ಅಝ್‌ ಝುಮರ್ | ترجمة سورة الزمر

    تـرجمـة سورة الزمر من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت

سـهل الفهـم من غيـر الـرجـوع إلى كتاب التفسيـر

| ಸೂರಃ ಅಝ್‌ ಝುಮರ್  | ಪವಿತ್ರ ಕುರ್‌ಆನ್ ನ 39 ನೆಯ ಸೂರಃ | ಇದರಲ್ಲಿ ಒಟ್ಟು 75 ಆಯತ್ ಗಳು ಇವೆ |

ಅತ್ಯಂತ ದಯಾಮಯನೂ ನಿತ್ಯ ಕರುಣೆ ತೋರುವವನೂ ಆದ ಅಲ್ಲಾಹನ ನಾಮದಿಂದ (ಆರಂಭಿಸುವೆ)!

تَنْزِيلُ الْكِتَابِ مِنَ اللَّهِ الْعَزِيزِ الْحَكِيمِ

ಅತ್ಯಂತ ಪ್ರಬಲನೂ ವಿವೇಕಪೂರ್ಣನೂ ಅಲ್ಲಾಹ್ ನ ವತಿಯಿಂದ ಈ ಗ್ರಂಥವನ್ನು ಅವತೀರ್ಣಗೊಳಿಸಲಾಗುತ್ತಿದೆ. {1}

إِنَّا أَنْزَلْنَا إِلَيْكَ الْكِتَابَ بِالْحَقِّ فَاعْبُدِ اللَّهَ مُخْلِصًا لَهُ الدِّينَ

ಪೈಗಂಬರರೇ, ಸತ್ಯವನ್ನು ಒಳಗೊಂಡ ಇದನ್ನು ಖಂಡಿತವಾಗಿ ನಾವೇ ನಿಮಗೆ ಇಳಿಸಿಕೊಡುತ್ತಿದ್ದೇವೆ. ಆದ್ದರಿಂದ ಧಾರ್ಮಿಕ ನಿಷ್ಠೆಯನ್ನು ಸಂಪೂರ್ಣವಾಗಿ ನಿಷ್ಕಳಂಕಗೊಳಿಸಿ, ಅಲ್ಲಾಹ್ ನನ್ನು (ಮಾತ್ರ) ಆರಾಧಿಸಿರಿ. {2}

أَلَا لِلَّهِ الدِّينُ الْخَالِصُ ۚ وَالَّذِينَ اتَّخَذُوا مِنْ دُونِهِ أَوْلِيَاءَ مَا نَعْبُدُهُمْ إِلَّا لِيُقَرِّبُونَا إِلَى اللَّهِ زُلْفَىٰ إِنَّ اللَّهَ يَحْكُمُ بَيْنَهُمْ فِي مَا هُمْ فِيهِ يَخْتَلِفُونَ ۗ إِنَّ اللَّهَ لَا يَهْدِي مَنْ هُوَ كَاذِبٌ كَفَّارٌ

ಚೆನ್ನಾಗಿ ಅರಿತುಕೊಳ್ಳಿರಿ. ನಿಷ್ಕಳಂಕವಾದ ಧಾರ್ಮಿಕ ನಿಷ್ಠೆಯು ಅಲ್ಲಾಹ್ ನಿಗೆ ಮಾತ್ರ ಸಲ್ಲತಕ್ಕದ್ದಾಗಿದೆ. ಅಲ್ಲಾಹ್ ನನ್ನು ಬಿಟ್ಟು ಇತರರನ್ನು ತಮ್ಮ ರಕ್ಷಕರನ್ನಾಗಿ ಮಾಡಿಕೊಂಡವರು, ನಾವು ಅವರನ್ನು ಆರಾಧಿಸುವುದು, ಅವರು ನಮ್ಮನ್ನು ಅಲ್ಲಾಹ್ ನ ಸನ್ನಿಧಿಗೆ ಇನ್ನಷ್ಟು ಹತ್ತಿರಗೊಳಿಸುತ್ತಾರೆ ಎಂಬ ಉದ್ದೇಶದಿಂದ ಮಾತ್ರ ಎಂದು ವಾದಿಸುತ್ತಿದ್ದಾರೆ. ಈ ಜನರು ಯಾವ ವಿಷಯಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವರೋ, ಆ ವಿಷಯದಲ್ಲಿ ಖಂಡಿತವಾಗಿಯೂ ಅಲ್ಲಾಹ್ ನೇ ಅವರ ನಡುವೆ ತೀರ್ಪನ್ನು ನೀಡಲಿರುವನು. ಸುಳ್ಳುಗಾರರೂ ಸತ್ಯವನ್ನು ತೀವ್ರವಾಗಿ ಧಿಕ್ಕರಿಸುವವರೂ ಆದ ಯಾರಿಗೂ ಅಲ್ಲಾಹ್ ನು ಸರಿದಾರಿ ತೋರುವುದಿಲ್ಲ. {3}

لَوْ أَرَادَ اللَّهُ أَنْ يَتَّخِذَ وَلَدًا لَاصْطَفَىٰ مِمَّا يَخْلُقُ مَا يَشَاءُ ۚ سُبْحَانَهُ ۖ هُوَ اللَّهُ الْوَاحِدُ الْقَهَّارُ

ಒಂದು ವೇಳೆ ಅಲ್ಲಾಹ್ ನು ಒಬ್ಬ ಪುತ್ರನನ್ನು ಹೊಂದಲು ಬಯಸಿದ್ದರೆ, ತನ್ನ ಸೃಷ್ಟಿಗಳ ಪೈಕಿ ತಾನು ಇಚ್ಛಿಸಿದ್ದನ್ನು ಪುತ್ರನನ್ನಾಗಿ ಆರಿಸಿಕೊಳ್ಳುತ್ತಿದ್ದನು. ಆದರೆ ಅವನು ಪರಮಪಾವನನು! ಅವನೇ ಏಕಮಾತ್ರ ಅಲ್ಲಾಹನು; ಸರ್ವವನ್ನೂ ತನ್ನ ಸಂಪೂರ್ಣ ಅಧೀನದಲ್ಲಿಟ್ಟುಕೊಂಡು ಪ್ರಾಬಲ್ಯ ಮೆರೆಯುವವನು! {4}

خَلَقَ السَّمَاوَاتِ وَالْأَرْضَ بِالْحَقِّ ۖ يُكَوِّرُ اللَّيْلَ عَلَى النَّهَارِ وَيُكَوِّرُ النَّهَارَ عَلَى اللَّيْلِ ۖ وَسَخَّرَ الشَّمْسَ وَالْقَمَرَ ۖ كُلٌّ يَجْرِي لِأَجَلٍ مُسَمًّى ۗ أَلَا هُوَ الْعَزِيزُ الْغَفَّارُ

ಆಕಾಶಗಳನ್ನೂ ಭೂಮಿಯನ್ನೂ ಅವನು ಅತ್ಯಂತ ನಿಷ್ಕೃಷ್ಟವಾಗಿ ಸೃಷ್ಟಿಸಿರುವನು. ರಾತ್ರಿಯನ್ನು ಅವನು ಹಗಲಿನ ಮೇಲೆ ಸುತ್ತಿ ಹೊದಿಸಿರುವನು ಹಾಗೂ ಹಗಲನ್ನು ರಾತ್ರಿಯ ಮೇಲೆ ಸುತ್ತಿ ಹೊದಿಸಿರುವನು. ಸೂರ್ಯನನ್ನೂ ಚಂದ್ರನನ್ನೂ ಅವನು ಒಂದು ನಿಯಮಕ್ಕೆ ಅಧೀನಗೊಳಿಸಿರುವನು. ಅವುಗಳಲ್ಲಿ ಪ್ರತಿಯೊಂದೂ ಒಂದು ನಿಗದಿತ ಅವಧಿಯ ವರೆಗೆ ಚಲಿಸುತ್ತಿರುತ್ತವೆ. ಚೆನ್ನಾಗಿ ತಿಳಿದುಕೊಳ್ಳಿ! ಅವನು ಪರಮ ಪ್ರಬಲನೂ, (ಕ್ಷಮೆಯಾಚಿಸುವವರ ಪಾಲಿಗೆ) ಪದೇಪದೇ ಕ್ಷಮೆ ನೀಡುವವನೂ ಅಗಿರುವನು. {5}

خَلَقَكُمْ مِنْ نَفْسٍ وَاحِدَةٍ ثُمَّ جَعَلَ مِنْهَا زَوْجَهَا وَأَنْزَلَ لَكُمْ مِنَ الْأَنْعَامِ ثَمَانِيَةَ أَزْوَاجٍ ۚ يَخْلُقُكُمْ فِي بُطُونِ أُمَّهَاتِكُمْ خَلْقًا مِنْ بَعْدِ خَلْقٍ فِي ظُلُمَاتٍ ثَلَاثٍ ۚ ذَٰلِكُمُ اللَّهُ رَبُّكُمْ لَهُ الْمُلْكُ ۖ لَا إِلَٰهَ إِلَّا هُوَ ۖ فَأَنَّىٰ تُصْرَفُونَ

ಜನರೇ, ಅವನು ನಿಮ್ಮನ್ನು (ಅರ್ಥಾತ್ ಮನುಷ್ಯನನ್ನು, ಮೊದಲಿಗೆ) ಒಂದು ಜೀವದಿಂದ ಸೃಷ್ಟಿಮಾಡಿದನು. ನಂತರ ಅದರಿಂದಲೇ (ಅವನಿಗೊಂದು) ಸಂಗಾತಿಯನ್ನು ಸೃಷ್ಟಿಸಿದನು. ತದನಂತರ ಸಾಕಾಣಿಕೆಗೆ ಯೋಗ್ಯವಾದ ಎಂಟು ವಿಧದ ಜಾನುವಾರುಗಳನ್ನು [ಅಂದರೆ ಕುರಿ, ಮೇಕೆ, ಒಂಟೆ ಮತ್ತು ದನಗಳ ಹೆಣ್ಣು-ಗಂಡುಗಳೆಂಬ ಜೋಡಿಗಳನ್ನು] ಅವನು ನಿಮಗಾಗಿ ಒದಗಿಸಿದನು. ಅವನು ಈಗ ನಿಮ್ಮನ್ನು ನಿಮ್ಮ ತಾಯಂದಿರ ಗರ್ಭಗಳಲ್ಲಿ, ಮೂರು ಬಗೆಯ ಕತ್ತಲೆಗಳೊಳಗೆ, ಸೃಷ್ಟಿಕಾರ್ಯದ ಒಂದು ಹಂತದ ನಂತರ ಮತ್ತೊಂದರಂತೆ ಹಂತ ಹಂತವಾಗಿ ಸೃಷ್ಟಿಸುತ್ತಾನೆ. ಅವನೇ ಅಲ್ಲಾಹ್ ನು; ನಿಮ್ಮ ಪರಿಪಾಲಕನು! ಅಧಿಕಾರಾಧಿಪತ್ಯಗಳೆಲ್ಲವೂ ಅವನಿಗೇ ಸೇರಿದೆ. ಅವನ ಹೊರತು ಆರಾಧನೆಗೆ ಅರ್ಹನಾದ ಬೇರೆ ದೇವರಿಲ್ಲ. ಹಾಗಿರುವಾಗ, ನಿಮ್ಮನ್ನು ಎತ್ತಕಡೆಗೆ ದಾರಿ ತಪ್ಪಿಸಲಾಗುತ್ತಿದೆ? {6}

إِنْ تَكْفُرُوا فَإِنَّ اللَّهَ غَنِيٌّ عَنْكُمْ ۖ وَلَا يَرْضَىٰ لِعِبَادِهِ الْكُفْرَ ۖ وَإِنْ تَشْكُرُوا يَرْضَهُ لَكُمْ ۗ وَلَا تَزِرُ وَازِرَةٌ وِزْرَ أُخْرَىٰ ۗ ثُمَّ إِلَىٰ رَبِّكُمْ مَرْجِعُكُمْ فَيُنَبِّئُكُمْ بِمَا كُنْتُمْ تَعْمَلُونَ ۚ إِنَّهُ عَلِيمٌ بِذَاتِ الصُّدُورِ

ಒಂದು ವೇಳೆ ನೀವು ಕೃತಘ್ನತೆ ತೋರಿದರೆ, ನಿಮಗೆ ತಿಳಿದಿರಲಿ, ಸ್ವಯಂಪರ್ಯಾಪ್ತನಾದ ಅಲ್ಲಾಹನಿಗೆ ನಿಮ್ಮ ಯಾವ ಅಗತ್ಯವೂ ಇಲ್ಲ! ಆದರೂ, ತನ್ನ ದಾಸರು ಕೃತಘ್ನತೆ ತೋರುವುದನ್ನು ಅವನು ಅವರ ಪಾಲಿಗೆ ಇಷ್ಟಪಡುವುದಿಲ್ಲ. ಇನ್ನು, ನೀವು ಕೃತಜ್ಞತೆ ತೋರುವುದಾದರೆ, ನಿಮ್ಮ ಆ ನಿಲುವನ್ನು ಅವನು ನಿಮಗಾಗಿ ಮೆಚ್ಚುತ್ತಾನೆ. (ವಿಚಾರಣೆಯ ದಿನ) ಪಾಪದ ಹೊರೆಯನ್ನು ಹೊರುವ ಯಾವೊಬ್ಬನೂ ಮತ್ತೊಬ್ಬನ ಪಾಪದ ಹೊರೆಯನ್ನು ಹೊರಲಾರನು. ಕೊನೆಗೆ ನಿಮ್ಮೆಲ್ಲರ ಮರಳುವಿಕೆಯು ನಿಮ್ಮ ಒಡೆಯನ ಕಡೆಗೇ ಆಗಿರುವುದು. ಆಗ ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ನಿಮಗೆ ತಿಳಿಸಲಿರುವನು. ನಿಶ್ಚಯವಾಗಿಯೂ, ಹೃದಯಗಳಲ್ಲಿ ಅಡಗಿರುವ ವಿಷಯಗಳನ್ನೂ ಅವನು ಬಲ್ಲವನಾಗಿದ್ದಾನೆ! {7}

وَإِذَا مَسَّ الْإِنْسَانَ ضُرٌّ دَعَا رَبَّهُ مُنِيبًا إِلَيْهِ ثُمَّ إِذَا خَوَّلَهُ نِعْمَةً مِنْهُ نَسِيَ مَا كَانَ يَدْعُو إِلَيْهِ مِنْ قَبْلُ وَجَعَلَ لِلَّهِ أَنْدَادًا لِيُضِلَّ عَنْ سَبِيلِهِ ۚ قُلْ تَمَتَّعْ بِكُفْرِكَ قَلِيلًا ۖ إِنَّكَ مِنْ أَصْحَابِ النَّارِ

ಇನ್ನು ಮನುಷ್ಯನಿಗೆ ಸಂಕಷ್ಟವೇನಾದರೂ ಎದುರಾದರೆ ಅವನು ತನ್ನ ಪರಿಪಾಲಕನ ಕಡೆಗೆ ಮಾತ್ರವೇ ಸಂಪೂರ್ಣವಾಗಿ ತಿರುಗಿ, ಅವನಿಗೇ ಮೊರೆಯಿಡುತ್ತಾನೆ! ತದನಂತರ, ಅಲ್ಲಾಹನು ತನ್ನ ಕಡೆಯಿಂದ ಅವನಿಗೆ ಒಂದು ಅನುಗ್ರಹವನ್ನು ದಯಪಾಲಿಸಿ (ಆ ಸಂಕಷ್ಟವನ್ನು ನೀಗಿಸಿಬಿಟ್ಟಾಗ), ಅದಕ್ಕೂ ಮೊದಲು ಯಾವುದಕ್ಕಾಗಿ ಅವನು (ಅಲ್ಲಾಹನಿಗೆ) ಮೊರೆಯಿಟ್ಟಿದ್ದನೋ ಅದನ್ನು ಮರೆತೇ ಬಿಡುತ್ತಾನೆ. ಮಾತ್ರವಲ್ಲ, ಇತರ ಕೆಲವರನ್ನು ಅಲ್ಲಾಹ್ ನಿಗೆ (ಅವನ ದೇವತ್ವದಲ್ಲಿ) ಸಮಾನರು ಎಂದು ಕಲ್ಪಿಸಿಕೊಳ್ಳುತ್ತಾನೆ. ಆ ಮೂಲಕ ಅಲ್ಲಾಹ್ ನ ಮಾರ್ಗದಿಂದ ಜನರನ್ನು ದಾರಿತಪ್ಪಿಸುತ್ತಾನೆ. ಅಂತಹವನೊಂದಿಗೆ, ಪೈಗಂಬರರೇ, ನೀವು ಹೇಳಿರಿ: ನಿನ್ನ ಆ ಧಿಕ್ಕಾರದ ನಿಲುವಿನಲ್ಲೇ ಅಲ್ಪಕಾಲ ಸುಖವನ್ನು ಅನುಭವಿಸಿಕೋ; ಸಂಶಯಾತೀತವಾಗಿ ನೀನು ನರಕವಾಸಿಗಳ ಪೈಕಿ ಒಬ್ಬನಾಗಿರುವೆ! {8}

أَمَّنْ هُوَ قَانِتٌ آنَاءَ اللَّيْلِ سَاجِدًا وَقَائِمًا يَحْذَرُ الْآخِرَةَ وَيَرْجُو رَحْمَةَ رَبِّهِ ۗ قُلْ هَلْ يَسْتَوِي الَّذِينَ يَعْلَمُونَ وَالَّذِينَ لَا يَعْلَمُونَ ۗ إِنَّمَا يَتَذَكَّرُ أُولُو الْأَلْبَابِ

[ಅಲ್ಲಾಹನಿಗೆ ಸಮಾನರನ್ನು ಕಲ್ಪಿಸಿಕೊಳ್ಳುವ ಹಾಗೂ ಧಿಕ್ಕಾರದ ನಿಲುವನ್ನು ಹೊಂದಿರುವವನು ಶ್ರೇಷ್ಠನೋ, ಅಥವಾ], ಅಲ್ಲಾಹನಿಗೆ ನಿರಂತರ ವಿಧೇಯನಾಗಿ, ರಾತ್ರಿಯ ವಿವಿಧ ಸಮಯಗಳಲ್ಲಿ ಅವನಿಗೆ ಸಾಷ್ಟಾಂಗವೆರಗುತ್ತಲೂ ನಿಂತುಕೊಂಡು ಆರಾಧಿಸುತ್ತಲೂ, ಪರಲೋಕದ (ವಿಚಾರಣೆಯ) ಬಗ್ಗೆ ಭಯಪಡುತ್ತಲೂ ಮತ್ತು ತನ್ನ ಒಡೆಯನ ಕೃಪೆಯನ್ನು ನಿರೀಕ್ಷಿಸುತ್ತಲೂ ಇರುವವನು (ಶ್ರೇಷ್ಠನೋ)? ತಿಳುವಳಿಕೆ ಉಳ್ಳವರು ಮತ್ತು ತಿಳುವಳಿಕೆ ಇಲ್ಲದವರು ಸಮಾನರಾಗಲು ಸಾಧ್ಯವೇ - ಎಂದು, ಪೈಗಂಬರರೇ, ನೀವು ಕೇಳಿರಿ. ಬುದ್ಧಿ ಉಪಯೋಗಿಸಿ ವಿವೇಚಿಸುವವರು ಮಾತ್ರವೇ ಉಪದೇಶಗಳಿಂದ ಪಾಠ ಪಡೆಯುತ್ತಾರೆ. {9}

قُلْ يَا عِبَادِ الَّذِينَ آمَنُوا اتَّقُوا رَبَّكُمْ ۚ لِلَّذِينَ أَحْسَنُوا فِي هَٰذِهِ الدُّنْيَا حَسَنَةٌ ۗ وَأَرْضُ اللَّهِ وَاسِعَةٌ ۗ إِنَّمَا يُوَفَّى الصَّابِرُونَ أَجْرَهُمْ بِغَيْرِ حِسَابٍ

(ಪೈಗಂಬರರೇ, ನನ್ನ ವತಿಯಿಂದ ಇದನ್ನು) ಜನರಿಗೆ ತಿಳಿಸಿರಿ: ವಿಶ್ವಾಸಿಗಳಾದ ಓ ನನ್ನ ಉಪಾಸಕರೇ, ನಿಮ್ಮ ಪ್ರಭುವಿನ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಿ. ಇಹಲೋಕ ಜೀವನದಲ್ಲಿ ಒಳಿತು ಮಾಡುವವರಿಗೆ (ಇಹಲೋಕದಲ್ಲೂ ಪರಲೋಕದಲ್ಲೂ) ಒಳಿತೇ ದೊರೆಯಲಿದೆ. [ಇನ್ನು, ದುಷ್ಟರು ನಿಮ್ಮ ಬದುಕನ್ನು ದುಸ್ತರಗೊಳಿಸಿದ್ದಾರೆ ಎಂದಾದರೆ, ಹತಾಶರಾಗದಿರಿ. ಏಕೆಂದರೆ], ಅಲ್ಲಾಹನ ಭೂಮಿಯು ತುಂಬಾ ವಿಶಾಲವಾಗಿದೆ! ನಿಜವಾಗಿಯೂ, (ಅಲ್ಲಾಹ್ ನ ಮಾರ್ಗದಲ್ಲಿ ಸ್ಥೈರ್ಯ ಪಾಲಿಸುವ) ಸಹನಶೀಲರಿಗೆ ಅವರ ಪ್ರತಿಫಲವನ್ನು ಲೆಕ್ಕಾಚಾರ ಮಾಡದೆ, ಅಪರಿಮಿತವಾಗಿ ನೀಡಲಾಗುವುದು. {10}

قُلْ إِنِّي أُمِرْتُ أَنْ أَعْبُدَ اللَّهَ مُخْلِصًا لَهُ الدِّينَ

ಧಾರ್ಮಿಕ ನಿಷ್ಠೆಯನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ ಮೀಸಲಿಟ್ಟು, ನಾನು ಅವನನ್ನೇ ಆರಾಧಿಸಬೇಕೆಂದು ನನಗೆ ಆದೇಶಿಸಲಾಗಿದೆ ಎಂದು, ಪೈಗಂಬರರೇ, ನೀವು ಸಾರಿರಿ. {11}

وَأُمِرْتُ لِأَنْ أَكُونَ أَوَّلَ الْمُسْلِمِينَ

ಮಾತ್ರವಲ್ಲ, ಅಲ್ಲಾಹನಿಗೆ ಶರಣಾಗುವವರ ಪೈಕಿ (ಅಂದರೆ, ಮುಸ್ಲಿಮರಾಗುವವರ ಪೈಕಿ) ನಾನೇ ಮೊದಲಿಗನಾಗಬೇಕೆಂದೂ ನನಗೆ ಆಜ್ಞಾಪಿಸಲಾಗಿದೆ. {12}

قُلْ إِنِّي أَخَافُ إِنْ عَصَيْتُ رَبِّي عَذَابَ يَوْمٍ عَظِيمٍ

ಒಂದು ವೇಳೆ ನಾನು ನನ್ನ ಪರಿಪಾಲಕನಾದ (ಅಲ್ಲಾಹ್ ನ) ಆಜ್ಞೆಯನ್ನು ಉಲ್ಲಂಘಿಸಿದರೆ, (ಕರ್ಮಗಳಿಗೆ ಪ್ರತಿಫಲ ನೀಡಲಾಗುವ) ಆ ಮಹಾನ್ ದಿನದ ಶಿಕ್ಷೆಯ ಬಗ್ಗೆ ನನಗೆ ನಿಜವಾಗಿಯೂ ಭಯವಾಗುತ್ತದೆ ಎಂದು ಪೈಗಂಬರರೇ, ಜನರಿಗೆ ತಿಳಿಸಿರಿ. {13}

قُلِ اللَّهَ أَعْبُدُ مُخْلِصًا لَهُ دِينِي

ಧಾರ್ಮಿಕ ನಿಷ್ಠೆಯನ್ನು ಸಂಪೂರ್ಣವಾಗಿ ಅಲ್ಲಾಹ್ ನಿಗೆ ಮೀಸಲಿಟ್ಟು ನಾನು ಮಾತ್ರ ಅವನನ್ನೇ ಆರಾಧಿಸುತ್ತೇನೆ ಎಂದು ಸಾರಿರಿ. {14}

فَاعْبُدُوا مَا شِئْتُمْ مِنْ دُونِهِ ۗ قُلْ إِنَّ الْخَاسِرِينَ الَّذِينَ خَسِرُوا أَنْفُسَهُمْ وَأَهْلِيهِمْ يَوْمَ الْقِيَامَةِ ۗ أَلَا ذَٰلِكَ هُوَ الْخُسْرَانُ الْمُبِينُ

ಆದರೆ (ಅದನ್ನು ಅರ್ಥಮಾಡಿಕೊಳ್ಳದ) ನೀವು ಅವನನ್ನು ಬಿಟ್ಟು ನಿಮಗೆ ಇಷ್ಟಬಂದವರನ್ನು ಆರಾಧಿಸಿರಿ. ಪುನರುತ್ಥಾನದ ದಿನ ತಮ್ಮನ್ನೂ ತಮ್ಮ ಕುಟುಂಬದವರನ್ನೂ ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾದ ನಷ್ಟ ಅನುಭವಿಸಿದವರು ಎಂದು, ಪೈಗಂಬರರೇ, ನೀವು ಸಾರಿರಿ! ಚೆನ್ನಾಗಿ ಅರಿಯಿರಿ, ಅದುವೇ ಸ್ಪಷ್ಟವಾದ ನಷ್ಟವಾಗಿದೆ. {15}

لَهُمْ مِنْ فَوْقِهِمْ ظُلَلٌ مِنَ النَّارِ وَمِنْ تَحْتِهِمْ ظُلَلٌ ۚ ذَٰلِكَ يُخَوِّفُ اللَّهُ بِهِ عِبَادَهُ ۚ يَا عِبَادِ فَاتَّقُونِ

(ನರಕದಲ್ಲಿ) ಅಂತಹವರಿಗೆ ಮೇಲ್ಭಾಗದಲ್ಲಿ ಬೆಂಕಿಯ ಚಾವಣಿಗಳಿರುತ್ತವೆ; ಮತ್ತು ಕೆಳಭಾಗದಲ್ಲಿ ಬೆಂಕಿಯ ಹಾಸುಗೆಗಳಿರುತ್ತವೆ. ಇಂತಹ (ಭಯಂಕರ ಶಿಕ್ಷೆಯ) ವಿಚಾರವನ್ನು ತಿಳಿಸುವ ಮೂಲಕ ಅಲ್ಲಾಹ್ ನು ತನ್ನ ದಾಸರಲ್ಲಿ ನರದ ಬಗ್ಗೆ ಭಯವನ್ನು ಮೂಡಿಸುತ್ತಾನೆ. ಓ ನನ್ನ ದಾಸರೇ, [ಧಿಕ್ಕಾರ ತೋರುವ ಬದಲು] ನೀವು ನನಗೆ ಭಯಭಕ್ತಿ ತೋರುತ್ತಾ ಜೀವಿಸಿರಿ! {16}

وَالَّذِينَ اجْتَنَبُوا الطَّاغُوتَ أَنْ يَعْبُدُوهَا وَأَنَابُوا إِلَى اللَّهِ لَهُمُ الْبُشْرَىٰ ۚ فَبَشِّرْ عِبَادِ

ತಾಘೂತ್‌ಗಳ (ಅರ್ಥಾತ್, ಸುಳ್ಳು ದೇವರುಗಳ) ಆರಾಧನೆಯಿಂದ ದೂರವಿದ್ದು, ಅಲ್ಲಾಹನಿಗೆ ಸಂಪೂರ್ಣವಾದ ಒಲವು ತೋರುವವರಿಗೆ ಶುಭವಾರ್ತೆಯಿದೆ. ಆದ್ದರಿಂದ, ಪೈಗಂಬರರೇ, ನನ್ನ ಅಂತಹ ಭಕ್ತದಾಸರಿಗೆ ಸಂತೋಷಯುಕ್ತ ಶುಭಸುದ್ದಿ ನೀಡಿರಿ! {17}

الَّذِينَ يَسْتَمِعُونَ الْقَوْلَ فَيَتَّبِعُونَ أَحْسَنَهُ ۚ أُولَٰئِكَ الَّذِينَ هَدَاهُمُ اللَّهُ ۖ وَأُولَٰئِكَ هُمْ أُولُو الْأَلْبَابِ

ಯಾರು (ಯಾವುದಾದರೂ) ಒಂದು ಮಾತನ್ನು ಚೆನ್ನಾಗಿ ಆಲಿಸಿ, ಅದರಲ್ಲಿರುವ ಅತ್ಯುತ್ತಮವಾದ ವಿಚಾರವನ್ನು ಅನುಸರಿಸುತ್ತಾರೋ, ಅಂತಹವರು ಅಲ್ಲಾಹನಿಂದ ಸನ್ಮಾರ್ಗದರ್ಶನ ಪಡೆದವರು. ಅಂತಹವರೇ ವಿವೇಚನಾಶಕ್ತಿಯುಳ್ಳವರು! {18}

أَفَمَنْ حَقَّ عَلَيْهِ كَلِمَةُ الْعَذَابِ أَفَأَنْتَ تُنْقِذُ مَنْ فِي النَّارِ

ಇನ್ನು, ಯಾರ ವಿರುದ್ಧ ಶಿಕ್ಷೆಯ ತೀರ್ಪು ಖಚಿತವಾಗಿದೆಯೋ, ಅಂತಹವರನ್ನು ನರಕದಿಂದ ರಕ್ಷಿಸಲು, ಪೈಗಂಬರರೇ, ನಿಮಗೆ ಸಾಧ್ಯವೇ?! {19}

لَٰكِنِ الَّذِينَ اتَّقَوْا رَبَّهُمْ لَهُمْ غُرَفٌ مِنْ فَوْقِهَا غُرَفٌ مَبْنِيَّةٌ تَجْرِي مِنْ تَحْتِهَا الْأَنْهَارُ ۖ وَعْدَ اللَّهِ ۖ لَا يُخْلِفُ اللَّهُ الْمِيعَادَ

ಆದರೆ, ತಮ್ಮ ಒಡೆಯನ ಭಯವಿರಿಸಿಕೊಂಡು ಜೀವಿಸಿದವರಿಗೆ ಒಂದರ ಮೇಲೊಂದರಂತೆ ನಿರ್ಮಿಸಲಾದ (ಬಹುಮಹಡಿಯ) ಎತ್ತರದ ನಿವಾಸಗಳಿರುತ್ತವೆ. ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತಿರುತ್ತವೆ. ಇದು ಅಲ್ಲಾಹ್ ನ ವಾಗ್ದಾನವಾಗಿದೆ. ಅಲ್ಲಾಹನು ತನ್ನ ವಾಗ್ದಾನವನ್ನು ಎಂದಿಗೂ ಉಲ್ಲಂಘಿಸುವುದಿಲ್ಲ! {20}

أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَسَلَكَهُ يَنَابِيعَ فِي الْأَرْضِ ثُمَّ يُخْرِجُ بِهِ زَرْعًا مُخْتَلِفًا أَلْوَانُهُ ثُمَّ يَهِيجُ فَتَرَاهُ مُصْفَرًّا ثُمَّ يَجْعَلُهُ حُطَامًا ۚ إِنَّ فِي ذَٰلِكَ لَذِكْرَىٰ لِأُولِي الْأَلْبَابِ

ooooooooooo {21}

أَفَمَنْ شَرَحَ اللَّهُ صَدْرَهُ لِلْإِسْلَامِ فَهُوَ عَلَىٰ نُورٍ مِنْ رَبِّهِ ۚ فَوَيْلٌ لِلْقَاسِيَةِ قُلُوبُهُمْ مِنْ ذِكْرِ اللَّهِ ۚ أُولَٰئِكَ فِي ضَلَالٍ مُبِينٍ

ooooooooooo {22}

اللَّهُ نَزَّلَ أَحْسَنَ الْحَدِيثِ كِتَابًا مُتَشَابِهًا مَثَانِيَ تَقْشَعِرُّ مِنْهُ جُلُودُ الَّذِينَ يَخْشَوْنَ رَبَّهُمْ ثُمَّ تَلِينُ جُلُودُهُمْ وَقُلُوبُهُمْ إِلَىٰ ذِكْرِ اللَّهِ ۚ ذَٰلِكَ هُدَى اللَّهِ يَهْدِي بِهِ مَنْ يَشَاءُ ۚ وَمَنْ يُضْلِلِ اللَّهُ فَمَا لَهُ مِنْ هَادٍ

ooooooooooo {23}

أَفَمَنْ يَتَّقِي بِوَجْهِهِ سُوءَ الْعَذَابِ يَوْمَ الْقِيَامَةِ ۚ وَقِيلَ لِلظَّالِمِينَ ذُوقُوا مَا كُنْتُمْ تَكْسِبُونَ

ooooooooooo {24}

كَذَّبَ الَّذِينَ مِنْ قَبْلِهِمْ فَأَتَاهُمُ الْعَذَابُ مِنْ حَيْثُ لَا يَشْعُرُونَ

ooooooooooo {25}

فَأَذَاقَهُمُ اللَّهُ الْخِزْيَ فِي الْحَيَاةِ الدُّنْيَا ۖ وَلَعَذَابُ الْآخِرَةِ أَكْبَرُ ۚ لَوْ كَانُوا يَعْلَمُونَ

ooooooooooo {26}

وَلَقَدْ ضَرَبْنَا لِلنَّاسِ فِي هَٰذَا الْقُرْآنِ مِنْ كُلِّ مَثَلٍ لَعَلَّهُمْ يَتَذَكَّرُونَ

ooooooooooo {27}

قُرْآنًا عَرَبِيًّا غَيْرَ ذِي عِوَجٍ لَعَلَّهُمْ يَتَّقُونَ

ooooooooooo {28}

ضَرَبَ اللَّهُ مَثَلًا رَجُلًا فِيهِ شُرَكَاءُ مُتَشَاكِسُونَ وَرَجُلًا سَلَمًا لِرَجُلٍ هَلْ يَسْتَوِيَانِ مَثَلًا ۚ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ

ooooooooooo {29}

إِنَّكَ مَيِّتٌ وَإِنَّهُمْ مَيِّتُونَ

ooooooooooo {30}

ثُمَّ إِنَّكُمْ يَوْمَ الْقِيَامَةِ عِنْدَ رَبِّكُمْ تَخْتَصِمُونَ

ooooooooooo {31}

فَمَنْ أَظْلَمُ مِمَّنْ كَذَبَ عَلَى اللَّهِ وَكَذَّبَ بِالصِّدْقِ إِذْ جَاءَهُ ۚ أَلَيْسَ فِي جَهَنَّمَ مَثْوًى لِلْكَافِرِينَ

ooooooooooo {32}

وَالَّذِي جَاءَ بِالصِّدْقِ وَصَدَّقَ بِهِ ۙ أُولَٰئِكَ هُمُ الْمُتَّقُونَ

ooooooooooo {33}

لَهُمْ مَا يَشَاءُونَ عِنْدَ رَبِّهِمْ ۚ ذَٰلِكَ جَزَاءُ الْمُحْسِنِينَ

ooooooooooo {34}

لِيُكَفِّرَ اللَّهُ عَنْهُمْ أَسْوَأَ الَّذِي عَمِلُوا وَيَجْزِيَهُمْ أَجْرَهُمْ بِأَحْسَنِ الَّذِي كَانُوا يَعْمَلُونَ

ooooooooooo {35}

أَلَيْسَ اللَّهُ بِكَافٍ عَبْدَهُ ۖ وَيُخَوِّفُونَكَ بِالَّذِينَ مِنْ دُونِهِ ۚ وَمَنْ يُضْلِلِ اللَّهُ فَمَا لَهُ مِنْ هَادٍ

ooooooooooo {36}

وَمَنْ يَهْدِ اللَّهُ فَمَا لَهُ مِنْ مُضِلٍّ ۗ أَلَيْسَ اللَّهُ بِعَزِيزٍ ذِي انْتِقَامٍ

ooooooooooo {37}

وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلْ أَفَرَأَيْتُمْ مَا تَدْعُونَ مِنْ دُونِ اللَّهِ إِنْ أَرَادَنِيَ اللَّهُ بِضُرٍّ هَلْ هُنَّ كَاشِفَاتُ ضُرِّهِ أَوْ أَرَادَنِي بِرَحْمَةٍ هَلْ هُنَّ مُمْسِكَاتُ رَحْمَتِهِ ۚ قُلْ حَسْبِيَ اللَّهُ ۖ عَلَيْهِ يَتَوَكَّلُ الْمُتَوَكِّلُونَ

ooooooooooo {38}

قُلْ يَا قَوْمِ اعْمَلُوا عَلَىٰ مَكَانَتِكُمْ إِنِّي عَامِلٌ ۖ فَسَوْفَ تَعْلَمُونَ

ooooooooooo {39}

مَنْ يَأْتِيهِ عَذَابٌ يُخْزِيهِ وَيَحِلُّ عَلَيْهِ عَذَابٌ مُقِيمٌ

ooooooooooo {40}

إِنَّا أَنْزَلْنَا عَلَيْكَ الْكِتَابَ لِلنَّاسِ بِالْحَقِّ ۖ فَمَنِ اهْتَدَىٰ فَلِنَفْسِهِ ۖ وَمَنْ ضَلَّ فَإِنَّمَا يَضِلُّ عَلَيْهَا ۖ وَمَا أَنْتَ عَلَيْهِمْ بِوَكِيلٍ

ooooooooooo {41}

اللَّهُ يَتَوَفَّى الْأَنْفُسَ حِينَ مَوْتِهَا وَالَّتِي لَمْ تَمُتْ فِي مَنَامِهَا ۖ فَيُمْسِكُ الَّتِي قَضَىٰ عَلَيْهَا الْمَوْتَ وَيُرْسِلُ الْأُخْرَىٰ إِلَىٰ أَجَلٍ مُسَمًّى ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ

ooooooooooo {42}

أَمِ اتَّخَذُوا مِنْ دُونِ اللَّهِ شُفَعَاءَ ۚ قُلْ أَوَلَوْ كَانُوا لَا يَمْلِكُونَ شَيْئًا وَلَا يَعْقِلُونَ

ooooooooooo {43}

قُلْ لِلَّهِ الشَّفَاعَةُ جَمِيعًا ۖ لَهُ مُلْكُ السَّمَاوَاتِ وَالْأَرْضِ ۖ ثُمَّ إِلَيْهِ تُرْجَعُونَ

ooooooooooo {44}

وَإِذَا ذُكِرَ اللَّهُ وَحْدَهُ اشْمَأَزَّتْ قُلُوبُ الَّذِينَ لَا يُؤْمِنُونَ بِالْآخِرَةِ ۖ وَإِذَا ذُكِرَ الَّذِينَ مِنْ دُونِهِ إِذَا هُمْ يَسْتَبْشِرُونَ

ooooooooooo {45}

قُلِ اللَّهُمَّ فَاطِرَ السَّمَاوَاتِ وَالْأَرْضِ عَالِمَ الْغَيْبِ وَالشَّهَادَةِ أَنْتَ تَحْكُمُ بَيْنَ عِبَادِكَ فِي مَا كَانُوا فِيهِ يَخْتَلِفُونَ

ooooooooooo {46}

وَلَوْ أَنَّ لِلَّذِينَ ظَلَمُوا مَا فِي الْأَرْضِ جَمِيعًا وَمِثْلَهُ مَعَهُ لَافْتَدَوْا بِهِ مِنْ سُوءِ الْعَذَابِ يَوْمَ الْقِيَامَةِ ۚ وَبَدَا لَهُمْ مِنَ اللَّهِ مَا لَمْ يَكُونُوا يَحْتَسِبُونَ

ooooooooooo {47}

وَبَدَا لَهُمْ سَيِّئَاتُ مَا كَسَبُوا وَحَاقَ بِهِمْ مَا كَانُوا بِهِ يَسْتَهْزِئُونَ

ooooooooooo {48}

فَإِذَا مَسَّ الْإِنْسَانَ ضُرٌّ دَعَانَا ثُمَّ إِذَا خَوَّلْنَاهُ نِعْمَةً مِنَّا قَالَ إِنَّمَا أُوتِيتُهُ عَلَىٰ عِلْمٍ ۚ بَلْ هِيَ فِتْنَةٌ وَلَٰكِنَّ أَكْثَرَهُمْ لَا يَعْلَمُونَ

ooooooooooo {49}

قَدْ قَالَهَا الَّذِينَ مِنْ قَبْلِهِمْ فَمَا أَغْنَىٰ عَنْهُمْ مَا كَانُوا يَكْسِبُونَ

ooooooooooo {50}

فَأَصَابَهُمْ سَيِّئَاتُ مَا كَسَبُوا ۚ وَالَّذِينَ ظَلَمُوا مِنْ هَٰؤُلَاءِ سَيُصِيبُهُمْ سَيِّئَاتُ مَا كَسَبُوا وَمَا هُمْ بِمُعْجِزِينَ

ooooooooooo {51}

أَوَلَمْ يَعْلَمُوا أَنَّ اللَّهَ يَبْسُطُ الرِّزْقَ لِمَنْ يَشَاءُ وَيَقْدِرُ ۚ إِنَّ فِي ذَٰلِكَ لَآيَاتٍ لِقَوْمٍ يُؤْمِنُونَ

ooooooooooo {52}

قُلْ يَا عِبَادِيَ الَّذِينَ أَسْرَفُوا عَلَىٰ أَنْفُسِهِمْ لَا تَقْنَطُوا مِنْ رَحْمَةِ اللَّهِ ۚ إِنَّ اللَّهَ يَغْفِرُ الذُّنُوبَ جَمِيعًا ۚ إِنَّهُ هُوَ الْغَفُورُ الرَّحِيمُ

ooooooooooo {53}

وَأَنِيبُوا إِلَىٰ رَبِّكُمْ وَأَسْلِمُوا لَهُ مِنْ قَبْلِ أَنْ يَأْتِيَكُمُ الْعَذَابُ ثُمَّ لَا تُنْصَرُونَ

ooooooooooo {54}

وَاتَّبِعُوا أَحْسَنَ مَا أُنْزِلَ إِلَيْكُمْ مِنْ رَبِّكُمْ مِنْ قَبْلِ أَنْ يَأْتِيَكُمُ الْعَذَابُ بَغْتَةً وَأَنْتُمْ لَا تَشْعُرُونَ

ooooooooooo {55}

أَنْ تَقُولَ نَفْسٌ يَا حَسْرَتَا عَلَىٰ مَا فَرَّطْتُ فِي جَنْبِ اللَّهِ وَإِنْ كُنْتُ لَمِنَ السَّاخِرِينَ

ooooooooooo {56}

أَوْ تَقُولَ لَوْ أَنَّ اللَّهَ هَدَانِي لَكُنْتُ مِنَ الْمُتَّقِينَ

ooooooooooo {57}

أَوْ تَقُولَ حِينَ تَرَى الْعَذَابَ لَوْ أَنَّ لِي كَرَّةً فَأَكُونَ مِنَ الْمُحْسِنِينَ

ooooooooooo {58}

بَلَىٰ قَدْ جَاءَتْكَ آيَاتِي فَكَذَّبْتَ بِهَا وَاسْتَكْبَرْتَ وَكُنْتَ مِنَ الْكَافِرِينَ

ooooooooooo {59}

وَيَوْمَ الْقِيَامَةِ تَرَى الَّذِينَ كَذَبُوا عَلَى اللَّهِ وُجُوهُهُمْ مُسْوَدَّةٌ ۚ أَلَيْسَ فِي جَهَنَّمَ مَثْوًى لِلْمُتَكَبِّرِينَ

ooooooooooo {60}

وَيُنَجِّي اللَّهُ الَّذِينَ اتَّقَوْا بِمَفَازَتِهِمْ لَا يَمَسُّهُمُ السُّوءُ وَلَا هُمْ يَحْزَنُونَ

ooooooooooo {61}

اللَّهُ خَالِقُ كُلِّ شَيْءٍ ۖ وَهُوَ عَلَىٰ كُلِّ شَيْءٍ وَكِيلٌ

ooooooooooo {62}

لَهُ مَقَالِيدُ السَّمَاوَاتِ وَالْأَرْضِ ۗ وَالَّذِينَ كَفَرُوا بِآيَاتِ اللَّهِ أُولَٰئِكَ هُمُ الْخَاسِرُونَ

ooooooooooo {63}

قُلْ أَفَغَيْرَ اللَّهِ تَأْمُرُونِّي أَعْبُدُ أَيُّهَا الْجَاهِلُونَ

ooooooooooo {64}

وَلَقَدْ أُوحِيَ إِلَيْكَ وَإِلَى الَّذِينَ مِنْ قَبْلِكَ لَئِنْ أَشْرَكْتَ لَيَحْبَطَنَّ عَمَلُكَ وَلَتَكُونَنَّ مِنَ الْخَاسِرِينَ

ooooooooooo {65}

بَلِ اللَّهَ فَاعْبُدْ وَكُنْ مِنَ الشَّاكِرِينَ

ooooooooooo {66}

وَمَا قَدَرُوا اللَّهَ حَقَّ قَدْرِهِ وَالْأَرْضُ جَمِيعًا قَبْضَتُهُ يَوْمَ الْقِيَامَةِ وَالسَّمَاوَاتُ مَطْوِيَّاتٌ بِيَمِينِهِ ۚ سُبْحَانَهُ وَتَعَالَىٰ عَمَّا يُشْرِكُونَ

ooooooooooo {67}

وَنُفِخَ فِي الصُّورِ فَصَعِقَ مَنْ فِي السَّمَاوَاتِ وَمَنْ فِي الْأَرْضِ إِلَّا مَنْ شَاءَ اللَّهُ ۖ ثُمَّ نُفِخَ فِيهِ أُخْرَىٰ فَإِذَا هُمْ قِيَامٌ يَنْظُرُونَ

ooooooooooo {68}

وَأَشْرَقَتِ الْأَرْضُ بِنُورِ رَبِّهَا وَوُضِعَ الْكِتَابُ وَجِيءَ بِالنَّبِيِّينَ وَالشُّهَدَاءِ وَقُضِيَ بَيْنَهُمْ بِالْحَقِّ وَهُمْ لَا يُظْلَمُونَ

ooooooooooo {69}

وَوُفِّيَتْ كُلُّ نَفْسٍ مَا عَمِلَتْ وَهُوَ أَعْلَمُ بِمَا يَفْعَلُونَ

ooooooooooo {70}

وَسِيقَ الَّذِينَ كَفَرُوا إِلَىٰ جَهَنَّمَ زُمَرًا ۖ حَتَّىٰ إِذَا جَاءُوهَا فُتِحَتْ أَبْوَابُهَا وَقَالَ لَهُمْ خَزَنَتُهَا أَلَمْ يَأْتِكُمْ رُسُلٌ مِنْكُمْ يَتْلُونَ عَلَيْكُمْ آيَاتِ رَبِّكُمْ وَيُنْذِرُونَكُمْ لِقَاءَ يَوْمِكُمْ هَٰذَا ۚ قَالُوا بَلَىٰ وَلَٰكِنْ حَقَّتْ كَلِمَةُ الْعَذَابِ عَلَى الْكَافِرِينَ

ooooooooooo {71}

قِيلَ ادْخُلُوا أَبْوَابَ جَهَنَّمَ خَالِدِينَ فِيهَا ۖ فَبِئْسَ مَثْوَى الْمُتَكَبِّرِينَ

ooooooooooo {72}

وَسِيقَ الَّذِينَ اتَّقَوْا رَبَّهُمْ إِلَى الْجَنَّةِ زُمَرًا ۖ حَتَّىٰ إِذَا جَاءُوهَا وَفُتِحَتْ أَبْوَابُهَا وَقَالَ لَهُمْ خَزَنَتُهَا سَلَامٌ عَلَيْكُمْ طِبْتُمْ فَادْخُلُوهَا خَالِدِينَ

ooooooooooo {73}

وَقَالُوا الْحَمْدُ لِلَّهِ الَّذِي صَدَقَنَا وَعْدَهُ وَأَوْرَثَنَا الْأَرْضَ نَتَبَوَّأُ مِنَ الْجَنَّةِ حَيْثُ نَشَاءُ ۖ فَنِعْمَ أَجْرُ الْعَامِلِينَ

ooooooooooo {74}

وَتَرَى الْمَلَائِكَةَ حَافِّينَ مِنْ حَوْلِ الْعَرْشِ يُسَبِّحُونَ بِحَمْدِ رَبِّهِمْ ۖ وَقُضِيَ بَيْنَهُمْ بِالْحَقِّ وَقِيلَ الْحَمْدُ لِلَّهِ رَبِّ الْعَالَمِينَ

ooooooooooo {75}



 ಅನುವಾದಿತ ಸೂರಃ ಗಳು

Featured post

ಸರಳ ಕುರ್‌ಆನ್ - ಕನ್ನಡದಲ್ಲಿ ಮುನ್ನುಡಿ ದಯಾಮಯಿಯೂ ಕಾರುಣ್ಯವಂತನೂ ಆದ ಅಲ್ಲಾಹ್ ನ ಪವಿತ್ರ ನಾಮದೊಂದಿಗೆ ... ! بسم الله الرحمن الرحيم، الحمد لله رب...