تـرجمـة سورة الشُّعَرَاء من القـرآن الكريـم إلى اللغـة الكناديـة من قبـل المترجـم / إقبـال صوفـي – الكــويت
سـهل الفهـم من غيـر الـرجـوع إلى كتاب التفسيـر
| ಸೂರಃ ಅಶ್ ಶುಅರಾ | ಪವಿತ್ರ ಕುರ್‌ಆನ್ ನ 26 ನೆಯ ಸೂರಃ | ಇದರಲ್ಲಿ ಒಟ್ಟು 227 ಆಯತ್ ಗಳು ಇವೆ |
ಮಹಾ ಕರುಣಾಮಯಿಯೂ ನಿರಂತರವಾಗಿ ಕರುಣೆ ತೋರುವವನೂ ಆದ ಅಲ್ಲಾಹ್ ನ (ಪವಿತ್ರ) ನಾಮದೊಂದಿಗೆ (ಆರಂಭಿಸುವೆ)!
طسم
ತ್ವಾ ಸೀನ್ ಮೀಮ್! {1}
تِلْكَ آيَاتُ الْكِتَابِ الْمُبِينِ
ಪೈಗಂಬರರೇ, ಇವು ಬಹಳ ಸ್ಪಷ್ಟವಾಗಿ ಅರ್ಥವಾಗುವ ಗ್ರಂಥದ ವಚನಗಳು! {2}
لَعَلَّكَ بَاخِعٌ نَفْسَكَ أَلَّا يَكُونُوا مُؤْمِنِينَ
ಅವರು (ನಿಮ್ಮ ಬೋಧನೆಗಳನ್ನು ಸ್ವೀಕರಿಸಿ) ವಿಶ್ವಾಸಿಗಳಾಗಲಿಲ್ಲ ಎಂಬ ಕಾರಣಕ್ಕಾಗಿ (ಅವರ ಕುರಿತು ಅತಿಯಾಗಿ ವ್ಯಥೆಪಡುತ್ತಾ) ನೀವು ನಿಮ್ಮ ಜೀವಕ್ಕೇ ಹಾನಿ ಮಾಡಿಕೊಳ್ಳಬಹುದು! [ಅರ್ಥಾತ್ ಅಷ್ಟೊಂದು ವ್ಯಥೆ ಪಡುವ ಅಗತ್ಯವಿಲ್ಲ]. {3}
إِنْ نَشَأْ نُنَزِّلْ عَلَيْهِمْ مِنَ السَّمَاءِ آيَةً فَظَلَّتْ أَعْنَاقُهُمْ لَهَا خَاضِعِينَ
ಒಂದು ವೇಳೆ ನಾವು ಇಚ್ಚಿಸಿದರೆ (ಅವರ ಬೇಡಿಕೆಯಂತೆ) ಒಂದು ದೃಷ್ಟಾಂತವನ್ನು ಆಕಾಶದಿಂದ ಇಳಿಸಿಬಿಡುವೆವು; ಆಗ ಅದರ ಮುಂದೆ ಅವರ ಕತ್ತುಗಳು (ನಾಚಿಕೆಯಿಂದ) ಬಗ್ಗಿ ಹೋಗಲಿವೆ. {4}
وَمَا يَأْتِيهِمْ مِنْ ذِكْرٍ مِنَ الرَّحْمَٰنِ مُحْدَثٍ إِلَّا كَانُوا عَنْهُ مُعْرِضِينَ
ಯಥಾರ್ಥದಲ್ಲಿ ಆ ಜನರ ಮುಂದೆ ದಯಾಮಯಿ ಅಲ್ಲಾಹ್ ನ ಕಡೆಯಿಂದ ಯಾವ ಹೊಸ ಉಪದೇಶ ಬಂದರೂ ಅವರು ಅದರಿಂದ ಮುಖ ತಿರುಗಿಸಿಕೊಳ್ಳದೆ ಇರಲಿಲ್ಲ. {5}
فَقَدْ كَذَّبُوا فَسَيَأْتِيهِمْ أَنْبَاءُ مَا كَانُوا بِهِ يَسْتَهْزِئُونَ
ನಿಜವೆಂದರೆ ಅವರು ಉಪದೇಶವನ್ನು ಸಂಪೂರ್ಣವಾಗಿ ನಿರಾಕರಿಸಿರುವರು. ಹೌದು, ಯಾವುದರ ಕುರಿತು ಅವರು ತಮಾಷೆ ಮಾಡುತ್ತಿರುವರೋ ಅದರ ಬಗೆಗಿನ ಸಮಾಚಾರವು ಬಹು ಬೇಗನೇ ಅವರ ಬಳಿಗೆ ಬರಲಿದೆ. {6}
أَوَلَمْ يَرَوْا إِلَى الْأَرْضِ كَمْ أَنْبَتْنَا فِيهَا مِنْ كُلِّ زَوْجٍ كَرِيمٍ
ನೀವು ಭೂಮಿಯ ಕಡೆಗೆ ನೋಡುವುದಿಲ್ಲವೇ? ಅದೆಷ್ಟು ಅಮೂಲ್ಯವಾದ ವಿವಿಧ ವಸ್ತುಗಳನ್ನು ನಾವು ಭೂಮಿಯಿಂದ ಉತ್ಪಾದಿಸಿರುವೆವು! {7}
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
[ದೃಷ್ಟಾಂತವೆಲ್ಲಿ ಎಂದು ಸವಾಲು ಹಾಕುವವರಿಗೆ] ಅದರಲ್ಲಿ ಖಂಡಿತವಾಗಿ ದೃಷ್ಟಾಂತಗಳಿವೆ. ಆದರೆ ವಿಷಯವೇನೆಂದರೆ ಅವರಲ್ಲಿ ಹೆಚ್ಚಿನ ಜನರು ವಿಶ್ವಾಸಿಗಳಾಗಲು ಬಯಸುವುದಿಲ್ಲ. {8}
وَإِنَّ رَبَّكَ لَهُوَ الْعَزِيزُ الرَّحِيمُ
ಹೌದು, ಪೈಗಂಬರರೇ, ನಿಮ್ಮ ದೇವನು ಬಲಿಷ್ಟವಾದವನೂ ಕಾರುಣ್ಯವಂತನೂ ಆಗಿರುವನು. {9}
وَإِذْ نَادَىٰ رَبُّكَ مُوسَىٰ أَنِ ائْتِ الْقَوْمَ الظَّالِمِينَ
ನಿಮ್ಮ ದೇವನು ಪ್ರವಾದಿ ಮೂಸಾರನ್ನು ಕರೆದು, ನೀವು ಆ ದುಷ್ಟ ಸಮುದಾಯದ ಕಡೆಗೆ (ನಮ್ಮ ಉಪದೇಶದೊಂದಿಗೆ) ಹೋಗಿರಿ ಎಂದು ಆಜ್ಞಾಪಿಸಿದ ಸಂದರ್ಭವನ್ನು ನೆನಪಿಸಿಸಿರಿ. {10}
قَوْمَ فِرْعَوْنَ ۚ أَلَا يَتَّقُونَ
ಫಿರ್‌ಔನ್ ನ ಸಮುದಾಯವೇ (ಆ ದುಷ್ಟ ಸಮುದಾಯ)! ಅವರಿಗೆ ಅಲ್ಲಾಹ್ ನ ಭಯವೇ ಇಲ್ಲವೇನು? {11}
قَالَ رَبِّ إِنِّي أَخَافُ أَنْ يُكَذِّبُونِ
ಪ್ರವಾದಿ ಮೂಸಾ ರು ಹೇಳಿದರು: ಓ ನನ್ನ ಒಡೆಯನೇ, ಅವರು ನನ್ನನ್ನು ತಿರಸ್ಕರಿಸಿಯಾರು ಎಂಬ ಭಯ ನನ್ನನ್ನು ಕಾಡುತ್ತಿದೆ; {12}
وَيَضِيقُ صَدْرِي وَلَا يَنْطَلِقُ لِسَانِي فَأَرْسِلْ إِلَىٰ هَارُونَ
ಮಾತ್ರವಲ್ಲ (ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ) ನಾನು ಹೃದಯದಲ್ಲಿ ಇಕ್ಕಟ್ಟು ಅನುಭವಿಸುತ್ತೇನೆ; ನನ್ನ ನಾಲಗೆ ಸಹ ಆಗ ಚಲಿಸದು! ಆದ್ದರಿಂದ ಪ್ರವಾದಿ ಹಾರೂನ್ ರು (ಅಲ್ಲಿ ನನಗೆ ಸಹಾಯ ನೀಡುವಂತೆ ಅವರ) ಬಳಿಗೆ ಸಂದೇಶವನ್ನು ರವಾನಿಸು! {13}
وَلَهُمْ عَلَيَّ ذَنْبٌ فَأَخَافُ أَنْ يَقْتُلُونِ
ಸಾಲದಕ್ಕೆ ಅವರ ಬಳಿ ನನ್ನ ವಿರುದ್ಧ (ಕೊಲೆಯ) ಒಂದು ಆರೋಪವೂ ಇದೆ. ಆದ್ದರಿಂದ ಅವರು ನನ್ನನ್ನು ಕೊಂದೇ ಬಿಡುವರು ಎಂಬ ಆತಂಕವೂ ನನ್ನನ್ನು ಕಾಡುತ್ತಿದೆ. {14}
قَالَ كَلَّا ۖ فَاذْهَبَا بِآيَاتِنَا ۖ إِنَّا مَعَكُمْ مُسْتَمِعُونَ
ಅದಕ್ಕೆ ಅಲ್ಲಾಹ್ ನು ಹೇಳಿದನು: ಇಲ್ಲ, ಹಾಗೆ ಆಗುವುದಿಲ್ಲ. ಕೂಡಲೇ ನೀವಿಬ್ಬರೂ ನನ್ನ ಕಡೆಯಿಂದಿರುವ ದೃಷ್ಟಾಂತಗಳನ್ನು ಅವರಲ್ಲಿಗೆ ಕೊಂಡೊಯ್ಯಿರಿ. ನಾವು ಎಲ್ಲವನ್ನೂ ಆಲಿಸುತ್ತಾ ನಿಮ್ಮ ಜೊತೆಗೇ ಇರುತ್ತೇವೆ. {15}
فَأْتِيَا فِرْعَوْنَ فَقُولَا إِنَّا رَسُولُ رَبِّ الْعَالَمِينَ
ಆದ್ದರಿಂದ ಫಿರ್‌ಔನ್ ನ ಬಳಿಗೆ ನೀವಿಬ್ಬರೂ ಹೋಗಿರಿ ಮತ್ತು ಹೇಳಿರಿ: ನಾವು ವಿಶ್ವದೊಡೆಯನಾದ ಅಲ್ಲಾಹ್ ನ (ಸಂದೇಶವನ್ನು ನಿನ್ನ ಬಳಿಗೆ ತಂದ) ದೂತರಾಗಿದ್ದೇವೆ! {16}
أَنْ أَرْسِلْ مَعَنَا بَنِي إِسْرَائِيلَ
(ಸಂದೇಶವೇನೆಂದರೆ, ನಿನ್ನ ಹಿಡಿತದಲ್ಲಿರುವ) ಇಸ್ರಾಈಲ್ ಸಂತತಿಯವರನ್ನು ಬಿಡುಗಡೆಗೊಳಿಸಿ ನಮ್ಮ ಜೊತೆಗೆ ಕಳುಹಿಸಿ ಕೊಡಬೇಕು! {17}
قَالَ أَلَمْ نُرَبِّكَ فِينَا وَلِيدًا وَلَبِثْتَ فِينَا مِنْ عُمُرِكَ سِنِينَ
ಅದಕ್ಕೆ ಫಿರ್‌ಔನ್ (ಪ್ರತಿಭಟಿಸುತ್ತಾ) ಹೇಳಿದನು: ನೀನು ಶಿಶುವಾಗಿದ್ದ ಕಾಲದಲ್ಲಿ ನಮ್ಮ ಮಧ್ಯೆ ತಂಗಿದ್ದಾಗ ನಿನ್ನ ಪಾಲನೆ-ಪೋಷಣೆಯನ್ನು ನಾವು ಮಾಡಿರಲಿಲ್ಲವೇ? ಅಷ್ಟೇ ಅಲ್ಲ, ನಿನ್ನ ಆಯುಷ್ಯದ ಹಲವು ವರ್ಷಗಳು ನೀನು ಜೀವಿಸಿದ್ದೂ ನಮ್ಮ ಜೊತೆಗೇ ತಾನೆ! {18}
وَفَعَلْتَ فَعْلَتَكَ الَّتِي فَعَلْتَ وَأَنْتَ مِنَ الْكَافِرِينَ
ಅದಾಗ್ಯೂ ನೀನು ನಿನ್ನ ಆ ಕೆಟ್ಟ ಕೃತ್ಯವನ್ನು (ಅರ್ಥಾತ್ ಆ ಈಜಿಪ್ಟಿಯನ್ ವ್ಯಕ್ತಿಯನ್ನು ಕೊಲೆ) ಮಾಡಿಯೇ ಬಿಟ್ಟೆ. ನೀವು ಒಬ್ಬ ಕೃತಜ್ಞತೆ ಇಲ್ಲದವನೇ ಸರಿ. {19}
قَالَ فَعَلْتُهَا إِذًا وَأَنَا مِنَ الضَّالِّينَ
ನಾನು ಅದನ್ನು ಮಾಡಿರುವುದೇನೋ ನಿಜ. ಆದರೆ ಆಗ [ಒಂದೇ ಗುದ್ದಿಗೆ ಅವನು ಸಾಯುವನು ಎಂಬ] ತಿಳುವಳಿಕೆ ನನಗೆ ಇರಲಿಲ್ಲ! {20}
فَفَرَرْتُ مِنْكُمْ لَمَّا خِفْتُكُمْ فَوَهَبَ لِي رَبِّي حُكْمًا وَجَعَلَنِي مِنَ الْمُرْسَلِينَ
ನಂತರ, ಯಾವಾಗ ನನಗೆ ನಿಮ್ಮ ಕಡೆಯಿಂದ ಭಯ ಉಂಟಾಯಿತೋ ನಾನು ನಿಮ್ಮಿಂದ ದೂರ ಓಡಿ ಹೋದೆನು. ಆದರೆ ಈಗ ನನಗೆ ನನ್ನ ಪರಿಪಾಲಕನಾದ ಅಲ್ಲಾಹ್ ನು ವಿವೇಕವನ್ನು ದಯಪಾಲಿಸಿದ್ದಾನೆ ಮತ್ತು ಅವನು ನನ್ನನ್ನು ತನ್ನ ದೂತರುಗಳ ಸಾಲಿಗೆ ಸೇರಿಸಿಕೊಂಡಿದ್ದಾನೆ. {21}
وَتِلْكَ نِعْمَةٌ تَمُنُّهَا عَلَيَّ أَنْ عَبَّدْتَ بَنِي إِسْرَائِيلَ
(ಮತ್ತು ನನ್ನ ಪಾಲನೆ-ಪೋಷಣೆ ಮಾಡಿದ್ದನ್ನು) ಒಂದು ಋಣಭಾರವಾಗಿ ನೀನು ನೆನಪಿಸಿ ಕೊಡುತ್ತಿರುವೆ! ನಿಜವಾಗಿ ನೀನು ಇಡೀ ಇಸ್ರಾಈಲ್ ಸಂತತಿಯನ್ನೇ ಗುಲಾಮರನ್ನಾಗಿ ಮಾಡಿಕೊಂಡಿದ್ದೆ ತಾನೆ! {22}
قَالَ فِرْعَوْنُ وَمَا رَبُّ الْعَالَمِينَ
(ಅವಾಕ್ಕಾದ) ಫಿರ್‌ಔನ್, ಜಗದೊಡೆಯ ಅಂದರೆ ಏನು ಎಂದು ಕೇಳಿದನು. {23}
قَالَ رَبُّ السَّمَاوَاتِ وَالْأَرْضِ وَمَا بَيْنَهُمَا ۖ إِنْ كُنْتُمْ مُوقِنِينَ
ನೀವು ನಂಬಿಕೆ ಇರುವ ಜನರಾದರೆ (ತಿಳಿಯಿರಿ); ಆಕಾಶಗಳು, ಭೂಮಿ ಮತ್ತು ಅವೆರಡರ ನಡುವೆ ಇರುವ ಸಕಲದರ ಒಡೆಯನೇ ಜಗದೊಡೆಯನು - ಮೂಸಾ ಉತ್ತರಿಸಿದರು. {24}
قَالَ لِمَنْ حَوْلَهُ أَلَا تَسْتَمِعُونَ
ತನ್ನ ಸುತ್ತ ನೆರೆದಿದ್ದ ಜನರನ್ನುದ್ದೇಶಿಸಿ, ನೀವು (ಈತ ಹೇಳುತ್ತಿರುವುದನ್ನು) ಕೇಳುತ್ತಿಲ್ಲವೇ ಎಂದು ಫಿರ್‌ಔನ್ ಕೇಳಿದನು. {25}
قَالَ رَبُّكُمْ وَرَبُّ آبَائِكُمُ الْأَوَّلِينَ
ಮೂಸಾ ಮುಂದುವರಿಸಿದರು: ನಿಮ್ಮೆಲ್ಲರ ಒಡೆಯನೂ ಸಹ! ನಿಮ್ಮ ಪೂರ್ವಜರಾದ ನಿಮ್ಮ ತಾತ ಮುತ್ತಾತಂದಿರ ಒಡೆಯನೂ ಸಹ ಅವನೇ ಆಗಿರುವನು. {26}
قَالَ إِنَّ رَسُولَكُمُ الَّذِي أُرْسِلَ إِلَيْكُمْ لَمَجْنُونٌ
ತನ್ನವರೊಂದಿಗೆ ಫಿರ್‌ಔನ್ ಹೇಳಿದನು: ನಿಮ್ಮೆಡೆಗೆ ಕಳುಹಿಸಲ್ಪಟ್ಟ ಈ ನಿಮ್ಮ ದೇವದೂತನು ನಿಜವಾಗಿಯೂ ಒಬ್ಬ ಹುಚ್ಚನೇ ಸರಿ. {27}
قَالَ رَبُّ الْمَشْرِقِ وَالْمَغْرِبِ وَمَا بَيْنَهُمَا ۖ إِنْ كُنْتُمْ تَعْقِلُونَ
ಮೂಸಾ ಮಾತು ಮುಂದುವರಿಸಿದರು: ಅವನು ಪೂರ್ವ, ಪಶ್ಚಿಮ ಹಾಗೂ ಅವೆರಡರ ನಡುವೆ ಇರುವ ಸಕಲದರ ಒಡೆಯನು; ನೀವು ಬುದ್ಧಿ ಉಪಯೋಗಿಸುವ ಜನರಾದರೆ ತಿಳಿಯಿರಿ! {28}
قَالَ لَئِنِ اتَّخَذْتَ إِلَٰهًا غَيْرِي لَأَجْعَلَنَّكَ مِنَ الْمَسْجُونِينَ
ಅದಕ್ಕೆ ಫಿರ್‌ಔನ್ ಆಜ್ಞಾಪಿಸಿದನು: ನನ್ನ ಹೊರತು ಬೇರೆ ಯಾರನ್ನಾದರೂ ದೇವನನ್ನಾಗಿ ನೀನು ಮಾಡಿಕೊಂಡರೆ ಸೆರೆಮನೆಯಲ್ಲಿ ಬಂಧನದಲ್ಲಿರುವವರ ಜೊತೆಗೆ ನಿನ್ನನ್ನೂ ಸೇರಿಸಿ ಬಿಡುತ್ತೇನೆ! {29}
قَالَ أَوَلَوْ جِئْتُكَ بِشَيْءٍ مُبِينٍ
ಆಗ ಮೂಸಾ ಕೇಳಿದರು: ಏನು? ಬಹಳ ಸ್ಪಷ್ಟವಾದ ಒಂದು ದೃಷ್ಟಾಂತವನ್ನು ನಿನ್ನ ಬಳಿಗೆ ತಂದರೂ ನೀನು ಹಾಗೆ ಮಾಡುವೆಯಾ? {30}
قَالَ فَأْتِ بِهِ إِنْ كُنْتَ مِنَ الصَّادِقِينَ
ಫಿರ್‌ಔನ್ ಹೇಳದನು: ನೀನು ಸತ್ಯವಂತನು ಹೌದಾದರೆ ಅದನ್ನು ತಂದು ತೋರಿಸು. {31}
فَأَلْقَىٰ عَصَاهُ فَإِذَا هِيَ ثُعْبَانٌ مُبِينٌ
ಆಗ ಮೂಸಾ ತಮ್ಮ ಊರುಗೋಲನ್ನು ಕೆಳಕ್ಕೆ ಹಾಕಿದರು. ಆ ಕೂಡಲೇ ಅದು ಎಲ್ಲರಿಗೂ ಕಾಣುವಂತಹ ಒಂದು ಸರ್ಪವಾಗಿ ಮಾರ್ಪಟ್ಟಿತು. {32}
وَنَزَعَ يَدَهُ فَإِذَا هِيَ بَيْضَاءُ لِلنَّاظِرِينَ
ನಂತರ ಅವರು ತಮ್ಮ ಕೈಯನ್ನು (ಕಂಕುಳದಿಂದ) ಹೊರಗೆ ತೆಗೆದರು. ಆಗ ಅದು ನೋಡುವವರಿಗೆ (ಹೊಳೆಯುವ) ಬಿಳುಪಾಗಿ ಗೋಚರಿಸಿತು. {33}
قَالَ لِلْمَلَإِ حَوْلَهُ إِنَّ هَٰذَا لَسَاحِرٌ عَلِيمٌ
ಫಿರ್‌ಔನ್ ತನ್ನ ಸುತ್ತಮುತ್ತಲಿದ್ದ (ಆಸ್ಥಾನ ಮುಖ್ಯಸ್ಥರನ್ನು) ಉದ್ದೇಶಿಸಿ ಹೇಳಿದನು - ಈತನೊಬ್ಬ ತಜ್ಞ ಜಾದೂಗಾರನಾಗಿರುವನು. {34}
يُرِيدُ أَنْ يُخْرِجَكُمْ مِنْ أَرْضِكُمْ بِسِحْرِهِ فَمَاذَا تَأْمُرُونَ
ಮತ್ತು ತನ್ನ ಜಾದೂಗಾರಿಕೆಯ ಬಲದಿಂದ ಈತನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರಗೋಡಿಸಲು ಬಯಸುತ್ತಿದ್ದಾನೆ, ಆದ್ದರಿಂದ (ಈತನ ಕುರಿತು) ನಿಮ್ಮ ಅಭಿಪ್ರಾಯವೇನೆಂದು ತಿಳಿಸಿರಿ. {35}
قَالُوا أَرْجِهْ وَأَخَاهُ وَابْعَثْ فِي الْمَدَائِنِ حَاشِرِينَ
(ಆಸ್ಥಾನದ ಮುಖ್ಯಸ್ಥರು) ಅಭಿಪ್ರಾಯ ತಿಳಿಸಿದರು: ಈತನ ಮತ್ತು ಈತನ ಸಹೋದರನ ವಿಷಯದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡು, ಸೇವಕರನ್ನು ವಿವಿಧ ಪಟ್ಟಣಗಳಿಗೆ (ಅಲ್ಲಿಯ ನುರಿತ ಜಾದೂಗಾರರನ್ನ) ಒಟ್ಟು ಸೇರಿಸಲು ರವಾನಿಸು. {36}
يَأْتُوكَ بِكُلِّ سَحَّارٍ عَلِيمٍ
ಅವರು ಅಲ್ಲಿಂದ ಎಲ್ಲಾ ನಿಷ್ಣಾತ ಜಾದೂಗಾರರನ್ನು ಕರೆದುಕೊಂಡು ನಿನ್ನಲ್ಲಿಗೆ ಬರಲಿ. {37}
فَجُمِعَ السَّحَرَةُ لِمِيقَاتِ يَوْمٍ مَعْلُومٍ
ಅದರಂತೆ, ಒಂದು ಗೊತ್ತುಪಡಿಸಿದ ದಿನ, ಒಂದು ನಿಶ್ಚಿತ ಸಮಯದಲ್ಲಿ ಅಂತಹ ಎಲ್ಲ ಜಾದೂಗಾರರನ್ನು ಒಟ್ಟುಗೂಡಿಸಲಾಯಿತು. {38}
وَقِيلَ لِلنَّاسِ هَلْ أَنْتُمْ مُجْتَمِعُونَ
ನೀವೆಲ್ಲರೂ ಒಟ್ಟಾಗಿ ಬರುವಿರಿ ತಾನೆ ಎಂದು (ನಾಡಿನ ಸಮಸ್ತ) ಜನರೊಂದಿಗೂ ಕೇಳಲಾಯಿತು. {39}
لَعَلَّنَا نَتَّبِعُ السَّحَرَةَ إِنْ كَانُوا هُمُ الْغَالِبِينَ
(ಎಲ್ಲರೂ ಬನ್ನಿರಿ). ಏಕೆಂದರೆ (ಮೂಸಾ ಮತ್ತು ಹಾರೂನ್ ರ ವಿರುದ್ಧ) ಜಾದೂಗಾರರಿಗೆ ಗೆಲುವುಂಟಾದರೆ ನಾವೆಲ್ಲರೂ ಜಾದೂಗಾರ (ಧರ್ಮವನ್ನೇ) ಪಾಲಿಸಬಹುದು! {40}
فَلَمَّا جَاءَ السَّحَرَةُ قَالُوا لِفِرْعَوْنَ أَئِنَّ لَنَا لَأَجْرًا إِنْ كُنَّا نَحْنُ الْغَالِبِينَ
ಯಾವಾಗ ಆ ಜಾದೂಗಾರರೆಲ್ಲ ಅಲ್ಲಿಗೆ ಬಂದರೋ, ಅವರು ಫಿರ್‌ಔನ್ ನೊಂದಿಗೆ ಕೇಳಿದರು: ಒಂದು ವೇಳೆ ನಾವು ಗೆಲುವು ಸಾಧಿಸಿದರೆ ನಮಗೆ ಖಂಡಿತವಾಗಿ ಪ್ರತಿಫಲವಿದೆ ತಾನೆ? {41}
قَالَ نَعَمْ وَإِنَّكُمْ إِذًا لَمِنَ الْمُقَرَّبِينَ
ಫಿರ್‌ಔನ್ ಉತ್ತರಿಸಿದನು: ಹೌದು, ಗೆದ್ದರೆ ಖಂಡಿತವಾಗಿ ನೀವು ನನ್ನ ಸಾಮೀಪ್ಯ ಪಡೆದವರ ಸಾಲಿಗೆ ಸೇರುವಿರಿ. {42}
قَالَ لَهُمْ مُوسَىٰ أَلْقُوا مَا أَنْتُمْ مُلْقُونَ
ಮೂಸಾರು ಜಾದೂಗಾರರನ್ನುದ್ದೇಶಿಸಿ ಹೇಳಿದರು: (ಜಾದೂಗಾರಿಕೆಯ ಪ್ರದರ್ಶನಕ್ಕಾಗಿ) ಹಾಕಬೇಕಾದ (ಜಾದುವಿನ ವಸ್ತುಗಳನ್ನು) ನೀವು ಈಗ ಹಾಕಬಹುದು. {43}
فَأَلْقَوْا حِبَالَهُمْ وَعِصِيَّهُمْ وَقَالُوا بِعِزَّةِ فِرْعَوْنَ إِنَّا لَنَحْنُ الْغَالِبُونَ
ಕೂಡಲೇ ಅವರು (ಜಾದುವಿನ) ಹಗ್ಗಗಳನ್ನೂ ಕೋಲುಗಳನ್ನೂ ಕೆಳಕ್ಕೆ ಬಿಟ್ಟರು ಮತ್ತು ಹೇಳಿದರು: ಈ ಫಿರ್‌ಔನ್ ನ ಪ್ರತಾಪದ ಆಣೆ, ನಾವು ನಿಶ್ಚಿತವಾಗಿ ಗೆಲ್ಲಲಿರುವೆವು. {44}
فَأَلْقَىٰ مُوسَىٰ عَصَاهُ فَإِذَا هِيَ تَلْقَفُ مَا يَأْفِكُونَ
ಆಗ ಪ್ರವಾದಿ ಮೂಸಾರು ತಮ್ಮ ಊರುಗೋಲನ್ನು ಕೆಳಕ್ಕೆ ಬಿಟ್ಟರು. ಅದು ಕೂಡಲೇ (ಸರ್ಪವಾಗಿ ಮಾರ್ಪಟ್ಟು) ಜಾದೂಗಾರರ ಎಲ್ಲಾ ಕೃತ್ರಿಮ (ಸರ್ಪಗಳನ್ನು) ನುಂಗುತ್ತಾ ಸಾಗಿತು! {45}
فَأُلْقِيَ السَّحَرَةُ سَاجِدِينَ
(ದಿಗ್ಭ್ರಮೆಗೊಂಡ) ಜಾದೂಗಾರರು (ಅತ್ತಿತ್ತ ನೋಡದೆ) ಆ ಕೂಡಲೇ ಸಾಷ್ಟಾಂಗವೆರಗಿಯೇ ಬಿಟ್ಟರು. {46}
قَالُوا آمَنَّا بِرَبِّ الْعَالَمِينَ
ಮತ್ತು ಹೇಳಿದರು: ನಾವಿದೋ ಆ ಜಗದೊಡೆಯನನ್ನು ನಂಬುವವರಾದೆವು. {47}
رَبِّ مُوسَىٰ وَهَارُونَ
ಅಂದರೆ, ಮೂಸಾ ಮತ್ತು ಹಾರೂನ್ ರ ದೇವನನ್ನು (ನಾವೂ ನಂಬುತ್ತೇವೆ ಎಂದು ಸಾರಿದರು). {48}
قَالَ آمَنْتُمْ لَهُ قَبْلَ أَنْ آذَنَ لَكُمْ ۖ إِنَّهُ لَكَبِيرُكُمُ الَّذِي عَلَّمَكُمُ السِّحْرَ فَلَسَوْفَ تَعْلَمُونَ ۚ لَأُقَطِّعَنَّ أَيْدِيَكُمْ وَأَرْجُلَكُمْ مِنْ خِلَافٍ وَلَأُصَلِّبَنَّكُمْ أَجْمَعِينَ
ಫಿರ್‌ಔನ್ (ಕುಪಿತಗೊಂಡು) ಚೀರಿದನು: ನಾನಿನ್ನೂ ಅನುಮತಿ ನೀಡುವುದಕ್ಕಿಂತ ಮುಂಚಿತವಾಗಿ ನೀವು ಮೂಸಾರ (ಧರ್ಮವನ್ನು) ನಂಬಿದಿರಿ. ನಿಜವಾಗಿ, ಜಾದೂಗಾರಿಕೆಯ ವಿದ್ಯೆಯನ್ನು ನಿಮಗೆ ಕಲಿಸಿಕೊಟ್ಟ ನಿಮ್ಮ ಮಹಾ ಗುರು ಅವನೇ ಆಗಿರಬೇಕು! ನಿಮಗೆ (ನಿಮ್ಮ ಆ ನಂಬಿಕೆಯ ಪರಿಣಾಮವೇನು ಎಂಬುದು) ಬಹು ಬೇಗನೇ ಗೊತ್ತಾಗಲಿದೆ. ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ಪಾರ್ಶ್ವಗಳಿಂದ ಕಡಿದು ಹಾಕುತ್ತೇನೆ; ಮಾತ್ರವಲ್ಲ, ನಿಮ್ಮೆಲ್ಲರನ್ನೂ ಸಾರಾಸಗಟಾಗಿ ಬಹಳ ಭಯಾನಕ ರೀತಿಯಲ್ಲಿ ಶಿಲುಬೆಗೇರಿಸಿ ಕೊಂದು ಹಾಕುತ್ತೇನೆ! {49}
قَالُوا لَا ضَيْرَ ۖ إِنَّا إِلَىٰ رَبِّنَا مُنْقَلِبُونَ
(ಜಾದೂಗಾರಿಕೆ ಪ್ರದರ್ಶಿಸಲು ಬಂದವರು) ಹೇಳಿದರು: ನೀನೇನು ಮಾಡಿದರೂ ಪರವಾಗಿಲ್ಲ. ನಾವಂತೂ ನಮ್ಮ ಕರ್ತಾರನಾದ (ಅಲ್ಲಾಹ್ ನೆಡೆಗೆ) ಮರಳಿ ಹೋಗಲಿರುವವರು. {50}
إِنَّا نَطْمَعُ أَنْ يَغْفِرَ لَنَا رَبُّنَا خَطَايَانَا أَنْ كُنَّا أَوَّلَ الْمُؤْمِنِينَ
ಏನಿದ್ದರೂ (ಮೂಸಾ ಸಾರುವ ಧರ್ಮವನ್ನು ನಂಬಿ) ಮೊದಲಿಗೆ ವಿಶ್ವಾಸಿಗಳಾದವರು ನಾವೇ ಆದ್ದರಿಂದ ನಮ್ಮ ಕರ್ತಾರನು ನಾವು ಮಾಡಿದ ಪಾಪಗಳನ್ನು ನಮಗಾಗಿ ಕ್ಷಮಿಸಿ ಬಿಡುವನು ಎಂಬ ಖಚಿತ ಭರವಸೆ ನಮಗಿದೆ. {51}
وَأَوْحَيْنَا إِلَىٰ مُوسَىٰ أَنْ أَسْرِ بِعِبَادِي إِنَّكُمْ مُتَّبَعُونَ
[ಫಿರ್‌ಔನ ನ ಕಪಿಮುಷ್ಟಿಯಲ್ಲಿ ಸಿಲುಕಿರುವ] ನಮ್ಮ ದಾಸರಾದ (ಇಸ್ರಾಈಲ್ ವಂಶಜರನ್ನು) ಕರೆದುಕೊಂಡು ನೀವು ರಾತ್ರೋರಾತ್ರಿ ಹೊರಟು ಹೋಗಿರಿ; ಅದರೆ (ಫಿರ್‌ಔನ್ ಮತ್ತು ಅವನ ಸೇನೆ) ಖಂಡಿತಾ ನಿಮ್ಮ ಬೆನ್ನಟ್ಟಿ ಬರಲಿದೆ - ಎಂದು ನಾವು ಮೂಸಾ ರಿಗೆ ವಹೀ (ಅರ್ಥಾತ್ ದಿವ್ಯಸಂದೇಶ) ಕಳುಹಿಸಿ ತಿಳಿಸಿದೆವು. {52}
فَأَرْسَلَ فِرْعَوْنُ فِي الْمَدَائِنِ حَاشِرِينَ
ಅತ್ತ ಫಿರ್‌ಔನ್ ತನ್ನ ಪರಿಚಾರಕರನ್ನು ಪಟ್ಟಣಗಳಲ್ಲಿರುವ (ಸೇನೆಯನ್ನು ಸಜ್ಜುಗೊಳಿಸಲು) ರವಾನಿಸಿದನು. {53}
إِنَّ هَٰؤُلَاءِ لَشِرْذِمَةٌ قَلِيلُونَ
ನಿಜವಾಗಿಯೂ ಇವರದು ಒಂದು ಚಿಕ್ಕ ತಂಡ; {54}
وَإِنَّهُمْ لَنَا لَغَائِظُونَ
ಆದರೂ ನಮ್ಮನ್ನು ಅವರು ಸಾಕಷ್ಟು ಕೆರಳಿಸಿ ಬಿಟ್ಟಿರುವರು. {55}
وَإِنَّا لَجَمِيعٌ حَاذِرُونَ
ಆದರೆ ನಮ್ಮದು ಸಂಶಯಾತೀತವಾಗಿ, ಸದಾ ಎಚ್ಚರವಿರುವ ಒಂದು ದೊಡ್ಡ ಸೇನಾಬಲ! (ಫಿರ್‌ಔನ್ ಹೇಳಿದನು). {56}
فَأَخْرَجْنَاهُمْ مِنْ جَنَّاتٍ وَعُيُونٍ
[ಫಿರ್‌ಔನ್ ಮತ್ತು ಬಳಗದವರ ಬಳಿ ಸದಾ ಎಚ್ಚರವಿದ್ದ ದೊಡ್ಡ ಸೇನಾಬಲವಿದ್ದರೂ, ಶಿಕ್ಷಾರ್ಥ] ನಾವು ಅವರನ್ನು ತೋಟಗಳ ಮತ್ತು ಚಿಲುಮೆಗಳ (ನಾಡಿನಿಂದ) ಹೊರಗಟ್ಟಿದೆವು. {57}
وَكُنُوزٍ وَمَقَامٍ كَرِيمٍ
ಶೇಖರಿಸಿಟ್ಟ ನಿಧಿಗಳಿಂದ ಮತ್ತು ಉತ್ಕೃಷ್ಟ ಸ್ಥಾನಗಳಿಂದ ಹೊರದಬ್ಬಿದೆವು. {58}
كَذَٰلِكَ وَأَوْرَثْنَاهَا بَنِي إِسْرَائِيلَ
(ದುಷ್ಟರೊಂದಿಗೆ ನಾವು) ವ್ಯವಹರಿಸುವುದು ಹಾಗೆಯೇ! ಮುಂದೆ ಅಂತಹ ಎಲ್ಲ (ಸೌಕರ್ಯಗಳು, ಫಲಸ್ತೀನ್ ಪ್ರದೇಶದಲ್ಲಿ) ಇಸ್ರಾಈಲ್ ವಂಶಜರು ಪಡೆದುಕೊಳ್ಳುವಂತೆ ನಾವು ಮಾಡಿದೆವು. {59}
فَأَتْبَعُوهُمْ مُشْرِقِينَ
[ಯೋಜನೆಯಂತೆ, ಇಸ್ರಾಈಲ್ ವಂಶಜರನ್ನು ಕರೆದುಕೊಂಡು ಪ್ರವಾದಿ ಮೂಸಾ ರಾತ್ರೋರಾತ್ರಿ ಈಜಿಪ್ಟ್ ಪ್ರದೇಶದಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ] ಸೂರ್ಯೋದಯದ ವೇಳೆಗೆ (ಫಿರ್‌ಔನ್ ಮತ್ತು ಬಳಗದವರು) ಬೆನ್ನಟ್ಟಿ ಬಂದರು. {60}
فَلَمَّا تَرَاءَى الْجَمْعَانِ قَالَ أَصْحَابُ مُوسَىٰ إِنَّا لَمُدْرَكُونَ
ಎರಡೂ ತಂಡಗಳು ಪರಸ್ಪರರನ್ನು ನೋಡುವಂತಾದಾಗ ಮೂಸಾರ ಜೊತೆಯಲ್ಲಿದ್ದವರು (ಹೆದರಿಕೊಂಡು) ಹೇಳಿದರು - ನಾವೀಗ ಸಿಕ್ಕಿ ಬೀಳಲಿರುವೆವು! {61}
قَالَ كَلَّا ۖ إِنَّ مَعِيَ رَبِّي سَيَهْدِينِ
ಮೂಸಾ ಹೇಳಿದರು: ಸಾಧ್ಯವೇ ಇಲ್ಲ. ನನ್ನೊಂದಿಗೆ ನನ್ನ ಪರಿಪಾಲಕನಾದ (ಅಲ್ಲಾಹ್ ನು) ಇದ್ದಾನೆ. ನನಗೆ ಮುಂದಿನ ದಾರಿ ತೋರಿಸಲಿದ್ದಾನೆ. {62}
فَأَوْحَيْنَا إِلَىٰ مُوسَىٰ أَنِ اضْرِبْ بِعَصَاكَ الْبَحْرَ ۖ فَانْفَلَقَ فَكَانَ كُلُّ فِرْقٍ كَالطَّوْدِ الْعَظِيمِ
ಆ ಸಂದರ್ಭದಲ್ಲಿ ನಾವು ಮೂಸಾ ರಿಗೆ, ಆ ನಿಮ್ಮ ಊರುಗೋಲಿನಿಂದ ಕಡಲಿಗೆ ಬಡಿಯಿರಿ ಎಂದು ವಹೀ (ಅಂದರೆ ದಿವ್ಯಸಂದೇಶ) ಕಳುಹಿಸಿದೆವು! ಬಡಿದ ಕೂಡಲೇ ಕಡಲು ಸೀಳಿಕೊಂಡು ಇಬ್ಭಾಗವಾಯಿತು; ಪ್ರತಿಭಾಗವೂ ಒಂದು ಭವ್ಯ ಪರ್ವತದಂತೆ ಎದ್ದು ನಿಂತಿತು. {63}
وَأَزْلَفْنَا ثَمَّ الْآخَرِينَ
ನಂತರ ನಾವು (ಬೆನ್ನಟ್ಟಿ ಬಂದ) ತಂಡವನ್ನೂ ಅಲ್ಲಿಗೆ ತಲಪುವಂತೆ ಮಾಡಿದೆವು. {64}
وَأَنْجَيْنَا مُوسَىٰ وَمَنْ مَعَهُ أَجْمَعِينَ
ಆ ಮೇಲೆ ಮೂಸಾ ಮತ್ತು ಅವರ ಜೊತೆಗಿದ್ದವರೆನ್ನೆಲ್ಲ ಒಟ್ಟಾಗಿ ಅಲ್ಲಿಂದ ಪಾರಾಗುವಂತೆ ಮಾಡಿದೆವು. {65}
ثُمَّ أَغْرَقْنَا الْآخَرِينَ
ನಂತರ, (ಬೆನ್ನಟ್ಟಿ ಬಂದಿದ್ದ ಫಿರ್‌ಔನ್ ನ) ಗುಂಪನ್ನು ನಾವು ಮುಳುಗಿಸಿ ಸಾಯಿಸಿದೆವು. {66}
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
ಹೌದು, ಈ ವೃತ್ತಾಂತದಲ್ಲಿ (ನಿಮ್ಮ ಸುತ್ತಮುತ್ತಲಿರುವ ಜನರಿಗೆ) ಒಂದು ಪಾಠವಿದೆ! ಆದರೂ (ಪೈಗಂಬರರೇ), ಅವರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗುವ ಜನರಲ್ಲ! {67}
وَإِنَّ رَبَّكَ لَهُوَ الْعَزِيزُ الرَّحِيمُ
ನಿಜವಾಗಿ, ನಿಮ್ಮ ಕರ್ತಾರನಾದ (ಅಲ್ಲಾಹ್ ನು) ಬಹಳ ಪ್ರತಾಶಾಲಿಯೂ ಹೌದು; ಬಹಳ ದಯಾಮಯಿಯೂ ಆಗಿರುವನು. {68}
وَاتْلُ عَلَيْهِمْ نَبَأَ إِبْرَاهِيمَ
ಪೈಗಂಬರರೇ, ಈಗ ಅವರಿಗೆ ಪ್ರವಾದಿ ಇಬ್ರಾಹೀಮ್ ರವರ ವೃತ್ತಾಂತವನ್ನು ಓದಿ ಕೇಳಿಸಿರಿ. {69}
إِذْ قَالَ لِأَبِيهِ وَقَوْمِهِ مَا تَعْبُدُونَ
ಅವರು ತಮ್ಮ ತಂದೆ ಮತ್ತು ತಮ್ಮ ಸಮುದಾಯದ ಜನರೊಂದಿಗೆ, ಇದು ನೀವು ಏನನ್ನು ಪೂಜಿಸುತ್ತಿರುವಿರಿ ಎಂದು ಕೇಳಿದ ಸಂದರ್ಭವನ್ನು (ನೆನಪಿಸಿರಿ). {70}
قَالُوا نَعْبُدُ أَصْنَامًا فَنَظَلُّ لَهَا عَاكِفِينَ
ಅವರು ಉತ್ತರಿಸಿದರು: ನಾವು ಈ ಮೂರ್ತಿಗಳನ್ನು ಪೂಜಿಸುತ್ತೇವೆ ಮತ್ತು ಅವುಗಳ ಸೇವೆಯಲ್ಲಿ ಸದಾ ತನ್ಮಯರಾಗಿರುತ್ತೇವೆ. {71}
قَالَ هَلْ يَسْمَعُونَكُمْ إِذْ تَدْعُونَ
ಇಬ್ರಾಹೀಮ್ ರು ಕೇಳಿದರು: ನೀವು ಇವುಗಳನ್ನು ಕರೆದು ಪ್ರಾರ್ಥಿಸುವಾಗ ಅವುಗಳಿಗೆ ನಿಮ್ಮ ರೋದನ ಕೇಳಿಸಿಕೊಳ್ಳುತ್ತದೆಯೇ? {72}
أَوْ يَنْفَعُونَكُمْ أَوْ يَضُرُّونَ
ಅಥವಾ ಅವು ನಿಮಗೇನಾದರೂ ಉಪಕಾರ ಮಾಡುತ್ತವೆಯೇ? ಅಥವಾ ಹಾನಿಯುಂಟು ಮಾಡುತ್ತವೆಯೇ? {73}
قَالُوا بَلْ وَجَدْنَا آبَاءَنَا كَذَٰلِكَ يَفْعَلُونَ
ಅವರು ಉತ್ತರಿಸಿದರು: ನಮಗೆ ತಿಳಿಯದು, ಆದರೆ ನಮ್ಮ ತಾತ-ಮುತ್ತಾತಂದಿರು ಇವುಗಳನ್ನು ಹಾಗೆ ಪೂಜಿಸುತ್ತಿದ್ದುದನ್ನು ನಾವು ಕಂಡಿದ್ದೇನೆ. {74}
قَالَ أَفَرَأَيْتُمْ مَا كُنْتُمْ تَعْبُدُونَ
ಇಬ್ರಾಹೀಮ್ ರು ಕೇಳಿದರು: ನೀವು ಪೂಜಿಸುತ್ತಿರುವುದು ಏನನ್ನು ಎಂದು ಎಂದಾದರೂ ನೀವು ಚಿಂತಿಸಿ ನೋಡಿರುವಿರಾ? {75}
أَنْتُمْ وَآبَاؤُكُمُ الْأَقْدَمُونَ
ನೀವಾಗಲಿ, ಗತಿಸಿ ಹೋದ ನಿಮ್ಮ ತಂದೆ ತಾತಂದಿರಾಗಲಿ - (ಯಾರಾದರೂ ಆಲೋಚಿಸಿರುವಿರಾ)? {76}
فَإِنَّهُمْ عَدُوٌّ لِي إِلَّا رَبَّ الْعَالَمِينَ
ವಾಸ್ತವದಲ್ಲಿ ಅವರೆಲ್ಲ ನನಗೆ (ಸೈತಾನರುಗಳಂತೆ) ಶತ್ರುಗಳಾಗಿದ್ದಾರೆ; ಲೋಕದೊಡೆಯನಾದ ಆ ಅಲ್ಲಾಹ್ ನ ಹೊರತು! {77}
الَّذِي خَلَقَنِي فَهُوَ يَهْدِينِ
ಅವನಾದರೋ ನನ್ನನ್ನು ಸೃಷ್ಟಿ ಮಾಡಿದವನು! ಅವನೇ ಸರಿದಾರಿ ತೋರಿಸುವವನು! {78}
وَالَّذِي هُوَ يُطْعِمُنِي وَيَسْقِينِ
ಅವನೇ ನನಗೆ ತಿನ್ನಿಸುವವನು ಮತ್ತು ಕುಡಿಸುವವನು! {79}
وَإِذَا مَرِضْتُ فَهُوَ يَشْفِينِ
ನನಗೇನಾದರೂ ಕಾಯಿಲೆ ಬಂದಾಗ ಅದನ್ನು ಗುಣಪಡಿಸುವವನೂ ಅವನೇ! {80}
وَالَّذِي يُمِيتُنِي ثُمَّ يُحْيِينِ
ನನಗೆ ಮರಣ ನೀಡುವವನೂ ನನ್ನನ್ನು ಪುನಃ ಜೀವಂತ ಗೊಳಿಸುವವನೂ ಅವನೇ. {81}
وَالَّذِي أَطْمَعُ أَنْ يَغْفِرَ لِي خَطِيئَتِي يَوْمَ الدِّينِ
ಪ್ರತಿಫಲದ ದಿನ ನನ್ನ ತಪ್ಪುಗಳನ್ನು ಕ್ಷಮಿಸುತ್ತಾನೆಂದು ನಾನು ಭರವಸೆ ಇಡುವುದೂ ಅವನ ಮೇಲೆಯೇ. {82}
رَبِّ هَبْ لِي حُكْمًا وَأَلْحِقْنِي بِالصَّالِحِينَ
(ಅಷ್ಟು ಹೇಳಿದ ಇಬ್ರಾಹೀಮ್ ರು ಪ್ರಾರ್ಥಿಸಿದರು): ಓ ನನ್ನ ಕರ್ತಾರನೇ, ನನಗೆ ಸದ್ವಿವೇಕವನ್ನು ದಯಪಾಲಿಸು ಮತ್ತು ನನ್ನನ್ನು ಸಜ್ಜನರೊಂದಿಗೆ ಸೇರಿಸು. {83}
وَاجْعَلْ لِي لِسَانَ صِدْقٍ فِي الْآخِرِينَ
ಮುಂದೆ ಬರಲಿರುವ ಪೀಳಿಗೆಯವರು ನನ್ನ ಬಗ್ಗೆ ಒಳಿತನ್ನೇ ಆಡುವಂತೆ ಮಾಡು. {84}
وَاجْعَلْنِي مِنْ وَرَثَةِ جَنَّةِ النَّعِيمِ
ಅನುಗ್ರಹಗಳು ತುಂಬಿದ ಸ್ವರ್ಗವನ್ನು ಬಳುವಳಿಯಾಗಿ ಪಡೆಯುವವರ ಸಾಲಿಗೆ ನನ್ನನ್ನೂ ಸೇರಿಸು! {85}
وَاغْفِرْ لِأَبِي إِنَّهُ كَانَ مِنَ الضَّالِّينَ
ಮತ್ತು ನನ್ನ ತಂದೆಯನ್ನು ನೀನು ಕ್ಷಮಿಸಿಬಿಡು; ನಿಜವಾಗಿ ಅವರು ದಾರಿತಪ್ಪಿದವರ ಗುಂಪಿಗೆ ಸೇರಿದ್ದರು. {86}
وَلَا تُخْزِنِي يَوْمَ يُبْعَثُونَ
ಎಲ್ಲರನ್ನೂ ಪುನಃ ಜೀವಂತಗೊಳಿಸುವ ಪುನರುತ್ಥಾನದ ದಿನ ನನ್ನನ್ನು ಅಪಮಾನಿತನನ್ನಾಗಿ ಮಾಡ ಬೇಡ. {87}
يَوْمَ لَا يَنْفَعُ مَالٌ وَلَا بَنُونَ
ಆ ದಿನ ಸಂಪತ್ತು ಮತ್ತು ಸಂತಾನದಿಂದ ಯಾವ ಪ್ರಯೋಜವೂ ಆಗದು. {88}
إِلَّا مَنْ أَتَى اللَّهَ بِقَلْبٍ سَلِيمٍ
ನಿರ್ಮಲವಾದ ಹೃದಯದೊಂದಿಗೆ ಅಲ್ಲಾಹ್ ನ ಬಳಿಗೆ ಬರುವವನ ಹೊರತು (ಬೇರೆ ಯಾರೂ ವಿಜಯಿಗಳಾಗಲಾರರು)! {89}
وَأُزْلِفَتِ الْجَنَّةُ لِلْمُتَّقِينَ
ಭಯಭಕ್ತಿಯೊಂದಿಗೆ (ಜೀವಿಸಿದವರಿಗೆ) ಅಂದು ಸ್ವರ್ಗವನ್ನು ಹತ್ತಿರಗೊಳಿಸಲಾಗುವುದು. {90}
وَبُرِّزَتِ الْجَحِيمُ لِلْغَاوِينَ
ತಪ್ಪುದಾರಿಯಲ್ಲಿ ನಡೆದವರ ಮುಂದೆ ನರಕವನ್ನು ತೆರೆದಿಡಲಾಗುವುದು. {91}
وَقِيلَ لَهُمْ أَيْنَ مَا كُنْتُمْ تَعْبُدُونَ
ಮತ್ತು, ನೀವು ಯಾವುದಕ್ಕೆ ಪೂಜೆ ಸಲ್ಲಿಸುತ್ತಿದ್ದಿರೋ ಅವೆಲ್ಲ ಎಲ್ಲಿ ಹೋದವು - ಎಂದು ಅವರೊಂದಿಗೆ ಕೇಳಲಾಗುವುದು. {92}
مِنْ دُونِ اللَّهِ هَلْ يَنْصُرُونَكُمْ أَوْ يَنْتَصِرُونَ
ಅದೂ ಸಹ ಅಲ್ಲಾಹ್ ನನ್ನು ಬಿಟ್ಟು! ಅವು ಇಂದು ನಿಮಗೆ ಸಹಾಯ ಮಾಡುತ್ತವೆಯೇ? ಅಥವಾ ಅವಕ್ಕೆ ಸ್ವತಃ ತಮ್ಮನ್ನೇ ರಕ್ಷಿಸಲು ಸಾಧ್ಯವೇ? {93}
فَكُبْكِبُوا فِيهَا هُمْ وَالْغَاوُونَ
ಅವುಗಳನ್ನೂ, ಜೊತೆಗೆ (ಅವುಗಳನ್ನು ಪೂಜಿಸುತ್ತಿದ್ದ) ಆ ದಾರಿಗೆಟ್ಟವರನ್ನೂ ತಲೆಕೆಳಗಾಗಿ ನರಕದೊಳಕ್ಕೆ ಎಸೆಯಲಾಗುವುದು. {94}
وَجُنُودُ إِبْلِيسَ أَجْمَعُونَ
ಇಬ್ಲೀಸ್ ಮತ್ತು ಆತನ ಪಡೆಯನ್ನು ಸಹ ಸಾರಾಸಗಟಾಗಿ (ಅದರೊಳಗೆ ತಲೆಕೆಳಗಾಗಿ ಎಸೆಯಲಾಗುವುದು). {95}
قَالُوا وَهُمْ فِيهَا يَخْتَصِمُونَ
ಅವರು ಅಲ್ಲಿ ಪರಸ್ಪರರೊಂದಿಗೆ ಜಗಳವಾಡುತ್ತಾ (ತಾವು ಪೂಜಿಸುತ್ತಿದ್ದವರೊಂದಿಗೆ) ಹೇಳುವರು; {96}
تَاللَّهِ إِنْ كُنَّا لَفِي ضَلَالٍ مُبِينٍ
ಅಲ್ಲಾಹ್ ನ ಆಣೆ! ನಾವು ಸ್ಪಷ್ಟವಾದ ತಪ್ಪು ದಾರಿಯಲ್ಲಿದ್ದುದಂತೂ ನಿಜ; {97}
إِذْ نُسَوِّيكُمْ بِرَبِّ الْعَالَمِينَ
ನಿಮ್ಮನ್ನು ಜಗದೊಡೆಯನಾದ (ಅಲ್ಲಾಹ್ ನಿಗೆ) ಸಮಾನಗೊಳಿಸಿ ನಾವು (ನಿಮ್ಮನ್ನು ಪೂಜುಸುತ್ತಿದ್ದಾಗ)! {98}
وَمَا أَضَلَّنَا إِلَّا الْمُجْرِمُونَ
ನಮ್ಮನ್ನು ತಪ್ಪುದಾರಿಗೆ ಸಾಗಿಸಿದವರು ಮಾತ್ರ ಅಪರಾಧಿಗಳೇ. {99}
فَمَا لَنَا مِنْ شَافِعِينَ
(ಇಂದು) ನಮ್ಮ ಪರವಾಗಿ ಶಿಫಾರಸ್ಸು ಮಾಡಲು ಯಾರೂ ಇಲ್ಲ. {100}
وَلَا صَدِيقٍ حَمِيمٍ
ಕನಿಷ್ಟ ಪಕ್ಷ, ಒಬ್ಬ ಆತ್ಮೀಯ ಮಿತ್ರನೂ ಇಲ್ಲ. {101}
فَلَوْ أَنَّ لَنَا كَرَّةً فَنَكُونَ مِنَ الْمُؤْمِنِينَ
ದುರವಸ್ಥೆ! (ಭೂಲೋಕ ಜೀವನಕ್ಕೆ) ಹಿಂದಿರುಗುವ ಒಂದು ಅವಕಾಶ ಸಿಕ್ಕರೂ ನಾವು ವಿಶ್ವಾಸಿಗಳಾಗಿ ಬಿಡುತ್ತಿದ್ದೆವು! {102}
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
ಈ ಘಟನೆಯಲ್ಲೂ ಒಂದು ಪಾಠವಿದೆ. ಇವರಲ್ಲಿ ಹೆಚ್ಚಿನವರು (ಆಗಲೂ) ವಿಶ್ವಾಸಿಗಳಾಗುತ್ತಿರಲಿಲ್ಲ. {103}
وَإِنَّ رَبَّكَ لَهُوَ الْعَزِيزُ الرَّحِيمُ
ಹೌದು ಪೈಗಂಬರರೇ, ನಿಮ್ಮ ದೇವನು ಬಹಳ ಮಿಗಿಲಾದವನು; ದಯೆತೋರುವವನೂ ಹೌದು. {104}
كَذَّبَتْ قَوْمُ نُوحٍ الْمُرْسَلِينَ
ಪ್ರವಾದಿ ನೂಹ್ ರ ಸಮುದಾಯದ ಜನರು ಸಹ ನಮ್ಮ ದೂತರುಗಳನ್ನೆಲ್ಲ ಅಲ್ಲಗಳೆದು ಬಿಟ್ಟರು! {105}
إِذْ قَالَ لَهُمْ أَخُوهُمْ نُوحٌ أَلَا تَتَّقُونَ
ಅವರ ಸಹೋದರ ನೂಹ್, ನೀವು ಅಲ್ಲಾಹ್ ನಿಗೆ ಭಯಪಡುವುದಿಲ್ಲವೇ ಎಂದು ಅವರೊಂದಿಗೆ ಕೇಳಿದ ಸಂದರ್ಭವನ್ನು ನೆನಪಿಸಿರಿ! {106}
إِنِّي لَكُمْ رَسُولٌ أَمِينٌ
(ಅವರು ಹೇಳಿದರು): ನಾನು ನಿಮ್ಮಡೆಗೆ ಕಳುಹಿಸಲ್ಪಟ್ಟ ಒಬ್ಬ ಪ್ರಾಮಾಣಿಕನಾದ ದೂತನಾಗಿರುವೆ. {107}
فَاتَّقُوا اللَّهَ وَأَطِيعُونِ
ನೀವು ಅಲ್ಲಾಹ್ ನ (ಶಿಕ್ಷೆಯನ್ನು) ಭಯಪಡಿರಿ ಮತ್ತು (ಧಿಕ್ಕಾರದ ಸ್ವಭಾವ ತೊರೆದು) ಅನುಸರಿಸುವವರಾಗಿರಿ. {108}
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ
ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ; ನನಗಿರುವ ಪ್ರತಿಫಲ ಲೋಕಗಳ ಪರಿಪಾಲಕನಾದ (ಅಲ್ಲಾಹ್ ನು) ಮಾತ್ರವೇ ನೀಡಬಲ್ಲನು. {109}
فَاتَّقُوا اللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹ್ ನನ್ನು ಭಯಪಡುವವರಾಗಿರಿ ಮತ್ತು ನನ್ನ ಬೋಧನೆಯನ್ನು ಅನುಸರಿಸಿರಿ. {110}
قَالُوا أَنُؤْمِنُ لَكَ وَاتَّبَعَكَ الْأَرْذَلُونَ
ನಿನ್ನನ್ನು ಹಿಂಬಾಲಿಸುತ್ತಿರುವವರು (ಸಮಾಜದ) ಕೆಳಸ್ತರದ ಕೆಳಗಿನ ಜನರಾಗಿರುವಾಗ ನಾವು ನಿನ್ನ (ಧರ್ಮವನ್ನು) ನಂಬಬೇಕೇ? ಜನರು ವಾದಿಸಿದರು. {111}
قَالَ وَمَا عِلْمِي بِمَا كَانُوا يَعْمَلُونَ
ನೂಹ್ ಉತ್ತರಿಸಿದರು: ಅವರು ಯಾವ ಕಸುಬುಗಳಲ್ಲಿ ತೊಡಗಿದ್ದಾರೆಂಬುದು ನನಗೆ ಗೊತ್ತಿರದ ಸಂಗತಿ. {112}
إِنْ حِسَابُهُمْ إِلَّا عَلَىٰ رَبِّي ۖ لَوْ تَشْعُرُونَ
(ಅದರ ಬಗ್ಗೆ) ಅವರನ್ನು ವಿಚಾರಿಸ ಬೇಕಾದವನು ನನ್ನ ಒಡೆಯನಾದ (ಅಲ್ಲಾಹ್ ನು) ಮಾತ್ರ; ನೀವು (ಅವರನ್ನು ನೀಚರು ಎಂದೇ) ತಿಳಿದಿದ್ದರೆ! {113}
وَمَا أَنَا بِطَارِدِ الْمُؤْمِنِينَ
ವಿಶ್ವಾಸಿಗಳಾದ ಜನರನ್ನು ನಾನಂತು ದೂರ ಓಡಿಸಲಾರೆ. {114}
إِنْ أَنَا إِلَّا نَذِيرٌ مُبِينٌ
ನಾನು ಜನರಿಗೆ ಅರ್ಥವಾಗುವಂತೆ (ಪರಲೋಕ, ವಿಚಾರಣೆ ಮುಂತಾದವುಗಳ ಕುರಿತು) ಎಚ್ಚರಿಕೆ ನೀಡುವವನು ಮಾತ್ರ. {115}
قَالُوا لَئِنْ لَمْ تَنْتَهِ يَا نُوحُ لَتَكُونَنَّ مِنَ الْمَرْجُومِينَ
ಅದಕ್ಕೆ ಸಮುದಾಯದ ಜನರು, ಓ ನೂಹ್, ನೀನು ಇದನ್ನೆಲ್ಲ ನಿಲ್ಲಿಸದಿದ್ದರೆ ಖಂಡಿತ ನಿನ್ನನ್ನು ಕಲ್ಲೆಸೆದು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿದರು. {116}
قَالَ رَبِّ إِنَّ قَوْمِي كَذَّبُونِ
ಓ ನನ್ನ ಒಡೆಯನೇ, ಈ ನನ್ನ ಸಮುದಾಯವು ನನ್ನನ್ನು ತಿರಸ್ಕರಿಸಿ ಬಿಟ್ಟಿದೆ - ಪ್ರವಾದಿ ನೂಹ್ ಪ್ರಾರ್ಥಿಸಿದರು. {117}
فَافْتَحْ بَيْنِي وَبَيْنَهُمْ فَتْحًا وَنَجِّنِي وَمَنْ مَعِيَ مِنَ الْمُؤْمِنِينَ
ಆದ್ದರಿಂದ ಈಗ ನನ್ನ ಮತ್ತು ಈ ಜನರ ನಡುವೆ ನೀನೇ ಒಂದು ನಿರ್ಣಾಯಕ ತೀರ್ಪು ನೀಡು. ನನ್ನನ್ನು ಮತ್ತು ನನ್ನ ಜೊತೆಗಿರುವ ಈ ವಿಶ್ವಾಸಿ ಜನರನ್ನು ಇವರಿಂದ ರಕ್ಷಿಸು. {118}
فَأَنْجَيْنَاهُ وَمَنْ مَعَهُ فِي الْفُلْكِ الْمَشْحُونِ
ಕೊನೆಗೆ ನಾವು ಅವರನ್ನೂ ಅವರ ಜೊತೆಗಿದ್ದವರನ್ನೂ ಪೂರ್ತಿಯಾಗಿ ತುಂಬಿದ ನೌಕೆಯಲ್ಲಿ ಕುಳ್ಳಿರಿಸಿ ಪಾರುಮಾಡಿದೆವು. {119}
ثُمَّ أَغْرَقْنَا بَعْدُ الْبَاقِينَ
ತದನಂತರ, ಉಳಿದವರನ್ನೆಲ್ಲ ನಾವು ಮುಳುಗಡೆಗೊಳಿಸಿ ಸಾಯಿಸಿದೆವು. {120}
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
(ಪೈಗಂಬರರೇ), ಈ ಘಟನೆಯಲ್ಲೂ ಒಂದು ದೃಷ್ಟಾಂತವಿದೆ; ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸಿಗಳಾಗುವವರಲ್ಲ. {121}
وَإِنَّ رَبَّكَ لَهُوَ الْعَزِيزُ الرَّحِيمُ
ಹೌದು ಪೈಗಂಬರರೇ, ನಿಮ್ಮ ಕರ್ತಾರನು ಬಹಳ ಪ್ರತಾಪವುಳ್ಳವನು; ಅಪ್ರತಿಮ ದಯಾಮಯಿಯೂ ಆಗಿರುವನು. {122}
كَذَّبَتْ عَادٌ الْمُرْسَلِينَ
(ಹಾಗೆಯೇ) ಆದ್ ಸಮುದಾಯವೂ ಸಹ ನಮ್ಮ ದೂತರನ್ನು ಧಿಕ್ಕರಿಸಿ ಬಿಟ್ಟಿತು. {123}
إِذْ قَالَ لَهُمْ أَخُوهُمْ هُودٌ أَلَا تَتَّقُونَ
ಅವರ ಸಹೋದರನಾದ ಪ್ರವಾದಿ ಹೂದ್ ರು, ನೀವು ಅಲ್ಲಾಹ್ ನಿಗೆ ಭಯಪಡುವುದಿಲ್ಲವೇ ಎಂದು ಅವರೊಂದಿಗೆ ಕೇಳಿದ ಸಂದರ್ಭವನ್ನು ನೆನಪಿಸಿರಿ! {124}
إِنِّي لَكُمْ رَسُولٌ أَمِينٌ
ನಾನು ನಿಮ್ಮ ಕಡೆಗೆ (ಅಲ್ಲಾಹ್ ನ ವತಿಯಿಂದ) ಕಳುಹಿಸಲ್ಪಟ್ಟ ಒಬ್ಬ ಪ್ರಾಮಾಣಿಕ ದೂತನಾಗಿರುವೆ. {125}
فَاتَّقُوا اللَّهَ وَأَطِيعُونِ
ಆದ್ದರಿಂದ ನೀವು ಅಲ್ಲಾಹ್ ನಿಗೆ ಭಯಭಕ್ತಿ ತೋರಿರಿ ಮತ್ತು ನನ್ನ ಮಾತನ್ನು ಅನುಸರಿಸಿರಿ. {126}
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ
ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ; ನನಗಿರುವ ಪ್ರತಿಫಲವು ಲೋಕಗಳ ಒಡೆಯನಾದ (ಅಲ್ಲಾಹ್ ನು) ಮಾತ್ರವೇ ನೀಡಬೇಕಾಗಿದೆ. {127}
أَتَبْنُونَ بِكُلِّ رِيعٍ آيَةً تَعْبَثُونَ
ಏನು? ನೀವು ಸ್ವತಃ ನಿಮ್ಮನ್ನೇ ರಂಜಿಸಲು ಎಲ್ಲಾ ಎತ್ತರದ ಪ್ರದೇಶಗಳಲ್ಲಿ ವಿಷ್ಪ್ರಯೋಜಕವಾದ ಸ್ಮಾರಕಗಳನ್ನು ನಿರ್ಮಿಸಿ ಇಡುತ್ತಿರುವಿರಾ? {128}
وَتَتَّخِذُونَ مَصَانِعَ لَعَلَّكُمْ تَخْلُدُونَ
ಶಾಶ್ವತವಾಗಿ ಜೀವಿಸಲಿಕ್ಕಾಗಿಯೋ ಎಂಬಂತೆ ಭವ್ಯ ಭವನಗಳನ್ನು ಸಹ ನೀವು ನಿರ್ಮಿಸುತ್ತಿರುವಿರಿ. {129}
وَإِذَا بَطَشْتُمْ بَطَشْتُمْ جَبَّارِينَ
ಮತ್ತು ಇತರರ ಮೇಲೆ ನೀವು ಹಿಡಿತ ಸಾಧಿಸುವಾಗ ಕ್ರೌರ್ಯ ಮೆರೆಯುತ್ತಾ ಹಿಂಸಿಸುತ್ತಾ ಹಿಡಿತ ಸಾಧಿಸುತ್ತಿರುವಿರಿ. {130}
فَاتَّقُوا اللَّهَ وَأَطِيعُونِ
ಇನ್ನಾದರೂ ನೀವು ಅಲ್ಲಾಹ್ ನು (ನೀಡುವ ಕಠಿಣ ಶಿಕ್ಷೆಗೆ) ಭಯಪಡುವವರಾಗಿರಿ; ಮತ್ತು ನನ್ನ ಬೋಧನೆಗಳನ್ನು ಅನುಸರಿಸಿರಿ. {131}
وَاتَّقُوا الَّذِي أَمَدَّكُمْ بِمَا تَعْلَمُونَ
ನಿಮ್ಮ ಅರಿವಿನಲ್ಲಿರುವ (ಅರ್ಥಾತ್ ನಿಮಗೆ ಉಪಯುಕ್ತವಾದ) ಎಲ್ಲವನ್ನೂ ದಯಪಾಲಿಸಿದ ಆ (ಅಲ್ಲಾಹ್ ನ) ಭಯವಿರಿಸಿಕೊಳ್ಳಿ. {132}
أَمَدَّكُمْ بِأَنْعَامٍ وَبَنِينَ
ಅವನು ನಿಮಗೆ ಜಾನುವಾರುಗಳನ್ನೂ ನೀಡಿದನು; ಸಂತಾನವನ್ನೂ ದಯಪಾಲಿಸಿರುವನು. {133}
وَجَنَّاتٍ وَعُيُونٍ
ತೋಟಗಳನ್ನೂ ಚಿಲುಮೆಗಳನ್ನೂ ನೀಡಿರುವನು. {134}
إِنِّي أَخَافُ عَلَيْكُمْ عَذَابَ يَوْمٍ عَظِيمٍ
ಆ ಒಂದು ಭಯಾನಕ ದಿನದ ಶಿಕ್ಷೆಯ ಕುರಿತಂತೆ ನನಗೆ ನಿಮ್ಮ ವಿಷಯದಲ್ಲಿ ಭಯವಾಗುತ್ತಿದೆ; (ಪ್ರವಾದಿ ಹೂದ್ ಆತಂಕ ವ್ಯಕ್ತಪಡಿಸಿದರು). {135}
قَالُوا سَوَاءٌ عَلَيْنَا أَوَعَظْتَ أَمْ لَمْ تَكُنْ مِنَ الْوَاعِظِينَ
ಅದಕ್ಕೆ ಅವರು ಉತ್ತರಿಸಿದರು: ನೀವು ಉಪದೇಶ ಮಾಡಿದರೂ ಮಾಡದಿದ್ದರೂ ನಮ್ಮ ಮಟ್ಟಿಗೆ ಎಲ್ಲಾ ಒಂದೇ! [ಅರ್ಥಾತ್ ನಮಗೆ ನಿಮ್ಮ ಉಪದೇಶ ಅಗತ್ಯವಿಲ್ಲ]. {136}
إِنْ هَٰذَا إِلَّا خُلُقُ الْأَوَّلِينَ
(ಪೈಗಂಬರರೇ, ನಿಮ್ಮ ಜನರು ಮಾತ್ರವಲ್ಲ); ಹಿಂದಿನವರ ಸ್ವಭಾವವೂ (ನಿಮ್ಮ ಜನರ) ಹಾಗೆಯೇ ಇತ್ತು. {137}
وَمَا نَحْنُ بِمُعَذَّبِينَ
ನಮ್ಮನ್ನು ಶಿಕ್ಷೆಗೆ ಗುರಿಪಡಿಸಲಾಗದು (ಎಂದು ಅವರು ಹೇಳಿದರು). {138}
فَكَذَّبُوهُ فَأَهْلَكْنَاهُمْ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
ನಂತರ ಪ್ರವಾದಿ ಹೂದ್ ರನ್ನು ಸಂಪೂರ್ಣವಾಗಿ ತಿರಸ್ಕರಿಸಿ ಬಿಟ್ಟರು. ಕೊನೆಗೆ ನಾವು ಅವರನ್ನು ಸರ್ವನಾಶ ಮಾಡಿ ಬಿಟ್ಟೆವು. ಇನ್ನು ಈ ಘಟನೆಯಲ್ಲೂ ಒಂದು ಪಾಠವಿದೆ. ಆದರೆ (ಪೈಗಂಬರರೇ, ನಿಮ್ಮ ಜನರಲ್ಲಿ) ಹೆಚ್ಚಿನವರು ವಿಶ್ವಾಸಿಗಳಾಗುವವರಲ್ಲ. {139}
وَإِنَّ رَبَّكَ لَهُوَ الْعَزِيزُ الرَّحِيمُ
ಪೈಗಂಬರರೇ, ನಿಮ್ಮ ಒಡೆಯನು ಬಹಳ ಶಕ್ತಿವಂತನಾಗಿರುವನು; ಅವನು ಬಹಳ ದಯಾಮಯಿಯೂ ಹೌದು. {140}
كَذَّبَتْ ثَمُودُ الْمُرْسَلِينَ
ತಮೂದ್ ಎಂಬ ಸಮುದಾಯವೂ ಸಹ (ಅಲ್ಲಾಹ್ ನ) ದೂತರುಗಳನ್ನು ತಿರಸ್ಕರಿಸಿ ಬಿಟ್ಟಿತು. {141}
إِذْ قَالَ لَهُمْ أَخُوهُمْ صَالِحٌ أَلَا تَتَّقُونَ
ಅವರ ಸಹೋದರನಾದ ಪ್ರವಾದಿ ಸಾಲಿಹ್, ನೀವು ಅಲ್ಲಾಹ್ ನಿಗೆ ಭಯಭಕ್ತಿ ತೋರುವುದಿಲ್ಲವೇ ಎಂದು ಆ ಜನರೊಡನೆ ಕೇಳಿದ ಸಂದರ್ಭವನ್ನು ಸ್ಮರಿಸಿರಿ. {142}
إِنِّي لَكُمْ رَسُولٌ أَمِينٌ
ನಿಜವಾಗಿ ನಾನು ನಿಮ್ಮ ಕಡೆಗೆ (ಅಲ್ಲಾಹ್ ನ ವತಿಯಿಂದ) ಕಳುಹಿಸಲ್ಪಟ್ಟ ಒಬ್ಬ ಪ್ರಾಮಾಣಿಕ ದೂತನಾಗಿರುವೆ. {143}
فَاتَّقُوا اللَّهَ وَأَطِيعُونِ
ಆದ್ದರಿಂದ ಅಲ್ಲಾಹ್ ನಿಗೆ ಭಯಭಕ್ತಿ ತೋರುವವರಾಗಿರಿ ಮತ್ತು ನನ್ನನ್ನು ಅನುಸರಿಸಿರಿ. {144}
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ
ನಾನು ಇದಕ್ಕೆ ನಿಮ್ಮಿಂದ ಯಾವ ಪ್ರತಿಫವನ್ನೂ ಕೇಳುತ್ತಿಲ್ಲ; ನನಗಿರುವ ಪ್ರತಿಫಲವು ಲೋಕಗಳ ಪರಿಪಾಲಕನಾದ ಅಲ್ಲಾಹ್ ನ ಬಳಿ ಮಾತ್ರವಿದೆ. {145}
أَتُتْرَكُونَ فِي مَا هَاهُنَا آمِنِينَ
ಏನು? (ಈ ಐಷಾರಾಮಿ ಸ್ಥಿತಿಯಲ್ಲಿ) ನಿಶ್ಚಿಂತರಾಗಿ (ಸದಾ ಜೀವಿಸಲು) ಇಲ್ಲೇ ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು (ಎಂದು ಭಾವಿಸಿರುವಿರಾ); {146}
فِي جَنَّاتٍ وَعُيُونٍ
ಈ ಉದ್ಯಾನಗಳ ಮತ್ತು ಈ ಚಿಲುಮೆಗಳ ಮಧ್ಯೆ? {147}
وَزُرُوعٍ وَنَخْلٍ طَلْعُهَا هَضِيمٌ
ಈ ಹೊಲಗಳ ಮಧ್ಯೆ; ಮತ್ತು (ಭಾರ ನಿಮಿತ್ತ) ಬಾಗಿದ ಗೊಂಚಲುಗಳನ್ನು ಹೊಂದಿದ ಈ ಖರ್ಜೂರದ ತೋಟಗಳ ಮಧ್ಯೆ (ಸದಾ ನಿಮ್ಮನ್ನು ಇರಗೊಡಲಾಗುವುದೇ)? {148}
وَتَنْحِتُونَ مِنَ الْجِبَالِ بُيُوتًا فَارِهِينَ
ಈ ಬೆಟ್ಟಗಳನ್ನು ನೈಪುಣ್ಯದಿಂದ ಕೊರೆದು ನಿವಾಸಗಳನ್ನು ನಿರ್ಮಿಸುತ್ತಾ ಇರಲು (ನಿಮ್ಮನ್ನು ಬಿಟ್ಟು ಬಿಡಲಾಗುವುದೆಂದು ನೀವು ಭಾವಿಸಿರುವಿರಾ)? {149}
فَاتَّقُوا اللَّهَ وَأَطِيعُونِ
ಆದ್ದರಿಂದ ಅಲ್ಲಾಹ್ ನ (ಶಿಕ್ಷೆಯ) ವಿಷಯದಲ್ಲಿ ನೀವು ಜಾಗೃತರಾಗಿರಿ ಮತ್ತು ನನ್ನ ಅನುಸರಣೆ ಮಾಡಿರಿ. {150}
وَلَا تُطِيعُوا أَمْرَ الْمُسْرِفِينَ
ಹದ್ದು ಮೀರಿ ವರ್ತಿಸುವವರ ಮಾತನ್ನು ನೀವು ಅನುಸರಿಸದಿರಿ. {151}
الَّذِينَ يُفْسِدُونَ فِي الْأَرْضِ وَلَا يُصْلِحُونَ
ಅಂತಹ ಜನರು ನಾಡಿನಲ್ಲಿ ಅನಾಚಾರ ಹಬ್ಬುತ್ತಾರೆಯೇ ಹೊರತು ಯಾವ ಸುಧಾರಣೆಯನ್ನೂ ಮಾಡುವುದಿಲ್ಲ. {152}
قَالُوا إِنَّمَا أَنْتَ مِنَ الْمُسَحَّرِينَ
ನಿಜವಾಗಿ ನೀನೊಬ್ಬ ಮಾಟ ಪೀಡಿತನಾಗಿರುವೆ ಎಂದು ಆ ಜನರು (ಅಲ್ಲಾಹ್ ನ ಆ ದೂತನ ಕುರಿತು) ಆಪಾದಿಸಿದರು. {153}
مَا أَنْتَ إِلَّا بَشَرٌ مِثْلُنَا فَأْتِ بِآيَةٍ إِنْ كُنْتَ مِنَ الصَّادِقِينَ
ನೀನು ಕೇವಲ ನಮ್ಮಂತಹ ಒಬ್ಬ ಮನುಷ್ಯನೇ ಹೊರತು ಇನ್ನೇನೂ ಅಲ್ಲ; ಒಂದು ವೇಳೆ ನೀನು ಸತ್ಯವಂತನು ಹೌದಾದರೆ (ನಿನ್ನ ಮಾತನ್ನು ಸಾಬೀತು ಪಡಿಸಲು) ಒಂದು ಪುರಾವೆಯನ್ನು ತಂದು ತೋರಿಸು (ಎಂದು ಜನರು ದೂತ ಸಾಲಿಹ್ ರಿಗೆ ಸವಾಲು ಹಾಕಿದರು). {154}
قَالَ هَٰذِهِ نَاقَةٌ لَهَا شِرْبٌ وَلَكُمْ شِرْبُ يَوْمٍ مَعْلُومٍ
ಪ್ರವಾದಿ ಸಾಲಿಹ್ ರು ಹೇಳಿದರು: ನೋಡಿ, ಈ ಒಂಟೆಯೇ (ಆ ಪುರಾವೆ); ನಿಗದಿತ ದಿನಗಳಲ್ಲಿ, ಸರದಿಯಂತೆ ಇದಕ್ಕೆ ನೀರು ಕುಡಿಯುವ ಹಕ್ಕಿದೆ; ಅಂತೆಯೇ ನಿಮಗೂ ನೀರು ಕುಡಿಯುವ ಹಕ್ಕಿದೆ. {155}
وَلَا تَمَسُّوهَا بِسُوءٍ فَيَأْخُذَكُمْ عَذَابُ يَوْمٍ عَظِيمٍ
ಆದರೆ ತೊಂದರೆ ಕೊಡುವ ಉದ್ದೇಶದಿಂದ ನೀವು ಇದನ್ನು ಮುಟ್ಟಬೇಡಿರಿ; ಹಾಗೇನಾದರೂ ಮಾಡಿದರೆ ಆ ಭಯಾನಕ ದಿನದ ಶಿಕ್ಷೆಯು ನಿಮ್ಮ ಮೇಲೆ ಎರಗಿ ಬೀಳಲಿದೆ! {156}
فَعَقَرُوهَا فَأَصْبَحُوا نَادِمِينَ
ಆದರೆ (ಆ ಎಚ್ಚರಿಕೆಯ ಹೊರತಾಗಿಯೂ) ಅವರು ಅದನ್ನು (ಕಾಲು ಕಡಿದು) ಕೊಂದು ಬಿಟ್ಟರು; ಆ ಕೂಡಲೇ (ಎರಗಿ ಬಿದ್ದ ಶಿಕ್ಷೆಯನ್ನು ಕಂಡು) ಅವರು ತೀವ್ರವಾಗಿ ಪರಿತಪಿಸಿದರು! {157}
فَأَخَذَهُمُ الْعَذَابُ ۗ إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
ಶಿಕ್ಷೆ ದಿಢೀರನೆ ಅವರನ್ನು ಆವರಿ ಬಿಟ್ಟಿತು! ಈ ಘಟನೆಯಲ್ಲೂ, (ಪೈಗಂಬರರೇ, ನಿಮ್ಮನ್ನು ಧಿಕ್ಕರಿಸುತ್ತಿರುವವರಿಗೆ) ಒಂದು ಪಾಠವಿದೆ. ಆದರೆ ಅವರಲ್ಲಿ ಹೆಚ್ಚಿನ ಜನರು ವಿಶ್ವಾಸಿಗಳಾಗುವವರಲ್ಲ! {158}
وَإِنَّ رَبَّكَ لَهُوَ الْعَزِيزُ الرَّحِيمُ
ಪೈಗಂಬರರೇ, ನಿಜವಾಗಿ ನಿಮ್ಮ ಒಡೆಯನು ಪ್ರತಾಪಶಾಲಿಯಾಗಿರುವನು; ಬಹಳ ದಯಾಮಯಿಯೂ ಆಗಿರುವನು. {159}
كَذَّبَتْ قَوْمُ لُوطٍ الْمُرْسَلِينَ
ಇನ್ನು, ಪ್ರವಾದಿ ಲೂತ್ ರ ಸಮುದಾಯವೂ ಸಹ (ಅಲ್ಲಾಹ್ ನ) ದೂತರುಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿತ್ತು! {160}
إِذْ قَالَ لَهُمْ أَخُوهُمْ لُوطٌ أَلَا تَتَّقُونَ
ಆ ಸಮುದಾಯದ ಸಹೋದರನಾದ ಪ್ರವಾದಿ ಲೂತ್ ರು ಅವರೊಡನೆ, ನೀವೇನು (ಅಲ್ಲಾಹ್ ನಿಗೆ) ಭಯ ಪಡುವುದಿಲ್ಲವೇ ಎಂದು ಕೇಳಿದ ಸಂದರ್ಭವನ್ನು ಸ್ಮರಿಸಿರಿ. {161}
إِنِّي لَكُمْ رَسُولٌ أَمِينٌ
ಹೌದು, ನಾನು ನಿಮ್ಮ ಪಾಲಿಗೆ (ಅಲ್ಲಾಹ್ ನ ವತಿಯಿಂದ ಕಳುಹಿಸಲ್ಪಟ್ಟ) ಒಬ್ಬ ಪ್ರಾಮಾಣಿಕ ದೂತನಾಗಿರುವೆನು. {162}
فَاتَّقُوا اللَّهَ وَأَطِيعُونِ
ಆದ್ದರಿಂದ, ಜನರೇ, ನೀವು ಅಲ್ಲಾಹ್ ನ ಭಯವಿರಿಸಿಕೊಳ್ಳಿ ಮತ್ತು ನನ್ನ ಅನುಸರಣೆ ಮಾಡಿರಿ. {163}
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ
ಅದಕ್ಕಾಗಿ ನಿಮ್ಮಿಂದ ನಾನೇನೂ ಪ್ರತಿಫಲ ಕೇಳುತ್ತಿಲ್ಲ; ನನಗೆ ಪ್ರತಿಫಲ ನೀಡಬೇಕಾದುದು ಜಗದೊಡೆಯನಾದ (ಅಲ್ಲಾಹ್ ನೇ) ಹೊರತು ಬೇರಾರೂ ಅಲ್ಲ. {164}
أَتَأْتُونَ الذُّكْرَانَ مِنَ الْعَالَمِينَ
ಏನದು? ಇಡೀ ಮನುಷ್ಯ ಜಾತಿಯ ಪೈಕಿ (ಕಾಮತೃಷೆ ತೀರಿಸಲು) ನೀವು ಮಾತ್ರ ಪುರುಷರ ಬಳಿಗೆ ಹೋಗುತ್ತಿರುವಿರಿ?! {165}
وَتَذَرُونَ مَا خَلَقَ لَكُمْ رَبُّكُمْ مِنْ أَزْوَاجِكُمْ ۚ بَلْ أَنْتُمْ قَوْمٌ عَادُونَ
ಮತ್ತು ನಿಮ್ಮ ಕರ್ತಾರನು ನಿಮಗೋಸ್ಕರ ಸೃಷ್ಟಿಸಿದ ನಿಮ್ಮ ಪತ್ನಿಯರನ್ನು ವರ್ಜಿಸುತ್ತಿರುವಿರಿ! ಅಲ್ಲ, ವಾಸ್ತವದಲ್ಲಿ ನೀವು ಎಲ್ಲ ಹದ್ದುಗಳನ್ನು ಮೀರಿದ ಒಂದು ಜನಾಂಗವಾಗಿರುವಿರಿ. {166}
قَالُوا لَئِنْ لَمْ تَنْتَهِ يَا لُوطُ لَتَكُونَنَّ مِنَ الْمُخْرَجِينَ
ಅವರು ಹೇಳಿದರು: ಓ ಲೂತ್! ಒಂದು ವೇಳೆ ನೀನು (ಇಂತಹ ಉಪದೇಶಗಳನ್ನು) ನಿಲ್ಲಿಸದಿದ್ದರೆ ಖಂಡಿತವಾಗಿ ಈ ನಾಡಿನಿಂದ ನಿನ್ನನ್ನು ಹೊರಗಟ್ಟಲಾಗುವುದು. {167}
قَالَ إِنِّي لِعَمَلِكُمْ مِنَ الْقَالِينَ
ಪ್ರವಾದಿ ಲೂತ್ ಉತ್ತರಿಸಿದರು: ನೀವೆಸಗುತ್ತಿರುವ ಅಂತಹ ದುಷ್ಕೃತ್ಯದ ಬಗ್ಗೆ ನನಗಂತೂ ಬಹಳ ಜಿಗುಪ್ಸೆಯಿದೆ. {168}
رَبِّ نَجِّنِي وَأَهْلِي مِمَّا يَعْمَلُونَ
ಓ ನನ್ನ ಒಡೆಯಾ! ನನ್ನನ್ನೂ ನನ್ನ ಜನರನ್ನೂ ಇವರೆಸಗುತ್ತಿರುವ ಈ ದುಷ್ಕೃತ್ಯದ (ಪರಿಣಾಮದಿಂದ) ಪಾರು ಮಾಡು. (ಲೂತ್ ರು ಅಂತಿಮವಾಗಿ ಪ್ರಾರ್ಥಿಸಿಕೊಂಡರು). {169}
فَنَجَّيْنَاهُ وَأَهْلَهُ أَجْمَعِينَ
ಹಾಗೆ ನಾವು ಅವರನ್ನು ಮತ್ತು ಅವರ ಜೊತೆಗಿದ್ದ ಎಲ್ಲರನ್ನೂ ಒಟ್ಟಾಗಿ ಅಲ್ಲಿಂದ ಪಾರುಮಾಡಿದೆವು. {170}
إِلَّا عَجُوزًا فِي الْغَابِرِينَ
ಆದರೆ (ಅವರ ಮನೆಯವರ ಪೈಕಿ) ಒಂದು ಮುದುಕಿಯ ಹೊರತು! ಆಕೆ [ದುಷ್ಕೃತ್ಯದಲ್ಲಿ ನಿರತರಾಗಿದ್ದ ಊರ ಜನರ ಜೊತೆಗೆ] ಹಿಂದೆಯೇ ಉಳಿದುಕೊಂಡಳು. {171}
ثُمَّ دَمَّرْنَا الْآخَرِينَ
ನಂತರ ನಾವು (ನೂಹ್ ಮತ್ತು ಅವರ ಜೊತೆಗಿದ್ದವರನ್ನು ಬಿಟ್ಟು) ಉಳಿದ ಎಲ್ಲರನ್ನೂ ನಾಶಪಡಿಸಿದೆವು. {172}
وَأَمْطَرْنَا عَلَيْهِمْ مَطَرًا ۖ فَسَاءَ مَطَرُ الْمُنْذَرِينَ
ನಾವು ಅವರ ಮೇಲೆ [ವಿನಾಶಕಾರಿ ಬೆಂಕಿಯುಂಡೆಯ] ಮಳೆ ಸುರಿಸಿದೆವು; ಅದಾಗಲೇ ಮುನ್ನೆಚರಿಕೆ ನೀಡಲ್ಪಟ್ಟ ಜನರಿಗೆ ಅದು ಬಹಳ ಕೆಟ್ಟ ಮಳೆಯಾಗಿತ್ತು. {173}
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
ಈ ಘಟನೆಯಲ್ಲೂ (ಪೈಗಂಬರರೇ, ನಿಮ್ಮ ಜನರಿಗೆ) ಒಂದು ದೃಷ್ಟಾಂತವಿದೆ. ಆದರೆ ಅವರಲ್ಲಿ ಹೆಚ್ಚಿನವರು (ಇದರಿಂದ ಪಾಠ ಕಲಿತು) ವಿಶ್ವಾಸಿಗಳಾಗುವ ಜನರಲ್ಲ! {174}
وَإِنَّ رَبَّكَ لَهُوَ الْعَزِيزُ الرَّحِيمُ
ಪೈಗಂಬರರೇ, ನಿಮ್ಮ ಕರ್ತಾರನು (ಯಾರನ್ನು ಬೇಕಾದರೂ ಶಿಕ್ಷಿಸುವಷ್ಟು) ಶಕ್ತಿಶಾಲಿಯಾಗಿರುವನು; ಆದರೆ (ತಪ್ಪಿತಸ್ಥರಿಗೆ ಕಾಲಾವಕಾಶ ನೀಡುವ) ಕರುಣಾಮಯಿಯೂ ಹೌದು! {175}
كَذَّبَ أَصْحَابُ الْأَيْكَةِ الْمُرْسَلِينَ
ಹಾಗೆಯೇ, [ಮದ್‌ಯನ್ ಪ್ರದೇಶದಲ್ಲಿನ] ಅಲ್ ಐಕಃ ದ ನಿವಾಸಿಗಳೂ ನಮ್ಮ ದೂತರುಗಳನ್ನು ತಿರಸ್ಕರಿಸಿದರು! {176}
إِذْ قَالَ لَهُمْ شُعَيْبٌ أَلَا تَتَّقُونَ
ನೀವು ಅಲ್ಲಾಹ್ ನಿಗೆ ಭಯಪಡುವುದಿಲ್ಲವೇ ಎಂದು ಪ್ರವಾದಿ ಶುಐಬ್ ಅವರೊಂದಿಗೆ ಹೇಳಿದ ಆ ಸಂದರ್ಭವನ್ನು ಸ್ವಲ್ಪ ನೆನಪಿಸಿಕೊಳ್ಳಿ! {177}
إِنِّي لَكُمْ رَسُولٌ أَمِينٌ
ನಾನು ನಿಮ್ಮೆಡೆಗೆ (ಅಲ್ಲಾಹ್ ನ ವತಿಯಿಂದ ಕಳುಹಿಸಲ್ಪಟ್ಟ) ಒಬ್ಬ ಪ್ರಾಮಣಿಕ ದೂತನಾಗಿರುವೆ. {178}
فَاتَّقُوا اللَّهَ وَأَطِيعُونِ
ಆದ್ದರಿಂದ ಅಲ್ಲಾಹ್ ನ ವಿಷಯದಲ್ಲಿ ಜಾಗರೂಕತೆ ಪಾಲಿಸಿರಿ ಮತ್ತು ನನ್ನ ಉಪದೇಷಗಳನ್ನು ಅನುಸರಿಸಿರಿ. {179}
وَمَا أَسْأَلُكُمْ عَلَيْهِ مِنْ أَجْرٍ ۖ إِنْ أَجْرِيَ إِلَّا عَلَىٰ رَبِّ الْعَالَمِينَ
ಅದಕ್ಕಾಗಿ ನಿಮ್ಮಿಂದ ಯಾವ ಸಂಭಾವನೆಯನ್ನೂ ನಾನು ಬೇಡುತ್ತಿಲ್ಲ. ನನಗೆ ಸಂಭಾವನೆ ನೀಡಬೇಕಾದವನು ಆ ಜಗದೊಡೆಯನೇ ಹೊರತು ಬೇರೆ ಯಾರೂ ಅಲ್ಲ! {180}
أَوْفُوا الْكَيْلَ وَلَا تَكُونُوا مِنَ الْمُخْسِرِينَ
ನೀವು [ಅಳತೆ ಮಾಡಿ ವಸ್ತುಗಳ ಮಾರಾಟ ಮಾಡುವಾಗ] ಪೂರ್ತಿಯಾಗಿ ಅಳೆಯಿರಿ. ಜನರಿಗೆ ನಷ್ಟವಾಗುವಂತೆ ಅಳೆಯುವವರಾಗಬೇಡಿರಿ. {181}
وَزِنُوا بِالْقِسْطَاسِ الْمُسْتَقِيمِ
ಸರಿಯಾದ ತಕ್ಕಡಿಯನ್ನೇ ಉಪಯೋಗಿಸಿ ತೂಕ ಮಾಡಿರಿ. {182}
وَلَا تَبْخَسُوا النَّاسَ أَشْيَاءَهُمْ وَلَا تَعْثَوْا فِي الْأَرْضِ مُفْسِدِينَ
ಜನರಿಗೆ [ಅಳೆದು ಅಥವಾ ತೂಕ ಮಾಡಿ ಮಾರುವಾಗ] ಅವರ ವಸ್ತುಗಳ ಪ್ರಮಾಣವನ್ನು ಕಡಿಮೆಗೊಳಿಸದಿರಿ; ಮತ್ತು ಆ ಮೂಲಕ ಭೂಮಿಯಲ್ಲಿ [ಸಾಮಾಜಿಕ ಮತ್ತು ಆರ್ಥಿಕ] ಭ್ರಷ್ಟಾಚಾರ ಹಬ್ಬುವವರು ನೀವಾಗದಿರಿ. {183}
وَاتَّقُوا الَّذِي خَلَقَكُمْ وَالْجِبِلَّةَ الْأَوَّلِينَ
ಜನರೇ, ನಿಮ್ಮನ್ನು ಮತ್ತು ನಿಮಗಿಂತ ಹಿಂದಿನ ತಲೆಮಾರುಗಳನ್ನು ಸೃಷ್ಟಿಸಿದ ಆ (ಅಲ್ಲಾಹ್ ನ) ಭಯವಿರಿಸಿಕೊಂಡು (ವ್ಯವಹರಿಸಿರಿ ಎಂದು ಪ್ರವಾದಿ ಶುಐಬ್ ಜನರನ್ನು ಉಪದೇಶಿಸಿದರು). {184}
قَالُوا إِنَّمَا أَنْتَ مِنَ الْمُسَحَّرِينَ
ಜನರು ಅವರ ಪ್ರವಾದಿಯನ್ನು (ಅಪಹಾಸ್ಯ ಮಾಡುತ್ತಾ) ಹೇಳಿದರು: ನೀನೊಬ್ಬ ಮಾಟಪೀಡಿತ ವ್ಯಕ್ತಿಯಾಗಿರುವೆ; {185}
وَمَا أَنْتَ إِلَّا بَشَرٌ مِثْلُنَا وَإِنْ نَظُنُّكَ لَمِنَ الْكَاذِبِينَ
ನೀನು ಕೇವಲ ನಮ್ಮಂತಹ ಒಬ್ಬ ಮನುಷ್ಯ; ಆದ್ದರಿಂದ ನೀನೊಬ್ಬ ಒಬ್ಬ ಸುಳ್ಳುಗಾರನೆಂದೇ ನಾವು ಭಾವಿಸುತ್ತೇವೆ. {186}
فَأَسْقِطْ عَلَيْنَا كِسَفًا مِنَ السَّمَاءِ إِنْ كُنْتَ مِنَ الصَّادِقِينَ
ಇನ್ನು ನೀನು ಹೇಳುತ್ತಿರುವುದು ಸತ್ಯವೆಂದಾದರೆ ಆಕಾಶದ ಒಂದು ತುಂಡನ್ನು ನಮ್ಮ ಬೇಳಿಸಿ ತೋರಿಸು. {187}
قَالَ رَبِّي أَعْلَمُ بِمَا تَعْمَلُونَ
ಶುಐಬ್ ಹೇಳಿದರು: ಜನರೇ, ನೀವು ಅದೆಂತಹ ಕೆಲಸ ಮಾಡುತ್ತಿರುವಿರಿ ಎಂದು ನನ್ನ ಒಡೆಯನಿಗೆ ಬಹಳ ಚೆನ್ನಾಗಿ ತಿಳಿದಿದೆ! {188}
فَكَذَّبُوهُ فَأَخَذَهُمْ عَذَابُ يَوْمِ الظُّلَّةِ ۚ إِنَّهُ كَانَ عَذَابَ يَوْمٍ عَظِيمٍ
ಅಷ್ಟಾಗಿಯೂ ಆ ಜನರು ಪ್ರವಾದಿ ಶುಐಬ್ ರನ್ನು ಧಿಕ್ಕರಿಸಿ ಬಿಟ್ಟರು. ಕೊನೆಗೆ ನೆರಳಿನ ಮೇಘಗಳ ದಿನದ ಶಿಕ್ಷೆಯು ಅವರ ಮೇಲೆ ಎರಗಿಬಿಟ್ಟಿತು. ಖಂಡಿತವಾಗಿ ಅದೊಂದು ಅತಿಘೋರವಾದ ದಿನದ ಶಿಕ್ಷೆಯಾಗಿತ್ತು. {189}
إِنَّ فِي ذَٰلِكَ لَآيَةً ۖ وَمَا كَانَ أَكْثَرُهُمْ مُؤْمِنِينَ
ಈ ಘಟನೆಯಲ್ಲೂ (ಜನರಿಗೆ ಪಾಠ ಕಲಿಯಲು) ಒಂದು ನಿದರ್ಶನವಿದೆ; ಆದರೆ (ಪೈಗಂಬರರೇ, ನಿಮ್ಮ ಜನರಂತು) ವಿಶ್ವಾಸಿಗಳಾಗುವವರಲ್ಲ. {190}
وَإِنَّ رَبَّكَ لَهُوَ الْعَزِيزُ الرَّحِيمُ
ನಿಜಕ್ಕೂ ಪೈಗಂಬರರೇ, ನಿಮ್ಮ ಒಡೆಯ ಮಹಾನ್ ಶಕ್ತಿಶಾಲಿಯಾಗಿರುವನು; [ಆದರೆ ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸದೆ ಸಾಕಷ್ಟು ಕಾಲಾವಕಾಶ ನೀಡುವ] ಕರುಣಾಮಯಿಯೂ ಆಗಿರುವನು. {191}
وَإِنَّهُ لَتَنْزِيلُ رَبِّ الْعَالَمِينَ
[ಹಾಗಿತ್ತು ಹಿಂದಿನವರ ಧಿಕ್ಕಾರದ ವೃತ್ತಾಂತಗಳು! ಈಗ ಪೈಗಂಬರರೇ, ನಿಮ್ಮ ಜನರಿಗೆ ಒಂದು ಉಪದೇಶವಾಗಿ] ಈ ಕುರ್‌ಆನ್ ಅನ್ನು ಜಗದೊಡೆಯನಾದ (ಅಲ್ಲಾಹ್ ನ) ವತಿಯಿಂದ ಇಳಿಸಲಾಗುತ್ತಿದೆ. {192}
نَزَلَ بِهِ الرُّوحُ الْأَمِينُ
ಇದನ್ನು 'ರೂಹ್ ಅಲ್ ಅಮೀನ್' (ಅಂದರೆ ಜಿಬ್ರೀಲ್ ಎಂಬ ವಿಶ್ವಸನೀಯ ಮಲಕ್) ತಮ್ಮೊಂದಿಗೆ ಇಳಿಸಿ ತರುತ್ತಾರೆ! {193}
عَلَىٰ قَلْبِكَ لِتَكُونَ مِنَ الْمُنْذِرِينَ
ಪೈಗಂಬರರೇ, ಇದನ್ನು ನೇರವಾಗಿ ನಿಮ್ಮ ಹೃದಯಕ್ಕೆ (ಇಳಿಸಲಾಗುತ್ತದೆ); ನೀವು ಸಹ (ಹಿಂದಿನ ಪ್ರವಾದಿಗಳಂತೆ ಜನರಿಗೆ) ಮುನ್ನೆಚ್ಚರಿಕೆ ನೀಡುವಂತಹ ಪ್ರವಾದಿಗಳ ಸಾಲಿಗೆ ಸೇರುವಂತಾಗಲು! {194}
بِلِسَانٍ عَرَبِيٍّ مُبِينٍ
(ಈ ಕುರ್‌ಆನ್) ಬಹಳ ಸ್ಪಷ್ಟವಾಗಿ ಅರ್ಥವಾಗುವ ಅರಬಿ ಭಾಷೆಯಲ್ಲಿದೆ! {195}
وَإِنَّهُ لَفِي زُبُرِ الْأَوَّلِينَ
ಹಿಂದಿನ ಜನಾಂಗಳಿಗೆ ಸೇರಿದ ದಿವ್ಯಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖಿಸಲಾಗಿತ್ತು! {196}
أَوَلَمْ يَكُنْ لَهُمْ آيَةً أَنْ يَعْلَمَهُ عُلَمَاءُ بَنِي إِسْرَائِيلَ
ಇಸ್ರಾಈಲ್ ಸಂತತಿಯಲ್ಲಿನ ವಿದ್ವಾಂಸರಿಗೆ ಈ ವಿಷಯವೆಲ್ಲಾ ತಿಳಿದಿದೆ ಎಂಬುದು (ಪೈಗಂಬರರೇ, ನಿಮ್ಮನ್ನು ಈಗ ವಿರೋಧಿಸುತ್ತಿರುವ) ಈ ಜನರಿಗೆ ಒಂದು ದೊಡ್ಡ ಪುರಾವೆಯಲ್ಲವೇ?! {197}
وَلَوْ نَزَّلْنَاهُ عَلَىٰ بَعْضِ الْأَعْجَمِينَ
ಇನ್ನು [ಅರಬ್ ವಂಶಜನಾದ ಮುಹಮ್ಮದ್ ಪೈಗಂಬರರಿಗೆ ಬದಲು] ಇದನ್ನು ಅರಬಿಯಲ್ಲದ ಯಾವುದಾದರೂ ಒಬ್ಬ ವ್ಯಕ್ತಿಗೆ ನಾವು ಇಳಿಸಿಕೊಟ್ಟಿರುತ್ತಿದ್ದರೆ - {198}
فَقَرَأَهُ عَلَيْهِمْ مَا كَانُوا بِهِ مُؤْمِنِينَ
ಆತ ಅದನ್ನು ಅವರ ಮುಂದೆ [ಅತ್ಯುತ್ಕೃಷ್ಟವಾದ ಅರಬಿ ಭಾಷೆಯಲ್ಲೇ] ಓದಿ ಕೇಳಿಸುತ್ತಿದ್ದ; ಆದರೆ ಆಗಲೂ ಅವರು ಅದನ್ನು (ನಂಬುವ ಬದಲು) ತಿರಸ್ಕರಿಸಿ ಬಿಡುತ್ತಿದ್ದರು! {199}
كَذَٰلِكَ سَلَكْنَاهُ فِي قُلُوبِ الْمُجْرِمِينَ
ಹಾಗೆ [ಉಪದೇಶವನ್ನು ನಿರಂತರವಾಗಿ ತಿರಸ್ಕರುಸುತ್ತಾ ಬಂದ] ಈ ದುಷ್ಟರ ಹೃದಯದೊಳಕ್ಕೆ ನಾವು ತಿರಸ್ಕಾರವನ್ನು ತುರುಕಿ ಬಿಟ್ಟೆವು. {200}
لَا يُؤْمِنُونَ بِهِ حَتَّىٰ يَرَوُا الْعَذَابَ الْأَلِيمَ
ಆ ನೋವುಭರಿತ ಶಿಕ್ಷೆಯನ್ನು ಕಾಣುವ ತನಕ ಅವರು ಈ ಕುರ್‌ಆನ್ ಅನ್ನು ನಂಬುವವರಲ್ಲ. {201}
فَيَأْتِيَهُمْ بَغْتَةً وَهُمْ لَا يَشْعُرُونَ
ಆದರೆ ಶಿಕ್ಷೆ ಅವರಿಗೆ ಅರಿವೇ ಆಗದಂತೆ ದಿಢೀರನೆ ಅವರ ಮೇಲೆರಗಲಿರುವುದು. {202}
فَيَقُولُوا هَلْ نَحْنُ مُنْظَرُونَ
ಆಗ ಅವರು, ನಮಗೆ ಸ್ವಲ್ಪ ಕಾಲಾವಕಾಶ ಸಿಗಬಹುದೇ ಎಂದು ಕೇಳಲಿರುವರು! {203}
أَفَبِعَذَابِنَا يَسْتَعْجِلُونَ
(ಈಗ) ಅವರು ನಮ್ಮ ಶಿಕ್ಷೆಗಾಗಿ ಆತುರಪಡುತ್ತಿರುವರೇ? {204}
أَفَرَأَيْتَ إِنْ مَتَّعْنَاهُمْ سِنِينَ
ಹಾಗಾದರೆ ಸ್ವಲ್ಪ ಆಲೋಚಿಸಿ, ನಾವು ಅವರಿಗೆ ಇನ್ನೂ ಕೆಲವು ವರ್ಷಗಳ ಕಾಲ ಇಹಲೋಕದ ಸುಖ ಹೀಗೆಯೇ ಅನುಭವಿಸಲು ಬಿಟ್ಟರೆ; {205}
ثُمَّ جَاءَهُمْ مَا كَانُوا يُوعَدُونَ
ನಂತರ, ಯಾವ ಶಿಕ್ಷೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿತ್ತೋ ಅದು ಅವರ ಮೇಲೆ ಎರಗಿ ಬಿದ್ದರೆ; {206}
مَا أَغْنَىٰ عَنْهُمْ مَا كَانُوا يُمَتَّعُونَ
ಅವರು ಅನುಭಸಿದ ಇಹಲೋಕದ ಸುಖವು ಅವರ ಯಾವ ಪ್ರಯೋಜನಕ್ಕೆ ಆದೀತು? {207}
وَمَا أَهْلَكْنَا مِنْ قَرْيَةٍ إِلَّا لَهَا مُنْذِرُونَ
ವಾಸ್ತವವೇನೆಂದರೆ, ಎಚ್ಚರಿಕೆ ನೀಡುವ ದೂತರುಗಳನ್ನು ಕಳುಹಿಸದೆ ನಾವು ಯಾವ ನಾಡನ್ನೂ ನಾಶಪಡಿಸಿದವರಲ್ಲ! {208}
ذِكْرَىٰ وَمَا كُنَّا ظَالِمِينَ
(ನಮ್ಮ ಕ್ರಮವೆಂದರೆ ಎಲ್ಲಕ್ಕಿಂತ) ಮೊದಲು ಉಪದೇಶ! ನಾವು ಅನ್ಯಾಯ ಮಾಡುವವರಲ್ಲ. {209}
وَمَا تَنَزَّلَتْ بِهِ الشَّيَاطِينُ
[ಜನರೇ, ನೀವು ಆಪಾದಿಸುತ್ತಿರುವಂತೆ, ಸಾಕ್ಷಾತ್ ಉಪದೇಶವಾದ ಈ ಕುರ್‌ಆನ್ ಅನ್ನು] ಸೈತಾನರು ಇಳಿಸಿ ತರುತ್ತಿಲ್ಲ! {210}
وَمَا يَنْبَغِي لَهُمْ وَمَا يَسْتَطِيعُونَ
ಅದು ಅವರಿಗೆ ಒಪ್ಪುವ ಕೆಲಸವೂ ಅಲ್ಲ; ಅವರಿಗೆ ಆ ಸಾಮರ್ಥ್ಯವೂ ಇಲ್ಲ! {211}
إِنَّهُمْ عَنِ السَّمْعِ لَمَعْزُولُونَ
ವಾಸ್ತವದಲ್ಲಿ ಇದನ್ನು ಆಲಿಸದಂತೆ ಅವರು ತಡೆಯಲ್ಪಟ್ಟಿರುವರು! {212}
فَلَا تَدْعُ مَعَ اللَّهِ إِلَٰهًا آخَرَ فَتَكُونَ مِنَ الْمُعَذَّبِينَ
ಹಾಗಿರುವಾಗ, ಪ್ರಾರ್ಥಿಸುವಾಗ ನೀವು ಅಲ್ಲಾಹ್ ನ ಜೊತೆಗೆ ಬೇರೆ ಯಾರನ್ನೂ ಸೇರಿಸದಿರಿ; ಹಾಗೇನಾದರೂ ಮಾಡಿದರೆ ನೀವೂ ಸಹ ಶಿಕ್ಷೆಗೊಳಗಾಗುವವರ ಸಾಲಿಗೆ ಸೇರಿ ಬಿಡುವಿರಿ. {213}
وَأَنْذِرْ عَشِيرَتَكَ الْأَقْرَبِينَ
(ಪೈಗಂಬರರೇ, ಮೊದಲಿಗೆ), ನೀವು ನಿಮ್ಮ ನಿಕಟ ಸಂಬಂಧಿಕರನ್ನು ಎಚ್ಚರಿಸಿರಿ. {214}
وَاخْفِضْ جَنَاحَكَ لِمَنِ اتَّبَعَكَ مِنَ الْمُؤْمِنِينَ
ಮತ್ತು ನಿಮ್ಮನ್ನು ಅನುಸರಿಸಲು ತಯಾರಾಗುವ ವಿಶ್ವಾಸಿಗಳಿಗಾಗಿ ನೀವು ನಿಮ್ಮ (ಕಾರುಣ್ಯದ) ರೆಕ್ಕೆಗಳನ್ನು ತಗ್ಗಿಸಿಕೊಡಿ; (ಅರ್ಥಾತ್, ಅವರೊಂದಿಗೆ ಬಹಳ ಮೃದುವಾಗಿ, ದಯೆವುಳ್ಳವರಾಗಿ ವರ್ತಿಸುವವರಾಗಿರಿ). {215}
فَإِنْ عَصَوْكَ فَقُلْ إِنِّي بَرِيءٌ مِمَّا تَعْمَلُونَ
ಮತ್ತು ನಿಮ್ಮನ್ನು ಅನುಸರಿಸಲು ತಯಾರಾಗುವ ವಿಶ್ವಾಸಿಗಳಿಗಾಗಿ ನೀವು ನಿಮ್ಮ (ಕಾರುಣ್ಯದ) ರೆಕ್ಕೆಗಳನ್ನು ತಗ್ಗಿಸಿಕೊಡಿ; (ಅರ್ಥಾತ್, ಅವರೊಂದಿಗೆ ಬಹಳ ಮೃದುವಾಗಿ, ದಯೆವುಳ್ಳವರಾಗಿ ವರ್ತಿಸುವವರಾಗಿರಿ). {215}
وَتَوَكَّلْ عَلَى الْعَزِيزِ الرَّحِيمِ
ನಂತರ ಬಹಳ ಪ್ರತಾಪವಂತನೂ ಕರುಣಾಮಯಿಯೂ ಆದ (ಅಲ್ಲಾಹ್ ನ) ಮೇಲೆ ಸಂಪೂರ್ಣ ಭರವಸೆಯಿಟ್ಟು (ನಿಮ್ಮ ಕರ್ತವ್ಯ ಮುಂದುವರಿಸಿರಿ). {217}
الَّذِي يَرَاكَ حِينَ تَقُومُ
ನೀವು (ತಹಜ್ಜುದ್ ನ ವೇಳೆಯಲ್ಲಿ) ನಮಾಝ್ ನಿರ್ವಹಿಸಲು ಎದ್ದು ನಿಲ್ಲುವುದನ್ನು ಅವನು ನೋಡುತ್ತಾನೆ. {218}
وَتَقَلُّبَكَ فِي السَّاجِدِينَ
ಸಾಷ್ಟಾಂಗ ನಮಿಸುವವರ ನಡುವೆ ನೀವು ಅತ್ತಿತ್ತ ಓಡಾದುವುದನ್ನೂ ಅವನು ಕಾಣುತ್ತಾನೆ. {219}
إِنَّهُ هُوَ السَّمِيعُ الْعَلِيمُ
ಅವನು ಎಲ್ಲಾ (ಪ್ರಾರ್ಥನೆಗಳನ್ನು) ಕೇಳಿಸಿಕೊಳ್ಳುತ್ತಾನೆ; ಸಕಲವನ್ನೂ ಅವನು ಅರಿತಿದ್ದಾನೆ. {220}
هَلْ أُنَبِّئُكُمْ عَلَىٰ مَنْ تَنَزَّلُ الشَّيَاطِينُ
[ಜನರೇ, ನೀವು ಆರೋಪಿಸುತ್ತಿರುವಂತೆ ಈ ಪೈಗಂಬರರು ಮಾಟಪೀಡಿತರಲ್ಲ; ಅವರ ಬಳಿಗೆ ಯಾವ ಸೈತಾನನೂ ಬರುವುದಿಲ್ಲ. ಬದಲಾಗಿ] ಸೈತಾನರುಗಳು ಯಾರ ಬಳಿಗೆ ಇಳಿದು ಬರುತ್ತಾರೆಂದು ನಾನು ನಿಮಗೆ ತಿಳಿಸಲೇ? {221}
تَنَزَّلُ عَلَىٰ كُلِّ أَفَّاكٍ أَثِيمٍ
ಸುಳ್ಳಾರೋಪಗಳನ್ನು ಹೊರಿಸುವ ಪ್ರತಿಯೊಬ್ಬ ಕಡುಪಾಪಿಯ ಬಳಿಗೆ ಅವರು ಇಳಿದು ಬರುತ್ತಾರೆ! {222}
يُلْقُونَ السَّمْعَ وَأَكْثَرُهُمْ كَاذِبُونَ
(ಅಂತಹ ಸೈತಾನರುಗಳಿಗೆ) ಇವರು ಕಿವಿಯೋಡ್ಡುತ್ತಾರೆ; ಅವರಲ್ಲಿ ಹೆಚ್ಚಿನವರು ಸುಳ್ಳರಾಗಿರುತ್ತಾರೆ. {223}
وَالشُّعَرَاءُ يَتَّبِعُهُمُ الْغَاوُونَ
[ಈತನೊಬ್ಬ ಕವಿಯಾಗಿರಬೇಕೆಂದು ಪೈಗಂಬರರನ್ನು ಆಪಾದಿಸುವವರು ತಿಳಿದಿರಬೇಕಾದ ವಿಷಯವೆಂದರೆ] ಕವಿಗಳನ್ನು ದಾರಿತಪ್ಪಿದ ಜನರು ಹಿಂಬಾಲಿಸುತ್ತಾರಷ್ಟೆ! {224}
أَلَمْ تَرَ أَنَّهُمْ فِي كُلِّ وَادٍ يَهِيمُونَ
(ತಾವೇ ನಿರ್ಮಿಸಿದ ಕಾಲ್ಪನಿಕ) ಕಣಿವೆಗಳಲ್ಲಿ ಆ ಕವಿಗಳು ಹೇಗೆ ದಿಕ್ಕೆಟ್ಟು ಅಲೆಯುತ್ತಿರುತ್ತಾರೆ ಎಂಬುದನ್ನು ನೀವು ನೋಡುತ್ತಿಲ್ಲವೇ! {225}
وَأَنَّهُمْ يَقُولُونَ مَا لَا يَفْعَلُونَ
ಮತ್ತು ಅವರು ಸ್ವತಃ (ಜೀವನದಲ್ಲಿ) ಪಾಲಿಸದ ವಿಷಯಗಳನ್ನು ಇತರರಿಗೆ ಬೋಧಿಸುವವರು! {226}
إِلَّا الَّذِينَ آمَنُوا وَعَمِلُوا الصَّالِحَاتِ وَذَكَرُوا اللَّهَ كَثِيرًا وَانْتَصَرُوا مِنْ بَعْدِ مَا ظُلِمُوا ۗ وَسَيَعْلَمُ الَّذِينَ ظَلَمُوا أَيَّ مُنْقَلَبٍ يَنْقَلِبُونَ
ಆದರೆ (ಪೈಗಂಬರರ ಬೋಧನೆಗಳನ್ನು) ನಂಬುವ, ಜೊತೆಗೆ ಸತ್ಕರ್ಮಗಳನ್ನು ಮಾಡುವ ಹಾಗೂ ಅಲ್ಲಾಹ್ ನನ್ನು ಹೆಚ್ಚು ಹೆಚ್ಚು ಸ್ಮರಿಸುವ (ಕವಿಗಳು) ಅದಕ್ಕೆ ಹೊರತಾಗಿರುವರು; ಇನ್ನು ಅನ್ಯಾಯಕ್ಕೆ ಒಳಗಾದರೆ ಅಂತಹವರು (ಕನಿಷ್ಟ ಪಕ್ಷ ತಮ್ಮ ಕವಿತೆಗಳ ಮೂಲಕವಾದರೂ ಅನ್ಯಾಯದ ವಿರುದ್ದ) ಪ್ರತೀಕಾರವನ್ನೂ ಮಾಡುತ್ತಾರೆ! ತಾವು (ಅಂತಿಮವಾಗಿ) ಯಾವ ಸ್ಥಳಕ್ಕೆ ಮರಳಲಿದ್ದಾರೆಂದು ಅನ್ಯಾಯ ಮಾಡಿದವರಿಗೆ ಬಹು ಬೇಗನೆ ತಿಳಿಯಲಿದೆ! {227}
ಅನುವಾದಿತ ಸೂರಃ ಗಳು
- 001 ಅಲ್ ಫಾತಿಹಃ | ترجمة سورة الفاتحة
- 002 ಅಲ್ ಬಕರಃ | ترجمة سـورة البقـرة
- 003 ಆಲಿ ಇಮ್ರಾನ್ | ترجمة سورة آل عمران
- 004 ಅನ್-ನಿಸಾ | ترجمة سورة النساء
- 005 ಅಲ್ ಮಾಇದಃ | ترجمة سورة المائدة
- 006 ಅಲ್ ಅನ್ಆಮ್ | ترجمة سورة الأنـعام
- 007 ಅಲ್ ಅಅರಾಫ್ | ترجمة سورة الأعراف
- 008 ಅಲ್ ಅನ್ಫಾಲ್ | ترجمة سـورة الأنفـال
- 009 ಅತ್-ತೌಬಃ | تـرجمـة سورة التوبة
- 010 ಯೂನುಸ್ | تـرجمـة سورة يونـس
- 011 ಹೂದ್ | تـرجمـة سورة هـــود
- 012 ಯೂಸುಫ್ | تـرجمـة سورة يوسـف
- 013 ಅರ್ ರಅದ್ | تـرجمـة سورة الرعد
- 014 ಇಬ್ರಾಹೀಮ್ | تـرجمـة سورة إبراهيم
- 015 ಅಲ್ ಹಿಜ್ರ್ | تـرجمـة سورة الحِجْر
- 016 ಅನ್-ನಹ್ಲ್ | تـرجمـة سورة النحل
- 017 ಅಲ್ ಇಸ್ರಾ' | تـرجمـة سورة الإسراء
- 018 ಅಲ್ ಕಹ್ಫ್ | تـرجمـة سورة الكهف
- 019 ಮರ್ಯಮ್ | ترجمة سورة مريم
- 020 ತಾಹಾ | ترجمة سورة طه
- 021 ಅಲ್ ಅಂಬಿಯಾ | ترجمة سورة الأنبياء
- 022 ಅಲ್ ಹಜ್ಜ್ | ترجمة سورة الحج
- 023 ಅಲ್ ಮು'ಮಿನೂನ್ | ترجمة سورة المؤمنون
- 024 ಅನ್-ನೂರ್ | ترجمة سورة النور
- 025 ಅಲ್ ಫುರ್ಕಾನ್ | ترجمة سورة الفرقان
- 026 ಅಶ್ ಶುಅರಾ | ترجمة سورة الشعراء
- 027 ಅನ್ ನಮ್ಲ್ | ترجمة سورة النمل
- 028 ಅಲ್ ಕಸಸ್ | ترجمة سورة القصص
- 078 ಅನ್ - ನಬಾ | ترجمة ســورة النبــأ
- 079 ಅನ್ - ನಾಝಿಆತ್ | ترجمة سورة الـنازعات
- 30 ನೆಯ ಭಾಗ | ترجمــة جز عم كامل
- ಅನುವಾದಿತ ಸೂರಃ ಗಳ ಪಟ್ಟಿ
- بعض المصطلحات القراّنية
- ಪಾರಿಭಾಷಿಕ ಪದಾವಳಿ
- ಪ್ರಕಾಶಕರು
- Home | ಮುಖ ಪುಟ