ಅರಬಿ ಪಾರಿಭಾಷಿಕಗಳ ಲಿಪ್ಯಂತರಣ:
ಈ ಕೃತಿಯಲ್ಲಿ, ಕೆಲವು ಅರಬಿ ಪಾರಿಭಾಷಿಕಗಳನ್ನು
ಕನ್ನಡಕ್ಕೆ ಅನುವಾದ ಮಾಡುವ ಗೋಜಿಗೆ ಹೋಗದೆ ಕೇವಲ
ಲಿಪ್ಯಂತರಣ ಮಾಡಿ ಅವುಗಳನ್ನು ಮೂಲ ರೂಪದಪದಲ್ಲೇ ಇರಿಸಲಾಗಿದೆ. ಕೆಲವೊಂದು ಅರಬಿ ಶಬ್ಧಗಳಿಗೆ ಕನ್ನಡ
ಪರ್ಯಾಯವು ಇಲ್ಲದೇ ಇರುವ ಕಾರಣದಿಂದಲೂ ಹಾಗೆ ಮಾಡುವುದು ಅನುವಾದಕನ ಅನಿವಾರ್ಯ. ಇನ್ನು ಕೆಲವು ಪದಗಳನ್ನು
ಬಲವಂತವಾಗಿ ಅನುವಾದಿಸಲು ಪ್ರಯತ್ನಿಸಿದರೆ ಅಪಾರ್ಥ ಉಂಟಾಗುವ ಸಾಧ್ಯತೆಯೇ ಹೆಚ್ಚು. ಓದುಗರ ಅನುಕೂಲಕ್ಕಾಗಿ
ಅಂತಹ ಶಬ್ಧಗಳ ಒಂದು ಪಟ್ಟಿಯನ್ನು ಅರ್ಥವವಿರಣೆ ಸಮೇತ ಇಲ್ಲಿ ಶೀಘ್ರದಲ್ಲೇ ಸೇರಿಸಲಾಗುವುದು:
- ಅಲ್ಲಾಹ್: ಸಕಲ ಜಗತ್ತಿನ ಸೃಷ್ಟಿಕರ್ತನಾದ ಏಕಮೇವ ದೇವನ ಅಂಕಿತನಾಮವೇ ಅಲ್ಲಾಹ್. ಅಲ್ಲಾಹ್ ಎಂಬುದು ಅರಬಿ ಭಾಷೆಯ ಪದವಾದ್ದರಿಂದ ಅರಬಿಗಳೆಲ್ಲರೂ ಏಕಮೇವ ದೇವನನ್ನು ಅಲ್ಲಾಹ್ ಎಂದೇ ಸಂಬೋಧಿಸುತ್ತಾರೆ. ಅರಬ್ ಭೂಪ್ರದೇಶದಲ್ಲಿರುವ ಕ್ರೈಸ್ತರು ಮತ್ತು ಯಹೂದ್ಯರು ಸಾಮಾನ್ಯವಾಗಿ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸುತ್ತಾರೆ. ಕಾಪ್ಟಿಕ್ ಕ್ರೈಸ್ತರು ಉಪಯೋಗಿಸುವ ಅರಬಿ ಬೈಬಲ್ ನಲ್ಲಿ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸಲಾಗಿದೆ. ಕುರ್‌ಆನ್ ಗ್ರಂಥವು ಜಗತ್ತನ್ನು ಸೃಷ್ಟಿಸಿದ ದೇವನ ಅಂಕಿತನಾಮವಾಗಿ ಅಲ್ಲಾಹ್ ಎಂಬ ಪದವನ್ನೇ ಬಳಸಿದೆ. ಕುರ್‌ಆನ್ ಗಿಂತ ಮುಂಚಿನ ಕಾಲದಲ್ಲೂ ದೇವನನ್ನು ಉಲ್ಲೇಖಿಸಲು ಅಲ್ಲಾಹ್ ಎಂಬ ಪದವನ್ನು ಮುಸ್ಲಿಮರಲ್ಲದ ಸಾಮಾನ್ಯ ಅರಬರು, ಕ್ರೈಸ್ತರು, ಯಹೂದಿಗಳು ಮತ್ತಿತರು ಉಪಯೋಗಿಸುತ್ತಿದ್ದರು. ಅರಬ್ ಮುಸ್ಲಿಮರು ಮತ್ತು ಜಗತ್ತಿನ ಇತರೆಲ್ಲ ಕಡೆಗಲ್ಲಿರುವ ಮುಸ್ಲಿಮರು ದೇವನನ್ನು ಅಲ್ಲಾಹ್ ಎಂಬ ಅಂಕಿತನಾಮದಿಂದ ಕರೆಯುತ್ತಾರೆ. ಅಲ್ಲಾಹ್ ನನ್ನು ಮುಸ್ಲಿಮರ ಮಾತ್ರ ದೇವನಾಗಿ ತಿಳಿಯುವುದು ತಪ್ಪು ಗ್ರಹಿಕೆಯಾಗಿದೆ.
- ಮಲಕ್
- ಶಿರ್ಕ್: ಏಕಮೇವನಾದ ಅಲ್ಲಾಹ್ ನ ಏಕತ್ವಕ್ಕೆ ಧಕ್ಕೆ ತರುವ ಸಕಲ ರೀತಿಯ ಭಾವನೆ, ವರ್ತನೆ, ಆಚಾರ ಇತ್ಯಾದಿಗಳನ್ನು 'ಶಿರ್ಕ್' ಎಂದೂ ಅಂತಹ ಪ್ರಕ್ರಿಯೆಗಳಲ್ಲಿ ತೊಡಗಿರುವವರನ್ನು 'ಮುಶ್ರಿಕ್' ಎಂದೂ ಕುರ್‌ಆನ್ ನ ಪಾರಿಭಾಷಿಕೆಯಲ್ಲಿ ಹೇಳಲಾಗುತ್ತದೆ. ಕುರ್‌ಆನ್ ನ ಪ್ರಕಾರ ಅದು ಗುರುತರವಾದ ಪಾಪ, ಅಪರಾಧ ಹಾಗೂ ಅತಿ ದೊಡ್ಡ ಅತಿಕ್ರಮ; ಅಕ್ಷಮ್ಯ ಕೂಡ! ಅಲ್ಲಾಹ್ ನ ಏಕತ್ವವನ್ನು ವಿವರಿಸಲು ಉಪಯೋಗಿಸುವ ಪಾರಿಭಾಷಿಕೆ 'ತೌಹೀದ್' ಗೆ ತದ್ವಿರುದ್ಧವಾದ ಪದ 'ಶಿರ್ಕ್'.
- ಜಿನ್ನ್
- ಕುರ್‌ಆನ್: ಕುರ್‌ಆನ್ ಎಂಬುದು ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಓದಲ್ಪಡುವ ಒಂದು ಅಸಾಧಾರಣ ಗ್ರಂಥ. ಹೆಚ್ಚುಕಡಿಮೆ ಆರು ನೂರು ಪುಟಗಳಷ್ಟು ಬರುವ ಈ ಗ್ರಂಥ ಅತ್ಯಂತ ಸುಂದರವಾದ, ಸರಿಸಾಟಿಯಿಲ್ಲದ, ಶಾಸ್ತ್ರೀಯ ಅರಬಿ ಭಾಷೆಯಲ್ಲಿದೆ. ಕ್ರಿ. ಶ. 610 ರಲ್ಲಿ ಪ್ರಾರಂಭವಾಗಿ ಮುಂದಿನ 23 ವರ್ಷಗಳಷ್ಟು ಕಾಲ ಹಂತ ಹಂತವಾಗಿ, ಕಾಲದ ಬೇಡಿಕೆಗೆ ತಕ್ಕಂತೆ ಅದರ ವಚನಗಳನ್ನು ಪೈಗಂಬರ್ ಮುಹಮ್ಮದ್ ರಿಗೆ ಕಳುಹಿಸಲಾಗುತ್ತಿತ್ತು. ಅದರಲ್ಲಿರುವ ಎಲ್ಲ 114 ಅಧ್ಯಾಯಗಳೂ ಸರ್ವ ಸಂಪೂರ್ಣವಾಗಿ ಅಲ್ಲಾಹ್ ನ ಮಾತುಗಳಲ್ಲಿವೆ. ಅದರಲ್ಲಿರುವ ಆದೇಶ, ನಿರ್ದೇಶ, ನೀತಿ, ನಿಯಮಗಳು, ಸೂಚನೆಗಳು, ಎಚ್ಚರಿಕೆಗಳು, ಶುಭ ಸುದ್ದಿ, ಅಲ್ಲಾಹ್ ನು ಮಾಡಿದ ವಾಗ್ದಾನಗಳು ಮುಂತಾದ ಸಕಲ ವಿಷಯಗಳನ್ನು ಮಲಕ್ ಗಳಲ್ಲಿ ಶ್ರೇಷ್ಠರಾದ ಜಿಬ್ರೀಲ್ (The Archangel Gabriel) ಎಂಬವರ ಮೂಲಕ ಅಲ್ಲಾಹ್ ನು ಪೈಗಂಬರರ ಬಳಿಗೆ ಕಳುಹಿಸುತ್ತಿದ್ದನು. ಅದರ ಸಂರಕ್ಷಣೆ ಹೊಣೆಯನ್ನು ಸ್ವತಃ ಅಲ್ಲಾಹ್ ನು ಹೊತ್ತಿರುವನು. ಆದ್ದರಿಂದಲೇ ಅದು ಮಾರ್ಪಾಡನ್ನೇ ಕಾಣದ, ಹದಿನಾಲ್ಕು ಶತಮಾನಗಳಲ್ಲಿ ಒಂದಕ್ಷರವೂ ಬದಲಾಗದ, ಬದಲಾಯಿಸಲು ಸಾಧ್ಯವಿಲ್ಲದ ಒಂದು ಕಾಲಾತೀತ ಗ್ರಂಥವಾಯಿತು. ಕುರ್‌ಆನ್ ನಲ್ಲಿರುವ ಒಂದು ಚಿಕ್ಕ ಅಧ್ಯಾಯಕ್ಕೆ ತುಲ್ಯವಾದ ಮತ್ತೊಂದು ಅಧ್ಯಾಯವನ್ನು ಯಾರಿಗಾದರೂ ರಚಿಸಲು ಸಾಧ್ಯವಾದರೆ ರಚಿಸಿ ತನ್ನಿ ಎಂದು ಅದು ಸವಾಲೊಡ್ಡುತ್ತದೆ; ಅದಕ್ಕಾಗಿ ಯಾರ ಸಹಾಯವನ್ನು ಬೇಕಾದರೂ ಪಡೆದುಕೊಳ್ಳಬಹುದು ಎಂದೂ ಅದು ಸಾರುತ್ತದೆ. ಸೋಜಿಗವೆಂದರೆ ಆ ಸವಾಲು ಇಂದಿಗೂ ಪ್ರಾಬಲ್ಯದಲ್ಲಿದೆ!
ಕುರ್‌ಆನ್ ನ ಪ್ರಧಾನ ವಿಷಯವೆಂದರೆ 'ಮನುಷ್ಯ' ಮತ್ತು 'ಮನುಷ್ಯನ ಪರಲೋಕ ಜೀವನ'. ಮುನುಷ್ಯನು ಸಾವಿನ ಸವಿಯುಣ್ಣಲೇ ಬೇಕು; ಅವನು ಬದುಕಿರುವ ಈ ಲೋಕವನ್ನೂ ಒಂದು ದಿನ ನಾಶಪಡಿಸಲಾಗುವುದು. ಆದರೆ ಅಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ, ಮರಣವು ಜೀವನದ ಕೊನೆಯಲ್ಲ; ಬದಲಾಗಿ ಮನುಷ್ಯನನ್ನು ಪುನಃ ಜೀವಂತಗೊಳಿಸಿ ಪರಲೋಕದಲ್ಲಿ ಎಬ್ಬಿಸಲಾಗುವುದು ಎಂದು ಕುರ್‌ಆನ್ ತನ್ನ ಓದುಗನಿಗೆ ಮನದಟ್ಟು ಮಾಡಿಸುತ್ತದೆ. ಭೂಲೋಕದಲ್ಲಿನ ಅವನ ಸದಾಚಾರ ಸತ್ಕರ್ಮಗಳಿಗೆ ಸತ್ಫಲವಾಗಿ ಸ್ವರ್ಗೋದ್ಯಾನಗಳಲ್ಲಿ ಶಾಶ್ವತ ಸ್ವರೂಪದ ವಿಲಾಸೀ ಜೀವನವನ್ನೂ, ಅವನ ದುರಾಚಾರ ದುಷ್ಕರ್ಮಗಳಿಗೆ ದುಷ್ಫಲವಾಗಿ ನಿರಂತರ ನರಕಯಾತನೆಯನ್ನೂ ನೀಡಲಾಗುವುದು ಎಂಬುದು ಕುರ್‌ಆನ್ ನ ಮೂಲ ಮಂತ್ರವಾಗಿದೆ.
ಮನುಷ್ಯರ ಪಾರಲೌಕಿಕ ವಿಜಯಕ್ಕೆ ಕುರ್‌ಆನ್ ಒತ್ತುಕೊಡುತ್ತದೆ; ಅದನ್ನು ಸಾಧಿಸಲು ಯಾವ ನಿಬಂಧನೆಗಳನ್ನು ಭೂಲೋಕದಲ್ಲಿ ಅಗತ್ಯವಾಗಿ ಪಾಲಿಸಬೇಕು ಎಂದು ಅತ್ಯಂತ ಸರಳವಾಗಿ ತಿಳಿಸುತ್ತದೆ. ಅದರಂತೆ ಅಲ್ಲಾಹ್ ನು, ಮನುಷ್ಯರ ಮತ್ತು ಇಡೀ ಪ್ರಪಂಚದ ಸೃಷ್ಟಿಕರ್ತ, ಪರಿಪಾಲಕ ಹಾಗೂ ಏಕೈಕ ಜಗನ್ನಿಯಾಮಕ. ಏಕಮೇವನಾದ ಆ ಅಲ್ಲಾಹ್ ನು ಮಾತ್ರ ಆರಾಧಿಸಿಕೊಳ್ಳಲು ಅರ್ಹನಾಗಿರುತ್ತಾನೆ. ಅವನ ಹೊರತು ಉಳಿದೆಲ್ಲವೂ ಅವನ ಸೃಷ್ಟಿಗಳು. ಆದ್ದರಿಂದ ಸೃಷ್ಟಿಕರ್ತನಾದ ಆ ಅಲ್ಲಾಹ್ ನನ್ನು ಮಾತ್ರ ಆರಾಧಿಸುವುದೇ ಪರಲೋಕ ವಿಜಯಕ್ಕಿರುವ ಏಕೈಕ ಹಾದಿ. ವಿಗ್ರಹಾರಾಧನೆ, ಬಹುದೇವಾರಾಧನೆಗಳಂತಹ ಸಲ್ಲದ ಆಚರಣೆಗಳನ್ನು ಕುರ್‌ಆನ್ ವಿರೋಧಿಸುತ್ತದೆ; ಪ್ರಬಲವಾಗಿ ಖಂಡಿಸುತ್ತದೆ ಮತ್ತು ಅದನ್ನು ಅಕ್ಷಮ್ಯವಾದ ಅಪರಾಧವೆಂದು ಸಾರುತ್ತದೆ. ಮಾನವನ ಮರಣಾನಂತರದ ಪರಲೋಕ ಜೀವನದಲ್ಲಿ ಶಾಶ್ವತ ವಿಜಯ ಸಾಧಿಸಬೇಕಾದರೆ ಭೂಲೋಕದಲ್ಲಿ ಅಲ್ಲಾಹ್ ನ ಆದೇಶಗಳಿಗೆ ಅನುಗುಣವಾಗಿ ಹೇಗೆ ಜೀವಿಸಬೇಕು ಎಂಬ ಪಾಠವನ್ನು ಕುರ್‌ಆನ್ ಸಾದ್ಯಂತ ಬೋಧಿಸುತ್ತದೆ!
- ಮೂಮಿನ್
- ಜಿಬ್ರೀಲ್: ಮಲಕ್ ವರ್ಗದವರಲ್ಲಿಯೇ ಬಹಳ ಮಹತ್ವಪೂರ್ಣ ಹಾಗೂ ಗೌರ್ವಾನ್ವಿತರಾದ ಒಬ್ಬ ಹಿರಿಯ ಮಲಕ್. ಇಸ್ಲಾಮ್ ನಂತೆಯೇ ಕ್ರೈಸ್ತ ಹಾಗೂ ಯಹೂದಿ ಧರ್ಮಗಳು ಈ ಹಿರಿಯ ಮಲಕ್ ಜಿಬ್ರೀಲ್ ಗೆ ಮಹತ್ವ ಕಲ್ಪಿಸುತ್ತವೆ. ಅಲ್ಲಾಹ್ ನು ಮನುಷ್ಯರ ಮಾರ್ಗದರ್ಶನಕ್ಕಾಗಿ ನಿಯೋಗಿಸಿದ ಸಕಲ ಪ್ರವಾದಿಗಳಿಗೆ, ಅಂದರೆ ಹೆಚ್ಚು ಕಡಿಮೆ ಒಂದೂಕಾಲು ಲಕ್ಷದಷ್ಟಿರುವ ಪ್ರವಾದಿಗಳಿಗೆ, ದಿವ್ಯ ಸಂವಹನ ಮಾಡುತ್ತಿದ್ದುದು ಜಿಬ್ರೀಲ್ ನ ಮೂಲಕವೇ ಆಗಿತ್ತು. ಪ್ರವಾದಿಗಳ ಬಳಿಗೆ ಧರ್ಮಗ್ರಂಥಗಳು ಮತ್ತು ಇತರ ದಿವ್ಯ ಬೋಧನೆಗಳನ್ನು ತರುತ್ತಿದ್ದವರು ಇವರೇ. ವೈಭವಯುತ ಕುರ್‌ಆನ್ ಗ್ರಂಥವನ್ನು ಅಗತ್ಯಕ್ಕೆ ತಕ್ಕಂತೆ ಹಂತ ಹಂತವಾಗಿ ಒಟ್ಟು 23 ವರ್ಷಗಳಲ್ಲಿ ಆಲ್ಲಾಹ್ ನ ಆದೇಶದಂತೆ ಪೈಗಂಬರ್ ಮುಹಮ್ಮದ್ ರಿಗೆ ತಲಪಿಸಿದವರು ಸಹ ಜಿಬ್ರೀಲ್ ರೇ ಆಗಿದ್ದರು.
- ಇಸ್ರಾಈಲ್
- ಬನೀ ಇಸ್ರಾಈಲ್
- ಕಅಬಃ
- ಕುರೈಶ್
- ಮಕ್ಕಃ
- ಮುಶ್ರಿಕ್: ಏಕಮೇವನಾದ ಅಲ್ಲಾಹ್ ನ ಏಕತ್ವಕ್ಕೆ ಧಕ್ಕೆ ತರುವ ಸಕಲ ರೀತಿಯ ಭಾವನೆ, ವರ್ತನೆ, ಆಚಾರ ಇತ್ಯಾದಿಗಳನ್ನು 'ಶಿರ್ಕ್' ಎಂದೂ ಅಂತಹ ಪ್ರಕ್ರಿಯೆಗಳಲ್ಲಿ ತೊಡಗಿರುವವರನ್ನು 'ಮುಶ್ರಿಕ್' ಎಂದೂ ಕುರ್‌ಆನ್ ನ ಪಾರಿಭಾಷಿಕೆಯಲ್ಲಿ ಹೇಳಲಾಗುತ್ತದೆ. ಕುರ್‌ಆನ್ ನ ಪ್ರಕಾರ ಅದು ಗುರುತರವಾದ ಪಾಪ, ಅಪರಾಧ ಹಾಗೂ ಅತಿ ದೊಡ್ಡ ಅತಿಕ್ರಮ; ಅಕ್ಷಮ್ಯ ಕೂಡ!
- ದೀನ್: ಮುಖ್ಯವಾಗಿ 'ಧರ್ಮ' ಅರ್ಥಾತ್ 'ಇಸ್ಲಾಮ್ ಧರ್ಮ' ಎಂಬ ಅರ್ಥದಲ್ಲಿ ಉಪಯೋಗಿಸಿದ್ದರೂ 'ದೀನ್' ಅಥವಾ 'ಅಲ್-ದೀನ್' (ಉಚ್ಛರಿಸುವಾಗ 'ಅದ್ದೀನ್') ಎಂಬುದಕ್ಕೆ ಅನೇಕ ಅರ್ಥ ಮತ್ತು ವ್ಯಾಖ್ಯಾನಗಳಿವೆ. ಸಂದರ್ಭಕ್ಕನುಸಾರ ಇದು ವಿವಿಧ ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ.
- ವಹೀ: ಸೃಷ್ಟಿಕರ್ತನಾದ ಅಲ್ಲಾಹ್ ನು ಜಿಬ್ರೀಲ್ ಎಂಬ ಮಲಕ್ (Archangel Gabriel) ನ ಮೂಲಕ ಪ್ರವಾದಿಗಳಿಗೆ ನೀಡುವ ಸಂದೇಶ ಅಥವಾ ದಿವ್ಯಬೋಧನೆಗೆ ಕುರ್‌ಆನ್ ನ ಭಾಷೆಯಲ್ಲಿ ವಹೀ ಎನ್ನಲಾಗಿದೆ. ಪವಿತ್ರ ಕುರ್‌ಆನ್ ನಲ್ಲಿರುವ ಎಲ್ಲ ನೂರ ಹದಿನಾಲಕ್ಕು ಅಧ್ಯಾಯಗಳು, ಮತ್ತು ಆ ಅಧ್ಯಾಯಗಳಲ್ಲಿರುವ ಪ್ರತಿ ಪದವೂ ವಹೀ ಮೂಲಕವೇ ಮುಹಮ್ಮದ್ ಪೈಗಂಬರರಿಗೆ ಅಲ್ಲಾಹ್ ನು ಕಳುಹಿಸಿ ಕೊಟ್ಟಿರುವನು. ಅದಕ್ಕಿಂತ ಮುಂಚಿನ ಕಾಲಗಳಲ್ಲೂ ಪ್ರವಾದಿಗಳಿಗೆ ವಹೀ ಮೂಲಕವೇ ಅಲ್ಲಾಹ್ ನು ಸಂದೇಶಗಳನ್ನು ಕಳುಹಿಸುತ್ತಿದ್ದನು. ಉದಾಹರೆಣೆಗೆ ಪ್ರವಾದಿಗಳಾದ ಮೋಸೆಸ್, ಕಿಂಗ್ ಡೆವಿಡ್ ಮತ್ತು ಏಸು ಕ್ರಿಸ್ತರವರ ಬಳಿಗೆ ಏಂಜೆಲ್ ಗೇಬ್ರಿಯಲ್ (ಅರಬಿ: ಜಿಬ್ರೀಲ್) ವಹೀ ತಲುಪಿಸಲು ಬರುತ್ತಿದ್ದ ವಿಷಯ ಪವಿತ್ರ ಗ್ರಂಥಗಳಾದ ತೋರಾ ಮತ್ತು ಬೈಬಲ್ ಗಳಲ್ಲಿ ಉಲ್ಲೇಖವಾಗಿದೆ.
- ಝಕಾತ್: ಝಕಾತ್ ಇಸ್ಲಾಮ್ ಧರ್ಮದ ಬುನಾದಿಗಳಲ್ಲೊಂದು. ಆರಾಧನೆಗಳಲ್ಲಿ ನಮಾಝ್ ನ ನಂತರ ಬರುವುದೇ ಝಕಾತ್. ಇದು ಧನಿಕ ಮುಸ್ಲಿಮರು ಕಡ್ಡಾಯವಾಗಿ ಬಡ ಮತ್ತು ಅರ್ಹ ಜನರಿಗೆ ನೀಡಬೇಕಾದ ಸಹಾಯ. ಮುಸ್ಲಿಮರು ಒಂದು ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿದ್ದರೆ ಝಕಾತ್ ನ ಸಂಗ್ರಹ ಮತ್ತು ವಿತರಣಾ ಕಾರ್ಯ ಸರಕಾರೀ ಮಟ್ಟದಲ್ಲಿ ನಡೆಯುತ್ತದೆ. ಅಂತಹ ವ್ಯವಸ್ಥೆ ಇಲ್ಲದಿರುವಾಗ ಮುಸ್ಲಿಮರು ವೈಯಕ್ತಿಕವಾಗಿ ಅದನ್ನು ಅನುಷ್ಠಾನಿಸಬೇಕು. ಝಕಾತ್ ನ ಮೂಲಕ ಸಂಗರಹವಾದ ಮೊತ್ತವನ್ನು ಭತ್ಯೆ ರೂಪದಲ್ಲಿ ಪೈಗಂಬರರ ಆಡಳಿತವು ಹೇಗೆ ಜನಪರ ಕಾರ್ಯಗಳಿಗಾಗಿ ವ್ಯಯಿಸಬೇಕು ಎಂಬುದನ್ನು ಕುರ್‌ಆನ್ ನ ಒಂಬತ್ತನೆಯ ಸೂರಃ ದ ಅರವತ್ತನೆಯ ವಚನದಲ್ಲಿ (9:60) ವಿವರಿಸಲಾಗಿದೆ. ಉಳಿತಾಯ, ಚಿನ್ನಬೆಳ್ಳಿ, ಜಾನುವಾರುಗಳು, ಕೃಷ್ಯುತ್ಪನ್ನ ಮುಂತಾದವುಗಳ ಮೇಲಿನ ಝಕಾತ್ ದರವನ್ನು ಪೈಗಂಬರರು ತಮ್ಮ ಅನುಯಾಯಿಗಳಿಗೆ ಬೋಧಿಸಿರುತ್ತಾರೆ. ಮುಸ್ಲಿಮರು ಅದನ್ನೇ ಅನುಸರಿಸುತ್ತಾರೆ; ಅನುಸರಿಸಬೇಕು.
- ಕುಫ್ಫಾರ್: ಸತ್ಯವು ಚೆನ್ನಾಗಿ ಮನವರಿಕೆಯಾದ ನಂತರವೂ ಅದನ್ನು ತಿರಸ್ಕರಿಸಿದವರು; ಸತ್ಯವನ್ನು ಬೇಕಂತಲೇ ಬಚ್ಚಿಟ್ಟವರು; ಅಲ್ಲಾಹ್ ನ ಪ್ರವಾದಿಗಳ ಕರೆಯನ್ನು ಧಿಕ್ಕರಿಸಿದವರು; ಸೃಷ್ಟಿಕರ್ತನಿಗೇ ಎದುರು ನಿಲ್ಲುವ ದಾರ್ಷ್ಟ್ಯ ತೋರಿದವರು; ಪೈಗಂಬರರ ಬೋಧನೆಗಳನ್ನು ಉದ್ಧಟತನದಿಂದ ಹಂಗಿಸಿದವರು ಎಂಬೀ ಅರ್ಥಗಳಲ್ಲಿ ಕುರ್‌ಆನ್ ಈ ಪಾರಿಭಾಷಿಕೆಯನ್ನು ಬಳಸಿದೆ. ಇದು ಅಲ್ ಕಾಫಿರ್ ಎಂಬ ಪದದ ಬಹುವಚನ ರೂಪ. ಕೇವಲ ಮುಸ್ಲಿಮೇತರರು ಎಂಬ ಅರ್ಥದಲ್ಲಿ ಕಾಫಿರ್ ಮತ್ತು ಕುಫ್ಫಾರ್ ಪದಗಳನ್ನು ಇಲ್ಲಿ ಬಳಸಲಾಗಿಲ್ಲ.
بســـــم الله الرحمـــــن الرحيـــــم
ಆದರಣೀಯ ಕುರ್‌ಆನ್ ನ ಮೊತ್ತಮೊದಲ
ವಚನವಾದ ಬಿಸ್ಮಿಲ್ಲಾಹಿ ಅರ್-ರಹ್ಮಾನ್ ಅರ್-ರಹೀಮ್ [ಅಥವಾ ಕೂಡಿಸಿ ಓದುವಾಗ, ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್] ಎಂಬ ಚಿಕ್ಕ ನುಡಿಯನ್ನೂ
ಯಥಾವತ್ತಾಗಿ ಭಾಷಾಂತರಿಸುವುದು ಕಷ್ಟವೇ. ಆದರೆ ಅದರ ಅರ್ಥವನ್ನು ಕನ್ನಡದಲ್ಲಿ ಮೂಡಿಸುವಂತೆ ಮಾಡಿದ
ಒಂದು ಪ್ರಯತ್ನವನ್ನು ಇಲ್ಲಿ ಕಾಣಬಹುದು:
001 ಅಲ್ಲಾಹ್ ನ ನಾಮದೊಂದಿಗೆ (ನಾನು
ಆರಂಭಿಸುವೆ); ಅವನು ಪರಮಾವಧಿ ದಯಾಮಯನೂ ನಿತ್ಯ
ಕಾರುಣ್ಯವಂತನೂ ಆಗಿರುವನು!
002 ಅಪಾರ ದಯಾಳುವೂ ನಿತ್ಯ ಕಾರುಣ್ಯವಂತನೂ
ಆಗಿರುವ ಅಲ್ಲಾಹನ ನಾಮದೊಂದಿಗೆ (ಆರಂಭಿಸುತ್ತೇನೆ)!
003 ಪರಮ ಕಾರುಣ್ಯವಂತನೂ ಸಾದ್ಯಂತ
ದಯಾಮಯಿಯೂ ಆದ ಅಲ್ಲಾಹ್ ನ ನಾಮದೊಂದಿಗೆ (ಓದಲಾರಂಭಿಸುವೆ)!
004 ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ
ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!
005 ಅಲ್ಲಾಹ್ ನ ನಾಮದೊಂದಿಗೆ (ಪ್ರಾರಂಭಿಸುವೆ);
ಅವನು ಅಪಾರವಾಗಿ ದಯೆ ತೋರುವವನು, ಅವನ ಕಾರುಣ್ಯವು ಚಿರಂತನವಾದುದು!
006 ಅಲ್ಲಾಹ್ ನ ಹೆಸರಿನೊಂದಿಗೆ
(ಆರಂಭಿಸುವೆ); ಅವನು ಪರಮಾವಧಿ ದಯಾಮಯ,
ನಿತ್ಯ ಕಾರುಣ್ಯವಂತ!
007 ಅಲ್ಲಾಹ್ ನ ಹೆಸರಿನೊಂದಿಗೆ
(ಆರಂಭಿಸುವೆ); ಅವನು ಧಾರಾಳ ದಯೆ ತೋರುವವನು,
ಅವನ ಕಾರುಣ್ಯವು ಶಾಶ್ವತ!
008 ಅಲ್ಲಾಹ್ ನ ಹೆಸರಿನೊಂದಿಗೆ
(ಆರಂಭಿಸುವೆ); ಅವನು ಮಹಾ ಕರುಣಾಮಯಿ,
ಅವನ ಕಾರುಣ್ಯವು ಶಾಶ್ವತ!
009 ಅಲ್ಲಾಹ್ ನ ಹೆಸರಿನೊಂದಿಗೆ
(ಆರಂಭಿಸುವೆ), ಅವನು ಅತ್ಯಧಿಕ ದಯೆ ತೋರುವವನು
ಮತ್ತು ಶಾಶ್ವತವಾದ ಕರುಣೆಯುಳ್ಳವನು!
010 ಅಲ್ಲಾಹ್ ನ ಹೆಸರಿನೊಂದಿಗೆ,
ಅವನು ಅತಿಹೆಚ್ಚು ಕರುಣೆಯುಳ್ಳವನು ಮತ್ತು ನಿರಂತರ ಕರುಣೆ
ತೋರುವವನು!
011 ಅಲ್ಲಾಹ್ ನ ಹೆಸರಿನೊಂದಿಗೆ,
ಅವನು ತುಂಬಾ ಕರುಣೆ ತೋರುವವನೂ ಕರುಣೆ ತೋರುತ್ತಲೇ ಇರುವವನೂ
ಆಗಿರುವನು!
012 ಅಲ್ಲಾಹ್ ನ ನಾಮದೊಂದಿಗೆ,
ಅವನು ಅಸಾಧಾರಣ ದಯಾಮಯಿ ಹಾಗೂ ಸದಾ ಕರುಣೆ ತೋರುವವನು!
013 ಅತ್ಯಂತ ದಯಾಮಯನೂ ನಿತ್ಯ ಕಾರುಣ್ಯವಂತನೂ
ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!
014 ಅಸಾಧಾರಣವಾದ ದಯೆಯುಳ್ಳವನೂ ಶಾಶ್ವತವಾದ
ಕರುಣೆಯುಳ್ಳವನೂ ಆದ ಅಲ್ಲಾಹ್ ನ ನಾಮದೊಂದಿಗೆ (ಆರಂಭಿಸುತ್ತೇನೆ)!
015 ಪರಮಾವಧಿ ದಯಾಮಯನೂ ನಿತ್ಯ ಕಾರುಣ್ಯವಂತನೂ
ಆಗಿರುವ ಅಲ್ಲಾಹ್ ನ ಹೆಸರಿನೊಂದಿಗೆ!
016 ಅಲ್ಲಾಹ್ ನ ಹೆಸರಿನೊಂದಿಗೆ –
ಅವನು ಅತಿ ಹೆಚ್ಚು ಕರುಣೆಯುಳ್ಳವನು; ನಿರಂತರ ಕರುಣೆ ತೋರುವವನು!
017 ಅಲ್ಲಾಹ್ ನ ಹೆಸರಿನೊಂದಿಗೆ
(ಆರಂಭಿಸುತ್ತೇನೆ); ಅವನು ಅತ್ಯಧಿಕ ದಯೆ ತೋರುವವನು,
ಶಾಶ್ವತವಾದ ಕರುಣೆಯುಳ್ಳವನು!
018 ಅಲ್ಲಾಹ್ ನ ಹೆಸರಿನೊಂದಿಗೆ,
ಅವನು ಅತಿಹೆಚ್ಚು ಕರುಣೆಯುಳ್ಳವನು ಮತ್ತು ನಿರಂತರ ಕರುಣೆ
ತೋರುವವನು!
019 ಅಲ್ಲಾಹ್ ನ ನಾಮದೊಂದಿಗೆ (ಪ್ರಾರಂಭಿಸುವೆ);
ಅವನು ಅಪಾರ ದಯೆ ತೋರುವವನು, ಅವನ ಕಾರುಣ್ಯವು ಚಿರಂತನ!
020 ಅಲ್ಲಾಹ್ ನ ಹೆಸರಿನೊಂದಿಗೆ,
ಅವನು ತುಂಬಾ ಕರುಣೆ ತೋರುವವನೂ ಸದಾ ಕರುಣೆ ತೋರುತ್ತಲೇ ಇರುವವನೂ ಆಗಿರುವನು!
-------------------