬೋಧನೆಗಳಲ್ಲಿ] ವಿಶ್ವಾಸವಿರಿಸಿದ ಜನರು! ಅಂದರೆ ಅಲ್ಲಾಹ್ ನ ಸ್ಮರಣೆಯ ಮೂಲಕ ಆತ್ಮಶಾಂತಿಯನ್ನು ಪಡೆದವರು! ಚೆನ್ನಾಗಿ ಮನವರಿಕೆ ಮಾಡಿಕೊಳ್ಳಿ, ಅಂತರಾತ್ಮಕ್ಕೆ ಶಾಂತಿ-ನೆಮ್ಮದಿಗಳು ಪ್ರಾಪ್ತವಾಗುವುದು ಅಲ್ಲಾಹ್ ನ ಸ್ಮರಣೆಯಿಂದ ಮಾತ್ರ! {28}

٢٩  الَّذِينَ آمَنُوا وَعَمِلُوا الصَّالِحَاتِ طُوبَىٰ لَهُمْ وَحُسْنُ مَآبٍ

ವಿಶ್ವಾಸಿಗಳಾಗಿದ್ದು ಕೊಂಡು ಜೊತೆಗೆ ಸತ್ಕರ್ಮಗಳನ್ನೂ ಮಾಡುವ ಅಂತಹ ಜನರಿಗೆ ಶುಭವಾಗಲಿದೆ; ಬಹಳ ಉತ್ತಮ ಸ್ವರೂಪದ ವಾಸಸ್ಥಾನವೂ ಅವರಿಗೆ ಲಭಿಸಲಿದೆ. {29}

٣٠  كَذَٰلِكَ أَرْسَلْنَاكَ فِي أُمَّةٍ قَدْ خَلَتْ مِنْ قَبْلِهَا أُمَمٌ لِتَتْلُوَ عَلَيْهِمُ الَّذِي أَوْحَيْنَا إِلَيْكَ وَهُمْ يَكْفُرُونَ بِالرَّحْمَٰنِ ۚ قُلْ هُوَ رَبِّي لَا إِلَٰهَ إِلَّا هُوَ عَلَيْهِ تَوَكَّلْتُ وَإِلَيْهِ مَتَابِ

ಹಾಗೆಯೇ, ತಮಗಿಂತ ಮುಂಚೆ ಹಲವು ಪೀಳಿಗೆಗಳು ಗತಿಸಿರುವುದನ್ನು ಬಲ್ಲ ಒಂದು ಜನಸಮೂಹದ ಕಡೆಗೆ, ಓ ಪೈಗಂಬರರೇ, ನಾವು ಈಗ ನಿಮ್ಮನ್ನು ದೂತರನ್ನಾಗಿ ಕಳುಹಿಸಿರುತ್ತೇವೆ! ನಿಮಗೆ ಯಾವ (ಕುರ್‌ಆನ್ ಅನ್ನು) ನಾವು 'ವಹೀ' ಮೂಲಕ ಕಳುಹಿಸಿದ್ದೇವೆಯೋ ಅದನ್ನು ಅವರ ಮುಂದೆ ಓದಿ ತಿಳಿಸುವ ಸಲುವಾಗಿ. ಆದರೆ ಅವರು ಕರುಣಾಮಯಿ (ಅಲ್ಲಾಹ್ ನನ್ನು) ಧಿಕ್ಕರಿಸುತ್ತಿದ್ದಾರೆ. ಪೈಗಂಬರರೇ, ನೀವು ಅವರಿಗೆ ತಿಳಿ ಹೇಳಿರಿ: ನನ್ನ ದೇವನು ಅವನೇ; ಅವನ ಹೊರತು ಬೇರೆ ಯಾರೂ ದೇವರಲ್ಲ. ನಾನು ಭರವಸೆ ಇಟ್ಟಿರುವುದು ಅವನಲ್ಲಿ ಮಾತ್ರ! ಮತ್ತು (ಪ್ರತಿಯೊಬ್ಬರೂ ಅಂತಿಮವಾಗಿ) ಮರಳಬೇಕಾಗಿರುವುದು ಅವನೆಡೆಗೆ! {30}

٣١  وَلَوْ أَنَّ قُرْآنًا سُيِّرَتْ بِهِ الْجِبَالُ أَوْ قُطِّعَتْ بِهِ الْأَرْضُ أَوْ كُلِّمَ بِهِ الْمَوْتَىٰ ۗ بَلْ لِلَّهِ الْأَمْرُ جَمِيعًا ۗ أَفَلَمْ يَيْأَسِ الَّذِينَ آمَنُوا أَنْ لَوْ يَشَاءُ اللَّهُ لَهَدَى النَّاسَ جَمِيعًا ۗ وَلَا يَزَالُ الَّذِينَ كَفَرُوا تُصِيبُهُمْ بِمَا صَنَعُوا قَارِعَةٌ أَوْ تَحُلُّ قَرِيبًا مِنْ دَارِهِمْ حَتَّىٰ يَأْتِيَ وَعْدُ اللَّهِ ۚ إِنَّ اللَّهَ لَا يُخْلِفُ الْمِيعَادَ

ಒಂದು ವೇಳೆ ಪರ್ವತಗಳನ್ನು ಚಲಿಸುವಂತೆ ಮಾಡ ಬಲ್ಲ, ನೆಲವನ್ನು ತುಂಡು ತುಂಡಾಗಿ ಮಾಡ ಬಲ್ಲ, ಅಥವಾ ಸತ್ತವರು ಎದ್ದು ಮಾತಾಡುವಂತೆ ಮಾಡ ಬಲ್ಲ ಒಂದು ಕುರ್‌ಆನ್ [ಅರ್ಥಾತ್ ದೈವಿಕ ಗ್ರಂಥ] ಇರುತ್ತಿದ್ದರೂ [ಈ ಜನರು ದಯಾಮಯಿ ಅಲ್ಲಾಹ್ ನನ್ನು ಧಿಕ್ಕರಿಸದೆ ಇರುತ್ತಿರಲಿಲ್ಲ! ಅಂತಹ ಒಂದು ಕುರ್‌ಆನ್ ಅನ್ನು ಇಳಿಸುವುದು ಅಸಾಧ್ಯ ವಿಷಯವೇನಲ್ಲ, ಏಕೆಂದರೆ] ಸರ್ವವಿಧ ಆದೇಶಾಧಿಕಾರವು ಅಲ್ಲಾಹ್ ನಿಗೆ ಸೇರಿದ್ದಾಗಿದೆ. ಒಂದು ವೇಳೆ ಅಲ್ಲಾಹ್ ನು ಬಯಸಿರುತ್ತಿದ್ದರೆ ಸಕಲ ಮನುಷ್ಯರಿಗೂ (ಬೇಷರತ್ತಾಗಿ) ಸರಿದಾರಿ ತೋರುತ್ತಿದ್ದನು ಎಂಬ ವಾಸ್ತವಿಕತೆಯನ್ನು ಅರಿತ ಈ ವಿಶ್ವಾಸಿಗಳು ಇವರ ಕುರಿತು [ಇವರು ಸರಿದಾರಿ ಸ್ವೀಕರಿಸುವ ಕುರಿತು ಇನ್ನೊ] ಬೇಸತ್ತಿಲ್ಲವೇಕೆ? ಅಲ್ಲಾಹ್ ನು [ತನ್ನನ್ನು ಧಿಕ್ಕರಿಸಿದವರಿಗೆ ನಿರ್ಣಾಯಕ ಶಿಕ್ಷೆಯ ಕುರಿತು] ನೀಡಿರುವ ಮುನ್ನೆಚ್ಚರಿಕೆ ಸತ್ಯವಾಗುವ ತನಕವೂ, ಅವರೆಸಗಿದ ದುಷ್ಕೃತ್ಯಗಳ ಫಲವಾಗಿ ಒಂದಲ್ಲ ಒಂದು ರೀತಿಯ ವಿಪತ್ತುಗಳನ್ನು ಅವರ ಮೇಲೆ ಅಥವಾ ಅವರ ನಿವಾಸಗಳ ಆಸುಪಾಸಿನಲ್ಲಿ [ಮುನ್ಸೂಚನೆ ಎಂಬಂತೆ] ಎರಗಿಸುತ್ತಲೇ ಇರುತ್ತಾನೆ. ಹೌದು, ಅಲ್ಲಾಹ್ ನು ತಾನು ನೀಡಿದ ಎಚ್ಚರಿಕೆ, ವಾಗ್ದಾನಗಳಿಗೆ ವಿರುದ್ಧವಾಗಿ ನೆಡೆದುಕೊಳ್ಳುವುದಿಲ್ಲ! {31}

٣٢  وَلَقَدِ اسْتُهْزِئَ بِرُسُلٍ مِنْ قَبْلِكَ فَأَمْلَيْتُ لِلَّذِينَ كَفَرُوا ثُمَّ أَخَذْتُهُمْ ۖ فَكَيْفَ كَانَ عِقَابِ

ಪೈಗಂಬರರೇ, ನಿಮಗಿಂತ ಮುಂಚಿನ ದೂತರುಗಳನ್ನೂ ಅವಹೇಳನಕ್ಕೆ ಗುರಿಪಡಿಸಲಾಗಿತ್ತು. ಆದರೆ ನಾನು ಧಿಕ್ಕಾರ ತೋರಿದ ಅಂತಹ ಜನರಿಗೆ ಕಾಲಾವಕಾಶ ನೀಡುತ್ತಿದ್ದೆನು. ನಂತರ ಶಿಕ್ಷಿಸಲು ಅವರನ್ನು ಹಿಡಿದಾಗ (ನೋಡಿರಿ) ಹೇಗಿತ್ತು ಆ ಶಿಕ್ಷೆಯ ಸ್ವರೂಪ! {32}

٣٣  أَفَمَنْ هُوَ قَائِمٌ عَلَىٰ كُلِّ نَفْسٍ بِمَا كَسَبَتْ ۗ وَجَعَلُوا لِلَّهِ شُرَكَاءَ قُلْ سَمُّوهُمْ ۚ أَمْ تُنَبِّئُونَهُ بِمَا لَا يَعْلَمُ فِي الْأَرْضِ أَمْ بِظَاهِرٍ مِنَ الْقَوْلِ ۗ بَلْ زُيِّنَ لِلَّذِينَ كَفَرُوا مَكْرُهُمْ وَصُدُّوا عَنِ السَّبِيلِ ۗ وَمَنْ يُضْلِلِ اللَّهُ فَمَا لَهُ مِنْ هَادٍ

ಒಬ್ಬಬ್ಬನೂ ಎಸಗುವ ಒಂದೊಂದೂ ಕೃತ್ಯವನ್ನು ವೀಕ್ಷಿಸುತ್ತಿರುವ ಆ ಅಲ್ಲಾಹ್ ನ ಬಗ್ಗೇಯೇ (ಇವರ ಈ ಧೋರಣೆ)? ಸಾಲದಕ್ಕೆ ಅಲ್ಲಾಹ್ ನಿಗೆ ಅವರು ಸಹದೇವರುಗಳನ್ನು ಕೂಡ ಕಲ್ಪಿಸಿಕೊಂಡಿದ್ದಾರೆ! [ನೀವು ಅಲ್ಲಾಹ್ ನಿಗೆ ಜೊತೆಗಾರರನ್ನಾಗಿ ಮಾಡಿಕೊಂಡವರಿಗೆ ದೇವರಾಗುವ ಅರ್ಹತೆಯೇನಾದರೂ ಇದ್ದರೆ] ಅದನ್ನಾದರೂ ಹೆಸರಿಸಿ; ಅಥವಾ ಈ ಭೂಮಿಯಲ್ಲಿ ಅಲ್ಲಾಹ್ ನಿಗೆ ತಿಳಿಯದ ಒಂದು ವಿಷಯವನ್ನು ನೀವು ಅವನಿಗೆ ತಿಳಿಸುತ್ತಿರುವಿರಾ? ಅಥವಾ ನೀವು ಹೇಳುತ್ತಿರುವುದು ತಿರುಳಿಲ್ಲದ ಬಾಯಿ ಮಾತುಗಳೇ? ಎಂದು ಪೈಗಂಬರರೇ ನೀವು ಅವರನ್ನು ಕೇಳಿ. ಹಾಗಲ್ಲ, (ಪೈಗಂಬರರೇ, ನಮ್ಮ ಬೋಧನೆಗಳನ್ನು) ತಿರಸ್ಕರಿಸಿದ ಈ ಜನರು (ಸತ್ಯವನ್ನು ಹತ್ತಿಕ್ಕಲು) ಹೂಡುತ್ತಿರುವ ತಂತ್ರೋಪಾಯಗಳನ್ನು ಅವರಿಗೆ ಚಂದವಾಗಿ ಕಾಣಿಸಲಾಗುತ್ತಿದೆಯಷ್ಟೆ! ಮಾತ್ರವಲ್ಲ, (ನಿರಂತರವಾಗಿ ಸತ್ಯವನ್ನು ಧಿಕ್ಕರಿಸಿದ ಕಾರಣಕ್ಕಾಗಿ) ಸರಿದಾರಿಯಿಂದ ಅವರನ್ನು ತಡೆಯಲಾಗಿದೆ. ಇನ್ನು ಯಾರನ್ನು ಅಲ್ಲಾಹ್ ನು ದಾರಿಗೆಡಿಸುತ್ತಾನೋ ಅವರಿಗೆ ಸರಿದಾರಿ ತೋರಿಸುವವರು ಯಾರೂ ಇಲ್ಲ. {33}

٣٤  لَهُمْ عَذَابٌ فِي الْحَيَاةِ الدُّنْيَا ۖ وَلَعَذَابُ الْآخِرَةِ أَشَقُّ ۖ وَمَا لَهُمْ مِنَ اللَّهِ مِنْ وَاقٍ

ಅವರಿಗೆ ಇಹಲೋಕ ಜೀವನದಲ್ಲೂ ಶಿಕ್ಷೆ ಇರುವುದು; ಮಾತ್ರವಲ್ಲ, ಪರಲೋಕದಲ್ಲಿ ಅವರಿಗಿರುವ ಶಿಕ್ಷೆ ಬಹಳ ಕಠಿಣ ಸ್ವರೂಪದ್ದು. ಅವರನ್ನು ಅಲ್ಲಾಹ್ ನ ಹಿಡಿತದಿಂದ ರಕ್ಷಿಸಲು ಯಾರೂ ಇರಲಾರರು. {34}

٣٥  مَثَلُ الْجَنَّةِ الَّتِي وُعِدَ الْمُتَّقُونَ ۖ تَجْرِي مِنْ تَحْتِهَا الْأَنْهَارُ ۖ أُكُلُهَا دَائِمٌ وَظِلُّهَا ۚ تِلْكَ عُقْبَى الَّذِينَ اتَّقَوْا ۖ وَعُقْبَى الْكَافِرِينَ النَّارُ

ಅಲ್ಲಾಹ್ ನ ಭಯಭಕ್ತಿಯೊಂದಿಗೆ ಜೀವಿಸಿದವರಿಗೆ ವಾಗ್ದಾನ ಮಾಡಲಾದ ಸ್ವರ್ಗೋದ್ಯಾನದ ಚಿತ್ರಣವೆಂದರೆ ಅದರ ಕೆಳಬದಿಯಲ್ಲಿ ಕಾಲುವೆಗಳು ಹರಿಯುತ್ತಲಿರುತ್ತವೆ! ಅಲ್ಲಿಯ ಭಕ್ಷ್ಯಗಳು ಶಾಶ್ವತ ಸರೂಪದ್ದು; ಅಲ್ಲಿನ ನೆರಳೂ ಶಾಶ್ವತ. ಭಯಭಕ್ತಿಯೊಂದಿಗೆ ಜೀವಿಸಿದವರ ತಲುಪುದಾಣವದು. ಹೌದು, ಧಿಕ್ಕಾರ ತೊರಿದವರ ತಲುಪುದಾಣ ನರಕವಾಗಿದೆ. {35}

٣٦  وَالَّذِينَ آتَيْنَاهُمُ الْكِتَابَ يَفْرَحُونَ بِمَا أُنْزِلَ إِلَيْكَ ۖ وَمِنَ الْأَحْزَابِ مَنْ يُنْكِرُ بَعْضَهُ ۚ قُلْ إِنَّمَا أُمِرْتُ أَنْ أَعْبُدَ اللَّهَ وَلَا أُشْرِكَ بِهِ ۚ إِلَيْهِ أَدْعُو وَإِلَيْهِ مَآبِ

ನಿಮಗೀಗ ಯಾವ ದಿವ್ಯಗ್ರಂಥ ನೀಡಲಾಗಿದೆಯೋ ಅದರ ಕುರಿತು, ನಾವು ಯಾರಿಗೆ (ಈ ಹಿಂದೆ) ದಿವ್ಯಗ್ರಂಥ ನೀಡಿದ್ದೆವೋ ಅವರು ಸಂತುಷ್ಟರಾಗಿರುವರು. ಆದರೆ ಅವರ ಗುಂಪುಗಳಿಗೆ ಸೇರಿದ ಕೆಲವರು ಅದರ ಕೆಲ ಭಾಗಗಳನ್ನು ಅಲ್ಲಗಳೆಯುತ್ತಾರೆ! ಓ ಪೈಗಂಬರರೇ, ನಾನು ಆರಾಧಿಸಬೇಕಾದುದು ಅಲ್ಲಾಹ್ ನನ್ನು ಮಾತ್ರ ಮತ್ತು ಆರಾಧಿಸುವಾಗ ಅವನೊಂದಿಗೆ ಇತರ ಮಿಥ್ಯ ದೇವರುಗಳನ್ನು ಸೇರಿಸಿಕೊಳ್ಳಬಾರದೆಂದು ನನ್ನನ್ನು ಆದೇಶಿಸಲಾಗಿದೆ; ನಾನು ಕರೆ ನೀಡುವುದು ಅವನತ್ತ; ಮತ್ತು ನಾನು ಮರಳಲಿರುವುದೂ ಅವನೆಡೆಗೇ ಆಗಿದೆಯೆಂದು ನೀವು ಅವರಿಗೆ ಸಾರಿರಿ. {36}

٣٧  وَكَذَٰلِكَ أَنْزَلْنَاهُ حُكْمًا عَرَبِيًّا ۚ وَلَئِنِ اتَّبَعْتَ أَهْوَاءَهُمْ بَعْدَمَا جَاءَكَ مِنَ الْعِلْمِ مَا لَكَ مِنَ اللَّهِ مِنْ وَلِيٍّ وَلَا وَاقٍ

ಹಾಗೆ ಕುರ್‌ಆನ್ ಅನ್ನು ನಾವು ಅರಬಿ ಭಾಷೆಯಲ್ಲಿರುವ ಒಂದು ಕಾನೂನು ಸಂಹಿತೆಯನ್ನಾಗಿ ಇಳಿಸಿರುತ್ತೇವೆ. ಆ ನಿಖರವಾದ ತಿಳುವಳಿಕೆ ನಿಮ್ಮ ಬಳಿಗೆ ಬಂದ ನಂತರ ನೀವು ಈ ಜನರ ಬಯಕೆಗಳಿಗೆ ಅನುಗುಣವಾಗಿ ನಡೆದರೆ, ಪೈಗಂಬರರೇ, ಅಲ್ಲಾಹ್ ನಿಗೆದುರಾಗಿ ನಿಮಗೆ ಸಹಾಯ ಮಾಡುವವರು ಯಾರೂ ಇರಲಾರರು; ರಕ್ಷಣೆ ನೀಡುವವರೂ ಇರಲಾರರು. {37}

٣٨  وَلَقَدْ أَرْسَلْنَا رُسُلًا مِنْ قَبْلِكَ وَجَعَلْنَا لَهُمْ أَزْوَاجًا وَذُرِّيَّةً ۚ وَمَا كَانَ لِرَسُولٍ أَنْ يَأْتِيَ بِآيَةٍ إِلَّا بِإِذْنِ اللَّهِ ۗ لِكُلِّ أَجَلٍ كِتَابٌ

ನಿಶ್ಚಯವಾಗಿಯೂ, (ಜನರನ್ನು ನಮ್ಮತ್ತ ಕರೆಯಲು) ನಿಮಗಿಂತ ಮುಂಚೆಯೂ ಹಲವು ದೂತರುಗಳನ್ನು ನಾವು ಕಳುಹಿಸಿದ್ದೆವು. ಮಾತ್ರವಲ್ಲ, ಅಂತಹ ದೂತರುಗಳಿಗೆ ಪತ್ನಿಯರನ್ನೂ ಸಂತಾನವನ್ನೂ ನಾವು ನೀಡಿದ್ದೆವು. ಅಲ್ಲಾಹ್ ನ ಅನುಮತಿಯ ಹೊರತು ಒಂದು ದೃಷ್ಟಾಂತವನ್ನು ಸ್ವಯಂ ತರಲು ಯಾವ ದೂತನಿಗೂ ಸಾಧ್ಯವಿರಲಿಲ್ಲ. [ಪೈಗಂಬರರೇ, ನೀವು ಈ ಜನರ ಯಾವ ಆಕ್ಷೇಪಗಳನ್ನೂ ಲೆಕ್ಕಿಸದಿರಿ. ಏಕೆಂದರೆ ನಮ್ಮ ಬಳಿ] ಪ್ರತಿಯೊಂದು ಕಾಲಾವಧಿಗೂ ಒಂದು ಲಿಖಿತ ಶಾಸನವಿದೆ. {38}

٣٩  يَمْحُو اللَّهُ مَا يَشَاءُ وَيُثْبِتُ ۖ وَعِنْدَهُ أُمُّ الْكِتَابِ

ಅದರಿಂದ ಅಳಿಸಬೇಕಾದುದನ್ನೂ ಉಳಿಸಬೇಕಾದುದನ್ನೂ ಅಲ್ಲಾಹ್ ನು ತನ್ನಿಚ್ಛೆಯಂತೆ ಮಾಡುತ್ತಿರುತ್ತಾನೆ. ಅದಲ್ಲದೆ ಅವನ ಬಳಿ ಮೂಲ ಗ್ರಂಥವೂ ಇದೆ. {39}

٤٠  وَإِنْ مَا نُرِيَنَّكَ بَعْضَ الَّذِي نَعِدُهُمْ أَوْ نَتَوَفَّيَنَّكَ فَإِنَّمَا عَلَيْكَ الْبَلَاغُ وَعَلَيْنَا الْحِسَابُ

ಈ ಜನರಿಗೆ (ಯಾವ ಶಿಕ್ಷೆಯ ಕುರಿತು) ಮುನ್ನೆಚ್ಚರಿಕೆ ನೀಡಲಾಗಿದೆಯೋ ಅದರ ಒಂದಂಶವನ್ನು ನೀವೂ ನೋಡುವಂತೆ ನಾವು ಮಾಡಬಹುದು. ಅಥವಾ (ಅದು ಸಂಭವಿಸುವ ಮುನ್ನವೇ) ನಾವು ನಿಮಗೆ ಮರಣ ನೀಡಬಹುದು. ಏನಿದ್ದರೂ, ಪೈಗಂಬರರೇ, ನಮ್ಮ ಸಂದೇಶ ತಲುಪಿಸುವುದಷ್ಟೇ ನಿಮ್ಮ ಹೊಣೆಗಾರಿಕೆ; ಅವರ ವಿಚಾರಣೆ ನಮಗೆ ಬಿಟ್ಟ ವಿಷಯ! {40}

٤١  أَوَلَمْ يَرَوْا أَنَّا نَأْتِي الْأَرْضَ نَنْقُصُهَا مِنْ أَطْرَافِهَا ۚ وَاللَّهُ يَحْكُمُ لَا مُعَقِّبَ لِحُكْمِهِ ۚ وَهُوَ سَرِيعُ الْحِسَابِ

ಈ (ಜನರ ಅಧಿಕಾರ - ನಿಯಂತ್ರಣಕ್ಕೊಳಪಟ್ಟಿದ್ದ) ಭೂಪ್ರದೇಶವನ್ನು ಎಲ್ಲಾ ಕಡೆಗಳಿಂದ ಕಿರಿದಾಗಿಸುತ್ತಾ ನಾವು ಸಾಗಿರುವುದನ್ನು ಇವರು ನೋಡುವುದಿಲ್ಲವೇ? ಹೌದು, ಅಲ್ಲಾಹ್ ನು ತೀರ್ಮಾನಿಸುವವನು; ಅವನ ತೀರ್ಮಾನಗಳನ್ನು ಹಿಂಪಡೆಯುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಮಾತ್ರವಲ್ಲ ಅವನು ಶೀಘ್ರಗತಿಯಲ್ಲಿ (ಇಂತಹ ಜನರ) ವಿಚಾರಣೆ ಮುಗಿಸುತ್ತಾನೆ! {41}

٤٢  وَقَدْ مَكَرَ الَّذِينَ مِنْ قَبْلِهِمْ فَلِلَّهِ الْمَكْرُ جَمِيعًا ۖ يَعْلَمُ مَا تَكْسِبُ كُلُّ نَفْسٍ ۗ وَسَيَعْلَمُ الْكُفَّارُ لِمَنْ عُقْبَى الدَّارِ

ಇವರಿಗಿಂತ ಹಿಂದೆ ಗತಿಸಿದ (ಇವರಂಥ) ಜನರು ಸಹ ಹಲವು ತಂತ್ರಗಳನ್ನು ಹೂಡಿದ್ದರು. ಆದರೆ (ನಿಮಗೆ ತಿಳಿದಿರಲಿ), ಸಕಲ ವಿಧ ತಂತ್ರಗಳೂ ಅಲ್ಲಾಹ್ ನಿಗೆ ಅಧೀನವಾಗಿವೆ. ಪ್ರತಿಯೊಬ್ಬ ವ್ಯಕ್ತಿಯೂ ಏನೆಲ್ಲ ಮಾಡುತ್ತಿರುವನೆಂದು ಅವನ ಅರಿವಿನಲ್ಲಿದೆ. ಇನ್ನು (ಪೈಗಂಬರರ ಕರೆಗೆ ಓಗೊಡುವ ಬದಲು ಅದನ್ನು) ಧಿಕ್ಕರಿಸಿದವರಿಗೆ, ಪರಲೋಕದ ಸುಖನಿವಾಸ ಯಾರ ಪಾಲಾಗುತ್ತದೆಂದು ಅತಿಶೀಘ್ರದಲ್ಲೇ ತಿಳಿಯಲಿದೆ. {42}

٤٣  وَيَقُولُ الَّذِينَ كَفَرُوا لَسْتَ مُرْسَلًا ۚ قُلْ كَفَىٰ بِاللَّهِ شَهِيدًا بَيْنِي وَبَيْنَكُمْ وَمَنْ عِنْدَهُ عِلْمُ الْكِتَابِ

[ನಿಮ್ಮ ಅವಿರತ ಬೋಧನೆಗಳನ್ನು ಆಲಿಸಿದ ನಂತರವೂ, ಓ ಪೈಗಂಬರರೇ] ನೀವು (ಅಲ್ಲಾಹ್ ನ ವಿತಿಯಿಂದ) ಕಳುಹಿಸಲ್ಪಟ್ಟ ದೂತರಲ್ಲ ಎಂದು ನಿಮ್ಮನ್ನು ನಿರಾಕರಿಸುವವರು ಹೇಳುತ್ತಿದ್ದಾರೆ. ಪೈಗಂಬರರೇ, ನೀವು ಅವರೊಂದಿಗೆ ಹೇಳಿ ಬಿಡಿರಿ: ನನ್ನ ಮತ್ತು ನಿಮ್ಮ ನಡುವೆ ಅಲ್ಲಾಹ್ ನ ಸಾಕ್ಷ್ಯ ಮತ್ತು ದಿವ್ಯಗ್ರಂಥದ ತಿಳುವಳಿಕೆ ಹೊಂದಿದವರ ಸಾಕ್ಷ್ಯವಿದ್ದರೆ ಅದಷ್ಟೇ ಸಾಕು! {43}

------------------------


Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...