تـرجمـة سورة العَنكبوت من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಅಲ್ ಅಂಕಬೂತ್ | ಪವಿತ್ರ ಕುರ್‌ಆನ್ ನ 29 ನೆಯ ಸೂರಃ | ಇದರಲ್ಲಿ ಒಟ್ಟು 69 ಆಯತ್ ಗಳು ಇವೆ |
ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!
الم
ಅಲಿಫ್ - ಲಾಮ್ - ಮೀಮ್! {1}
أَحَسِبَ النَّاسُ أَنْ يُتْرَكُوا أَنْ يَقُولُوا آمَنَّا وَهُمْ لَا يُفْتَنُونَ
ನಾವು ವಿಶ್ವಾಸಿಗಳಾದೆವು ಎಂದು ಹೇಳಿದ ಮಾತ್ರಕ್ಕೆ ಪರೀಕ್ಷೆಗೊಳಪಡಿಸದೆ ಇವರನ್ನು ಹಾಗೆಯೇ ಬಿಟ್ಟುಬಿಡಲಾಗುವುದು ಎಂದು ಈ ಜನರು ಭಾವಿಸಿದ್ದಾರೆಯೇ!? {2}
وَلَقَدْ فَتَنَّا الَّذِينَ مِنْ قَبْلِهِمْ ۖ فَلَيَعْلَمَنَّ اللَّهُ الَّذِينَ صَدَقُوا وَلَيَعْلَمَنَّ الْكَاذِبِينَ
ಹೌದು, ಇವರಿಗಿಂತ ಹಿಂದೆ ಸಹ (ಹಾಗೆ ಹೇಳಿದವರನ್ನು) ನಾವು ಪರೀಕ್ಷೆಗೊಳಪಡಿಸಿರುತ್ತೇವೆ. ತಮ್ಮ ವಾದದಲ್ಲಿ ಯಾರು ಸತ್ಯವಂತರು ಎಂಬುದನ್ನು ಅಲ್ಲಾಹ್ ನು ಅರಿಯಲಿರುವನು; ಹಾಗೆಯೇ ಯಾರು ಸುಳ್ಳುಗಾರರು ಎಂಬುದನ್ನು ಸಹ ಅಲ್ಲಾಹ್ ನು ಅರಿತೇ ತೀರುವನು. {3}
أَمْ حَسِبَ الَّذِينَ يَعْمَلُونَ السَّيِّئَاتِ أَنْ يَسْبِقُونَا ۚ سَاءَ مَا يَحْكُمُونَ
ಅಥವಾ, ದುಷ್ಕರ್ಮಗಳಲ್ಲಿ ತೊಡಗಿರುವ ಇವರು ನಮ್ಮ ಹಿಡಿತದಿಂದ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿರುವರೇ? ಎಷ್ಟೊಂದು ತಪ್ಪಾಗಿದೆ ಇವರ ಆ ನಿರ್ಧಾರ! {4}
مَنْ كَانَ يَرْجُو لِقَاءَ اللَّهِ فَإِنَّ أَجَلَ اللَّهِ لَآتٍ ۚ وَهُوَ السَّمِيعُ الْعَلِيمُ
ಯಾರು ಅಲ್ಲಾಹ್ ನನ್ನು ಭೇಟಿಯಾಗುವ ನಿರೀಕ್ಷೆ ಹೊಂದಿರುವರೋ ಅವರು ತಿಳಿದಿರಲಿ, ಅಲ್ಲಾಹ್ ನು ನಿಶ್ಚಯಿಸಿದ ಆ ಸಮಯ (ಅಂದರೆ ವಿಚಾರಣೆಯ ಸಮಯ) ಖಂಡಿತವಾಗಿ ಬರಲಿದೆ! ಅವನು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾನೆ ಹಾಗೂ ಎಲ್ಲವನ್ನೂ ಅರಿತಿರುತ್ತಾನೆ. {5}
وَمَنْ جَاهَدَ فَإِنَّمَا يُجَاهِدُ لِنَفْسِهِ ۚ إِنَّ اللَّهَ لَغَنِيٌّ عَنِ الْعَالَمِينَ
(ಈಗ ನಮ್ಮ ಹಾದಿಯಲ್ಲಿ) ಶ್ರಮಿಸುತ್ತಿರುವವರು ಯಥಾರ್ಥದಲ್ಲಿ ಸ್ವತಃ ತಮ್ಮದೇ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಸಂಶಯರಹಿತ ವಿಷಯವೆಂದರೆ ಅಲ್ಲಾಹ್ ನು ತನ್ನ ಸೃಷ್ಟಿಗಳಿಂದ ತನಗಾಗಿ ಏನನ್ನೂ ಬಯಸದ ನಿರಪೇಕ್ಷನು! {6}
وَالَّذِينَ آمَنُوا وَعَمِلُوا الصَّالِحَاتِ لَنُكَفِّرَنَّ عَنْهُمْ سَيِّئَاتِهِمْ وَلَنَجْزِيَنَّهُمْ أَحْسَنَ الَّذِي كَانُوا يَعْمَلُونَ
ಯಾರು ವಿಶ್ವಾಸಿಗಳಾಗಿದ್ದುಕೊಂಡು ಒಳ್ಳೆಯ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಾರೋ ಅಂತಹವರ ದೋಷಗಳನ್ನು ನಾವು ಅವರಿಂದ ನೀಗಿಸಿ ಬಿಡುತ್ತೇವೆ. ಮಾತ್ರವಲ್ಲ, ಅವರು ಮಾಡಿದ ಸತ್ಕರ್ಮಗಳಿಗೆ ಉತ್ತಮವಾದ ಪ್ರತಿಫಲವನ್ನೂ ನೀಡುತ್ತೇವೆ. {7}
وَوَصَّيْنَا الْإِنْسَانَ بِوَالِدَيْهِ حُسْنًا ۖ وَإِنْ جَاهَدَاكَ لِتُشْرِكَ بِي مَا لَيْسَ لَكَ بِهِ عِلْمٌ فَلَا تُطِعْهُمَا ۚ إِلَيَّ مَرْجِعُكُمْ فَأُنَبِّئُكُمْ بِمَا كُنْتُمْ تَعْمَلُونَ
ಮನುಷ್ಯರು ತಮ್ಮ ಮಾತಾಪಿತರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವರ್ತಿಸಬೇಕೆಂದು ನಾವು ಆಜ್ಞಾಪಿಸಿರುತ್ತೇವೆ. ಒಂದು ವೇಳೆ ನಿಮ್ಮ ಅರಿವಿನಲ್ಲಿಲ್ಲದ ಯಾವುದನ್ನಾದರೂ ನನ್ನ ದೇವತ್ವದಲ್ಲಿ ಸೇರಿಸಿ (ಅವುಗಳನ್ನು ಪೂಜಿಸಲು) ಅವರು ನಿಮ್ಮನ್ನು ಒತ್ತಾಯಿಸಿದರೆ ಆ ವಿಷಯದಲ್ಲಿ ನೀವು ಅವರನ್ನು ಅನುಸರಿಸದಿರಿ. ನೀವೆಲ್ಲ ಅಂತಿಮವಾಗಿ ನನ್ನ ಬಳಿಗೇ ಮರಳಲಿರುವಿರಿ; ಆಗ ನಿಮ್ಮ ಕರ್ಮಗಳ ಬಗ್ಗೆ ನಾನು ನಿಮಗೆ ತಿಳಿಸಲಿರುವೆನು. {8}
وَالَّذِينَ آمَنُوا وَعَمِلُوا الصَّالِحَاتِ لَنُدْخِلَنَّهُمْ فِي الصَّالِحِينَ
ವಿಶ್ವಾಸಿಗಳಾಗಿದ್ದುಕೊಂಡು ಅದರ ಜೊತೆಗೆ ಸತ್ಕರ್ಮಗಳನ್ನು ಮಾಡಿದಂತಹ ಜನರನ್ನು ನಾವು ನಿಶ್ಚಿತವಾಗಿ (ಸ್ವರ್ಗವಾಸಿಗಳಾದ) ಸಜ್ಜನರ ಗುಂಪಿಗೆ ಖಚಿತವಾಗಿ ಸೇರಿಸಲಿದ್ದೇವೆ. {9}
وَمِنَ النَّاسِ مَنْ يَقُولُ آمَنَّا بِاللَّهِ فَإِذَا أُوذِيَ فِي اللَّهِ جَعَلَ فِتْنَةَ النَّاسِ كَعَذَابِ اللَّهِ وَلَئِنْ جَاءَ نَصْرٌ مِنْ رَبِّكَ لَيَقُولُنَّ إِنَّا كُنَّا مَعَكُمْ ۚ أَوَلَيْسَ اللَّهُ بِأَعْلَمَ بِمَا فِي صُدُورِ الْعَالَمِينَ
ಇನ್ನು, ನಾವು ಅಲ್ಲಾಹ್ ನನ್ನು ನಂಬಿದವರಾಗಿದ್ದೇವೆ ಎಂದು ವಾದಿಸುವ ಕೆಲವು ಜನರಿದ್ದಾರೆ. ಅವರೇನಾದರೂ ಅಲ್ಲಾಹ್ ನ ಮಾರ್ಗದಲ್ಲಿ ಸತಾಯಿಸಲ್ಪಟ್ಟರೆ, ಜನರು ಅವರಿಗೆ ಕೊಡುವ ಕಿರುಕುಳವು ಅಲ್ಲಾಹ್ ನು ಕೊಡುವ ಶಿಕ್ಷೆಯಷ್ಟೇ ತೀವ್ರವಾದುದು ಎಂದು ಭಾವಿಸುತ್ತಾರೆ! ಪೈಗಂಬರರೇ, ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮೆಡೆಗೆ ಸಹಾಯವೇನಾದರೂ ಬಂದು ಬಿಟ್ಟರೆ, ಆ ಕೂಡಲೇ ಅವರು, ನಾವು ಯಾವತ್ತೂ ನಿಮ್ಮ ಜೊತೆಗೇ ಇದ್ದೆವು ಎಂದು ಹೇಳುತ್ತಾರೆ! ಏನು, ಜನರ ಮನಸ್ಸಿನಲ್ಲಿ ಏನು ಅಡಗಿದೆ ಎಂದು ಅಲ್ಲಾಹ್ ನಿಗೆ ಚೆನ್ನಾಗಿಯೇ ತಿಳಿದಿಲ್ಲವೇ? {10}
وَلَيَعْلَمَنَّ اللَّهُ الَّذِينَ آمَنُوا وَلَيَعْلَمَنَّ الْمُنَافِقِينَ
ನಿಜವಾದ ವಿಶ್ವಾಸಿಗಳು ಯಾರೆಂದು ಅಲ್ಲಾಹ್ ನು ಅಗತ್ಯವಾಗಿ ಅರಿಯಲಿದ್ದಾನೆ; ಹಾಗೆಯೇ ವಿಶ್ವಾಸದ ಸೋಗು ಹಾಕುವ ಕಪಟಿಗಳನ್ನೂ ಅವನು ಅರಿತೇ ತೀರುವನು! {11}
وَقَالَ الَّذِينَ كَفَرُوا لِلَّذِينَ آمَنُوا اتَّبِعُوا سَبِيلَنَا وَلْنَحْمِلْ خَطَايَاكُمْ وَمَا هُمْ بِحَامِلِينَ مِنْ خَطَايَاهُمْ مِنْ شَيْءٍ ۖ إِنَّهُمْ لَكَاذِبُونَ
(ಪೈಗಂಬರರ ಉಪದೇಶವನ್ನು) ತಿರಸ್ಕರಿಸಿದ ಜನರು ವಿಶ್ವಾಸಿಗಳೊಂದಿಗೆ ಹೇಳುತ್ತಿರುವರು: ನೀವು ಕೂಡ ನಮ್ಮ ಹಾದಿಯನ್ನು ಅನುಸರಿಸಿರಿ; ಹಾಗಾದರೆ ನಿಮ್ಮ ಪಾಪಗಳ ಹೊರೆಯನ್ನು ನಾವು ಹೊರುತ್ತೇವೆ! ಇಲ್ಲ, ವಾಸ್ತವದಲ್ಲಿ ಅವರು ಇವರ ಪಾಪವನ್ನು ಸ್ವಲ್ಪವಾದರೂ ಹೊರುವವರಲ್ಲ. ಬದಲಾಗಿ ಅವರು ಸುಳ್ಳುನ್ನೇ ಹೇಳುತ್ತಿರುವರು. {12}
وَلَيَحْمِلُنَّ أَثْقَالَهُمْ وَأَثْقَالًا مَعَ أَثْقَالِهِمْ ۖ وَلَيُسْأَلُنَّ يَوْمَ الْقِيَامَةِ عَمَّا كَانُوا يَفْتَرُونَ
ಅವರು ಈಗಾಗಲೇ ಸ್ವತಃ ತಮ್ಮದೇ ಪಾಪಗಳ ಹೊರೆಯನ್ನೂ, ಅದರ ಜೊತೆಗೆ ಮತ್ತಷ್ಟು ಹೊರಯನ್ನೂ ಹೊರುತ್ತಿದ್ದಾರೆ! ವಿಚಾರಣೆಯ ದಿನ ಅವರು ಉಂಟುಮಾಡುತ್ತಿದ್ದ ಎಲ್ಲಾ ಸುಳ್ಳುಗಳ ಬಗ್ಗೆ ಅವರನ್ನು ಪ್ರಶ್ನಿಸಲಾಗುವುದು. {13}
وَلَقَدْ أَرْسَلْنَا نُوحًا إِلَىٰ قَوْمِهِ فَلَبِثَ فِيهِمْ أَلْفَ سَنَةٍ إِلَّا خَمْسِينَ عَامًا فَأَخَذَهُمُ الطُّوفَانُ وَهُمْ ظَالِمُونَ
(ಗತಿಸಿ ಹೋದ ಜನಾಂಗಗಳ ವಿಷಯವೂ ಇವರಿಗಿಂತ ಭಿನ್ನವಲ್ಲ)! ನಾವು ನೂಹ್ ರನ್ನು ಪ್ರವಾದಿಯನ್ನಾಗಿಸಿ ಅವರ ಜನಾಂಗದತ್ತ ಕಳುಹಿಸಿದ್ದೆವು. ಅವರು ಒಂಭೈನೂರ ಐವತ್ತು ವರ್ಷಗಳ ಕಾಲ ತಮ್ಮ ಜನರ ನಡುವೆ ವಾಸವಿದ್ದು (ಉಪದೇಶ ನೀಡುತ್ತಿದ್ದರೂ ಜನರು ಸರಿದಾರಿಗೆ ಬಂದಿರಲಿಲ್ಲ)! ಕೊನೆಗೆ ಒಂದು ಜಲಪ್ರಳಯವು ಅವರನ್ನೆಲ್ಲ ಹಿಡಿದು ಮುಳುಗಿಸಿ ಬಿಟ್ಟಾಗ ಅವರಿನ್ನೂ ಅಕ್ರಮ-ಅನ್ಯಾಗಳಲ್ಲಿ ತೊಡಗಿದ್ದರು. {14}
فَأَنْجَيْنَاهُ وَأَصْحَابَ السَّفِينَةِ وَجَعَلْنَاهَا آيَةً لِلْعَالَمِينَ
ನಂತರ ನಾವು ಪ್ರವಾದಿ ನೂಹ್ ಮತ್ತು (ಅವರ ಜೊತೆ) ಹಡಗಿಲ್ಲಿದ್ದವರ ರಕ್ಷಣೆ ಮಾಡಿದೆವು; ಹಾಗೂ ಅದನ್ನು ಲೋಕವಾಸಿಗಳ ಪಾಲಿಗೆ ಒಂದು ದೃಷ್ಟಾಂತವನ್ನಾಗಿ ಮಾಡಿದೆವು. {15}
وَإِبْرَاهِيمَ إِذْ قَالَ لِقَوْمِهِ اعْبُدُوا اللَّهَ وَاتَّقُوهُ ۖ ذَٰلِكُمْ خَيْرٌ لَكُمْ إِنْ كُنْتُمْ تَعْلَمُونَ
ಹಾಗೆಯೇ ಇಬ್ರಾಹೀಮ್ ರನ್ನೂ ನಾವು ಪ್ರವಾದಿಯನ್ನಾಗಿಸಿ ಕಳುಹಿಸಿದ್ದೆವು. ನೀವು ಅಲ್ಲಾಹ್ ನಿಗೆ ಮಾತ್ರ ಆರಾಧನೆ ಸಲ್ಲಿಸಿರಿ, ಅವನ ಮಾತ್ರ ಭಯವಿರಿಸಿಕೊಳ್ಳಿರಿ; ನೀವು ತಿಳುವಳಿಕೆ ಹೊಂದಿರುವ ಜನರಾಗಿದ್ದರೆ ಅದುವೇ ನಿಮ್ಮ ಪಾಲಿಗೆ ಉತ್ತಮವಾದುದು ಎಂದು ಅವರು ತಮ್ಮ ಜನಾಂಗದವರಿಗೆ ಬೋಧಿಸಿದ ಸಂದರ್ಭವನ್ನು ನೆನಪಿಸಿರಿ. {16}
إِنَّمَا تَعْبُدُونَ مِنْ دُونِ اللَّهِ أَوْثَانًا وَتَخْلُقُونَ إِفْكًا ۚ إِنَّ الَّذِينَ تَعْبُدُونَ مِنْ دُونِ اللَّهِ لَا يَمْلِكُونَ لَكُمْ رِزْقًا فَابْتَغُوا عِنْدَ اللَّهِ الرِّزْقَ وَاعْبُدُوهُ وَاشْكُرُوا لَهُ ۖ إِلَيْهِ تُرْجَعُونَ
ಆದರೆ ನೀವು ಅಲ್ಲಾಹ್ ನನ್ನು ಬಿಟ್ಟು ಕೇವಲ ವಿಗ್ರಹಗಳನ್ನು ಆರಾಧಿಸುತ್ತಿರುವಿರಿ. ಮತ್ತು (ಆ ಕೃತ್ಯವನ್ನು ಸಮರ್ಥಿಸಲು) ಸುಳ್ಳುಗಳನ್ನು ಸೃಷ್ಟಿಸುತ್ತಿರುವಿರಿ. ಅಲ್ಲಾಹ್ ನನ್ನು ಬಿಟ್ಟು ನೀವು ಏನನ್ನು ಪೂಜಿಸುತ್ತಿರುವಿರೋ ಅವು ನಿಮಗೆ ಉಪಜೀವನ, ಅನ್ನಾಹಾರಗಳನ್ನು ಒದಗಿಸಲು ಶಕ್ತರಾಗಿಲ್ಲ. ಆದ್ದರಿಂದ ನೀವು ಉಪಜೀವನವನ್ನು ಅಲ್ಲಾಹ್ ನೊಂದಿಗೆ ಮಾತ್ರ ಯಾಚಿಸುವವರಾಗಿರಿ. ಅವನನ್ನೇ ಆರಾಧಿಸಿರಿ. ಅವನಿಗೆ ಕೃತಜ್ಞತೆ ಸಲ್ಲಿಸುವವರಾಗಿರಿ. ಏಕೆಂದರೆ ಅವನೆಡೆಗೆ ನಿಮ್ಮನು ಮರಳಿಸಲಾಗುವುದು. {17}
وَإِنْ تُكَذِّبُوا فَقَدْ كَذَّبَ أُمَمٌ مِنْ قَبْلِكُمْ ۖ وَمَا عَلَى الرَّسُولِ إِلَّا الْبَلَاغُ الْمُبِينُ
ಇನ್ನು ನೀವು ತಿರಸ್ಕಾರ ತೋರಿದರೆ (ತಿಳಿಯಿರಿ, ತಿರಸ್ಕರಿಸುತ್ತಿರುವವರಲ್ಲಿ ನೀವು ಮೊದಲಿಗರೇನೂ ಅಲ್ಲ); ನಿಮಗಿಂತ ಮುಂಚೆ ಅನೇಕ ಜನಸಮೂಹಗಳು (ಉಪದೇಶವನ್ನು) ತಿರಸ್ಕರಿಸಿ ಬಿಟ್ಟಿವೆ. ನಮ್ಮ ದೂತರುಗಳಿಗಿರುವ ಹೊಣೆಯೆಂದರೆ (ನಮ್ಮ ಸಂದೇಶವನ್ನು) ಬಹಳ ಸ್ಪಷ್ಟವಾಗಿ ಅರ್ಥವಾಗುವಂತೆ ತಲುಪಿಸುವುದು ಮಾತ್ರ! {18}
أَوَلَمْ يَرَوْا كَيْفَ يُبْدِئُ اللَّهُ الْخَلْقَ ثُمَّ يُعِيدُهُ ۚ إِنَّ ذَٰلِكَ عَلَى اللَّهِ يَسِيرٌ
ಅಲ್ಲಾಹ್ ನು ಸೃಷ್ಟಿಕಾರ್ಯವನು ಹೇಗೆ ಪ್ರಾರಂಭಿಸುತ್ತಾನೆ ಮತ್ತು ಹೇಗೆ ಅದನ್ನು ಪುನರಾವರ್ತಿಸುತ್ತಾನೆ ಎಂಬುದರ ಕಡೆಗೆ ಅವರು ಗಮನ ಹರಿಸುವುದಿಲ್ಲವೇ? ಅಲ್ಲಾಹ್ ನ ಮಟ್ಟಿಗೆ ಅವೆಲ್ಲ ಸುಲಭವಾದ ಕಾರ್ಯವಾಗಿದೆ. {19}
قُلْ سِيرُوا فِي الْأَرْضِ فَانْظُرُوا كَيْفَ بَدَأَ الْخَلْقَ ۚ ثُمَّ اللَّهُ يُنْشِئُ النَّشْأَةَ الْآخِرَةَ ۚ إِنَّ اللَّهَ عَلَىٰ كُلِّ شَيْءٍ قَدِيرٌ
ಅಲ್ಲಾಹ್ ನು ಸೃಷ್ಟಿಕಾರ್ಯವನ್ನು ಹೇಗೆ ಆರಂಭಗೊಳಿಸಿದನು ಎಂಬುದನ್ನು ನೀವು ಭೂಮಿಯಲ್ಲಿ ಸಂಚರಿಸಿ ನೋಡಿರಿ; ಅದೇ ಅಲ್ಲಾಹ್ ನು ಸೃಷ್ಟಿಗಳನ್ನು (ಅವುಗಳು ಕ್ಷಯಿಸಿದ) ನಂತರ ಪುನಃ ಸೃಷ್ಟಿಸುತ್ತಾನೆ. ನಿಜವಾಗಿಯೂ ಅಲ್ಲಾಹ್ ನು ಏನನ್ನು ಬೇಕಾದರೂ ಮಾಡುವ ಸಾಮರ್ಥ್ಯ ಹೊಂದಿರುವನು ಎಂದು ಪೈಗಂಬರರೇ, ನೀವು, ಜನರಿಗೆ ತಿಳಿಸಿರಿ. {20}
يُعَذِّبُ مَنْ يَشَاءُ وَيَرْحَمُ مَنْ يَشَاءُ ۖ وَإِلَيْهِ تُقْلَبُونَ
ಯಾರನ್ನು ಶಿಕ್ಷಿಸಬೇಕೋ ಅವರನ್ನು ಅವನು ಶಿಕ್ಷಿಸುತ್ತಾನೆ ಮತ್ತು ಯಾರ ಮೇಲೆ ಕರುಣೆ ತೋರಬೇಕೋ ಅವರ ಮೇಲೆ ಕರುಣೆ ತೋರುತ್ತಾನೆ. ಅವನಕಡೆಗೇ ನೀವೆಲ್ಲರೂ ಮರಳಿ ಹೋಗಲಿರುವಿರಿ. {21}
وَمَا أَنْتُمْ بِمُعْجِزِينَ فِي الْأَرْضِ وَلَا فِي السَّمَاءِ ۖ وَمَا لَكُمْ مِنْ دُونِ اللَّهِ مِنْ وَلِيٍّ وَلَا نَصِيرٍ
ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ (ಅಲ್ಲಾಹ್ ನ ತೀರ್ಮಾನವನ್ನು) ಮಣಿಸುವುದು ನಿಮ್ಮಿಂದ ಸಾಧ್ಯವಾಗದ ವಿಷಯ. ಅಲ್ಲಾಹ್ ನ ಹೊರತು ಬೇರೆ ಯಾವ ಹಿತೈಷಿಯೂ ಸಹಾಯಕನೂ ನಿಮಗಿಲ್ಲ. {22}
وَالَّذِينَ كَفَرُوا بِآيَاتِ اللَّهِ وَلِقَائِهِ أُولَٰئِكَ يَئِسُوا مِنْ رَحْمَتِي وَأُولَٰئِكَ لَهُمْ عَذَابٌ أَلِيمٌ
ಯಾರು ಅಲ್ಲಾಹ್ ನ ವಚನಗಳನ್ನು ಮತ್ತು (ಅಂತಿಮ ವಿಚಾರಣೆಗಾಗಿ) ಅವನನ್ನು ಭೇಟಿಯಾಗಲಿರುವುದನ್ನು ಅಲ್ಲಗಳೆದಿದ್ದಾರೋ ಅಂತಹವರು ನಾನು ತೋರಲಿರುವ ಕರುಣೆಯಿಂದ ನಿರಾಶರಾದವರು; ಹೌದು, ಅಂತಹವರಿಗೆ ಯಾತನಾಮಯ ಶಿಕ್ಷೆಯಿರುವುದು. {23}
فَمَا كَانَ جَوَابَ قَوْمِهِ إِلَّا أَنْ قَالُوا اقْتُلُوهُ أَوْ حَرِّقُوهُ فَأَنْجَاهُ اللَّهُ مِنَ النَّارِ ۚ إِنَّ فِي ذَٰلِكَ لَآيَاتٍ لِقَوْمٍ يُؤْمِنُونَ
(ಹಿಂದೆ ಇಬ್ರಾಹೀಮ್ ರು ತಮ್ಮ ಜನರನ್ನು ಅಲ್ಲಾಹ್ ನೆಡೆಗೆ ಕರೆದಾಗ) ಈತನನ್ನು ಕೊಂದು ಬಿಡಿ ಅಥವಾ ಸುಟ್ಟುಹಾಕಿ ಎಂಬುದಷ್ಟೇ ಅವರ ಜನಾಂಗದ ಪ್ರತಿಕ್ರಿಯೆಯಾಗಿತ್ತು! ಆದರೆ ಅಲ್ಲಾಹ್ ನು ಅವರನ್ನು ಬೆಂಕಿಯಿಂದ ರಕ್ಷಿಸಿದನು! (ಪೈಗಂಬರರೇ, ಈಗ) ವಿಶ್ವಾಸಿಗಳಾಗ ಬಯಸುವವರಿಗೆ (ಪ್ರವಾದಿ ಇಬ್ರಾಹೀಮ್ ರಿಗೆ ಸಂಬಂಧಿಸಿದ) ಇಂತಹ ಘಟನೆಗಳಲ್ಲಿ ಖಂಡಿತವಾಗಿ ಸಾಕಷ್ಟು ದೃಷ್ಟಾಂತಗಳಿವೆ! {24}
وَقَالَ إِنَّمَا اتَّخَذْتُمْ مِنْ دُونِ اللَّهِ أَوْثَانًا مَوَدَّةَ بَيْنِكُمْ فِي الْحَيَاةِ الدُّنْيَا ۖ ثُمَّ يَوْمَ الْقِيَامَةِ يَكْفُرُ بَعْضُكُمْ بِبَعْضٍ وَيَلْعَنُ بَعْضُكُمْ بَعْضًا وَمَأْوَاكُمُ النَّارُ وَمَا لَكُمْ مِنْ نَاصِرِينَ
ಪ್ರವಾದಿ ಇಬ್ರಾಹೀಮ್ ರು ಹೇಳಿದರು: ನೀವು ಅಲ್ಲಾಹ್ ನನ್ನು ಬಿಟ್ಟು ವಿಗ್ರಹಗಳ ಆರಾಧನೆಯನ್ನು ಸ್ವೀಕರಿಸಿರುವುದು ಈ ಲೋಕದಲ್ಲಿ ಪರಸ್ಪರರ ಬಗ್ಗೆ ನಿಮಗಿರುವ ಪ್ರೀತಿಯ ಕಾಣಕ್ಕಾಗಿ ಮಾತ್ರ! ನಂತರ, (ಪುನರುತ್ಥಾನದಲ್ಲಿ) ತೀರ್ಪಿನ ದಿನ ಎದುರಾದಾಗ ನೀವು ಪರಸ್ಪರರನ್ನು ನಿರಾಕರಿಸಿ ಬಿಡುವಿರಿ ಹಾಗೂ ಪರಸ್ಪರರನ್ನು ಶಪಿಸುತ್ತಿರುವಿರಿ. ಮತ್ತು ನರಕಾಗ್ನಿಯು ನಿಮ್ಮೆಲ್ಲರ ನೆಲೆಯಾಗಲಿರುವುದು; (ನೀವು ಪ್ರೀತಿಸುತ್ತಿದ್ದ) ಯಾರೂ ನಿಮಗೆ ಸಹಾಯಕರಾಗಿ ಇರಲಾರರು. {25}
فَآمَنَ لَهُ لُوطٌ ۘ وَقَالَ إِنِّي مُهَاجِرٌ إِلَىٰ رَبِّي ۖ إِنَّهُ هُوَ الْعَزِيزُ الْحَكِيمُ
ಆಗ (ಪ್ರವಾದಿ ಇಬ್ರಾಹೀಮ್ ರವರ ಸಹೋದರನ ಮಗನಾದ) ಲೂತ್ ರವರು ಇಬ್ರಾಹೀಮ್ ರ (ಬೋಧನೆಗಳನ್ನು ಒಪ್ಪಿ) ವಿಶ್ವಾಸಿಯಾದರು. ಇಬ್ರಾಹೀಮ್ ಹೇಳಿದರು: (ಇಲ್ಲಿ ಎಲ್ಲರೂ ನನ್ನನ್ನು ತಿರಸ್ಕರಿಸಿದ ಕಾರಣ, ಲೂತ್ ರನ್ನು ಕರೆದುಕೊಂಡು) ನನ್ನ ಪ್ರಭುವಿನ ಮಾರ್ಗದಲ್ಲಿ ನಾನು ವಲಸೆ ಹೋಗುತ್ತಿದ್ದೇನೆ! ಹೌದು, ಆ ಪ್ರಭು ಅತಿ ಪ್ರಬಲನೂ ಅತ್ಯಂತ ವಿವೇಕಶಾಲಿಯೂ ಆಗಿರುವನು. {26}
وَوَهَبْنَا لَهُ إِسْحَاقَ وَيَعْقُوبَ وَجَعَلْنَا فِي ذُرِّيَّتِهِ النُّبُوَّةَ وَالْكِتَابَ وَآتَيْنَاهُ أَجْرَهُ فِي الدُّنْيَا ۖ وَإِنَّهُ فِي الْآخِرَةِ لَمِنَ الصَّالِحِينَ
ಪ್ರವಾದಿ ಇಬ್ರಾಹೀಮ್ ರಿಗೆ ನಾವು ಇಸ್‌ಹಾಕ್ ರನ್ನೂ ನಂತರ ಯಅಕೂಬ್ ರನ್ನೂ (ಪುತ್ರ ಮತ್ತು ಪೌತ್ರರನ್ನಾಗಿ) ನೀಡಿದೆವು. ತರುವಾಯ, ಅವರ ಸಂತತಿಯಲ್ಲಿ ನಾವು ಪ್ರವಾದಿತ್ವವನ್ನು ಮುಂದುವರಿಸಿದೆವು; ದಿವ್ಯಗ್ರಂಥಗಳನ್ನು ನೀಡಿದೆವು. ಹಾಗೆ ಇಬ್ರಾಹೀಮ್ ರಿಗೆ ಈ ಲೋಕದಲ್ಲಿ ಕೂಡ ನಾವು ಪ್ರತಿಫಲ ನೀಡಿದೆವು; ಮತ್ತು ಪರಲೋಕದಲ್ಲಿ ಕೂಡ ಅವರು ಖಚಿತವಾಗಿ ಸಜ್ಜನರ ಸಾಲಿಗೆ ಸೇರಿರುವರು. {27}
وَلُوطًا إِذْ قَالَ لِقَوْمِهِ إِنَّكُمْ لَتَأْتُونَ الْفَاحِشَةَ مَا سَبَقَكُمْ بِهَا مِنْ أَحَدٍ مِنَ الْعَالَمِينَ
ಪ್ರವಾದಿ ಲೂತ್ ರು ಸಹ ತಮ್ಮ ಜನತೆಗೆ ಹೇಳಿದ್ದನ್ನು ನೆನಪಿಸಿರಿ: ಜನರೇ, ನಿಜವಾಗಿ ಲೋಕವಾಸಿಗಳ ಪೈಕಿ ನಿಮಗಿಂತ ಮುಂಚೆ ಯಾರೂ ಮಾಡಿರದಂತಹ ಅಶ್ಲೀಲ ಕೃತ್ಯವನ್ನು ನೀವು ಮಾಡುತ್ತಿರುವಿರಿ. {28}
أَئِنَّكُمْ لَتَأْتُونَ الرِّجَالَ وَتَقْطَعُونَ السَّبِيلَ وَتَأْتُونَ فِي نَادِيكُمُ الْمُنْكَرَ ۖ فَمَا كَانَ جَوَابَ قَوْمِهِ إِلَّا أَنْ قَالُوا ائْتِنَا بِعَذَابِ اللَّهِ إِنْ كُنْتَ مِنَ الصَّادِقِينَ
ಏನು? ನೀವು (ಲೈಂಗಿಕ ತೃಷೆ ತೀರಿಸಲು ಪತ್ನಿಯರನ್ನು ಬಿಟ್ಟು) ಪುರುಷರ ಬಳಿಗೆ ಹೋಗುವುದೇ? (ಆ ಮೂಲಕ ಅದರ ಪ್ರಕೃತಿ ಸಹಜವಾದ) ಮಾರ್ಗಕ್ಕೆ ಕತ್ತರಿ ಇಡುವುದೇ? ನೀವು ನಡೆಸುವ ಸಭೆಗಳಲ್ಲಿ (ಬಹಿರಂಗವಾಗಿಯೇ) ಅಂತಹ ನೀಚಕೃತ್ಯಗಳಲ್ಲಿ ಏರ್ಪಡುವುದೇ? (ಎಂದು ಲೂತ್ ರು ಕೇಳಿದಾಗ) ಅವರ ಜನಾಂಗದ ಪ್ರತಿಕ್ರಿಯೆಯು, ನೀವು ಸತ್ಯವಂತರು ಹೌದಾದರೆ ಅಲ್ಲಾಹ್ ನ ಶಿಕ್ಷೆ ನಮ್ಮ ಮೇಲೆ ಎರಗುವಂತೆ ಮಾಡಿರಿ ಎಂದು ಹೇಳುವುದಲ್ಲದೆ ಬೇರೇನೂ ಆಗಿರಲಿಲ್ಲ. {29}
قَالَ رَبِّ انْصُرْنِي عَلَى الْقَوْمِ الْمُفْسِدِينَ
ಕೊನೆಗೆ ಲೂತ್ ರವರು, ಓ ನನ್ನ ಪರಿಪಾಲಕನೇ, ಭ್ರಷ್ಟರಾದ ಈ ಜನತೆಯ ವಿರುದ್ಧ ನನಗೆ ಸಹಾಯ ಒದಗಿಸು ಎಂದು ಪ್ರಾರ್ಥಿಸಿಕೊಂಡರು. {30}
وَلَمَّا جَاءَتْ رُسُلُنَا إِبْرَاهِيمَ بِالْبُشْرَىٰ قَالُوا إِنَّا مُهْلِكُو أَهْلِ هَٰذِهِ الْقَرْيَةِ ۖ إِنَّ أَهْلَهَا كَانُوا ظَالِمِينَ
ನಾವು ಕಳುಹಿಸಿದಂತಹ ನಮ್ಮ ದೂತರುಗಳು (ಅಂದರೆ ಮಲಕ್ ವರ್ಗಕ್ಕೆ ಸೇರಿದವರು) ಪ್ರವಾದಿ ಇಬ್ರಾಹೀಮ್ ರ ಬಳಿಗೆ ಒಂದು ಶುಭವಾರ್ತೆಯೊಂದಿಗೆ ಬಂದಾಗ (ಅದರ ಜೊತೆಗೆ ಮತ್ತೊಂದು ವಿಷಯವನ್ನೂ) ಹೇಳಿದರು: ನಾವು ಈ ನಾಡಿನ ಜನರನ್ನು ನಾಶ ಮಾಡಿಯೇ ತೀರುವೆವು, ಏಕೆಂದರೆ ಇಲ್ಲಿಯ ಜನರು ಬಹಳ ದುಷ್ಕರ್ಮಿಗಳಾಗಿ ಬಿಟ್ಟಿದ್ದಾರೆ! {31}
قَالَ إِنَّ فِيهَا لُوطًا ۚ قَالُوا نَحْنُ أَعْلَمُ بِمَنْ فِيهَا ۖ لَنُنَجِّيَنَّهُ وَأَهْلَهُ إِلَّا امْرَأَتَهُ كَانَتْ مِنَ الْغَابِرِينَ
ಈ ನಾಡಿನಲ್ಲಿ ಲೂತ್ ರವರು ಸಹ ಇದ್ದಾರೆ ತಾನೆ! ಇಬ್ರಾಹೀಮ್ ರು (ಗಾಬರಿಯಾಗಿ) ಹೇಳಿದರು. ಮಲಕ್ ಗಳು ಉತ್ತರಿಸಿದರು: ಈ ನಾಡಿನಲ್ಲಿ ಇರುವವರ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ. ಲೂತ್ ರನ್ನೂ ಅವರ ಮನೆಯ ಎಲ್ಲರನ್ನೂ ನಾವು ಖಂಡಿತ ರಕ್ಷಿಸುತ್ತೇವೆ. ಆದರೆ ಅವರ ಪತ್ನಿಯೊಬ್ಬಳ ಹೊರತು! ಆಕೆ ಹಿಂದೆಯೇ ಉಳಿದುಕೊಂಡವರ ಗುಂಪಿಗೆ ಸೇರಿರುವಳು. {32}
وَلَمَّا أَنْ جَاءَتْ رُسُلُنَا لُوطًا سِيءَ بِهِمْ وَضَاقَ بِهِمْ ذَرْعًا وَقَالُوا لَا تَخَفْ وَلَا تَحْزَنْ ۖ إِنَّا مُنَجُّوكَ وَأَهْلَكَ إِلَّا امْرَأَتَكَ كَانَتْ مِنَ الْغَابِرِينَ
ಯಾವಾಗ ನಮ್ಮ ದೂತರು (ಅರ್ಥಾತ್ ಶಿಕ್ಷೆ ಕೊಡುವ ಮಲಕ್ ಗಳು) ಪ್ರವಾದಿ ಲೂತ್ ರ ಸನ್ನಿಧಿಗೆ ತಲುಪಿದರೋ, ಲೂತ್ ರಿಗೆ ಸಂಕಟವಾಯಿತು ಮತ್ತು ಅವರು ಹೃದಯದಲ್ಲಿ ಇಕ್ಕಟ್ಟು ಅನುಭವಿಸಿದರು. ಮಲಕ್ ಗಳು ಹೇಳಿದರು: ನೀವು ಭಯಪಡಬೇಡಿ, ದುಃಖಿಸುವ ಅಗತ್ಯವೂ ಇಲ್ಲ. ನಾವು ನಿಮ್ಮನ್ನೂ ನಿಮ್ಮ ಮನೆಯವರೆಲ್ಲರನ್ನೂ ರಕ್ಷಿಸುತ್ತೇವೆ; ಆದರೆ ಆ ನಿಮ್ಮ ಪತ್ನಿಯ ಹೊರತು! ಆಕೆ ಹಿಂದೆ ಉಳಿದವರಲ್ಲಿ ಸೇರಿರುವಳು. {33}
إِنَّا مُنْزِلُونَ عَلَىٰ أَهْلِ هَٰذِهِ الْقَرْيَةِ رِجْزًا مِنَ السَّمَاءِ بِمَا كَانُوا يَفْسُقُونَ
ಸಂಶಯಾತೀತವಾಗಿ, ಈ ನಾಡಿನ ಜನರು ಎಸಗಿದ ದುಷ್ಕೃತ್ಯಗಳ ಕಾರಣ ನಾವು ಆಕಾಶದಿಂದ ಅವರ ಮೇಲೆ ಶಿಕ್ಷೆ ಎರಗಿಸಲಿದ್ದೇವೆ. {34}
وَلَقَدْ تَرَكْنَا مِنْهَا آيَةً بَيِّنَةً لِقَوْمٍ يَعْقِلُونَ
[ಹಾಗೆ ನಮ್ಮ ದೂತರಾದ ಮಲಕ್ ಗಳು ಆ ನಾಡನ್ನೇ ನಾಶ ಪಡಿಸಿಯಾಯಿತು]! ಆದರೆ ಬುದ್ಧಿ ಉಪಯೋಗಿಸಿ ಪಾಠ ಕಲಿಯುವ ಜನರಿಗಾಗಿ ನಾವು ಅದರ ಅವಶೇಷವನ್ನು ಒಂದು ಜ್ವಲಂತ ದೃಷ್ಟಾಂತವಾಗಿಸಿ (ಇಂದಿಗೂ) ಇರಿಸಿದ್ದೇವೆ. {35}
وَإِلَىٰ مَدْيَنَ أَخَاهُمْ شُعَيْبًا فَقَالَ يَا قَوْمِ اعْبُدُوا اللَّهَ وَارْجُوا الْيَوْمَ الْآخِرَ وَلَا تَعْثَوْا فِي الْأَرْضِ مُفْسِدِينَ
ಹಾಗೆಯೇ ಮದ್‌ಯನ್ ಪ್ರದೇಶದತ್ತ ಅವರ ಸಹೋದರನಾದ ಶುಐಬ್ ರನ್ನು ನಾವು ಕಳುಹಿಸೆದೆವು. ಅವರು ಹೇಳಿದರು: ಓ ನನ್ನ ಜನರೇ! ಅಲ್ಲಾಹ್ ನನ್ನು ಆರಾಧಿಸಿರಿ ಮತ್ತು ಪುನರುತ್ಥಾನದ ದಿನವನ್ನು ನಿರೀಕ್ಷಿಸಿರಿ. ನಾಡಿನಲ್ಲಿ ಭ್ರಷ್ಟತನವನ್ನು ಹಬ್ಬುತ್ತಾ ಅಲೆಯದಿರಿ. {36}
فَكَذَّبُوهُ فَأَخَذَتْهُمُ الرَّجْفَةُ فَأَصْبَحُوا فِي دَارِهِمْ جَاثِمِينَ
ಆದರೆ ಆ ಜನರು ಅವರ ಮಾತನ್ನು ನಿರಾಕರಿಸಿದರು. ಆಗ ಪ್ರಚಂಡ ಭೂಕಂಪವೊಂದು ಅವರನ್ನು ಆವರಿಸಿತು ಮತ್ತು ಅವರೆಲ್ಲ ತಮ್ಮದೇ ಮನೆಗಳಲ್ಲಿ ಅಧೋಮುಖವಾಗಿ ಸತ್ತು ಬಿದ್ದಿದ್ದರು! {37}
وَعَادًا وَثَمُودَ وَقَدْ تَبَيَّنَ لَكُمْ مِنْ مَسَاكِنِهِمْ ۖ وَزَيَّنَ لَهُمُ الشَّيْطَانُ أَعْمَالَهُمْ فَصَدَّهُمْ عَنِ السَّبِيلِ وَكَانُوا مُسْتَبْصِرِينَ
ಇನ್ನು ಆದ್ ಮತ್ತು ತಮೂದ್ ಎಂಬ ಸಮುದಾಯ ಗಳು ಸಹ ಹಾಗೆಯೇ ನಾಶವಾದರು! (ಕುರೈಷರೇ), ಅವರ ನಿವಾಸಗಳ ಅವಶಿಷ್ಟಗಳು (ಎಲ್ಲಿವೆ, ಯಾವ ಸ್ಥಿತಿಯಲ್ಲಿವೆ ಎಂಬುದು) ನಿಮಗೆ ಸ್ಪಷ್ಟವಾಗಿ ತಿಳಿದಿದೆ. ಅವರ ದುಷ್ಕೃತ್ಯಗಳನ್ನು ಸೈತಾನನು ಬಹಳ ಚಂದಗೊಳಿಸಿ ಅವರಿಗೆ ತೋರಿಸಿದನು ಮತ್ತು ಆ ಮೂಲಕ ಅವರನ್ನು ಸತ್ಪಥ ಸ್ವೀಕರಿಸದಂತೆ ತಡೆದನು. ಇಷ್ಟಾಗಿ ಅವರು (ಯಾವುದು ಸರಿದಾರಿ ಮತ್ತು ಯಾವುದು ತಪ್ಪುದಾರಿಯೆಂದು) ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿದವರೇ ಆಗಿದ್ದರು! {38}
وَقَارُونَ وَفِرْعَوْنَ وَهَامَانَ ۖ وَلَقَدْ جَاءَهُمْ مُوسَىٰ بِالْبَيِّنَاتِ فَاسْتَكْبَرُوا فِي الْأَرْضِ وَمَا كَانُوا سَابِقِينَ
ಇನ್ನು, ಆ ಕಾರೂನ್, ಫಿರ್‌ಔನ್ ಹಾಗೂ ಹಾಮಾನ್ ಎಂಬ (ದುರಹಂಕಾರಿಗಳ) ವಿಷಯವೂ ಅಷ್ಟೆ! ಅವರ ಬಳಿಗೆ ಪ್ರವಾದಿ ಮೂಸಾ ಅತ್ಯಂತ ಜ್ವಲಂತ ನಿದರ್ಶನಗಳೊಂದಿಗೆ ಬಂದಿದ್ದರು. ಆದರೆ ಅವರೆಲ್ಲ (ಸತ್ಯವನ್ನು ಸ್ವೀಕರಿಸುವ ಬದಲು) ನಾಡಿನಲ್ಲಿ ಅಹಂಕಾರ ಮೆರೆದರು. ಹೌದು ಅವರಾರಿಗೂ ಓಡಿ ನಮ್ಮ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. {39}
فَكُلًّا أَخَذْنَا بِذَنْبِهِ ۖ فَمِنْهُمْ مَنْ أَرْسَلْنَا عَلَيْهِ حَاصِبًا وَمِنْهُمْ مَنْ أَخَذَتْهُ الصَّيْحَةُ وَمِنْهُمْ مَنْ خَسَفْنَا بِهِ الْأَرْضَ وَمِنْهُمْ مَنْ أَغْرَقْنَا ۚ وَمَا كَانَ اللَّهُ لِيَظْلِمَهُمْ وَلَٰكِنْ كَانُوا أَنْفُسَهُمْ يَظْلِمُونَ
ಪ್ರತಿಯೊಬ್ಬರನ್ನೂ ನಾವು ಅವರೆಸಗಿದ ಪಾಪಕ್ಕಾಗಿ ಹಿಡಿದು ಶಿಕ್ಷಿಸಿದೆವು. ಅವರಲ್ಲಿ ಕೆಲವರ ಮೇಲೆ ನಾವು ಕಲ್ಲು ಮಿಶ್ರಿತ ಬಿರುಗಾಳಿಯನ್ನು ಕಳುಹಿಸಿದ್ದೆವು; ಕೆಲವರನ್ನು ಭಯಂಕರವಾದ ಆಸ್ಫೋಟವು ಬಲಿ ತೆಗೆದು ಕೊಂಡಿತು. ಕೆಲವರನ್ನು ನಾವು ನೆಲದೊಳಗೆ ಹುದುಗಿಸಿ ಬಿಟ್ಟೆವು. ಇನ್ನು ಕೆವರನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸಿದೆವು. ಹೌದು, ಅಲ್ಲಾಹ್ ನು ಅವರ ಮೇಲೆ ಯಾವ ಅನ್ಯಾಯವನ್ನೂ ಮಾಡಲಿಲ್ಲ; ಬದಲಾಗಿ ಅವರೆಲ್ಲ ಸ್ವತಃ ತಮ್ಮ ಮೇಲೆ ತಾವೇ ಅನ್ಯಾಯ ಮಾಡಿದವರಾಗಿದ್ದರು. {40}
مَثَلُ الَّذِينَ اتَّخَذُوا مِنْ دُونِ اللَّهِ أَوْلِيَاءَ كَمَثَلِ الْعَنْكَبُوتِ اتَّخَذَتْ بَيْتًا ۖ وَإِنَّ أَوْهَنَ الْبُيُوتِ لَبَيْتُ الْعَنْكَبُوتِ ۖ لَوْ كَانُوا يَعْلَمُونَ
ಅಲ್ಲಾಹ್ ನನ್ನು ಬಿಟ್ಟು ಇತರರನ್ನು ರಕ್ಷಕರನ್ನಾಗಿ ಸ್ವೀಕರಿಸುವವರ ಉದಾಹರಣೆಯು ಜೇಡನ ಹುಳು ತನ್ನ ರಕ್ಷಣೆಗಾಗಿ ಮನೆ ಕಟ್ಟಿಕೊಂಡಂತೆ! ನಿಜವಾಗಿ ಮನೆಗಳಲ್ಲೇ ಅತ್ಯಂತ ದುರ್ಬಲವಾದ ಮನೆ ಜೇಡ ನಿರ್ಮಿಸುವ ಮನೆ. ಅದನ್ನವರು ತಿಳಿದಿದ್ದರೆ...! {41}
إِنَّ اللَّهَ يَعْلَمُ مَا يَدْعُونَ مِنْ دُونِهِ مِنْ شَيْءٍ ۚ وَهُوَ الْعَزِيزُ الْحَكِيمُ
ಅಲ್ಲಾಹ್ ನನ್ನು ಬಿಟ್ಟು ಜನರು ಯಾವುದಕ್ಕೆಲ್ಲ ಮೊರಯಿಡುತ್ತಾರೆ ಎಂಬುದು ಅಲ್ಲಾಹ್ ನಿಗೆ ಚೆನ್ನಾಗಿ ತಿಳಿದಿರುವ ವಿಷಯ. ಅವನು ಅತ್ಯಂತ ಪ್ರಬಲನೂ ವಿವೇಕಪೂರ್ಣನೂ ಆಗಿರುವನು. {42}
وَتِلْكَ الْأَمْثَالُ نَضْرِبُهَا لِلنَّاسِ ۖ وَمَا يَعْقِلُهَا إِلَّا الْعَالِمُونَ
ಜನರು ಅರ್ಥಮಾಡಿಕೊಳ್ಳಲೆಂದು ನಾವು ಇಂತಹ ಉದಾಹಣೆಗಳನ್ನು ನೀಡುತ್ತೇವೆ. ಆದರೆ ತಿಳುವಳಿಕೆಯಿರುವ ಜನರ ಹೊರತು ಉಳಿದವರಿಗೆ ಅದು ಮನವರಿಕೆ ಆಗುವುದಿಲ್ಲ! {43}
خَلَقَ اللَّهُ السَّمَاوَاتِ وَالْأَرْضَ بِالْحَقِّ ۚ إِنَّ فِي ذَٰلِكَ لَآيَةً لِلْمُؤْمِنِينَ
ಆಕಾಶಗಳನ್ನೂ ಭೂಮಿಯನ್ನೂ ನ್ಯಾಯಯುತವಾಗಿಯೇ ಅಲ್ಲಾಹ್ ನು ಸೃಷ್ಟಿ ಮಾಡಿರುವನು. ಅದರಲ್ಲಿ ವಿಶ್ವಾಸಿಗಳಿಗೆ ಸಾಕಷ್ಟು ದೃಷ್ಟಾಂತಗಳೂ ಇವೆ. {44}
اتْلُ مَا أُوحِيَ إِلَيْكَ مِنَ الْكِتَابِ وَأَقِمِ الصَّلَاةَ ۖ إِنَّ الصَّلَاةَ تَنْهَىٰ عَنِ الْفَحْشَاءِ وَالْمُنْكَرِ ۗ وَلَذِكْرُ اللَّهِ أَكْبَرُ ۗ وَاللَّهُ يَعْلَمُ مَا تَصْنَعُونَ
ವಹೀ (ಅರ್ಥಾತ್ ದಿವ್ಯಸಂದೇಶದ) ಮೂಲಕ, ಪೈಗಂಬರರೇ, ನಿಮಗೆ ಕಳುಹಿಸಲಾದ ದಿವ್ಯಗ್ರಂಥವನ್ನು ಓದಿ ಕೇಳಿಸಿರಿ ಮತ್ತು (ಅಲ್ಲಾಹ್ ನ ಸ್ಮರಣೆಗಾಗಿ) ನಮಾಝ್ ಅನ್ನು ನಿಷ್ಠೆಯೊಂದಿಗೆ ನಿರ್ವಹಿಸುವವರಾಗಿರಿ. ವಾಸ್ತವದಲ್ಲಿ ನಮಾಝ್ ಅನೈತಿಕ ಮತ್ತು ಸ್ವೀಕಾರಾರ್ಹವಲ್ಲದ ಕೃತ್ಯಗಳಿಂದ ತಡೆಯುತ್ತದೆ. ಅಲ್ಲಾಹ್ ನ ಸ್ಮರಣೆಯೇ ಎಲ್ಲಕ್ಕಿಂತ ಮಹತ್ವವುಳ್ಳ ಸಂಗತಿ! ನೀವು ಏನು ಮಾಡುತ್ತಿರುವಿರಿ ಎಂಬುದು ಅಲ್ಲಾಹ್ ನಿಗೆ ತಿಳಿದಿರುತ್ತದೆ. {45}
وَلَا تُجَادِلُوا أَهْلَ الْكِتَابِ إِلَّا بِالَّتِي هِيَ أَحْسَنُ إِلَّا الَّذِينَ ظَلَمُوا مِنْهُمْ ۖ وَقُولُوا آمَنَّا بِالَّذِي أُنْزِلَ إِلَيْنَا وَأُنْزِلَ إِلَيْكُمْ وَإِلَٰهُنَا وَإِلَٰهُكُمْ وَاحِدٌ وَنَحْنُ لَهُ مُسْلِمُونَ
(ತೋರಾ, ಇಂಜೀಲ್ ಮುಂತಾದ ದಿವ್ಯ) ಗ್ರಂಥಗಳನ್ನು ಹೊಂದಿರುವ ಜನರೊಂದಿಗೆ [ಅರ್ಥಾತ್ ಯಹೂದಿ ಮತ್ತು ನಸಾರಾ ಗಳೊಂದಿಗೆ ಚರ್ಚಿಸುವ ಅಗತ್ಯ ಎದುರಾದರೆ] ಬಹಳ ಸಭ್ಯತೆಯೊಂದಿಗೆ ಮಾತ್ರ ಮಾತುಕತೆ ನಡೆಸಿರಿ. ಅವರಲ್ಲಿನ ದುಷ್ಟರನ್ನು ಅದರಿಂದ ಹೊರತುಪಡಿಸಿರಿ. ಅವರೊಂದಿಗೆ ಹೇಳಿರಿ: ನಮ್ಮತ್ತ ಕಳುಹಿಸಲಾದ ಮತ್ತು ನಿಮ್ಮತ್ತ ಕಳುಹಿಸಲಾದ ಎಲ್ಲಾ ದಿವ್ಯಗ್ರಂಥಗಳನ್ನು ನಾವು ನಂಬುವವರಾಗಿದ್ದೇವೆ; ಮಾತ್ರವಲ್ಲ, ನಮ್ಮ ಮತ್ತು ನಿಮ್ಮ ದೇವನು ಸಹ ಒಬ್ಬನೇ, ಮತ್ತು ನಾವು ಅದೇ ದೇವನ ಮುಂದೆ ಶರಣಾಗಿ ಮುಸ್ಲಿಮರಾಗಿದ್ದೇವೆ! {46}
وَكَذَٰلِكَ أَنْزَلْنَا إِلَيْكَ الْكِتَابَ ۚ فَالَّذِينَ آتَيْنَاهُمُ الْكِتَابَ يُؤْمِنُونَ بِهِ ۖ وَمِنْ هَٰؤُلَاءِ مَنْ يُؤْمِنُ بِهِ ۚ وَمَا يَجْحَدُ بِآيَاتِنَا إِلَّا الْكَافِرُونَ
ಪೈಗಂಬರರೇ, (ಯಹೂದಿ ಮತ್ತು ನಸಾರಾ ಗಳಿಗೆ ನೀಡೀದ) ಹಾಗೆಯೇ ನಿಮಗೂ ದಿವ್ಯಗ್ರಂಥವನ್ನು ನಾವು ನೀಡಿದ್ದೇವೆ. ಯಾರಿಗೆ ನಾವು (ಈ ಮೊದಲು) ಗ್ರಂಥ ನೀಡಿದ್ದೆವೋ (ಮತ್ತು ಅದನ್ನು ಅವರು ನಂಬಿರುವರೋ) ಅಂತಹವರು ಈಗ ಇದನ್ನು ಸಹ ನಂಬುತ್ತಾರೆ. ಹೌದು, ಈ ಜನರಲ್ಲಿ (ಅರ್ಥಾತ್ ಮಕ್ಕಾ ನಿವಾಸಿಗಳಲ್ಲಿ ಸಹ) ಕೆಲವರು ಇದನ್ನು ನಂಬಿದ್ದಾರೆ. ನಿಜವೇನೆಂದರೆ (ಸತ್ಯವು ಸ್ಪಷ್ಟವಾದಾಗ ಅದನ್ನು) ಉದ್ಧಟತನಿದಿಂದ ನಿರಾಕರಿವವರ ಹೊರತು ಬೇರೆ ಯಾರೂ ನಮ್ಮ ವಚನಗಳನ್ನು ವಿರೋಧಿಸುವುದಿಲ್ಲ. {47}
وَمَا كُنْتَ تَتْلُو مِنْ قَبْلِهِ مِنْ كِتَابٍ وَلَا تَخُطُّهُ بِيَمِينِكَ ۖ إِذًا لَارْتَابَ الْمُبْطِلُونَ
ಪೈಗಂಬರರೇ, ಇದಕ್ಕಿಂತ ಮುಂಚೆ ಯಾವ ಪುಸ್ತಕವನ್ನೂ ನೀವು ಓದಿದವರಲ್ಲ. ನಿಮ್ಮ ಕೈಯಿಂದ ನೀವು ಅದನ್ನು ಬರೆದವರೂ ಅಲ್ಲ! ಅನ್ಯಥಾ ಈ ಸುಳ್ಳುಗಾರರು ನಿಮ್ಮ (ಪ್ರವಾದಿತ್ವವನ್ನು) ಶಂಕಿಸುತ್ತಿದ್ದರು! {48}
بَلْ هُوَ آيَاتٌ بَيِّنَاتٌ فِي صُدُورِ الَّذِينَ أُوتُوا الْعِلْمَ ۚ وَمَا يَجْحَدُ بِآيَاتِنَا إِلَّا الظَّالِمُونَ
ಇಲ್ಲ! ನಿಜವಾಗಿಯೂ ಇವು (ಶಂಕೆಗೆ ಆಸ್ಪದವಿಲ್ಲದ) ಬಹಳ ಸ್ಪಷ್ಟವಾದ ವಚನಗಳು! ಸುಜ್ಞಾನ ಪಡೆದವರಿಗೆ ಹೃದಯಂಗಮವಾಗಿದೆ! ನಿಜವೇನೆಂದರೆ ದುಷ್ಟತನದಿಂದ ವರ್ತಿಸುವವರ ಹೊರತು ಬೇರೆ ಯಾರೂ ನಮ್ಮ ವಚನಗಳನ್ನು (ಒಪ್ಪಿಕೊಳ್ಳುವ ಬದಲು) ವಿರೋಧಿಸುವುದಿಲ್ಲ. {49}
وَقَالُوا لَوْلَا أُنْزِلَ عَلَيْهِ آيَاتٌ مِنْ رَبِّهِ ۖ قُلْ إِنَّمَا الْآيَاتُ عِنْدَ اللَّهِ وَإِنَّمَا أَنَا نَذِيرٌ مُبِينٌ
ಅಂತಹವರು ಹೇಳುತ್ತಾರೆ: ಆತನ ಪ್ರಭುವಿನ ಕಡೆಯಿಂದ ಆತನ ಬಳಿಗೆ ಪುರಾವೆಗಳೇಕೆ ನೀಡಲಾಗಿಲ್ಲ? ಪೈಗಂಬರರೇ, ಪುರಾವೆಗಳೆಲ್ಲ ಅಲ್ಲಾಹ್ ನ ಬಳಿ ಇವೆ; ನಾನು ಕೇವಲ (ಪರಲೋಕಲ್ಲಿ ನಡೆಯಲಿರುವ ವಿಚಾರಣೆಯ ಬಗ್ಗೆ ನಿಮಗೆ) ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುತ್ತಿದ್ದೇನೆ, ಎಂದು ಅವರೊಂದಿಗೆ ಹೇಳಿರಿ. {50}
أَوَلَمْ يَكْفِهِمْ أَنَّا أَنْزَلْنَا عَلَيْكَ الْكِتَابَ يُتْلَىٰ عَلَيْهِمْ ۚ إِنَّ فِي ذَٰلِكَ لَرَحْمَةً وَذِكْرَىٰ لِقَوْمٍ يُؤْمِنُونَ
ನೀವು ಆ ಜನರಿಗೆ ಓದಿ ತಿಳಿಸುತ್ತಿರುವ ಒಂದು ಗ್ರಂಥವನ್ನು ನಿಮ್ಮತ್ತ ಇಳಿಸಿ ಕೊಡಲಾದುದು, ಪುರಾವೆಯಾಗಿ ಅವರಿಗೆ ಸಾಲದೇ ಹೋಯಿತೇ?! ನಿಜವಾಗಿಯೂ ವಿಶ್ವಾಸಿಗಳಾಗುವ ಜನರ ಪಾಲಿಗೆ ಅದರಲ್ಲಿ ಖಂಡಿತವಾಗಿ ಅನುಗ್ರಹವೂ ಇದೆ, ಉಪದೇಶವೂ ಇದೆ. {51}
قُلْ كَفَىٰ بِاللَّهِ بَيْنِي وَبَيْنَكُمْ شَهِيدًا ۖ يَعْلَمُ مَا فِي السَّمَاوَاتِ وَالْأَرْضِ ۗ وَالَّذِينَ آمَنُوا بِالْبَاطِلِ وَكَفَرُوا بِاللَّهِ أُولَٰئِكَ هُمُ الْخَاسِرُونَ
ನೀವು ಅವರೊಂದಿಗೆ ಹೇಳಿರಿ: ನನ್ನ ಮತ್ತು ನಿಮ್ಮ ನಡುವೆ ಒಬ್ಬ ಸಾಕ್ಷಿಯಾಗಿ ಅಲ್ಲಾಹ್ ನು ಮಾತ್ರವೇ ಸಾಕು. ಅವನಿಗೆ ಭೂಮಿ ಮತ್ತು ಆಕಾಶಗಳಲ್ಲಿರುವ ಪ್ರತಿಯೊಂದು ವಿಷಯವೂ ತಿಳಿದಿದೆ. ಅಲ್ಲಾಹ್ ನನ್ನು ಧಿಕ್ಕರಿಸಿ ಮಿಥ್ಯ ದೇವ-ದೇವತೆಗಳೊಂದಿಗೆ ವಿಶ್ವಾಸ ಬೆಳೆಸಿದವರು ಯಾರೋ ಅವರೇ ನಷ್ಟ ಅನುಭಸುವ ಜನರಾಗಿದ್ದಾರೆ. {52}
وَيَسْتَعْجِلُونَكَ بِالْعَذَابِ ۚ وَلَوْلَا أَجَلٌ مُسَمًّى لَجَاءَهُمُ الْعَذَابُ وَلَيَأْتِيَنَّهُمْ بَغْتَةً وَهُمْ لَا يَشْعُرُونَ
ಶಿಕ್ಷೆಯ ಬರುವಿಕೆಯ ಬಗ್ಗೆ, ಪೈಗಂಬರರೇ, ಅವರು ನಿಮ್ಮನ್ನು (ಲೇವಡಿ ಮಾಡುತ್ತಾ) ಆತುರಪಡಿಸುತ್ತಿದ್ದಾರೆ. ಸಮಯವೊಂದು ಅದಕ್ಕಾಗಿ ನಿಶ್ಚಿತಗೊಳ್ಳದೇ ಇರುತ್ತಿದ್ದರೆ ಅದಾಗಲೇ ಅವರ ಮೇಲೆ ಶಿಕ್ಷೆ ಎರಗಿ ಬಿದ್ದಿರುತ್ತಿತ್ತು. ಹೌದು, ಅದು ಹಠಾತ್ತಾಗಿ, ಅವರ ಊಹೆಗೂ ಸಿಲುಕದಂತೆ ಅವರ ಮೇಲೆ ಎರಗಿಯೇ ತೀರಲಿದೆ! {53}
يَسْتَعْجِلُونَكَ بِالْعَذَابِ وَإِنَّ جَهَنَّمَ لَمُحِيطَةٌ بِالْكَافِرِينَ
ಶಿಕ್ಷೆಗಾಗಿ ಅವರು ನಿಮ್ಮನ್ನು ಆತುರಪಡಿಸುತ್ತಿದ್ದಾರೆ! ಆದರೆ ಯಥಾರ್ಥದಲ್ಲಿ ನರಕವು ಅವರನ್ನು ಈಗಾಗಲೇ ಸುತ್ತುವರಿದು ನಿಂತಿದೆ! {54}
يَوْمَ يَغْشَاهُمُ الْعَذَابُ مِنْ فَوْقِهِمْ وَمِنْ تَحْتِ أَرْجُلِهِمْ وَيَقُولُ ذُوقُوا مَا كُنْتُمْ تَعْمَلُونَ
ಅವರನ್ನು ಮೇಲ್ಭಾಗದಿಂದಲೂ, ಕಾಲ ತಳಭಾಗದಿಂದಲೂ ಆ ನರಕ ಶಿಕ್ಷೆ ಆವರಿಸಿಕೊಳ್ಳುವ ದಿನ ನೀವು ಮಾಡಿದ ಕರ್ಮದ ಫಲವನ್ನು ಸವಿಯಿರಿ ಎಂದು ಅವನು ಹೇಳಲಿರುವನು. {55}
يَا عِبَادِيَ الَّذِينَ آمَنُوا إِنَّ أَرْضِي وَاسِعَةٌ فَإِيَّايَ فَاعْبُدُونِ
ವಿಶ್ವಾಸಿಗಳಾದ ನನ್ನ ಉಪಾಸಕರೇ, [ಅವರು ನಿಮ್ಮನ್ನು ದಮನಿಸಲು ಪ್ರಯತ್ನಿಸಿದರೆ ನೀವು ವಲಸೆ ಹೋಗಬಹುದು]. ನನ್ನ ಭೂಮಿ ಖಂಡಿತವಾಗಿ ಬಹಳ ವಿಶಾಲವಾಗಿದೆ. ನೀವು (ಭೂಮಿಯಲ್ಲಿ ಎಲ್ಲಿ ವಾಸವಾದರೂ) ನನ್ನನ್ನು ಮಾತ್ರ ಆರಾಧಿಸಿರಿ. {56}
كُلُّ نَفْسٍ ذَائِقَةُ الْمَوْتِ ۖ ثُمَّ إِلَيْنَا تُرْجَعُونَ
[ಭೂಮಿಯಲ್ಲಿ ಯಾರೂ ಶಾಶ್ವತವಾಗಿ ಜೀವಿಸಲಾರರು]. ಪ್ರತಿಯೊಬ್ಬನಿಗೂ ಮರಣದ ರುಚಿ ಸವಿಯಲೇ ಬೇಕಾಗಿದೆ. ನಂತರ ನಿಮ್ಮೆಲ್ಲರನ್ನು ನನ್ನ ಬಳಿಗೇ ವರಳಿಸಲಾಗುವುದು. {57}
وَالَّذِينَ آمَنُوا وَعَمِلُوا الصَّالِحَاتِ لَنُبَوِّئَنَّهُمْ مِنَ الْجَنَّةِ غُرَفًا تَجْرِي مِنْ تَحْتِهَا الْأَنْهَارُ خَالِدِينَ فِيهَا ۚ نِعْمَ أَجْرُ الْعَامِلِينَ
ವಿಶ್ವಾಸಿಗಳಾಗಿದ್ದುಕೊಂಡು ಸತ್ಕರ್ಮಗಳನ್ನು ಮಾಡಿದರಿಗೆ ನಾವು ಸ್ವರ್ಗೋದ್ಯಾನದ ಉನ್ನತ ಭವನಗಳಲ್ಲಿ ವಾಸ್ತವ್ಯ ಕಲ್ಪಿಸುವೆವು; ಅದರ ತಳಭಾಗದಲ್ಲಿ ಹೊನಲುಗಳು ಹರಿಯುತ್ತಿರುತ್ತವೆ. ಅಲ್ಲಿ ಅವರು ಸದಾಕಾಲ ನೆಲೆಸುವರು! ಸತ್ಕರ್ಮ ಮಾಡುವವರಿಗೆ ಸಿಗುವ ತಿಫಲ ಎಷ್ಟೊಂದು ಉತ್ಕೃಷ್ಟವಾದುದು! {58}
الَّذِينَ صَبَرُوا وَعَلَىٰ رَبِّهِمْ يَتَوَكَّلُونَ
ಸಹನೆಯೊಂದಿಗೆ ಬದುಕಿದವರಿಗೆ ಮತ್ತು ತಮ್ಮ ಪರಿಪಾಲಕನಾದ ಪ್ರಭುವಿನಲ್ಲಿ ಭರವಸೆ ಇರಿಸಿದವರಿಗೆ (ಇರುವ ಪ್ರತಿಫಲವದು)! {59}
وَكَأَيِّنْ مِنْ دَابَّةٍ لَا تَحْمِلُ رِزْقَهَا اللَّهُ يَرْزُقُهَا وَإِيَّاكُمْ ۚ وَهُوَ السَّمِيعُ الْعَلِيمُ
(ಅಲ್ಲಾಹ್ ನ ಆಜ್ಞೆಯಂತೆ ಬದುಕುವವರು ತಮ್ಮ ಆನ್ನಾಹಾರದ ಬಗ್ಗೆ ಚಿಂತಿತರಾಗುವ ಅಗತ್ಯವಿಲ್ಲ. ಏಕೆಂದರೆ) ಅದೆಷ್ಟು ಜೀವಿಗಳು ಬದುಕುತ್ತಿವೆ - ಅವು ತಮ್ಮ ಅನ್ನಾಹಾರವನ್ನು ಬೆನ್ನ ಮೇಲೆ ಹೊತ್ತು ನಡೆಯುವುದಿಲ್ಲ ತಾನೆ! ಅಲ್ಲಾಹ್ ನೇ ಅವುಗಳಿಗೆ ಆಹಾರ ಒದಗಿಸುತ್ತಾನೆ ಹಾಗೆಯೇ ನಿಮಗೂ ಒದಗಿಸುವನು. ಅವನು (ಎಲ್ಲರ ಮೊರೆಗಳನ್ನು) ಕೇಳಿಸಿಕೊಳ್ಳುತ್ತಾನೆ; ಎಲ್ಲವನ್ನೂ ಚೆನ್ನಾಗಿ ಅರಿತಿರುತ್ತಾನೆ. {60}
وَلَئِنْ سَأَلْتَهُمْ مَنْ خَلَقَ السَّمَاوَاتِ وَالْأَرْضَ وَسَخَّرَ الشَّمْسَ وَالْقَمَرَ لَيَقُولُنَّ اللَّهُ ۖ فَأَنَّىٰ يُؤْفَكُونَ
[ಅವರು ಬುದ್ಧಿ ಉಪಯೋಗಿಸುವುದಿಲ್ಲ]. ಭೂಮಿ ಆಕಾಶಗಳನ್ನು ಸೃಷ್ಟಿಸಿದವನು ಯಾರು ಮತ್ತು ಯಾರು ಸೂರ್ಯ ಚಂದ್ರಾದಿಗಳನ್ನು ಕೆಲಸಕ್ಕೆ ಹಚ್ಚಿದವನು ಎಂದು ನೀವು ಅವರೊಂದಿಗೆ ಕೇಳಿದರೆ "ಅಲ್ಲಾಹ್ ನೇ ಆಗಿರುವನು" ಎಂದೇ ಅವರು ಉತ್ತರಿಸುತ್ತಾರೆ. ಹಾಗಾದರೆ ಅವರು ಮೋಸ ಹೋಗಿರುವುದು ಎಲ್ಲಿಂದ?! {61}
اللَّهُ يَبْسُطُ الرِّزْقَ لِمَنْ يَشَاءُ مِنْ عِبَادِهِ وَيَقْدِرُ لَهُ ۚ إِنَّ اللَّهَ بِكُلِّ شَيْءٍ عَلِيمٌ
ಅಲ್ಲಾಹ್ ನು ತನ್ನ ದಾಸರ ಪೈಕಿ ಯಾರಿಗಾದರೂ ಹೆಚ್ಚು ನೀಡ ಬಯಸಿದರೆ ಬದುಕಿನ ಅವಶ್ಯಕತೆಗಳನ್ನು ಹೇರಳವಾಗಿ ನೀಡುತ್ತಾನೆ; ಇನ್ನು ಯಾರಿಗಾದರೂ ಕುಂಠಿತಗೊಳಿಸ ಬಯಸಿದರೆ ಅದನ್ನು ಕುಂಠಿತಗೊಳಿಸಿ ನೀಡುತ್ತಾನೆ. [ಎಲ್ಲವೂ ಪರೀಕ್ಷಾರ್ಥ], ಆದರೆ ಹೌದು, ಅಲ್ಲಾಹ್ ನಿಗೆ ಸಕಲ ವಿಷಯಗಳ ಬಗ್ಗೆ ಸರ್ವಸಂಪೂರ್ಣವಾದ ಜ್ಞಾನವಿರುತ್ತದೆ! {62}
وَلَئِنْ سَأَلْتَهُمْ مَنْ نَزَّلَ مِنَ السَّمَاءِ مَاءً فَأَحْيَا بِهِ الْأَرْضَ مِنْ بَعْدِ مَوْتِهَا لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ
ಹಾಗೆಯೇ, ಯಾರು ಆಕಾಶದಿಂದ ಮಳೆ ನೀರು ಇಳಿಸಿದವನು ಮತ್ತು ಅದರ ಮೂಲಕ ನಿರ್ಜೀವ ಭೂಮಿಗೆ ಪುನಃ ಜೀವ ನೀಡಿದವನು ಯಾರು ಎಂದು ಅವರೊಂದಿಗೆ ಕೇಳಿದರೆ ಆಗಲೂ "ಅಲ್ಲಹ್ ನೇ ಆಗಿರುವನು" ಎಂದೇ ಅವರು ಉತ್ತರಿಸುತ್ತಾರೆ. (ಹಾಗಾದರೆ) ಎಲ್ಲಾ ಸ್ತುತಿಸ್ತೋತ್ರಗಳು ಅಲ್ಲಾಹ್ ನಿಗೇ ಸಲ್ಲಬೇಕು ಎಂದು ನೀವು ಹೇಳಿರಿ. ಆದರೆ ಇಲ್ಲ; ಅವರಲ್ಲಿ ಹೆಚ್ಚಿನವರು ಬುದ್ಧಿ ಉಪಯೋಗಿಸುವುದಿಲ್ಲ. {63}
وَمَا هَٰذِهِ الْحَيَاةُ الدُّنْيَا إِلَّا لَهْوٌ وَلَعِبٌ ۚ وَإِنَّ الدَّارَ الْآخِرَةَ لَهِيَ الْحَيَوَانُ ۚ لَوْ كَانُوا يَعْلَمُونَ
[ಅವರು ಈ ಲೋಕದ ಬದುಕಿಗೇ ಜೋತು ಬಿದ್ದಿರುವರು! ನಿಜವೆಂದರೆ] ಈ ಲೋಕದ ಬದುಕು ಕೇವಲ ಒಂದು ಆಟ ಮತ್ತು ಒಂದಿಷ್ಟು ತಮಾಷೆಯ ಹೊರತು ಮತ್ತೇನೂ ಅಲ್ಲ. ಯಥಾರ್ಥದಲ್ಲಿ ಪರಲೋಕದ ನಿವಾಸದಲ್ಲಿನ ಬದುಕೇ ನಿಜವಾದ ಬದುಕು! ಅದನ್ನವರು ತಿಳಿದಿರುತ್ತಿದ್ದರೆ... ! {64}
فَإِذَا رَكِبُوا فِي الْفُلْكِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ إِذَا هُمْ يُشْرِكُونَ
ಇನ್ನು, ಅವರು (ಸಮುದ್ರದ ಪ್ರಯಾಣಕ್ಕಾಗಿ) ನೌಕೆಯನ್ನು ಏರಿದಾಗ (ಅವರಿಗೆ ಆಪತ್ತೇನಾದರೂ ಎದುರಾದರೆ) ತಮ್ಮ ಧರ್ಮವನ್ನು ನಿಷ್ಕಳಂಕವಾಗಿಸಿ ಅವರು ಅಲ್ಲಾಹ್ ನಿಗೇ ಮೊರೆಯಿಡುತ್ತಾರೆ! ಆದರೆ ಅವನು ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದರೆ ಕೂಡಲೇ ಅವರು (ತಮ್ಮ ಪ್ರಾರ್ಥನೆಯಲ್ಲಿ) ಅವನೊಂದಿಗೆ ಬೇರೆ ದೇವರುಗಳನ್ನು ಸೇರಿಸಿಕೊಳ್ಳುತ್ತಾರೆ! {65}
لِيَكْفُرُوا بِمَا آتَيْنَاهُمْ وَلِيَتَمَتَّعُوا ۖ فَسَوْفَ يَعْلَمُونَ
ಅದೇಕೆಂದರೆ, ನಾವು ಅವರಿಗೆ ದಯಪಾಲಿಸಿದ (ಅನುಗ್ರಹಗಳಿಗೆ) ಕೃತಘ್ನತೆ ತೋರಲು ಹಾಗೂ (ಅವುಗಳ ಲಾಭ ಪಡೆದು) ಸುಖ ಅನುಭವಿಸಿ ಕೊಳ್ಳಲು! ಇರಲಿ, ಶೀಘ್ರದಲ್ಲೇ ಅವರು ಪರಿಣಾಮವನ್ನು ತಿಳಿಯಲಿರುವರು! {66}
أَوَلَمْ يَرَوْا أَنَّا جَعَلْنَا حَرَمًا آمِنًا وَيُتَخَطَّفُ النَّاسُ مِنْ حَوْلِهِمْ ۚ أَفَبِالْبَاطِلِ يُؤْمِنُونَ وَبِنِعْمَةِ اللَّهِ يَكْفُرُونَ
ಅವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರ (ಸ್ಥಿತಿಯು ಅರಕ್ಷಿತವಾಗಿದ್ದು) ಅಪಹರಿಸಲ್ಪಡುತ್ತಿರುವಾಗ ನಾವು (ಅವರು ವಾಸಿಸುವ) ಹರಮ್ ನ ಪ್ರದೇಶವನ್ನು (ಅಂದರೆ ಮಕ್ಕಾ ಪಟ್ಟಣವನ್ನು) ಸುರಕ್ಷಿತಗೊಳಿಸಿರುವುದನ್ನು ಅವರು ಕಾಣುತ್ತಿಲ್ಲವೇ?! ಅದಾಗ್ಯೂ ಅವರು ಅಲ್ಲಾಹ್ ನ ಅನುಗ್ರಹಗಳಿಗೆ (ಬೇಕಂತಲೇ) ಕೃತಘ್ನತೆ ತೋರಿ ಮಿಥ್ಯವನ್ನು ನಂಬುತ್ತಿದ್ದಾರೆಯೇ?! {67}
وَمَنْ أَظْلَمُ مِمَّنِ افْتَرَىٰ عَلَى اللَّهِ كَذِبًا أَوْ كَذَّبَ بِالْحَقِّ لَمَّا جَاءَهُ ۚ أَلَيْسَ فِي جَهَنَّمَ مَثْوًى لِلْكَافِرِينَ
ಅಲ್ಲಾಹ್ ನ ಬಗ್ಗೆ ಸುಳ್ಳು ಸಂಗತಿಗಳನ್ನು ಕಟ್ಟಿ ಹೇಳುವವನಿಗಿಂತ ಅಥವಾ ಸತ್ಯವು ತನ್ನಲ್ಲಿಗೆ ಬಂದಾಗ ಅದನ್ನು ನಿರಾಕರಿಸಿದನಿಗಿಂತ ದೊಡ್ಡ ದುಷ್ಟ ಯಾರು ತಾನೆ ಇರವನು? ಅಂತಹ ಅಧರ್ಮಿಗಳಿಗೆ ನರಕದಲ್ಲಿ ಸ್ಥಳವಿರಲಾರದೇ?! {68}
وَالَّذِينَ جَاهَدُوا فِينَا لَنَهْدِيَنَّهُمْ سُبُلَنَا ۚ وَإِنَّ اللَّهَ لَمَعَ الْمُحْسِنِينَ
ಹೌದು, ನಮ್ಮ ಮಾರ್ಗದಲ್ಲಿ ಅವಿರತವಾಗಿ ಪ್ರಯತ್ನಿಸುವವರಿಗೆ ನಾವು ನಮ್ಮ ದಾರಿಗಳನ್ನು ತೋರಿಸಿ ಕೊಡುತ್ತೇವೆ. ಖಂಡಿತವಾಗಿ ಅಲ್ಲಾಹ್ ನು ಸತ್ಕರ್ಮ ಮಾಡುವವರ ಜೊತೆಗಿರುತ್ತಾನೆ. {69}
---ಅನುವಾದಿತ ಸೂರಃ ಗಳು
- 001 ಅಲ್ ಫಾತಿಹಃ | ترجمة سورة الفاتحة
- 002 ಅಲ್ ಬಕರಃ | ترجمة سـورة البقـرة
- 003 ಆಲಿ ಇಮ್ರಾನ್ | ترجمة سورة آل عمران
- 004 ಅನ್-ನಿಸಾ | ترجمة سورة النساء
- 005 ಅಲ್ ಮಾಇದಃ | ترجمة سورة المائدة
- 006 ಅಲ್ ಅನ್ಆಮ್ | ترجمة سورة الأنـعام
- 007 ಅಲ್ ಅಅರಾಫ್ | ترجمة سورة الأعراف
- 008 ಅಲ್ ಅನ್ಫಾಲ್ | ترجمة سـورة الأنفـال
- 009 ಅತ್-ತೌಬಃ | تـرجمـة سورة التوبة
- 010 ಯೂನುಸ್ | تـرجمـة سورة يونـس
- 011 ಹೂದ್ | تـرجمـة سورة هـــود
- 012 ಯೂಸುಫ್ | تـرجمـة سورة يوسـف
- 013 ಅರ್ ರಅದ್ | تـرجمـة سورة الرعد
- 014 ಇಬ್ರಾಹೀಮ್ | تـرجمـة سورة إبراهيم
- 015 ಅಲ್ ಹಿಜ್ರ್ | تـرجمـة سورة الحِجْر
- 016 ಅನ್-ನಹ್ಲ್ | تـرجمـة سورة النحل
- 017 ಅಲ್ ಇಸ್ರಾ' | تـرجمـة سورة الإسراء
- 018 ಅಲ್ ಕಹ್ಫ್ | تـرجمـة سورة الكهف
- 019 ಮರ್ಯಮ್ | ترجمة سورة مريم
- 020 ತಾಹಾ | ترجمة سورة طه
- 021 ಅಲ್ ಅಂಬಿಯಾ | ترجمة سورة الأنبياء
- 022 ಅಲ್ ಹಜ್ಜ್ | ترجمة سورة الحج
- 023 ಅಲ್ ಮು'ಮಿನೂನ್ | ترجمة سورة المؤمنون
- 024 ಅನ್-ನೂರ್ | ترجمة سورة النور
- 025 ಅಲ್ ಫುರ್ಕಾನ್ | ترجمة سورة الفرقان
- 026 ಅಶ್ ಶುಅರಾ | ترجمة سورة الشعراء
- 027 ಅನ್ ನಮ್ಲ್ | ترجمة سورة النمل
- 028 ಅಲ್ ಕಸಸ್ | ترجمة سورة القصص
- 078 ಅನ್ - ನಬಾ | ترجمة ســورة النبــأ
- 079 ಅನ್ - ನಾಝಿಆತ್ | ترجمة سورة الـنازعات
- 30 ನೆಯ ಭಾಗ | ترجمــة جز عم كامل
- ಅನುವಾದಿತ ಸೂರಃ ಗಳ ಪಟ್ಟಿ
- بعض المصطلحات القراّنية
- ಪಾರಿಭಾಷಿಕ ಪದಾವಳಿ
- ಪ್ರಕಾಶಕರು
- Home | ಮುಖ ಪುಟ